ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

"ಪೀಳಿಗೆಯಿಂದ ಪೀಳಿಗೆ ಹರಿಯುವ ಜ್ಞಾನ – ಜನಪದ ಕಥೆಗಳ ಮಂತ್ರಮುಗ್ಧ ಜಗತ್ತು"

 



ಲೇಖಕಿ: ನಾಗಲಕ್ಷ್ಮಿ ಕೆ.ಎನ್‌  ದಿನಾಂಕ: ೧೯.೦೮.೨೦೨೫

ಜನಪದ ಕಥೆಗಳು ಎಂದರೇನು?

ಜನಪದ ಕಥೆಗಳು ಎಂದರೆ  ಜನರಿಂದ ಜನರಿಗೆ ಬಾಯಿಂದ ಬಾಯಿಗೆ  ಮೌಖಿಕವಾಗಿ ಹರಿದುಬಂದ ಕಥೆಗಳನ್ನೇ ಜನಪದ ಕಥೆಗಳೆನ್ನುತ್ತಾರೆ. ಇವುಗಳನ್ನು ಬರಹದಲ್ಲಿ ಯಾರೂ ಮೊದಲಿನಿಂದ ದಾಖಲಿಸಿರಲಿಲ್ಲ; ಬದಲಿಗೆ ಹಳ್ಳಿಗಳಲ್ಲಿ,  ಆಶ್ರಮ ಕುಟೀರಗಳಲ್ಲಿ, ಹೊಲಗಳಲ್ಲಿ, ರಾತ್ರಿಯ ವೇಳೆ ಹಿರಿಯರು ಮಕ್ಕಳಿಗೆ ಹೇಳುತ್ತಾ, ಪೀಳಿಗೆಯಿಂದ ಪೀಳಿಗೆಗೆ ಹೀಗೆ ಬಾಯಿ ಮೂಲಕವೆ  ಸಾಗಿ ಬಂದವು.

ಇವುಗಳಲ್ಲಿ ಹಳ್ಳಿ ಜೀವನ, ಪ್ರಾಣಿ-ಪಕ್ಷಿಗಳ ರೂಪಕ, ದೇವರು ರಾಕ್ಷಸರುಗಳ ಪಾತ್ರ, ಹಾಗೂ ಸರಳ ಮನುಷ್ಯರ ಜೀವನದ ಚಿತ್ರಣಗಳು ತುಂಬಿರುತ್ತವೆ.

ಈ ಜನಪದ ಕಥೆಗಳು ಮನರಂಜನೆ, ಶಿಕ್ಷಣ, ನೀತಿ-ಪಾಠ, ಸಂಸ್ಕೃತಿ ಸಂರಕ್ಷಣೆಯ ಮುಖ್ಯ ಉದ್ದೇಶಗಳನ್ನು ಹೊಂದಿವೆ.

ಜನಪದ ಕಥೆಗಳ ಮಹತ್ವ

ಜನಪದ ಕಥೆಗಳು ಸತ್ಯ, ಧೈರ್ಯ, ಪ್ರೀತಿ, ಶ್ರಮ, ಸಹನೆ, ಒಗ್ಗಟ್ಟು  ಇಂತಹ ಜೀವನಮೌಲ್ಯಗಳನ್ನು ಸರಳ ಶೈಲಿಯಲ್ಲಿ ಕಲಿಸುತ್ತವೆ.

ಮಕ್ಕಳಿಗೆ ನೀತಿ-ಪಾಠಗಳನ್ನು ತಿಳಿಸಲು ಜನಪದ ಕಥೆಗಳು ಅತ್ಯುತ್ತಮ ಮಾಧ್ಯಮಗಳಾಗಿವೆ.

