ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

"ಸತಿ ಸುಲೋಚನದಿಂದ KGF ವರೆಗೆ – ಕನ್ನಡ ಸಿನೆಮಾ, ನಮ್ಮ ಅಸ್ತಿತ್ವದ ಪ್ರತಿಬಿಂಬ."

 






ಲೇಖಕಿ:ನಾಗಲಕ್ಷ್ಮಿ ಕೆ.ಎನ್.‌ ದಿನಾಂಕ: ೨೧.೦೮.೨೦೨೫

🎬 "ಕನ್ನಡ ಸಿನಿಮಾದ ಇತಿಹಾಸಪ್ರಾರಂಭದಿಂದ ಇಂದಿನವರೆಗೆ"

ಭಾರತೀಯ ಸಿನಿಮಾ  ಪ್ರಪಂಚದಲ್ಲಿ ಕನ್ನಡ ಚಲನಚಿತ್ರರಂಗವು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಕರ್ನಾಟಕದ ಸಂಸ್ಕೃತಿ, ಸಾಹಿತ್ಯ, ನಾಟಕ ಮತ್ತು ಜನಪದ ಕಲೆಗಳ ಬೆನ್ನೆಲುಬಿನಿಂದ ಹುಟ್ಟಿಕೊಂಡ ಸಿನಿಮಾ ಉದ್ಯಮವು ಇಂದಿಗೂ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಶತಮಾನಕ್ಕೂ ಹೆಚ್ಚು ಕಾಲದ ಪಯಣದಲ್ಲಿ ಕನ್ನಡ ಸಿನಿಮಾರಂಗವು  ಅನೇಕ ಹಂತಗಳನ್ನು ದಾಟಿಕೊಂಡು ಬಂದಿದೆ.  ಮೂಕಿಚಿತ್ರಗಳಿಂದ ಹಿಡಿದು  ಇಂದಿನ ಡಿಜಿಟಲ್ಯುಗದ ಬ್ಲಾಕ್ಬಸ್ಟರ್ಚಿತ್ರಗಳವರೆಗಿನ  ಕನ್ನಡ ಸಿನಿಮಾದ ಇತಿಹಾಸವನ್ನು ಇಂದು ನೋಡೋಣ.

 

🎥 ಕನ್ನಡ ಚಿತ್ರರಂಗದ ಪರಿಚಯ

ಕರ್ನಾಟಕದಲ್ಲಿ ಹೆಚ್ಚು ಶ್ರೀಗಂಧದ ಮರಗಳು ಬೆಳೆಯುವುದರಿಂದ ಕನ್ನಡ ಚಿತ್ರರಂಗವನ್ನು ಜನರು ಪ್ರೀತಿಯಿಂದ "ಸ್ಯಾಂಡಲ್ವುಡ್‌ (Sandalwood)" ಎಂದು ಕರೆಯುತ್ತಾರೆ. ಕರ್ನಾಟಕದ ಸಂಸ್ಕೃತಿ, ಸಾಹಿತ್ಯ, ನಾಟಕ ಮತ್ತು ಜನಪದ ಪರಂಪರೆಗಳು ಚಿತ್ರರಂಗದ ಬೆನ್ನೆಲುಬು. 1934ರಲ್ಲಿ ಬಿಡುಗಡೆಯಾದ "ಸತಿ ಸುಲೋಚನ" ಮೊದಲ ಕನ್ನಡ ಸಿನಿಮಾ  ಮೂಲಕ ಕನ್ನಡ ಚಂದನವನವು ತನ್ನ ಪಯಣವನ್ನು ಆರಂಭಿಸಿತು. ಯು.ಆರ್. ಅನಂತಮೂರ್ತಿ ಅವರು ಇದನ್ನು "ಕನ್ನಡ ಸಿನೆಮಾದ ಮೊದಲ ಹೆಜ್ಜೆ" ಎಂದು ಬಣ್ಣಿಸಿದರು.   ಚಿತ್ರವು ಕೇವಲ ಕತೆಯಾಗಿರದೆ , ಕನ್ನಡದಲ್ಲಿ ಸಿನಿಮಾ ಮಾಡಬಹುದೆಂಬ ನಂಬಿಕೆಯನ್ನು ಮೂಡಿಸಿತು.

