ಪೋಸ್ಟ್‌ಗಳು

ಸೆಪ್ಟೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಮಣೆ ಹಾಕಿದ ಮೇಲೆ ಮುಖ ನೋಡಿದ್ದು!!!!!!!!

ಇಮೇಜ್
  ಲೇಖಕಿ:ನಾಗಲಕ್ಷ್ಮಿ ಕೆ. ಎನ್‌ ದಿನಾಂಕ: ೩೦.೦೯.೨೦೨೫ “ಮಣೆ ಹಾಕಿದ ಮೇಲೆ ಮುಖ ನೋಡಿದ್ದು” ಮದುವೆಯ ಸಂಸ್ಕೃತಿಯಲ್ಲಿರುವ ಸಂಪ್ರದಾಯಗಳಿಗೆ ಪ್ರತೀ ಕ್ಷಣಕ್ಕೂ ತನ್ನದೇ ಆದ ಭಾವನಾತ್ಮಕ ಹಾಗೂ ಸಾಮಾಜಿಕ ಮಹತ್ವವಿದೆ. “ಮಣೆ ಹಾಕಿದ ಮೇಲೆ ಮುಖ ನೋಡಿದ್ದು” ಎಂಬ ನುಡಿಗಟ್ಟು ಅದರ ಒಂದು ಜೀವಂತ ಉದಾಹರಣೆ. ಇದು ಕೇವಲ ಒಂದು ಆಚರಣೆಯ ಕ್ಷಣವಲ್ಲ, ಬದುಕಿನ ಹೊಸ ಅಧ್ಯಾಯಕ್ಕೆ ಪ್ರವೇಶ ಮಾಡುವ ಪ್ರತೀಕವೂ ಹೌದು.   ಮಣೆ ಎಂಬುದು ಮಂಗಳಸೂತ್ರ. ಅದನ್ನು ಹಾಕುವುದು ಎಂದರೆ ವಧು-ವರರ ಬದುಕನ್ನು ಒಟ್ಟಿಗೆ   ಕಟ್ಟಿ ಹಾಕುವ ಘಳಿಗೆ. ಮಣೆ ಹಾಕಿದ ತಕ್ಷಣ ಮುಖ ನೋಡುವುದು ಎಂದರೆ, ಮದುವೆಯ ನಿಜವಾದ ಆರಂಭವನ್ನು ಕಣ್ಣಾರೆ ಕಾಣುವುದು. ಆ ಕ್ಷಣದಲ್ಲಿ ಮುಖದಲ್ಲಿರುವ ಪ್ರತಿ ಅಭಿವ್ಯಕ್ತಿಯೂ, ಅದು   ಸಂತೋಷವಾಗಲಿ, ಕುತೂಹಲವಾಗಲಿ, ಗಾಬರಿಯಾಗಲಿ   ನವಜೀವನದ ಪ್ರಥಮ ಸಾಕ್ಷಿಯಾಗಿ ಬೇರೂರಿ ಹೋಗುತ್ತದೆ. ಭಾರತೀಯ ಸಮಾಜದಲ್ಲಿ ಮಣೆ ಹಾಕುವುದು ಕೇವಲ ಒಬ್ಬರ ಜೀವನದಲ್ಲಿನ   ಬದಲಾವಣೆ ಮಾತ್ರವಲ್ಲ; ಅದು ಕುಟುಂಬ, ಬಾಂಧವ್ಯ, ಜವಾಬ್ದಾರಿ, ನಿಷ್ಠೆ ಇವುಗಳ ಸಂಕೇತವಾಗಿದೆ. ಮಣೆ ಹಾಕಿದ ಕ್ಷಣದಿಂದಲೇ ಇಬ್ಬರೂ ತಮ್ಮದೇ ಆದ ಜೀವನವನ್ನು ಬಿಟ್ಟು, ಪರಸ್ಪರರಿಗೆ ಸೇರಿದವರಾಗುತ್ತಾರೆ. ಆ ಕ್ಷಣದಲ್ಲೇ ಮುಖ ನೋಡಿದಾಗ — “ಇದೀಗ ನಾವಿಬ್ಬರೂ ಒಂದೇ ದಾರಿಯಲ್ಲಿ ಸಾಗಬೇಕು” ಎಂಬ ತತ್ವವು ಮನಸ್ಸಿನಲ್ಲಿ ಗಾಢವಾಗಿ ನೆಲೆಯಾಗುತ್ತದೆ. ಮಣೆ ಹಾಕಿದ ನ...