ಹಳ್ಳಿಗಳ ಬದುಕು, ಹಬ್ಬ-ಹರಿದಿನಗಳು, ನಂಬಿಕೆಗಳು, ಜನರ ಭಾವನೆಗಳನ್ನು ಕಥೆಗಳು ಪ್ರತಿಬಿಂಬಿಸುತ್ತವೆ. ಹೀಗಾಗಿ ಜನಪದ ಕಥೆಗಳು ನಮ್ಮ ಸಾಂಸ್ಕೃತಿಕ ಐಕ್ಯತೆ  ಉಳಿಸಿಕೊಳ್ಳುವ ಮಾರ್ಗಗಳಾಗಿವೆ.

ಹಳೆಯ ದಿನಗಳಲ್ಲಿ ಟಿವಿ, ರೇಡಿಯೋ ಇರದ ಕಾಲದಲ್ಲಿ ಜನಪದ ಕಥೆಗಳೇ ಜನರ ಮನರಂಜನೆಯಾಗಿದ್ದವು. ಮಕ್ಕಳನ್ನು ಮಲಗಿಸುವಾಗ ತಾಯಿ, ಅಜ್ಜ ಅಜ್ಜಿಯರು ಹೇಳುವ ಕಥೆಗಳು ಮನೆಯ ವಾತಾವರಣವನ್ನು ಸಂತೋಷದಿಂದ ತುಂಬುತ್ತಿದ್ದವು.

ಜನಪದ ಕಥೆಗಳು ಕನ್ನಡದ ಸಾಂಪ್ರದಾಯಿಕ ಪದಗಳು, ಹಳ್ಳಿಯ ಉಕ್ತಿಗಳು, ಜಾನಪದ ಗಾದೆ ಮಾತುಗಳು ಒಳಗೊಂಡಿರುತ್ತವೆ. ಹೀಗಾಗಿ ನಮ್ಮ ಭಾಷೆಯ ಸೌಂದರ್ಯವನ್ನು ಉಳಿಸಲು ಅವು ಮಹತ್ವದ ಪಾತ್ರ ವಹಿಸುತ್ತವೆ.

ಜಾನಪದ ಕಥೆಗಳು ಸಮಾಜದ ಸಾಮೂಹಿಕ ಅನುಭವ, ಜ್ಞಾನ, ಜೀವನ ತತ್ತ್ವಗಳು ಇತ್ಯಾದಿಗಳನ್ನು ಒಳಗೊಂಡಿರುತ್ತವೆ.  ಇವುಗಳನ್ನು ಕೇಳುವುದರಿಂದ ಹೊಸ ಪೀಳಿಗೆಯವರು ಹಳೆಯ ಪೀಳಿಗೆಯವರಿಂದ  ಅನುಭವದಿಂದ ಪಾಠ ಕಲಿಯುತ್ತಾರೆ.

ಜನಪದ ಕಥೆಗಳು ನಮ್ಮ ಜೀವನದ ಕನ್ನಡಿಯಂತೆ. ಅವುಗಳಲ್ಲಿ ಜೀವನ  ಮಾರ್ಗದರ್ಶನ, ಸಂಸ್ಕೃತಿಯ ನೆನಪು, ಮೌಲ್ಯಗಳ ಪಾಠ, ಮನರಂಜನೆಯ  ಎಲ್ಲವೂ ಒಂದೇ ಸಮಯದಲ್ಲಿ ಲಭ್ಯವಾಗುತ್ತವೆ. ಹೀಗಾಗಿ ಜನಪದ ಕಥೆಗಳ ಸಂಗ್ರಹ, ಸಂರಕ್ಷಣೆ, ಮಕ್ಕಳಿಗೆ ಹೇಳಿಕೊಡುವುದು ನಮ್ಮ ಜವಾಬ್ದಾರಿಯಾಗಿದೆ.