ಸತಿ ಸುಲೋಚನ ಚಿತ್ರದಲ್ಲಿನ ಕನ್ನಡ ಭಾಷೆಯ ಶಬ್ದ, ಸಂಭಾಷಣೆಗಳು ಹಾಗೂ ಕನ್ನಡಿಗರ ಜೀವನದ ಅಂಶಗಳು ಮೊಟ್ಟಮೊದಲ ಬಾರಿಗೆ ತೆರೆಯಮೇಲೆ ಕಾಣಿಸಿಕೊಂಡವು. ಇದೇ ಕನ್ನಡ ಸಿನೆಮಾದ ಬುನಾದಿ.

ಕನ್ನಡ ಚಿತ್ರರಂಗವನ್ನು ವಿಶೇಷವಾಗಿಸುವ ಅಂಶಗಳು:

  1. ಕರ್ನಾಟಕವು ಶ್ರೀಮಂತ ಸಾಹಿತ್ಯ ಪರಂಪರೆಯ ರಾಜ್ಯ. ಕುವೆಂಪು, ಬೇಂದ್ರೆ ,ಮಾಸ್ತಿ, ಶಿವರಾಮಕಾರಂತರು,  ಪುರಂದರದಾಸರಿಂದ ಹಿಡಿದು ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ, ತೇಜಸ್ವಿ ಮುಂತಾದ ಸಾಹಿತ್ಯ ದಿಗ್ಗಜರ ಕೃತಿಗಳು ಕನ್ನಡ ಸಿನಿಮಾಗೆ ನಿರಂತರ ಸ್ಫೂರ್ತಿ ನೀಡಿವೆ. ಅನೇಕ ಚಿತ್ರಗಳು ನೇರವಾಗಿ ಸಾಹಿತ್ಯ ಕೃತಿಗಳ ಆಧಾರದಿಂದ ಮೂಡಿಬಂದಿವೆ.
  2. ಕನ್ನಡ ಸಿನಿಮಾದ ಮೂಲ ಬೇರುಗಳು ರಂಗಭೂಮಿಯಲ್ಲಿ ಇವೆ. ಗಿರೀಶ್ ಕರ್ಣಾಡ್, ಬಿ.ವಿ. ಕಾರಂತ್, ಪುಟ್ಟಣ್ಣ ಕಣಗಾಲ್ ಮುಂತಾದವರು ನಾಟಕಗಳಿಂದ ಸಿನಿಮಾ ಪ್ರಪಂಚಕ್ಕೆ ಬಂದು ಅದನ್ನು ಶ್ರೀಮಂತಗೊಳಿಸಿದರು.
  3. ಕರ್ನಾಟಕದ ಗ್ರಾಮೀಣ ಸಂಸ್ಕೃತಿ, ಯಕ್ಷಗಾನ, ಭೂತಾರಾಧನೆ, ಜಾತ್ರೆಗಳು, ಹಬ್ಬಹರಿದಿನಗಳು ಕನ್ನಡ ಸಿನಿಮಾಗಳಲ್ಲಿ ಪ್ರಬಲವಾಗಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆಕಾಂತಾರಾ ಸಿನಿಮಾ ಪರಂಪರೆಯನ್ನು ಮತ್ತೆ ಜಗತ್ತಿನ ಮುಂದೆ ತೋರಿಸಿತು.
  4. ಡಾ. ರಾಜಕುಮಾರರು ಸಿನಿಮಾ ನಿರ್ಮಾಪಕರನ್ನು "ಅನ್ನದಾತರು" ಎಂದು ಕರೆಯಲ್ಪಟ್ಟರೆ, ವಿಷ್ಣುವರ್ಧನ್, ಶಂಕರ್‌ ನಾಗ, ಅನಂತನಾಗ್‌ , ಅಂಬರೀಶ್ ಮುಂತಾದವರು ತಮ್ಮದೇ ಆದ ಅಭಿಮಾನಿ ಬಳಗವನ್ನು ನಿರ್ಮಿಸಿದರು. ಇಂದಿನ ದಿನಗಳಲ್ಲಿ ಕಿಚ್ಚ ಸುದೀಪ್‌ , ಯಶ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿವಂಗತ  ಪುನೀತ್ ರಾಜಕುಮಾರರು ಕನ್ನಡ ಸಿನಿಮಾಗೆ ಹೊಸ ದಿಕ್ಕು ನೀಡಿದ್ದಾರೆ.
  5. ಗಿರೀಶ್ ಕಾಸರವಳ್ಳಿ, ಬಿ.ವಿ. ಕಾರಂತ್ತ್‌,  ಮುಂತಾದ ನಿರ್ದೇಶಕರ ಚಲನಚಿತ್ರಗಳು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಗುರುತಿಸಿಕೊಂಡಿವೆ. ಇದು ಕನ್ನಡ ಚಿತ್ರರಂಗವನ್ನು ಕೇವಲ ವಾಣಿಜ್ಯಮಟ್ಟದಲ್ಲಿ ಅಲ್ಲದೆ, ಕಲಾತ್ಮಕಮಟ್ಟದಲ್ಲಿಯೂ ಪ್ರಸಿದ್ಧಗೊಳಿಸಿದೆ.
  6. ಇತ್ತೀಚಿನ ವರ್ಷಗಳಲ್ಲಿ KGF, ಕಾಂತಾರಾ, 777 ಚಾರ್ಲಿ ಮುಂತಾದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡಿವೆ. ಇದು ಕನ್ನಡ ಚಿತ್ರರಂಗವು ದೇಶದ ಮಿತಿಗಳನ್ನು ಮೀರಿ, ಜಾಗತಿಕ ಪ್ರೇಕ್ಷಕರ ಹೃದಯಕ್ಕೂ ತಲುಪುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

