✨ ನಿಮಗೂ ನಿಮ್ಮ ಕುಟುಂಬದವರಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು! ✨ ಮಹಿಳಾ ಶಕ್ತಿ, ಭಕ್ತಿ ಮತ್ತು ಸಾಂಸ್ಕೃತಿಕ ಶ್ರದ್ಧೆಗೆ ಸಮರ್ಪಿತವಾದ ಈ ವರಮಹಾಲಕ್ಷ್ಮಿ ಹಬ್ಬ ಎಲ್ಲರ ಜೀವನದಲ್ಲಿ ಬೆಳಕು ತುಂಬಲಿ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಲೇಖಕಿ:ನಾಗಲಕ್ಷ್ಮಿ ಕೆ.ಎನ್. ೦೮.೦೮.೨೦೨೫
🌺 ವರಮಹಾಲಕ್ಷ್ಮೀ ವ್ರತ: ಸೌಭಾಗ್ಯದ ಅದಿದೇವತೆ ಮಹಾಲಕ್ಷ್ಮಿ
ದೇವಿ ಆರಾಧನೆಯ ಒಂದು ವಿಶಿಷ್ಟ ದಿನ 🌺
ಭಾರತದಲ್ಲಿ
ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಮಹಿಳೆಯರು ಆಚರಿಸುವ "ವರಮಹಾಲಕ್ಷ್ಮೀ ವ್ರತ", ಸೌಭಾಗ್ಯ, ಐಶ್ವರ್ಯ ಮತ್ತು ಕುಟುಂಬದ ಸಮೃದ್ಧಿಗಾಗಿ ದೇವಿ ಲಕ್ಷ್ಮಿಯನ್ನು ಪೂಜಿಸುವ
ಅತ್ಯಂತ ಪವಿತ್ರ ದಿನಗಳಲ್ಲಿ ಒಂದು. ಈ ವ್ರತವು ಶ್ರಾವಣ
ಮಾಸದ ಶುಕ್ರವಾರದಂದು, ವಿಶೇಷವಾಗಿ ಶ್ರಾವಣದ ಎರಡನೇ ಶುಕ್ರವಾರ ಆಚರಿಸಲಾಗುತ್ತದೆ.
🕉️ ವರಮಹಾಲಕ್ಷ್ಮಿ ಯಾರು?
'ವರ' + 'ಲಕ್ಷ್ಮಿ' ಎಂದರೆ ವರಗಳನ್ನು ನೀಡುವ ದೇವಿ ಮಹಾಲಕ್ಷ್ಮಿ. ಇವರು ಅಷ್ಟಲಕ್ಷ್ಮಿಗಳಲ್ಲಿ ಪ್ರಮುಖರಾಗಿದ್ದಾರೆ.
- ಧನ
ಲಕ್ಷ್ಮಿ
- ಧಾನ್ಯ
ಲಕ್ಷ್ಮಿ
- ಆದಿ
ಲಕ್ಷ್ಮಿ
- ವೈಭವ
ಲಕ್ಷ್ಮಿ
- ಸಂತಾನ
ಲಕ್ಷ್ಮಿ
- ಧೈರ್ಯ
ಲಕ್ಷ್ಮಿ
- ವಿದ್ಯಾ
ಲಕ್ಷ್ಮಿ
- ವಿಜಯ
ಲಕ್ಷ್ಮಿ
ಮಹಾಲಕ್ಷ್ಮಿಯ
ಸ್ಮರಣೆ
ಮತ್ತು ಪೂಜೆಯನ್ನು ಇಡೀ ಕುಟುಂಬದ ಕಲ್ಯಾಣಕ್ಕಾಗಿ
ಮಾಡಲಾಗುತ್ತದೆ.
ಕುಟುಂಬದ
ಸೌಖ್ಯ, ಸಮೃದ್ಧಿ, ಧೈರ್ಯ ಮತ್ತು ಶ್ರದ್ಧೆಯ ಸಂಕೇತವಾಗಿಕರುವ ಗೃಹಿಣಿಯ ಶಕ್ತಿಯನ್ನೇ
ಪ್ರತಿನಿಧಿಸುವ ಪೂಜೆ ತುಂಬಾ ಮಹತ್ವವಾಗಿದೆ.