 

ಕರ್ನಾಟಕದ ಜನಪ್ರಿಯ ಜನಪದ ಕಥೆಗಳು ಮತ್ತು ಅವುಗಳ ಪಾಠ
ಕರ್ನಾಟಕವು ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ಕಥೆಗಳ ಶ್ರೀಮಂತ ಸಂಪತ್ತಿನಿಂದ ಕಂಗೊಳಿಸುತ್ತಿದೆ. ವಿಶೇಷವಾಗಿ ಜನಪದ ಕಥೆಗಳು ನಮ್ಮ ಹಳ್ಳಿಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ  ಸಾಗಿರುವ ಜೀವಂತ ಸಂಸ್ಕೃತಿ. ಇವು ಕೇವಲ ಮನರಂಜನೆಗೆ ಮಾತ್ರವಲ್ಲ, ಬದುಕಿನಲ್ಲಿ ಅನುಸರಿಸಬೇಕಾದ ಮೌಲ್ಯಗಳು, ಧೈರ್ಯ, ಬುದ್ಧಿವಂತಿಕೆ ಮತ್ತು ನೀತಿ ಪಾಠಗಳನ್ನು ನೀಡುತ್ತವೆ.  ಹಳ್ಳಿಗಳ ಗಾಳಿ, ಹೊಲದ ಕಗ್ಗದಂತೆ ನವಿರಾದ ಅನುಭವವನ್ನು ತಂದುಕೊಡುವುದಲ್ಲದೆ, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಪಾಠಗಳನ್ನು ಕಲಿಸುತ್ತವೆ.

 

ಕಥೆಗಳು:

ಜೇನುಗೂಡು ಮತ್ತು ಗಿಡುಗ
ಒಮ್ಮೆ ಕಾಡಿನಲ್ಲಿ ಜೇನುಹುಳುಗಳು  ತಮ್ಮ ಶ್ರಮದಿಂದ ಸಾವಿರಾರು ಹೂಗಳಿಂದ ಮಕರಂದವನ್ನು ಹೀರಿ  ಸಿಹಿಯಾದ ಜೇನನ್ನು ಸಂಗ್ರಹಿಸಿ ಗೂಡು ಕಟ್ಟಿದ್ದವು. ಆದರೆ ಒಮ್ಮೆ  ಗಿಡುಗವು  ಅದನ್ನು ಕಿತ್ತುಕೊಳ್ಳಲು ಯತ್ನಿಸಿತು. ಆದರೆ ಎಲ್ಲಾ ಜೇನು  ಹುಳಗಳು ಸೇರಿ ತಮ್ಮ  ಗೂಡನ್ನು ರಕ್ಷಿಸಿಕೊಂಡವು..
ನೀತಿ ಪಾಠ: ಇದು ಯಾರೇ ಆದರೂ  ಒಗ್ಗಟ್ಟಿನಿಂದ ಇದ್ದರೆ ದೊಡ್ಡ ಶತ್ರುವನ್ನೂ ಎದುರಿಸಬಹುದು ಎಂಬುದನ್ನು ತಿಳಿಸುತ್ತದೆ.

ಒಗ್ಗಟ್ಟಿನಲ್ಲಿರುವ  ಶಕ್ತಿಯು ದೊಡ್ಡ ಶತ್ರುವನ್ನೂ ಸೋಲಿಸುತ್ತದೆ.  ದುರ್ಬಲರೂ ಒಟ್ಟಾಗಿ ಬಂದರೆ ಬಲಿಷ್ಠರಿಗಿಂತ ಶ್ರೇಷ್ಠರಾಗುತ್ತಾರೆ.