 

👉 ಕನ್ನಡ ಚಿತ್ರರಂಗವು ಕೇವಲ ಮನರಂಜನೆಯ ಮೂಲವಲ್ಲ, ಅದು ಕನ್ನಡಿಗರ ಸಂಸ್ಕೃತಿ, ಅಸ್ತಿತ್ವ ಮತ್ತು ಹೆಮ್ಮೆ. ಚಿತ್ರರಂಗವು  ಶತಮಾನಕ್ಕೂ ಪೂರ್ತಿ ಕಾಲದಲ್ಲಿ ಜನರ ಬದುಕನ್ನು ಪ್ರತಿಬಿಂಬಿಸುತ್ತಾ, ಸಮಾಜಕ್ಕೆ ಸಂದೇಶ ನೀಡುತ್ತಾ ಬೆಳೆದಿದೆ.

 

1940–1950 ದಶಕದಲ್ಲಿ ಪ್ರಾರಂಭಿಕ ಹಂತದಲ್ಲಿ ಕನ್ನಡ ಚಿತ್ರಗಳು ಹೆಚ್ಚಾಗಿ  ಭಕ್ತಿ ಹಾಗೂ ಪೌರಾಣಿಕ ಕಥೆಗಳ ಪ್ರಭಾವದಿಂದ ಭಕ್ತಿಪರ ವಿಷಯಗಳನ್ನು ಆಧರಿಸಿದ್ದವು. ರಾಮಾಯಣ, ಮಹಾಭಾರತದ ಘಟನೆಗಳು ಹಾಗೂ ದೇವದೇವಿಯರ ಕಥೆಗಳು ಜನಮನ ಸೆಳೆಯುತ್ತವೆ ಎಂಬ ವಿಶ್ವಾಸವಿತ್ತು.

ಸಮಯದಲ್ಲಿ "ಸುಧಾರಮೆ", “ಭಕ್ತ ಧ್ರುವ” , "ಸಂಸಾರ ನೌಕೆ", "ಚಿರಂಜೀವಿ" ಮುಂತಾದ ಚಿತ್ರಗಳು ಕನ್ನಡಿಗರನ್ನು ರಂಜಿಸಿದ್ದವು.

 

1950–1970 ದಶಕ ದಲ್ಲಿ  ಸಾಮಾಜಿಕ ಮತ್ತು ಕುಟುಂಬ ಕಥೆಗಳ ಪ್ರಾರಂಭದಿಂದ ಕನ್ನಡ ಸಿನಿಮಾ ಹೊಸ ದಿಕ್ಕನ್ನು ತಲುಪಿತು. ಪೌರಾಣಿಕ ಕಥೆಗಳೊಂದಿಗೆ ಸಾಮಾಜಿಕ ಹಾಗೂ ಕುಟುಂಬ ಜೀವನದ ಕಥೆಗಳು ಸಿನಿಮಾಗಳಲ್ಲಿ ಪ್ರಮುಖವಾಗಿದವು.