ಕವಲೊಡೆದ ಕಥೆ!!!!!!!!

ಇಮೇಜ್
  ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ: ೨೯.೦೯.೨೦೨೫ ಕವಲೊಡೆದ ಕಥೆ – ಜೀವನದ ಪ್ರತೀಕ ಜೀವನವೆಂಬ ಪಯಣವು ನೇರ ರೇಖೆಯಂತಿರೋದಿಲ್ಲ . ಎಷ್ಟೇ ಪ್ರಯತ್ನ ಮಾಡಿದರೂ ಸೋಲು , ನೋವು , ನಿರಾಶೆ , ಮೋಸ – ಇವುಗಳು ಸಹಜವಾಗಿ ನಮ್ಮ ದಾರಿಯಲ್ಲಿ ಬಂದು ಸೇರಿ ಬಿಡುತ್ತವೆ . ಆದರೆ ಈ ಕಷ್ಟಗಳ ಮೂಲಕವೇ ಭವಿಷ್ಯದ ಸಿಹಿ ಫಲವನ್ನು ನಾವು ಅನುಭವಿಸುತ್ತೇವೆ ಎಂಬುದನ್ನು ಕವಲೊಡೆದ ಕಥೆಯು ಪ್ರತಿಬಿಂಬಿಸುತ್ತದೆ . ಜೀವನದಲ್ಲಿ ಸೋಲು ಎಂದರೆ ಅಂತ್ಯ ಎಂಬ ಭ್ರಮೆ ನಮ್ಮ ಸಮಾಜದಲ್ಲಿ ಹೆಚ್ಚಾಗಿ ಕಂಡುಬರುತ್ತದೆ . ಒಂದು ವಿಫಲವಾದ ಪ್ರಯತ್ನವೇ ಜೀವನವನ್ನು ನಿರ್ಣಯಿಸುತ್ತದೆ ಎಂಬ ಭಾವನೆ ಅನೇಕರ ಮನಸ್ಸನ್ನು ಕಾಡುತ್ತದೆ . ಆದರೆ ಇತಿಹಾಸವೂ ಸೇರಿದಂತೆ , ಸಮಾಜದ ನೈಜ ಉದಾಹರಣೆಗಳು ನಮಗೆ ಕಲಿಸುವುದು ಬೇರೇನೂ ಅಲ್ಲ ,   ಸೋಲು ಎಂದರೆ ಹೊಸ ಬೆಳಕಿಗೆ ದಾರಿ ಎನ್ನುವುದು ಕವಲೊಡೆದ ಕಥೆಯ ಪ್ರತೀಕ ಇದಕ್ಕೆ ಸೂಕ್ತವಾಗಿದೆ .   ಒಬ್ಬ ರೈತ ತನ್ನ ಹೊಲದಲ್ಲಿ ವರ್ಷಗಳಿಂದ ಶ್ರಮಿಸುತ್ತಿದ್ದ . ಮಳೆ ಬರದ ವರ್ಷಗಳಲ್ಲಿ ಬಿತ್ತನೆ ಹಾಳಾಯಿತು , ಬೆಳೆ ನಾಶವಾಯಿತು . ಮನೆಯವರು ತಿನ್ನಲು ಆನೂ ಇಲ್ಲದಂತ ಸ್ಥಿತಿ ಎದುರಾಯಿತು . ಆದರೆ ಅವನು ಕೈಚೆಲ್ಲಲಿಲ್ಲ . ಅವನ ನಿರಂತರ ಹೋರಾಟಕ್ಕೆ , ಅಚ್ಚುಕಟ್ಟಾದ ಪರಿಶ್ರಮಕ್ಕೆ ಕೊನೆಗೂ ಭಗವಂತನು ಕರುಣಿಸಿದ . ಮಳೆ...