ಈ
ದಿನ ಮಂಗಳಸುತ್ರ, ಆಭರಣಗಳು, ಮತ್ತು
ಸೀರೆಗಳನ್ನು ಅಲಂಕಾರವಾಗಿ ಧರಿಸಿದ ದೇವಿಯನ್ನು
ಆರಾಧಿಸಲಾಗುತ್ತದೆ.
🪔 ಪೂಜೆಯ ವಿಧಾನ (ಸಾರಾಂಶ):
ದೇವಿಯನ್ನು
ಕಲಶದ ರೂಪದಲ್ಲಿ
ಸ್ಥಾಪಿಸಿ. ಕಲಶದಲ್ಲಿ ಒಣಹಣ್ಣುಗಳು(ದ್ರಾಕ್ಷಿ, ಗೋಡಂಬಿ,
ಖರ್ಜೂರ, ಬಾದಾಮಿ), ಅಕ್ಷತೆ,
ಅರಿಶಿನ ಕುಂಕುಮ ಹಾಕಿ,
ಹೊಸ ವಸ್ತ್ರದಿಂದ ಸಿಂಗರಿಸಲಾಗುತ್ತದೆ.
ಶ್ರದ್ಧಾ
ಭಕ್ತಿಯಿಂದ ಪೂಜೆ ಮಾಡಿ , ಮಹಾಲಕ್ಷ್ಮೀ
ಯ ಅಷ್ಟೋತ್ತರ ಶತನಾಮಾವಳಿ ಪಠಣ ಮಾಡಲಾಗುತ್ತದೆ.
ವಿವಿಧ
ಮಾಧುರ್ಯಪೂರ್ಣ ಭಕ್ತಿಗೀತೆಗಳನ್ನು ಹಾಡಲಾಗುತ್ತವೆ.
ಇಂದು
ವಿಶೇಷವಾಗಿ "ತಾಂಬೂಲ", "ಪಾಯಸ", "ಒಬ್ಬಟ್ಟು", "ಪಲ್ಯ", "ಹೆಸರುಕಾಳು ಕೋಸಂಬರಿ" ಮುಂತಾ
ಸಿಹಿ ತಿಂಡಿಗಳನ್ನು ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ.
👩👧 ವಿಶೇಷ ಆಚರಣೆಗಳು:
ಮಹಾಲಕ್ಷ್ಮಿಯ
ಆರಾಧನೆಯಿಂದ ತಾಯಿ-ಮಗಳ
ಬಾಂದವ್ಯವನ್ನು ಬಲಪಡಿಸುವ ದಿನವೂ ಇದಾಗಿದೆ.
ಈ
ದಿನದಂದು ಅತ್ತೆ-ಸೊಸೆಯಂದಿರು
ಒಟ್ಟಿಗೆ
ಪೂಜೆ ಮಾಡುವುದು ವಿಶೇಷ.
ಮಹಿಳೆಯರು
ಪರಸ್ಪರದಲ್ಲಿ, ಕಂಕಣ, ಕುಂಕುಮ, ಹೂವುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಶುಭ
ಲಕ್ಷಣಗಳಾದ "ಮಂಗಳದ ಅನುಭವ" ಗಳನ್ನು ಹಂಚಿಕೊಳ್ಳುತ್ತಾರೆ.
ವರಮಹಾಲಕ್ಷ್ಮೀ
ವ್ರತವನ್ನು ಆಚರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ, ಶ್ರದ್ಧೆ, ಸಂಸ್ಕೃತಿ ಮತ್ತು ಭಕ್ತಿಭಾವನೆ ಬೆಳೆಯುತ್ತದೆ.
ಇದು ನೇರವಾಗಿ ಮಹಿಳೆಯರ ಒಳಿತಿಗೆ ಮತ್ತು ಕುಟುಂಬದ ಶ್ರೇಯಸ್ಸಿಗೆ ಪೂರಕವಾಗುತ್ತದೆ.