ಈ ಸಮಯದಲ್ಲಿ ಡಾ. ರಾಜಕುಮಾರ್‌ ಅವರು  1954ರಲ್ಲಿ "ಬೆಡರ ಕಣ್ಣಪ್ಪ" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ  ಅಭಿನಯಕ್ಕೆ ಕಾಲಿಟ್ಟರು. ಅವರು ಕನ್ನಡದ ವರನಟರು ಎಂದೇ ಪ್ರಸಿದ್ಧರಾದರು.

ಸಮಯದಲ್ಲಿ "ಬಂಗಾರದ ಮನುಷ್ಯ", "ಶ್ರೀಕೃಷ್ಣ ದೇವರಾಯ", "ಸತ್ಯ ಹರಿಶ್ಚಂದ್ರ" ಮುಂತಾದ ಚಿತ್ರಗಳು ಜನಮನ ಗೆದ್ದವು.

ಕನ್ನಡದ ಜನಜೀವನ, ರೈತರ ಸಮಸ್ಯೆಗಳು, ಪ್ರೇಮ ಕಥೆಗಳು ರಾಜಕುಮಾರರ  ಸಿನಿಮಾಗಳಲ್ಲೂ ತೋರಿಸಲ್ಪಟ್ಟವು.

1970–1990   ಅವಧಿಯನ್ನು ಕನ್ನಡ ಸಿನೆಮಾದ "ಸ್ವರ್ಣಯುಗ" ಎಂದು ಕರೆಯಲಾಗುತ್ತದೆ.

ಡಾ.ರಾಜಕುಮಾರರ ಅಭಿನಯದ  ಶ್ರೇಷ್ಠ ಕಾಲದಲ್ಲಿ,  ಭಕ್ತ ಕುಂಬಾರ, ಕಸ್ತೂರಿ ನಿವಾಸ,  ಸಂಪತ್ತಿಗೆ ಸವಾಲ್‌ ,  ಬಂಗಾರದ ಮನುಷ್ಯ ಮುಂತಾದ ಚಿತ್ರಗಳು ದಾಖಲೆ ಮಾಡಿದ್ದವು.

ಶಂಕರನಾಗ್‌  ಮತ್ತು ಅನಂತನಾಗ್‌   ಇಬ್ಬರು ನಟರು ಕನ್ನಡ ಚಿತ್ರರಂಗದಲ್ಲಿ ಹೊಸ ಶೈಲಿಯ ಕಥೆಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದರು. "ಗೀತಾ", "ಮಿಂಚಿನ ಓಟ", "ಜನ್ಮ ಜನ್ಮದ ಅನುಬಂಧ" ಮುಂತಾದ ಚಿತ್ರಗಳು ಕಲಾತ್ಮಕ ಚಿತ್ರಗಳಾಗಿ ಹೊರಹೊಮ್ಮಿದವು.

ಪುಟ್ಟಣ್ಣ ಕಣಗಾಲ್, ಭಾರತದ ಶ್ರೇಷ್ಠ ನಿರ್ದೇಶಕರ ಸಾಲಿಗೆ ಸೇರುತ್ತಾರೆ. ಅವರ ಸಿನಿಮಾಗಳು ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತಂದು ಚರ್ಚೆಗೆ ಕಾರಣವಾದವು.

ಕಾಲದಲ್ಲಿ ಕನ್ನಡ ಸಿನಿಮಾಗಳು ರಾಷ್ಟ್ರ ಪ್ರಶಸ್ತಿಗಳನ್ನು  ಗಳಿಸಿದವು. ಗಿರೀಶ್ ಕಾಸರವಳ್ಳಿ, ಬಿ.ವಿ. ಕಾರಂತ್ ಮುಂತಾದ ನಿರ್ದೇಶಕರು ಕನ್ನಡ ಸಿನಿಮಾಗೆ ಅಂತರರಾಷ್ಟ್ರೀಯ ಹಿರಿಮೆಯನ್ನು ತಂದರು.

1990–2010 ದಶಕದ   ಕಾಲದಲ್ಲಿ ಕನ್ನಡ ಸಿನಿಮಾಗಳು ವಾಣಿಜ್ಯ ಮತ್ತು ಕಲಾತ್ಮಕ ಚಿತ್ರಗಳ ನಡುವಿನ ಸಮತೋಲನ ಸಾಧಿಸಲು ಪ್ರಯತ್ನಿಸಿತು.