ಕಾಗೆ ಮತ್ತು ಮಡಕೆ

ಒಮ್ಮೆ ಬಾಯಾರಿದ ಕಾಗೆಯು ಹಾರುತ್ತಾ ಬಂದು ಮಡಕೆಯೊಳಗೆ ನೀರನ್ನು ಕಂಡಿತು. ಆದರೆ ನೀರು ಸ್ವಲ್ಪವೇ ಇದ್ದುದರಿಂದ ಕಾಗೆಗೆ ನೀರು ಕುಡಿಯಲು  ಸಾಧ್ಯವಾಗಲಿಲ್ಲ.  ಹಾಗೆಯೇ ಸ್ವಲ್ಪ ಹೊತ್ತು ಅತ್ತಿತ್ತ ನೋಡಿತು. ನಂತರ  ಅದು ಚಿಕ್ಕ ಚಿಕ್ಕ  ಕಲ್ಲುಗಳನ್ನು ತನ್ನ ಕೊಕ್ಕಿನಲ್ಲಿ ಹೆಕ್ಕಿ ತಂದು  ಒಂದರ ಮೇಲೆ ಒಂದು ಹಾಕತೊಡಗಿತು. ಮಡಕೆಯ ತಳದಲ್ಲಿ ಕಲ್ಲು ಉಳಿದು ನೀರು  ಮೇಲಕ್ಕೆ ಬಂದಾಗ , ಕಾಗೆ ತೃಪ್ತಿಯಿಂದ ನೀರು  ಕುಡಿದು ಹಾರಿ ಹೋಯಿತು.
ನೀತಿ ಪಾಠ: ಬುದ್ಧಿವಂತಿಕೆ ಮತ್ತು ಸಹನೆ ಇದ್ದರೆ ಎಂತಹ  ಸಂಕಷ್ಟವನ್ನು ಸಹ ಸುಲಭವಾಗಿ ಎದುರಿಸಬಹುದು.



ಕತ್ತೆ ಮತ್ತು ಹುಲಿಯ ಕಥೆ

ಒಮ್ಮೆ ಹಸಿದ  ಹುಲಿಯು ಕತ್ತೆಯನ್ನು ಹಿಡಿಯಲು ಮುಂದಾಯಿತು. ಆದರೆ ಕತ್ತೆ ತನ್ನ ಸರಳ ಬುದ್ಧಿಯಿಂದ ಮನುಷ್ಯರು ಹಾಕಿದ ಬಲೆಯ ಬಳಿ ಓಡುತ್ತಾ ಹುಲಿಯನ್ನು ಕರೆದೊಯ್ದಿತು. ಅಲ್ಲಿ ಹುಲಿ ಬಲೆಗೆ ಸಿಕ್ಕಿತು, ಕತ್ತೆ ಪಾರಾಯಿತು.
ನೀತಿ ಪಾಠ: ಶಕ್ತಿಗಿಂತ ಬುದ್ಧಿವಂತಿಕೆಯೇ ಶ್ರೇಷ್ಠ. ದುರ್ಬಲರಾಗಿದ್ದರೂ  ಚಾತುರ್ಯ ಇದ್ದರೆ ಬಲಿಷ್ಠರನ್ನು ಸಹ ಸೋಲಿಸಬಹುದು.

ಅಣ್ಣ-ತಂಗಿಯ ಪ್ರೀತಿ
ಒಮ್ಮೆ ಬಡ ಅಣ್ಣ ತನ್ನ ತಂಗಿಯ ಹಸಿವನ್ನು ನೀಗಿಸಲು  ಆಹಾರ ಹುಡುಕುತ್ತಾ ಕಾಡಿಗೆ ಹೋದ. ಅಲ್ಲಿ ದೇವತೆ ಕಾಣಿಸಿಕೊಂಡು,  ತಂಗಿಯ ಮೇಲಿನ ಅವನ ಮಮತೆಗೆ  ಮೋಹಗೊಂಡು ಆಹಾರವನ್ನು  ದ್ವಿಗುಣ ಮಾಡಿತು. ಇದರಿಂದ ಮನೆ ತುಂಬಾ ದವಸ ಧಾನ್ಯ ತುಂಬಿ ಸಂತೋಷವು ಇಮ್ಮಡಿಯಾಯಿತು.
ನೀತಿ ಪಾಠ: ನಿಸ್ವಾರ್ಥ ಪ್ರೀತಿ ಮತ್ತು ಕುಟುಂಬದ ಬಾಂಧವ್ಯವನ್ನು ದೇವರೂ ಆಶೀರ್ವದಿಸುತ್ತಾರೆ.