ವರಮಹಾಲಕ್ಷ್ಮಿ
ಹಬ್ಬದ ಆಚರಣೆಯ ಹಿಂದೆ
ಒಂದು ಆಧ್ಯಾತ್ಮಿಕ ಮತ್ತು ಪೌರಾಣಿಕ ಹಿನ್ನೆಲೆ ಇದೆ, ಇದು ಹಿಂದೂ
ಪುರಾಣಗಳಲ್ಲಿ
ವಿಶಿಷ್ಟವಾಗಿ ಉಲ್ಲೇಖವಾಗಿರುವ ಕಥೆಗಳ ಮೂಲಕ ತಿಳಿಯುತ್ತದೆ. ಈ
ಹಬ್ಬ ದೇವಿ ಲಕ್ಷ್ಮಿಯ ಅನುಗ್ರಹವನ್ನು
ಪಡೆಯಲು ಆಚರಿಸಲ್ಪಡುವುದಷ್ಟೇ ಅಲ್ಲದೆ, ಅದರಲ್ಲಿ ನಂಬಿಕೆಯ, ಶ್ರದ್ಧೆಯ, ಮತ್ತು ಧರ್ಮದ ಪಾಠಗಳೂ ಸೇರಿವೆ.
🪔 ಪುರಾಣದಲ್ಲಿ ಆಚರಿಸಿದ ವರಮಹಾಲಕ್ಷ್ಮಿ ಹಬ್ಬದ ಕಥೆ!!
📖 ಮುಖ್ಯ ಕಥೆ
– ಚಾರುಮತಿ ಕಥೆ (ಪದ್ಮಪುರಾಣದಿಂದ).
ಪದ್ಮಪುರಾಣದ
ಪ್ರಕಾರ, ವಿದರ್ಭ ದೇಶದ ರಾಜಧಾನಿ ಕುಂಡಿನ ನಗರದ ನಿವಾಸಿಯಾದ ಚಾರುಮತಿ ಎಂಬ ಧಾರ್ಮಿಕ ನಂಬಿಕೆಯುಳ್ಳ
ಸ್ತ್ರೀ ತಾನು
ದರಿದ್ರಳಾದರೂ ತನ್ನ ಪತಿಗೆ ಅತ್ಯಂತ
ನಿಷ್ಠಳಾಗಿ ಭಕ್ತಿ ತೋರುತ್ತಾ , ಸದಾ
ಧರ್ಮದ ಮಾರ್ಗದಲ್ಲಿಯೇ ನಡೆದುಕೊಳ್ಳುತ್ತಿದ್ದಳು.
ಒಂದು
ರಾತ್ರಿ, ದೇವಿ ಮಹಾಲಕ್ಷ್ಮಿ ಅವಳ
ಕನಸಿನಲ್ಲಿ ಬಂದು, ಹೇಳಿದಳು:
"ಏ ಚಾರುಮತೀ,
ನಾನು ಸಂತೋಷಗೊಂಡಿದ್ದೇನೆ. ನಿನ್ನ ಧರ್ಮನಿಷ್ಠೆಗೆ ಪ್ರಶಂಸನೆ ಇದೆ. ನಿನ್ನ ಪೂರ್ವ ಜನ್ಮದ ಪುಣ್ಯಾನುಸಾರವಾಗಿ
ನಿನ್ನನ್ನು ಅನುಗ್ರಹಿಸಲು ಬಂದಿರುವೆ. ನಾನೊಂದು
ವಿಶೇಷ ವ್ರತವನ್ನು ನಿನಗೆ ಬೋಧಿಸುತ್ತೇನೆ — ಅದನ್ನು 'ವರಲಕ್ಷ್ಮೀ ವ್ರತ'ವೆಂದು ಕರೆಯುತ್ತಾರೆ.