ಅಂಬರೀಶ್, ವಿಷ್ಣುವರ್ಧನ್, ರಮೇಶ್ ಅರವಿಂದ್, ಉಪೇಂದ್ರ, ಶಿವರಾಜ್‌ ಕುಮಾರ್ ಮುಂತಾದ ನಟರು ತಮ್ಮದೇ ಆದ ಶೈಲಿಯನ್ನು ನಿರ್ಮಿಸಿದರು.

ಉಪೇಂದ್ರ ಅವರ ಸಿನಿಮಾಗಳು ("ಓಂ", "ಉಪೇಂದ್ರ") ಕನ್ನಡ ಸಿನಿಮಾಗೆ ಹೊಸ ತಳಿರು ಕೊಟ್ಟವು.

ಅವಧಿಯಲ್ಲಿ ತಂತ್ರಜ್ಞಾನ ಬಳಸುವ ಪ್ರಯತ್ನಗಳು ನಡೆದವು. ಡಿಜಿಟಲ್ಚಿತ್ರೀಕರಣ, ನವೀನ ಸೌಂಡ್ಎಫೆಕ್ಟ್ಗಳು ಸೇರಿಸಲ್ಪಟ್ಟವು.

🎬 2010–ಇಂದಿನವರೆಗೂಹೊಸ ಯುಗದ ಕನ್ನಡ ಚಿತ್ರರಂಗ

2010 ನಂತರ ಕನ್ನಡ ಚಿತ್ರರಂಗಕ್ಕೆ ಅನೇಕ ಹೊಸ ಪ್ರತಿಭೆಗಳು ಕಾಲಿಟ್ಟವು. ವಿಶೇಷವಾಗಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ಡಾಲಿ ಧನಂಜಯ್‌  ಮುಂತಾದವರು ವಿಭಿನ್ನ ಕಥಾಹಂದರಗಳನ್ನು ಆಯ್ಕೆಮಾಡಿ ಕನ್ನಡ ಚಿತ್ರಗಳಿಗೆ ಹೊಸ ದಾರಿಯನ್ನು ತೋರಿಸಿದರು.

ಸಿಂಪಲ್ ಆಗಿ ಒಂದ್‌  ಲವ್ ಸ್ಟೋರಿ (2013)  ರೊಮ್ಯಾಂಟಿಕ್ ಶೈಲಿಯ ಹೊಸ ಪ್ರಾಯೋಗಿಕ ಸಿನಿಮಾ.

ಉಗ್ರಮ್ (2014) → ಆಕ್ಷನ್ಸಿನಿಮಾಗೆ ಹೊಸ ಹೊಳಪು.

ಕಿರಿಕ್ ಪಾರ್ಟಿ (2016) → ಯುವಜನರ ಬದುಕಿನ ಪ್ರತಿಬಿಂಬ.

ಚಿತ್ರಗಳು ಕನ್ನಡದಲ್ಲಿ ಸ್ಮಾರ್ಟ್ ಬರವಣಿಗೆ + ತಂತ್ರಜ್ಞಾನ + ಹೊಸ ಶೈಲಿಗಳು ಒಟ್ಟುಗೂಡಿ ಹೊಸ ಸಾಧ್ಯತೆಯನ್ನು ತೋರಿಸಿತು.

ಕಾಲದಲ್ಲಿ ಪ್ರೇಕ್ಷಕರು ಕೇವಲಹೀರೋ ಸೆಂಟ್ರಿಕ್ಸಿನಿಮಾಗಳನ್ನು ಬಯಸದೆ, ಕಥೆಗೆ ಒತ್ತುಕೊಡುವ ಸಿನಿಮಾಗಳನ್ನು ಹೆಚ್ಚು ಮೆಚ್ಚಲಾರಂಭಿಸಿದರು.

ಒಂದು ಮೊಟ್ಟೆಯ ಕತೆ, ಗೋದಿ ಬಣ್ಣ ಸಾಧಾರಣ ಮೈಕಟ್ಟು, ಬೆಲ್ ಬಾಟಂ ಮುಂತಾದ ಚಿತ್ರಗಳು ವಿಷಯಾಧಾರಿತ ಚಿತ್ರಗಳ ಯಶಸ್ಸಿಗೆ ಸಾಕ್ಷಿಯಾದವು.