ನರಿ ಮತ್ತು ದ್ರಾಕ್ಷಿ

ಒಮ್ಮೆ ನರಿಯು ಹಸಿವೆಯಿಂದ ಕಾಡಿನಲ್ಲಿ ಅಲೆದಾಡುತ್ತಾ ಆಹಾರ ಸಿಗದಿದ್ದಾಗ, ಅಲ್ಲಿಯೇ ಕಾಡಿನ ಪಕ್ಕದಲ್ಲಿದ್ದ ದ್ರಾಕ್ಷಿ ತೋಟಕ್ಕೆ ಹೋಯಿತು. ಎತ್ತರದ ಕಂಬದ ಮೇಲೆ ನೇತಾಡುತ್ತಿದ್ದ ದ್ರಾಕ್ಷಿಯ ಗೊಂಚಲನ್ನು ನೋಡಿ ಆಸೆಯಿಂದ ತಿನ್ನಲು ಹೋಯಿತು. ಆದರೆ ದ್ರಾಕ್ಷಿಗಳು ಮೇಲಿದ್ದರಿಂದ ನರಿಗೆ ಎಟುಕದೇ ಹೋದವು, ಬಾರಿ ಬಾರಿ ಪ್ರಯತ್ನಿಸಿದರೂ ಸಿಗದೇ ಹೋದಾಗ ಇವು ಹುಳಿಯಿರುವ ದ್ರಾಕ್ಷಿ ಎಂದು ನರಿಯು ಹೊರಟು ಹೋಯಿತು.

ನೀತಿ ಪಾಠ: ಪ್ರಯತ್ನ ವಿಫಲವಾದರೆ ಅದನ್ನು ತಪ್ಪು ಎಂದು ಭಾವಿಸಬಾರದು. ಮತ್ತೆ ಮತ್ತೆ  ಪ್ರಯತ್ನಿಸಬೇಕು. ಸೋಲನ್ನು ಒಪ್ಪಿಕೊಳ್ಳುವುದು ಸಹ  ದೊಡ್ಡ ಗುಣ.

 ಕುರಿಗಾಹಿ ಹುಡುಗ

ಒಮ್ಮೆ ಕುರಿಗಳನ್ನು ಕಾಯುತ್ತಿದ್ದ ಹುಡುಗನು ಹಾಸ್ಯಕ್ಕಾಗಿಹುಲಿ ಬಂತು ಹುಲಿಎಂದು ಕೂಗಿದ. ಅಲ್ಲಯೇ ಪಕ್ಕದಲ್ಲಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಹಳ್ಳಿಯವರು ಬಂದು ನೋಡಿದರು ಅಲ್ಲಿ  ಹುಲಿಯೇ ಇರಲಿಲ್ಲ. ಆದರೆ ನಿಜವಾಗಿ ಒಮ್ಮೆ ಹುಲಿಯು ಬಂದಿತು ಆಗ ಅವನು ಹುಲಿ ಬಂತು ಹುಲಿ ಎಂದು  ಅವನು ಸಹಾಯಕ್ಕೆ ಕೂಗಿದಾಗ ಯಾರೂ ಬರಲಿಲ್ಲ, ಹುಡುಗ ತಮಾಷೆ ಮಾಡುತ್ತಿದ್ದಾನೆ ಎಂದು ನಿರ್ಲಕ್ಷಿಸಿಬಿಟ್ಟರು.  ಹುಡುಗ ಮೊದಲಿಗೆ ಹಾಸ್ಯ ಮಾಡಿ ಸುಳ್ಳು ಹೇಳಿದ್ದರಿಂದ ಈ ಬಾರಿ  ಅವನು ತುಂಬಾ  ಕಷ್ಟಪಟ್ಟನು.
ನೀತಿ ಪಾಠ: ಸುಳ್ಳು ಮಾತಿಗಳಿಂದ  ನಂಬಿಕೆಯು ಕಳೆದುಹೋಗುತ್ತದೆ. ಯಾವಾಗಲೂ ಸತ್ಯವನ್ನು ಮಾತ್ರವೇ ಮಾತನಾಡಬೇಕು.