ಶ್ರಾವಣ ಮಾಸದ ಶುಕ್ರವಾರ, ಅದನ್ನು
ಆಚರಿಸು. ನಿನ್ನ ಬಾಳಿನಲ್ಲಿ ಐಶ್ವರ್ಯ, ಆಯುಷ್ಯ, ಸಂತಾನ ಮತ್ತು ಸೌಭಾಗ್ಯ ಎಲ್ಲವೂ ದೊರೆಯುತ್ತದೆ."
ಚಾರುಮತಿ
ಕನಸಿನಲ್ಲಿ ಬಂದ ದೇವಿಯ ಆದೇಶವನ್ನು
ಗೌರವದಿಂದ ಸ್ವೀಕರಿಸಿ, ತನ್ನ ಮನೆಯಲ್ಲಿ, ಪಕ್ಕದ ಮನೆಯ ಸ್ತ್ರೀಯರನ್ನೂ
ಕರೆಸಿ , ಭಕ್ತಿ ಶ್ರದ್ಧೆಯಿಂದ ವ್ರತ
ಆಚರಿಸುತ್ತಾಳೆ. ಇದರಿಂದ ಆಕೆಯು ಅಷ್ಟೈಶ್ವರ್ಯವನ್ನು ಪಡೆದು ತನ್ನ ದಾರಿದ್ರ್ಯದಿಂದ
ಮುಕ್ತಿಯಾದಳು.
ಈ
ಘಟನೆಯಿಂದ ಪ್ರೇರಣೆಯಾಗಿ ವರಮಹಾಲಕ್ಷ್ಮಿ ವ್ರತವು ಭಾರತದ ಹಲವೆಡೆ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಆಚರಣೆಗೊಳ್ಳುತ್ತಿದೆ.
🙏 ದೇವಿ ಲಕ್ಷ್ಮಿಯು ಕೊಡುವ ವರಗಳು:
ಹಬ್ಬದ
ಹೆಸರಿನಂತೆ – “ವರ” + “ಲಕ್ಷ್ಮೀ” – ಈ ವ್ರತದಿಂದ ದೇವಿ
ವಿವಿಧ ರೂಪಗಳಲ್ಲಿ ಭಕ್ತರಿಗೆ ವರಗಳನ್ನು ನೀಡುತ್ತಾರೆ. ಈ ಹಬ್ಬದಲ್ಲಿ ಪೂಜಿಸುವ
ಅಷ್ಟಲಕ್ಷ್ಮಿಗಳು:
- ಆದಿ
ಲಕ್ಷ್ಮಿ
– ಆದಿ ಶಕ್ತಿಯ ರೂಪ.
- ಧಾನ್ಯ
ಲಕ್ಷ್ಮಿ
– ಆಹಾರದ ದೇವತೆ.
- ಧನ
ಲಕ್ಷ್ಮಿ
– ಐಶ್ವರ್ಯದ ರೂಪ.
- ಗಜ
ಲಕ್ಷ್ಮಿ
– ರಾಜಕೀಯ, ಅಧಿಕಾರ, ವೈಭವ.
- ಸಂತಾನ
ಲಕ್ಷ್ಮಿ
– ಸಂತಾನ ಆಶೀರ್ವಾದ.
- ವಿಜಯ
ಲಕ್ಷ್ಮಿ
– ಎಲ್ಲ ಕಾರ್ಯಗಳಲ್ಲಿ ವಿಜಯ.
- ವಿದ್ಯಾ
ಲಕ್ಷ್ಮಿ
– ಜ್ಞಾನ ಮತ್ತು ಶಿಕ್ಷಣ.
- ಧೈರ್ಯ
ಲಕ್ಷ್ಮಿ
– ಧೈರ್ಯ ಮತ್ತು ಆತ್ಮವಿಶ್ವಾಸ.