 ಪ್ಯಾನ್ಇಂಡಿಯಾ ಯಶಸ್ಸು

2018ರಲ್ಲಿ ಬಿಡುಗಡೆಯಾದ KGF ಚಾಪ್ಟರ್ 1 ಕನ್ನಡ ಚಿತ್ರರಂಗಕ್ಕೆ ಮಹತ್ವದ ತಿರುವು ನೀಡಿತು.

ಯಶ್ ಅಭಿನಯದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಯಶಸ್ಸು ಕಂಡಿತು.

KGF ಚಾಪ್ಟರ್ 2  2022 ಕಾಲದಲ್ಲಿ ಭಾರತೀಯ ಸಿನೆಮಾದ ಅತಿದೊಡ್ಡ ಹಿಟ್ಗಳಲ್ಲಿ ಒಂದಾಯಿತು.
👉 ಇದರಿಂದ ಕನ್ನಡ ಸಿನಿಮಾ ಕೇವಲ ಕರ್ನಾಟಕದಲ್ಲೇ ಅಲ್ಲ, ಭಾರತದ ಎಲ್ಲ ರಾಜ್ಯಗಳಲ್ಲೂ, ವಿದೇಶದಲ್ಲೂ ಗುರುತಿಸಿಕೊಂಡಿತು.

2022ರಲ್ಲಿ ಬಿಡುಗಡೆಯಾದ ಮತ್ತೊಂದು ಪ್ಯಾನ್‌ ಇಂಡಿಯಾ ಚಿತ್ರ  ಕಾಂತಾರಾ ಕನ್ನಡ ಸಂಸ್ಕೃತಿಯ ನಿಜವಾದ ಚಿತ್ರಣವನ್ನು ತೋರಿಸಿತು.

ಭೂತಾರಾಧನೆ, ಗ್ರಾಮೀಣ ಜೀವನ, ಮನುಷ್ಯಪ್ರಕೃತಿ ಸಂಬಂಧ ಇವುಗಳನ್ನು ಜಾಗತಿಕವಾಗಿ  ಪ್ರೇಕ್ಷಕರಿಗೆ ಪರಿಚಯಿಸಿತು. ಕೇವಲ ರೂ. 16 ಕೋಟಿ ಬಜೆಟ್ನಲ್ಲಿ ತಯಾರಾದ ಸಿನಿಮಾ ವಿಶ್ವಾದ್ಯಂತ ₹400 ಕೋಟಿ ಕಲೆಕ್ಷನ್ಮಾಡಿತು.

777 ಚಾರ್ಲಿ (2022) ನಾಯಿ ಮತ್ತು ಮನುಷ್ಯನ ಬಾಂಧವ್ಯದ ಕಥೆಯಾದ ಸಿನಿಮಾ ಪ್ರೇಕ್ಷಕರಲ್ಲಿ ಕಣ್ಣೀರು ಹಾಕಿಸಿತು. ಇದು ದಕ್ಷಿಣ ಭಾರತೀಯ ಭಾಷೆಗಳಲ್ಲಷ್ಟೇ ಅಲ್ಲ, ಹಿಂದಿ ಮತ್ತು ವಿದೇಶಿ ಪ್ರೇಕ್ಷಕರಲ್ಲಿಯೂ ದೊಡ್ಡ ಯಶಸ್ಸು ಕಂಡಿತು.

ಹೊಸ ಯುಗದಲ್ಲಿ ಕನ್ನಡ ಚಿತ್ರರಂಗವು ಅತ್ಯಾಧುನಿಕ VFX, CGI, ಸೌಂಡ್ ಡಿಸೈನ್ ಗಳನ್ನು ಅಳವಡಿಸಿಕೊಂಡಿದೆ.  KGF ನಲ್ಲಿ ಹಾಲಿವುಡ್ ಮಟ್ಟದ ದೃಶ್ಯ ವೈಭವ.

Vikrant Rona (2022) → 3D ತಂತ್ರಜ್ಞಾನ ಬಳಸಿ ಕನ್ನಡ ಸಿನಿಮಾ ವಿಭಿನ್ನ ಪ್ರಯೋಗ ಮಾಡಿದ ಉದಾಹರಣೆಗಳಿವೆ.