 

 ಅಳಿಲು ಮತ್ತು ರಾಮ

ಶ್ರೀ ರಾಮನು  ಸೇತುವೆ ಕಟ್ಟುವ ಸಮಯದಲ್ಲಿ ಅಳಿಲು ತನ್ನ ಸಣ್ಣ ದೇಹದಿಂದ ಮರಳು ಹೊತ್ತು ತಂದು  ಸುರಿಯುತ್ತಿತ್ತು. ಅದನ್ನು ನೋಡಿ ವಾನರರು ನಕ್ಕರು. ಆದರೆ ರಾಮನು ಅದಕ್ಕೆ ಸಮ್ಮಾನ ನೀಡಿ ಆಶೀರ್ವದಿಸಿದನು.
ನೀತಿ ಪಾಠ: ದೊಡ್ಡದಾಗಲಿ ಚಿಕ್ಕದಾಗಲಿ ಪ್ರತಿಯೊಂದು ಸಹಾಯಕ್ಕೂ ಬೆಲೆ ಇದೆ. ಸೇವೆಯ ಮಹತ್ವ ಗಾತ್ರದಲ್ಲಿಲ್ಲ, ಮನಸ್ಸಿನಲ್ಲಿ ಇದೆ.

ಬುದ್ಧಿವಂತ  ಮೊಲ ಮತ್ತು ಸಿಂಹ

ಕಾಡಿನ ರಾಜ ಸಿಂಹನಿಗೆ ಕಾಡಿನಲ್ಲಿರುವ ಉಳಿದ ಪ್ರಾಣಿಗಳಲ್ಲಿ ನಿತ್ಯವೂ ಒಂದೊಂದು ಪ್ರಾಣಿಗಳು ಆಹಾರವಾಗುವ ಪದ್ದತಿಯನ್ನು ಪಾಲಿಸುತ್ತಿದ್ದವು ತಮ್ಮ ಮರಿಗಳ ರಕ್ಷಣೆಗಾಗಿ, ಹೀಗಿರುವಾಗ ಕಾಡಿನರಾಜ ಸಿಂಹಕ್ಕೆ ಆಹಾರವಾಗುವ ಸರದಿ ಮೊಲಕ್ಕೆ ಬಂದಿತು,  ಆ ದಿನ ಮೊಲವು ನಿಗದಿತ ವೇಳೆಗಿಂತ ತಡವಾಗಿ  ಸಿಂಹದ ಗುಹೆಯ ಬಳಿ ತಲುಪಿತು. ಹಸಿದಿದ್ದ ಸಿಂಹವು ಕೋಪದಿಂದ ಘರ್ಜಿಸಲು  ಮೊಲವು ಬರುವ ಹಾದಿಯಲ್ಲಿ ಇನ್ನೊಂದು ಹಿಂಹವಿದ್ದು ಅದು ನನ್ನನ್ನು ತಡೆಯಿತು ಎಂದಿತು. ಈ ಕಾಡಿನ ರಾಜ ನಾನು ನನಗಿಂತ ಇಲ್ಲಿ ಯಾರು ಬಲಿಷ್ಠರಿಲ್ಲ ನಡಿ ನೋಡೋಣ ಎಂದು ಮೊಲದ ಜೊತೆ ಹೋಯಿತು. ಅಲ್ಲಿದ್ದ ಬಾವಿಯ ಬಳಿಗೆ ಮೊಲವು ಕರೆದೊಯ್ದು ಬಾವಿಯಲ್ಲಿದ್ದ ನೀರಿನೆಡೆಗೆ ತೋರಿತು. ಸಿಂಹವು ಬಾವಿಯಲ್ಲಿ ಬಗ್ಗಿ ನೋಡಿ ನೀರಲ್ಲಿ ಕಂಡ ತನ್ನ ಪ್ರತಿಬಿಂಬವನ್ನೇ  ಇನ್ನೊಂದು ಸಿಂಹವೆಂದು ಭಾವಿಸಿ ನೀರಿಗೆ ಜಿಗಿಯಿತು. ಆಗ  ಕಾಡಿನಲ್ಲಿದ್ದ ಎಲ್ಲ ಪ್ರಾಣಿಗಳು ಮೊಲಕ್ಕೆ ಧನ್ಯವಾದ ತಿಳಿಸಿದವು.