ಈ
ವ್ರತವನ್ನು ಮಾಡಿದರೆ ಕನ್ಯೆಗೆ ಉತ್ತಮ ವರ, ಗೃಹಿಣಿಗೆ ಗಂಡನ ಆಯುಷ್ಯ, ಮಕ್ಕಳ ಭವಿಷ್ಯಕ್ಕೆ ಯಶಸ್ಸು, ಮನೆಗೆ ಐಶ್ವರ್ಯ ಹಾಗೂ ಧರ್ಮನಿಷ್ಠೆಯ ಅನುಗ್ರಹ ದೊರೆಯುತ್ತದೆ ಎಂದು ಭಾವಿಸಲಾಗುತ್ತದೆ.
ವರಲಕ್ಷ್ಮಿ
ವ್ರತದಿಂದ ಸಪ್ತಜನ್ಮದ ಸೌಭಾಗ್ಯ ಸಿಗುತ್ತದೆ ಎಂಬ ನಂಬಿಕೆಯೂ ಇದೆ.
ವರಮಹಾಲಕ್ಷ್ಮಿ
ಹಬ್ಬವು ಪುರಾಣದ
ಕಥೆಯಂತೆ ದೇವಿ ಮಹಾಲಕ್ಷ್ಮಿಯ ಅನುಗ್ರಹದಿಂದ
ಪ್ರಾರಂಭವಾದದು. ಇದು ಮಹಿಳೆಯರ ಧರ್ಮ,
ಶ್ರದ್ಧೆ, ಶಕ್ತಿಯ ಆಚರಣೆ. ಮನೆಗೆ ಶ್ರೇಯಸ್ಸು, ಆಯುಷ್ಯ, ಸಂಪತ್ತು ತರಲು, ಪರಮಾತ್ಮನ ಅನುಗ್ರಹಕ್ಕೆ ಅರ್ಹರಾಗಲು ಈ ದಿನದ ಪೂಜೆಯು
ಸಹಾಯಕ ತಿಳಿಸುತ್ತದೆ.
ಭಾರತದ
ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ,
ಅವುಗಳು ಮಾನವೀಯ ಸಂಬಂಧ, ಸಾಮಾಜಿಕ ಏಕತೆ, ಸಾಂಸ್ಕೃತಿಕ ಪರಂಪರೆ ಮತ್ತು ಜೀವನಮೌಲ್ಯಗಳನ್ನು ಕಟ್ಟಿಕೊಡುವ ಪ್ರಮುಖ ಆಧಾರಸೆಲೆಗಳಾಗಿವೆ.
ಭಾರತೀಯ
ಹಬ್ಬಗಳ ಆಚರಣೆಯ
ಒಳನೋಟ:
ಪ್ರಕೃತಿ
ಸಂರಕ್ಷಣೆ:- ಸಾಮಾನ್ಯವಾಗಿ ಭಾರತದಲ್ಲಿ ಆಚರಿಸಲ್ಪಡುವ ಹಬ್ಬಗಳು ಋತುಚಕ್ರಕ್ಕೆ ಅನುಗುಣವಾಗಿ ಬರುತ್ತವೆ. ಇದು ಪ್ರಕೃತಿಯೊಂದಿಗೆ
ಮಾನವನು ನೇರಾನೇರಾ ಹಂಚಿಕೊಳ್ಳುವ ಸಂಭ್ರಮದ ಹಾದಿಯಾಗಿದೆ.(ಉದಾ: ಯುಗಾದಿ, ವಸಂತಪಂಚಮಿ, ಕಾರ್ತಿಕಮಾಸ).
ಆಹಾರದ
ಮಹತ್ವ:- ಪ್ರತಿಯೊಂದು ಹಬ್ಬಕ್ಕೂ ನೈವೇದ್ಯ ದ ರೂಪದಲ್ಲಿ
ತಯಾರಿಸುವ ಬಗೆ ಬಗೆಯ ಆಹಾರಗಳು , ಇವುಗಳು ಆಯುರ್ವೇದ
ಮತ್ತು ಋತುಮಾನದ ಆಹಾರದ ಸಂಸ್ರ್ಕತಿಯ ಪ್ರತೀಕವಾಗಿವೆ.