COVID ಸಮಯದಲ್ಲಿ ಕನ್ನಡ ಚಿತ್ರರಂಗ OTT ಮೂಲಕ ಹೊಸ ಪ್ರೇಕ್ಷಕರನ್ನು ಗಳಿಸಿತು. Netflix, Amazon Prime, Zee5, Sony LIV ಮುಂತಾದ ವೇದಿಕೆಗಳಲ್ಲಿ ಕನ್ನಡ ಸಿನಿಮಾಗಳು ಬಿಡುಗಡೆಯಾಗಿ, ಜಗತ್ತಿನ ಕನ್ನಡಿಗರು ಸುಲಭವಾಗಿ ನೋಡಲು ಸಾಧ್ಯವಾಯಿತು.

ಕನ್ನಡ ಸಿನಿಮಾಗಳು ಈಗ ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುತ್ತಿವೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುವ ಸಲಾರ್, KD, ಭಗೀರಥ ಮುಂತಾದ ಪ್ರಾಜೆಕ್ಟ್ಗಳು ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾವನ್ನು ಮತ್ತಷ್ಟು ಎತ್ತರಕ್ಕೇರಿಸಬಹುದು.

ಕನ್ನಡ ಸಿನಿಮಾಗಳು ಸಂಸ್ಕೃತಿ + ನವೀನ ತಂತ್ರಜ್ಞಾನ + ಜಾಗತಿಕ ಕಥನ ಶೈಲಿಗಳನ್ನು ಒಟ್ಟುಗೂಡಿಸಿಕೊಂಡು ಮುಂದುವರಿಯುತ್ತಿವೆ.


2010ರಿಂದ ಇಂದಿನವರೆಗೆ ಕನ್ನಡ ಚಿತ್ರರಂಗವು ತನ್ನ ಮರು ಹುಟ್ಟು (Revival) ಕಂಡಿದೆ. KGF ಮೂಲಕ ಅಂತರರಾಷ್ಟ್ರೀಯ ಹಿರಿಮೆ, ಕಾಂತಾರಾ ಮೂಲಕ ಸಂಸ್ಕೃತಿಯ ಜಾಗತೀಕರಣ, 777 ಚಾರ್ಲಿ ಮೂಲಕ ಭಾವನಾತ್ಮಕ ಆಳತೆ  ಇವೆಲ್ಲವು ಸೇರಿ ಕನ್ನಡ ಚಿತ್ರರಂಗವನ್ನು ಜಗತ್ತಿಗೆ ಪರಿಚಯಿಸಿದೆ.

ಕನ್ನಡ ಸಿನಿಮಾದ ಪಯಣವು ಕೇವಲ ಮನರಂಜನೆಯಲ್ಲ, ಅದು ಕನ್ನಡಿಗರ ಆತ್ಮಸಾಕ್ಷಾತ್ಕಾರವಾಗಿದೆ. ಸತಿಸುಲೋಚನ ಎಂಬ ಮೊದಲ ಟಾಕಿ ಚಿತ್ರದಿಂದ ಪ್ರಾರಂಭವಾದ ಸಾಧನೆ ಇಂದು ಜಾಗತಿಕ ವೇದಿಕೆಯಲ್ಲಿ ಕನ್ನಡತನವನ್ನು ಹೊತ್ತೊಯ್ಯುತ್ತಿದೆ. KGF, ಕಾಂತಾರಾ, 777 ಚಾರ್ಲಿ ಹೀಗೆ ಇತ್ತೀಚಿನ ಸಿನಿಮಾಗಳು ಕನ್ನಡ ಸಿನಿಮಾ ವಿಶ್ವಮಟ್ಟದಲ್ಲಿ ತನ್ನ ಶಕ್ತಿ ತೋರಿಸುತ್ತಿರುವುದಕ್ಕೆ ಸಾಕ್ಷಿಯಾಗಿವೆ.

ಕನ್ನಡ ಸಿನೆಮಾದ ಭವಿಷ್ಯ ಇಂದು ಉಜ್ವಲವಾಗಿದ್ದು, ಅದು ಕೇವಲ ಕನ್ನಡಿಗರಷ್ಟೇ ಅಲ್ಲ, ವಿಶ್ವದ ಪ್ರೇಕ್ಷಕರ ಹೃದಯಕ್ಕೂ ಹತ್ತಿರವಾಗುತ್ತಿದೆ.

 

 

ಧನ್ಯವಾದಗಳು…….🌷🌷🌷🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????