ನೀತಿಪಾಠ: ಬುದ್ಧಿವಂತಿಕೆ ಬಲಕ್ಕಿಂತ ಶ್ರೇಷ್ಠ.



ಕರ್ನಾಟಕದ ಜನಪದ ಕಥೆಗಳು ಸರಳ ಶೈಲಿಯಲ್ಲಿ ಗಂಭೀರ ಪಾಠಗಳನ್ನು ಹೇಳುತ್ತವೆ. ಇವು ಮಕ್ಕಳಿಗೂ, ದೊಡ್ಡವರಿಗೂ ಸಮಾನವಾಗಿ ಪ್ರೇರಣೆ ನೀಡುತ್ತವೆ. ನಮ್ಮ ಸಂಸ್ಕೃತಿಯ ಅಮೂಲ್ಯ ಕಥೆಗಳ ಸಂಗ್ರಹವನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ.

 

 

 

ಜನಪದ ಕಥೆಗಳ ಮಹತ್ವ

ಮಕ್ಕಳಿಗೆ ಸರಳವಾಗಿ ಬುದ್ಧಿ, ಧೈರ್ಯ, ನೀತಿ, ಪ್ರೀತಿ, ಕರುಣೆಯ ಗುಣಗಳನ್ನು ಕಲಿಸುತ್ತವೆ.

ದೊಡ್ಡವರಿಗೆ ಜೀವನದ ಸವಾಲುಗಳನ್ನು ಎದುರಿಸಲು ಕಾಪಿಟ್ಟುಕೊಳ್ಳುವ ತತ್ತ್ವವನ್ನು ತಿಳಿಸುತ್ತವೆ.

ಸಮಾಜಕ್ಕೆ  ಒಗ್ಗಟ್ಟು, ಸತ್ಯ, ಪ್ರಾಮಾಣಿಕತೆ,  ನ್ಯಾಯ, ಶ್ರಮದ ಮೌಲ್ಯಗಳನ್ನು ನೆನಪಿಸುತ್ತವೆ.

ಕರ್ನಾಟಕದ ಸಂಸ್ಕೃತಿಯಲ್ಲಿ ನಮ್ಮ ಭಾಷೆ, ಹಳ್ಳಿ ಬದುಕಿನ ನಿಜಸ್ವರೂಪವನ್ನು ಉಳಿಸಿ ರೂಪಿಸುತ್ತವೆ.

ಕರ್ನಾಟಕದ ಜನಪದ ಕಥೆಗಳು ಕೇವಲ ಮನರಂಜನೆಗಾಗಿ ಮಾತ್ರ  ಅಲ್ಲ, ಬದುಕನ್ನು ಹೇಗೆ ನಡೆಸಬೇಕು ಎಂಬುದರ ಜೀವಂತ ಪಠ್ಯಪುಸ್ತಕಗಳು. ಇವುಗಳಿಂದ ನಾವು ಶ್ರಮ, ಪ್ರೀತಿ, ಬುದ್ಧಿ, ಸತ್ಯ, ಧೈರ್ಯ, ಸಹನೆ ಮುಂತಾದ ಮೌಲ್ಯಗಳನ್ನು ಕಲಿಯಬಹುದು. ಜನಪದ ಕಥೆಗಳು ನಮ್ಮ ಹಳ್ಳಿ ಸಂಸ್ಕೃತಿಯ ಅಮೂಲ್ಯ ಸಂಪತ್ತು. ಇವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬರ ಕರ್ತವ್ಯ.

 

 

ಧನ್ಯವಾದಗಳು…….🌷🌷🌷🌷

 

 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????