ಸಾಮಾಜಿಕ
ಬಾಂಧವ್ಯ:- ಹಬ್ಬಗಳು ಆಚರಿಸುವ ಸಮಯದಲ್ಲಿ ಬಂಧುಗಳು, ಸ್ನೇಹಿತರು ಬೇಟಿಯಾಗಿ ಹಬ್ಬದ ಶುಭಾಷಯಗಳನ್ನು
ಕೋರುತ್ತಾ ಸೌಹಾರ್ದತೆಯನ್ನು ಸಾಧಿಸುತ್ತಾರೆ. ಇದು
ಸಾಮಾಜಿಕ ಏಕತೆಗೆ ಪೂರಕವಾಗಿದೆ.
ಧರ್ಮ ಮತ್ತು ತತ್ವ ಚಿಂತನೆ: ಸದಾ ಧರ್ಮದ ಹಾದಿಯಲ್ಲಿ ನಡೆಯುವ , ನಿಷ್ಠೆ , ನಂಬಿಕೆ, ಪ್ರಾಮಾಣಿಕತೆ, ಮತ್ತು ಕರ್ಮದ ತತ್ವಗಳ ಕುರಿತಾಗಿ ಪುರಾಣ ಕತೆಗಳನ್ನು ಕಾಲಕಾಲಕ್ಕೆ ನಮಗೆ ಹಬ್ಬಗಳು ನೆನೆಸಿಬಿಡುತ್ತವೆ.
ಭಾರತದ
ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಾಗಿಲ್ಲ; ಈ ಗ್ಯಾಜೆಟ್
ಗಳ ಯುಗದಲ್ಲಿ ಹಬ್ಬಗಳು ಹಬ್ಬದ ಆಚರಣೆಯ ಮುಖೇನ, ಕುಟುಂಬದಲ್ಲಿನ
ಸಂಬಂಧಗಳನ್ನು ಗಾಢಗೊಳಿಸುವ, ಪುನರುಜ್ಜೀವನಗೊಳಿಸುವ,
ಮತ್ತು ಸಂವೇದನಾತ್ಮಕವಾಗಿ ಬೆಸೆದುಹಿಡಿಯುವ ಪ್ರಯತ್ನಗಳು ನಿರಂತರವಾಗಿ ನಡೆಸುತ್ತಲೇ ಬರುತ್ತಿವೆ.
ಈ
ಹಬ್ಬಗಳ ಮೂಲಕ ನಾವು ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುತ್ತಾ ಸಂಬಂಧಗಳ ಉತ್ಸವವನ್ನು ಆಚರಿಸೋಣ. ಕುಟುಂಬದೊಂದಿಗೆ
ಊಟ, ಪೂಜೆ, ಆಚರಣೆ, ಸಂಗೀತ, ಸಂಭಾಷಣೆ, ಹರಟೆಗಳು ನಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳೋಣ. ಕೆಲಸದ ಒತ್ತಡದಿಂದ
ದೂರಾಗಿ ನಮ್ಮವರೊಂದಿಗೆ ಬೆರೆತು ಹಿಗ್ಗಿ ಭಾವನೆಗಳ ಧಣಿವಾರಿಸಿಕೊಳ್ಳೋಣ.
ಈ
ಹಬ್ಬ ಮಾಡುವ ನೆಪದಲ್ಲಿ, ಮಕ್ಕಳೊಂದಿಗೆ ನಾವು ಸೇರಿ ನಮ್ಮ ಹಿರಿಯರು ಹೇಳುವ ಕಥೆ ಅನುಭವದ ಪಾಠಗಳನ್ನು
ಮತ್ತೆ ಮತ್ತೆ ಮನನ ಮಾಡಿಕೊಳ್ಳೋಣ.
ಮನೆಯ
ಪಾರಂಪರ್ಯ, ಭಕ್ತಿಭಾವನೆ, ಸಂಸ್ಕ್ರತಿ ಆಚರಣೆ ಎಲ್ಲವನ್ನೂ ಒಟ್ಟಿಗೆ ಕಣ್ತುಂಬಿಕೊಂಡಾಗ, ಆಹಾ ಸ್ವರ್ಗೌವೂ
ಹಿಗೆಯೇ ಇರಬಹುದೇನೋ ಎನ್ನಿಸದಿರದು.
ಹಬ್ಬದ
ಸಮಯದಲ್ಲಿ ಮಾಡುವ ಅನ್ನದಾನ , ವಸ್ತ್ರದಾನಗಳು ನಾವು ಬಂಧುಗಳೊಂದಿಗೆ ಮಾತು ಬಿಟ್ಟು ,ನಂತರ ಮಾತುಕತೆ
ನಡೆಸುವ ಮೂಲಕ ಸಂಬಂಧಗಳ ಶುದ್ಧೀಕರಣ ಮಾಡಿಕೊಳ್ಳುವ
ಸಂಸ್ಕಾರದ ಆಚರಣೆಯ ಪ್ರತಿಬಿಂಬಗಳಾಗಿವೆ. ಇದನ್ನೇ ಪುನಃ ಪುನಃ ಸಂತೋಷ ಹಂಚಿಕೊಂಡು ಪರಸ್ಪರರಿಗೆ ಶುಭ ಹಾರೈಸುವುದನ್ನು ಹಬ್ಬದ ಸಂಸ್ಕೃತಿಯು ಬಿಂಬಿಸುತ್ತದೆ.
ನಿತ್ಯದ
ಏರಿಳಿತದ ಬದುಕಿನಲ್ಲಿ ಹಬ್ಬವು ಒಂದು ನಿಲ್ದಾಣವಿಲ್ಲದ ಸಂವೇದನೆಯ ಜಾಗ. ಮನುಷ್ಯ ಮನುಷ್ಯರ ನಡುವಿನ
ಭಿನ್ನತೆಗಳನ್ನು ಮರೆತು “ ನಾವು, ನಮ್ಮವರು” ಎಂಬ
ನೆನಪುಗಳನ್ನು ಮತ್ತೆ ಹುಟ್ಟಿಹಾಕುವ ಸಮಯವೇ ಹಬ್ಬ.
ಹಬ್ಬಗಳು
ಮಾಯೆಯಂತೆ ದೂರವಾದ ಸಂಬಂಧಗಳನ್ನು ಪುನರ್ ರಚಿಸುತ್ತವೆ.
ಆತ್ಮೀಯತೆಯ ಹಾರ್ಮೋನುಗಳನ್ನು ಉತ್ತೇಜಿಸಿ ಜೋಡಿಸುತ್ತವೆ. ಮತ್ತು ಮನೆಯೇ ದೇವಾಲಯವಾಗುವ ಅನುಭವವನ್ನು
ನಮಗೆ ಕೊಡುಗೆಯಾಗಿ ನೀಡುತ್ತವೆ.
ವರಮಹಾಲಕ್ಷ್ಮಿ
ಹಬ್ಬ: - ಪತಿ-ಪತ್ನಿ ನಡುವಿನ ಶ್ರದ್ಧೆ, ಭಕ್ತಿ, ಅನ್ಯೋನ್ಯತೆ, ಮತ್ತು ಕುಟುಂಬದ ಆಶೀರ್ವಾದವನ್ನು
ತಿಳಿಸುತ್ತದೆ.
ರಕ್ಷಾಬಂಧನ:-
ಸಹೋದರ -ಸಹೋದರಿ ನಡುವಿನ ಬಂಧವನ್ನು ಪರಿಚಯಿಸುತ್ತದೆ.
ಗೌರಿ
ಹಬ್ಬ:- ತಾಯಿ- ಮಗಳ ಸಂಬಂಧವನ್ನು ನೆನಪಿಸುತ್ತದೆ. ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣುಮಗಳನ್ನು
ಬಾಗಿನ ನೀಡುವ ಸಲುವಾಗಿ ಗೌರಿ ಹಬ್ಬಕ್ಕೆ ಕರೆತರುವ ಪದ್ಧತಿಯನ್ನು ತೋರಿಸುತ್ತದೆ.
ಧನ್ಯವಾದಗಳು.....🌷🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು