ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

“ಒಂಟಿತನ ದುರ್ಬಲತೆ ಅಲ್ಲ – ಅದು ಬೆಳಕು ಕಾಣುವ ಹಾದಿಯ ಪ್ರಾರಂಭ!”

 



*ಒಂಟಿಯಾಗಿ ಬದುಕಿ ಬೆಳಕು ಕಂಡ ಕಥೆಗಳು*

“ಒಂಟಿತನ” ಪದವನ್ನು ಕೇಳುತ್ತಿದ್ದಂತೆಯೇ ಬಹುಮಂದಿಗೆ ಕರುಣೆಯ ಭಾವ, ದುಃಖದ ಸ್ಪಂದನೆ, ಅಥವಾ ನೋವಿನ ನೆನಪುಗಳೇ  ಮೂಡುತ್ತವೆ. ಆದರೆ ಇತ್ತೀಚಿನ ಸಮಾಜದಲ್ಲಿ, ಪದದ ಅರ್ಥ ಮತ್ತು ಅದರ ಮೇಲಿನ ದೃಷ್ಟಿಕೋನವು ನಿಧಾನವಾಗಿ ಬದಲಾಗುತ್ತಿದೆ.

 ಒಂಟಿತನ ಎಂದರೆ ನಮ್ಮವರು, ನಮ್ಮೊಂದಿಗೆ ಕಳೆಯುವ ಸಮಯದ ಅಭಾವವಲ್ಲ; ಬದಲಿಗೆ  ಅದು ಯಾರೊಂದಿಗೂ ಇಲ್ಲದ ಸಮಯದಲ್ಲಿ ನಮ್ಮ  ಆತ್ಮವನ್ನು ಅರಿತುಕೊಳ್ಳುವ, ಜೀವನದ ಗಂಭೀರ ಅಂಶಗಳನ್ನು ಪರಿಶೀಲಿಸುವ ಹಾಗೂ ಹೊಸ ದಿಕ್ಕಿನಲ್ಲಿ ಬೆಳೆಯುವ ಒಂದು ಅವಕಾಶಗಳನ್ನು ಸೃಷ್ಠಿಸುವ ಅತಿ ಸುಮಧುರ ಸಮಯ ಆಗುತ್ತದೆ.

             ಒಂಟಿಯಾಗಿರುವ ಸಮಯದಲ್ಲಿ ನನ್ನ ಒಡನಾಡಿಗಳು ಯಾರೂ ಇಲ್ಲವಲ್ಲ ಎಂದು ಮರುಗುವ ನಾವು, ಅದೇ ಸಮಯದಲ್ಲಿ ನಮ್ಮ ಬದುಕಿನ ಆಗು ಹೋಗುಗಳನ್ನು , ಆಳ ಅಗಲಗಳನ್ನು ಕುರಿತು ಸ್ವಯಂ ವಿಶ್ಲೇಷಿಸಿ ನಮ್ಮತನವನ್ನು ಔನ್ನತ್ಯಕ್ಕೆ ಏರಿಸಿಕೊಳ್ಳುವ ಸಾಹಸವನ್ನು ಮಾಡಬೇಕಿದೆ.

1. ಸ್ವಯಂಆಧಾರಿತ ಜೀವನ  ನಿರ್ಧಾರ ಮಾಡುವ ಸ್ವಾತಂತ್ರ್ಯದ ಶಕ್ತಿ!!

ಸಾಮಾನ್ಯವಾಗಿ ಒಂಟಿಯಾಗಿರುವ ವ್ಯಕ್ತಿಯು ತನ್ನ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲು ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾನೆ. ಸಮಾಜದ ಒತ್ತಡ, ಕುಟುಂಬದ ನಿರೀಕ್ಷೆಗಳು ಅಥವಾ ಸಮಾಜದ ನಿರ್ಬಂಧಗಳು ಇಲ್ಲದಿದ್ದಾಗ, ವ್ಯಕ್ತಿ ತನ್ನ ಅಂತರಾಳದ ಬಯಕೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ತನ್ನ ಬಯಕೆಗೆ ತಕ್ಕಂತೆ ಜೀವನವನ್ನು ಪುನರ್‌ ನಿರ್ಮಿಸಿಕೊಳ್ಳುವ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು.

 

2. ಆತ್ಮಪರಿಶೀಲನೆ : ಆಂತರಿಕ ಬೆಳವಣಿಗೆಯ ಹಾದಿಗೆ ಮುನ್ನುಡಿ!!

ಒಂಟಿತನವು ವ್ಯಕ್ತಿಗೆ ತನ್ನ ಜೀವನದ ಗುರಿ, ಮೌಲ್ಯಗಳು ಮತ್ತು ಆಸೆಗಳನ್ನು ಪುನಃ ಪರಿಶೀಲಿಸಿ ಬದಲಾವಣೆಗೆ ಒಗ್ಗಿಕೊಳ್ಳಲು ಸಮಯ ನೀಡುತ್ತದೆ.

ತತ್ತ್ವಶಾಸ್ತ್ರದ ಪ್ರಕಾರ, ‘ಮೌನದಲ್ಲಿ ಮನಸ್ಸು ಬೆಳೆಯುತ್ತದೆ’. ಈ ವಿಚಾರವನ್ನು ಅನುಸರಿಸಿ ನೋಡುವುದಾದರೆ,   ಮನೋವಿಜ್ಞಾನವು ಸಹ  ಒಂಟಿತನವನ್ನು ಬಲವಾಗಿ ಬೆಂಬಲಿಸುತ್ತದೆ. ಯಾರು ಆತ್ಮಚಿಂತನೆಗೆ ಹೆಚ್ಚು ಅವಕಾಶ ಕೊಡುತ್ತಾರೆ, ಅವರು ಜೀವನದಲ್ಲಿ ಗಾಢವಾದ ಅರಿವನ್ನು ಹೊಂದುತ್ತಾರೆ.

 

3. ಸಮಾಜದ ವಿರುದ್ಧ ನಿಲ್ಲುವ ಧೈರ್ಯ : ಪ್ರಭಾವಶಾಲಿ ವ್ಯಕ್ತಿತ್ವದ ಉದಯ!

ಹೆಚ್ಚಿನ ಯಶಸ್ಸುಗಳನ್ನು ಕಂಡ ಹಲವರು, ತಮ್ಮ ಪ್ರಾರಂಭಿಕ ಹಂತದಲ್ಲಿ ಒಂಟಿಯಾಗಿದ್ದವರು. ಮತ್ತು ಅವರ ನಿರ್ಧಾರಗಳು ಜನಪ್ರಿಯವಾಗಿರಲಿಲ್ಲ. ಆದರೆ ಸಮಯ ಸರಿಯುತ್ತಿದ್ದಂತೆ, ಅವರ ದೃಷ್ಟಿಕೋನಗಳು ಸಮಾಜಕ್ಕೆ ಹೊಸ ದಿಕ್ಕು ತೋರಿಸಿದವು.

ಉದಾಹರಣೆ: ಕರ್ನಾಟಕದ ಹಾಸ್ಯ ಕಲಾವಿದ “ಗಂಗಾವತಿ ಪ್ರಾಣೇಶ್”‌ ಉತ್ತರ ಕರ್ನಾಟಕದ ಬಾಗದ ಒಂದು ಹಳ್ಳಿಯಿಂದ ಬಂದವರು, ಮನರಂಜನೆ ಕ್ಷೇತ್ರದಲ್ಲಿ ಬೀಚಿಯವರ ಹಾಸ್ಯ ಸಾಹಿತ್ಯವನ್ನು ಕನ್ನಡಿಗರಿಗೆ ಉಣಬಡಿಸುತ್ತಾ  ತಮ್ಮದೇ ಛಾಪು ಮೂಡಿಸಿದವರು.

 

4. ತಾತ್ಕಾಲಿಕ ನೋವಿನಿಂದ ಶಾಶ್ವತ ಬೆಳಕು.!!

ಒಂಟಿತನ ಆರಂಭದಲ್ಲಿ ನೋವುಂಟುಮಾಡಬಹುದು. ಆದರೆ ನೋವನ್ನು ಸಹಜವಾಗಿ ಒಪ್ಪಿಕೊಳ್ಳುವವರಿಗೆ, ಅದು ಬೆಳವಣಿಗೆಯ ಬಿತ್ತನೆ ಆಗುತ್ತದೆ.

ಮನೋವಿಜ್ಞಾನಿಗಳ ಅಭಿಪ್ರಾಯದಂತೆ, “ಒಂಟಿತನವನ್ನು ನಿಯಂತ್ರಿತವಾಗಿ ಬಳಸಿದರೆ, ಅದು ಮನಃಶಾಂತಿ ಮತ್ತು ಉದ್ದೀಪನದ ಮಾರ್ಗವಾಗಿ ಮಾರ್ಪಡಬಹುದು.”

 

5. ತಂತ್ರಜ್ಞಾನ ಯುಗದಲ್ಲಿಕ್ರಿಯಾಶೀಲ ಒಂಟಿತನ

ದಿನಗಳಲ್ಲಿ ಬಹುತೇಕ ಲೇಖಕರು, ಕಲಾವಿದರು, ವಿಜ್ಞಾನಿಗಳು ತಮ್ಮ ದೊಡ್ಡ ದೊಡ್ಡ ಅಭಿವ್ಯಕ್ತಿಗಳಿಗೆ ಒಂಟಿತನವನ್ನು  ಉಪಯೋಗಿಸುತ್ತಿದ್ದಾರೆ.

ಒಬ್ಬ ಉದಾಹರಣೆಗೆ: ಡಾ. ಎಪಿಜೆ ಅಬ್ದುಲ್ ಕಲಾಂ ಅವರು, ವ್ಯಕ್ತಿಯು  ಕ್ರಿಯಾಶೀಲ ಒಂಟಿತನವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡರೆ, ಅದು ದೇಶವನ್ನು ಬೆಳಗಿಸುವ ಬೆಳಕು ಆಗಬಹುದು ಎಂದು ನಮಗೆ ತೋರಿಸುತ್ತಾರೆ.

"Great dreams of great dreamers are always transcended."
"You have to dream before your dreams can come true."
"Solitude nurtures clarity, creativity and conviction."

ಅವರು ತಮ್ಮ ಪುಸ್ತಕಗಳ  ಬಹುಪಾಲು ಬರಹಗಳನ್ನು ರಾತ್ರಿ ಸಮಯದಲ್ಲಿ, ಯಾವುದೇ ಬಾಹ್ಯ ಸಂವಾದವಿಲ್ಲದೆ ಶಾಂತ ಪರಿಸರದಲ್ಲಿ ಬರೆದಿದ್ದರು.

 

ನಿಜವಾದ ಸಂದೇಶ: ಒಂಟಿತನ = ಶಕ್ತಿಯ ರೂಪಾಂತರ.

ಒಂಟಿತನವು ಜೀವನದ ಅಂತ್ಯವಲ್ಲ. ಅದು ಹೊಸ ಪ್ರಾರಂಭಕ್ಕೂ ನಾಂದಿ ಆಗಬಹುದು.
ವ್ಯಕ್ತಿಯು ತನ್ನೊಳಗಿನ ಶಕ್ತಿಗಳನ್ನು ಗುರುತಿಸಿ, ಹೊಸ ದಿಕ್ಕಿನಲ್ಲಿ ಸಾಗಲು ಧೈರ್ಯದಿಂದ  ನಿರ್ಧಾರ ತೆಗೆದುಕೊಳ್ಳುವ  ಸಮಯದಲ್ಲಿ,  ಒಂಟಿತನವೇ ಬೆಳಕಿನ ಹಾದಿಯನ್ನು ತೋರುತ್ತದೆ.

 

🚀 ಇತ್ತೀಚಿನ ಸ್ಟಾರ್ಟ್ಅಪ್ ನಾಯಕರ ಕಥೆಗಳು : ಒಂಟಿತನದಿಂದ ಉದ್ಯಮದ  ಸ್ಥಾಪನೆಯವರೆಗೆ.!!

 

🧠 1. ಭವಿಷ್ ಅಗರವಾಲ್ – Ola Cabs ಸಂಸ್ಥಾಪಕ!!


ಐಐಟಿ ಮುಂಬೈ ಪದವೀಧರರಾದ ಭವಿಷ್, ತನ್ನ ಸ್ನೇಹಿತನಿಂದ ಮದುವೆಗಾಗಿ ಕಾರು ಬುಕ್ ಮಾಡುವ ಪ್ರಯತ್ನದ ವೇಳೆ ಮೋಸಕ್ಕೆ ಒಳಗಾದ ಅನುಭವದಿಂದ Ola ಸ್ಥಾಪನೆಯತ್ತ ತಿರುಗಿದರು.
ಆರಂಭದಲ್ಲಿ ತಂದೆ-ತಾಯಿ ಕೂಡಾ ಬಿಸಿನೆಸ್ ಆಲೋಚನೆಗೆ ಒಪ್ಪಿಗೆ ನೀಡಿರಲಿಲ್ಲ.
ಯಾವುದೇ ಲಾಜಿಸ್ಟಿಕ್ ಹಿನ್ನೆಲೆ ಇಲ್ಲದೆ, ಡ್ರೈವರ್ಗಳನ್ನು ತೆಗೆದುಕೊಳ್ಳುವುದು, ತಂತ್ರಜ್ಞಾನ ನಿರ್ಮಾಣ, ಮತ್ತು ಫಂಡಿಂಗ್ ಪಡೆಯುವುದು ಮತ್ತು ನಿರ್ವಹಣೆ ಮಾಡುವುದು  ಇವುಗಳೆಲ್ಲವನ್ನು  ಒಂಟಿಯಾಗಿಯೇ  ಎದುರಿಸಿದರು ಮತ್ತು ಬಾರತದ ಯಶಸ್ವಿ ಉದ್ಯಮಿಯಾದರು.
ಇಂದು Ola cab Indiaನಲ್ಲಿ Uberಗೆ ಸಮಾನ ಪೈಪೋಟಿಯ ಕಂಪನಿಯಾಗಿ ಬೆಳದಿದೆ. Ola Electric ಕೂಡ ದೊಡ್ಡ ತಂತ್ರಜ್ಞಾನದ ಹಾದಿಗೆ ಕಾಲಿಟ್ಟಿದೆ.

 

👩‍💼 2. ಗಜಲ್ ಅಲಘ್ : Mamaearth  ಸ್ಥಾಪಕಿ


ತಾಯಿಯಾಗಿ ಗಜಲ್ ತಮ್ಮ ಮಗುವಿಗೆ ಸುರಕ್ಷಿತ ತ್ವಚಾ ಉತ್ಪನ್ನಗಳನ್ನು ಹುಡುಕಲು ಪ್ರಾರಂಭಿಸಿದಾಗ,  ಭಾರತದಲ್ಲಿ ವೈಶಿಷ್ಟ್ಯಮಯ ಆಯ್ಕೆಗಳ ಕೊರತೆಯನ್ನು ಕಂಡರು. ಮತ್ತು ಈ ಕೊರತೆಯನ್ನು  ಗಂಭೀರವಾಗಿ ಪರಿಗಣಿಸಿದರು. ಈ ಗಂಭೀರತೆಯ ಫಲವೇ Mamaearth ನ ಹುಟ್ಟು.
ಸ್ಟಾರ್ಟ್ಅಪ್ ಸಂಸ್ಕೃತಿಯನ್ನು ಒಂಟಿ  ಮಹಿಳೆಯಾಗಿ ಪ್ರಾರಂಭಿಸಿದಾಗ ತಲೆದೋರಿದ ಸವಾಲುಗಳು, ಫಂಡಿಂಗ್, ಮಾರುಕಟ್ಟೆ ಜ್ಞಾನ, ಎಲ್ಲವುಗಳನ್ನು ಎದುರಿಸಿ  ಕಂಪನಿಯನ್ನು ಮುಂದುವರೆಸಿದರು.


Mamaearth ಈಗ ನ್ಯಾಚುರಲ್ ಬ್ಯೂಟಿ ಸೆಕ್ಟರ್ನಲ್ಲಿ ನಂ.1 D2C ಬ್ರ್ಯಾಂಡ್ ಆಗಿ ಬೆಳೆಯುತ್ತಿದೆ.

 

📦 4. ಅಶ್ನೀರ್ ಗ್ರೋವರ್ – BharatPe ಸ್ಥಾಪಕ.
ಪ್ರಾರಂಭದಲ್ಲಿ ಎಲ್ಲಾ ಬ್ಯಾಂಕ್ಗಳು ತಿರಸ್ಕರಿಸಿದ “QR Code based UPI payments for merchants” ಕಲ್ಪನೆಯ ಹಿಂದೆ ನಿಂತ ಒಬ್ಬರು ಅಶ್ನೀರ್.
ಫಿನ್ಟೆಕ್ ಸೆಕ್ಟರ್ನಲ್ಲಿ ಬಲವಾದ ಮಾರುಕಟ್ಟೆಯ ಸ್ಪರ್ಧೆ, ಹಾಗೂ ಬ್ಯಾಂಕ್ಗಳ ವಿರೋಧ,  ಈ ಎಲ್ಲದರ  ಒತ್ತಡವನ್ನು ಸಹಿಸಿದ್ದರ ಪರಿಣಾಮ ಭಾರತ್‌ ಪೆ.


BharatPe ಈಗ ಭಾರತದೆಲ್ಲೆಡೆ ಲಕ್ಷಾಂತರ ವ್ಯಾಪಾರಿಗಳಿಗೆ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಒದಗಿಸುತ್ತಿದೆ. ಅಶ್ನೀರ್ ಅವರ ಒತ್ತೆಯ ನಾಯಕತ್ವದ ಘೋಷಣೆಯೂ ಸಾಕಷ್ಟು ಸುದ್ದಿಯಲ್ಲಿತ್ತು.

 

🎬 ಕಿಚ್ಚ ಸುದೀಪ್‌ : ಹೋರಾಟದಿಂದಬಿಗ್ ಸ್ಟಾರ್‌’ವರೆಗೆ.

ಸುದೀಪ್ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ. ಸುದೀಪ್ಗೆ ಸಿನಿಮಾ/ಸಾಂಸ್ಕೃತಿಕ ಹಿನ್ನೆಲೆ ಇರಲಿಲ್ಲ.  ಸಿನಿಮಾ ಕ್ಷೇತ್ರವನ್ನು ತಮ್ಮದೇ  ಹಾದಿಯಾಗಿ  ಆಯ್ದುಕೊಂಡರು.

ಬೆಂಗಳೂರು ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ನಂತರ ಆಕ್ಟಿಂಗ್ ತರಬೇತಿ ಪಡೆದರು.

ಹಲವು ಆಡಿಷನ್ಗಳಲ್ಲಿ ವಿಫಲರಾದರೂ ಛಲದಿಂದ ಮುಂದುವರಿದರು.  ಸ್ವಾತಿ ಮುತ್ತು, ನಂದಿ, ಹುಚ್ಚ, ಈಗಾ, ಕೋಟಿಗೊಬ್ಬ, ವಿಕ್ರಾಂತ್ ರೋಣ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಹುಭಾಷಾ ನಟರಾಗಿ  ತೆಲುಗು, ಹಿಂದಿ, ತಮಿಳು ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ನಿರ್ದೇಶಕರಾಗಿ ಮತ್ತು ರಿಯಾಲಿಟಿ ಶೋ ನಿರೂಪಕರಾಗಿಯೂ  ಕೂಡಾ ಹೆಸರು ಮಾಡಿದ್ದಾರೆ.

ವೈಯಕ್ತಿಕ ಸಮಸ್ಯೆಗಳು, ನಿರಾಸೆ, ವೃತ್ತಿಪರ ಹೋರಾಟ ಎಲ್ಲವನ್ನೂ ಮನಸ್ಸಿನ ಬಲದಿಂದ ಗೆದ್ದು ಬಂದವರು.

 

🎭 ಡಾಲಿ ಧನಂಜಯಮಲೆನಾಡಿನ ಹುಡುಗನಿಂದ ನ್ಯಾಷನಲ್ ಫೇಮಿನ ಜರ್ನಿ:

ಧನಂಜಯ ಅವರು   ಕರ್ನಾಟಕದ ಅರಸಿಕೆರೆಯ ಒಬ್ಬ ರೈತನ ಮಗ. ತಂದೆ ಕೃಷಿಕ; ಮನೆಯಲ್ಲಿಯೇ ವೈಚಾರಿಕತೆಯ  ಗಟ್ಟಿಯಾದ  ತಳಹದಿ ಪಡೆದವರು.

ಮೈಸೂರಿನ ಜಿಎಸ್ಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್‌  ಪದವಿ ಪಡೆದು, ಆತ್ಮಸ್ಥೈರ್ಯದೊಂದಿಗೆ ಬೆಂಗಳೂರಿಗೆ ನಟನಾಗಲು ಬಂದರು. ಇವರ ಮೊದಲ ಚಿತ್ರ

 `ಡೈರೆಕ್ಟರ್ಸ್‌ ಸ್ಪೆಷಲ್ ಮೂಲಕ  ಡಾಲಿ’ (2013)ರಲ್ಲಿ ಚಿತ್ರರಂಗಕ್ಕೆ  ಎಂಟ್ರಿ.

ಟಗರು ಚಿತ್ರದ ಡಾಲಿ ಪಾತ್ರದ  ಖ್ಯಾತಿಯಿಂದಾಗಿ  ಪ್ರಚಂಡ ಖ್ಯಾತಿ ಪಡೆದರು.

ಬಡವ ರಾಸ್ಕಲ್, ರತ್ನನ್ಪ್ರಪಂಚ, ಹೊಯ್ಸಳ,ಕೋಟಿ, ಪುಷ್ಪಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.  ತಮ್ಮದೇ ಹೋಮ್‌ ಬ್ಯಾನರ್‌ ಹುಟ್ಟು ಹಾಕಿ

ವಿವಿಧ ಪಾತ್ರಗಳಲ್ಲಿ ಹೊಸಬರನ್ನು ಚಿತ್ರರಂಗಕ್ಕೆ  ತರುವ ಸಾಹಸ ಮಾಡುತ್ತಿದ್ದಾರೆ.

ಸಾಹಿತ್ಯ ಓದುಗಾರ, ಕವನ, ಚಿತ್ರಕತೆಗಳಲ್ಲಿ ಆಸಕ್ತಿ ಹೊಂದಿದ್ದಾರೆ.

ಒಂಟಿಯಾಗಿ ಚಿತ್ರರಂಗಕ್ಕೆ ಬಂದವರು, ಆತ್ಮಚಿಂತನೆಯ ಮೂಲಕ ತಮ್ಮದೇ ಛಾಪು ಮೂಡಿಸಿದವರು.

 

ಸುದೀಪ್ ಮತ್ತು ಧನಂಜಯ  ಇಬ್ಬರೂ  ತಮ್ಮ ಜೀವನದಲ್ಲಿ ಯಾವುದೇ ತಾಂತ್ರಿಕ ಅಥವಾ ಚಿತ್ರರಂಗದ ಬೆಂಬಲವಿಲ್ಲದೆ, ತಮ್ಮ ಪ್ರತಿಭೆ, ಶ್ರಮ ಹಾಗೂ ಧೈರ್ಯದಿಂದ ಬೆಳಕು ಕಂಡ ಶ್ರೇಷ್ಠ ಉದಾಹರಣೆಗಳು. ಇವರುಒಂಟಿತನವನ್ನು ದುರ್ಬಲತೆಯಾಗಿ ಅಲ್ಲ, ಬದಲಿಗೆ ಕ್ರಿಯಾಶೀಲ ಶಕ್ತಿಯಾಗಿ ಬಳಸಿ ತಮ್ಮ ಕ್ಷೇತ್ರದಲ್ಲಿ ಎತ್ತರಕ್ಕೇರಿದ್ದಾರೆ.

 

ಬಹುತೇಕ  ನಾಯಕರುಗಳು  ತಮ್ಮ ಜೀವನದ ಪ್ರಾರಂಭದಲ್ಲಿ ಒಂಟಿತನವನ್ನು ಅನುಭವಿಸಿದವರು. ಅವರ ಹಾದಿಯಲ್ಲಿ ಬೆಂಬಲಿಗರು ಇಲ್ಲದಿದ್ದರೂ, ತಮ್ಮ ಕನಸು ಮತ್ತು ದೃಢ ನಂಬಿಕೆಯ ಶಕ್ತಿ ಅವರು ಯಶಸ್ವಿ ಉದ್ಯಮಿಗಳಾಗಿ ರೂಪುಗೊಳ್ಳಲು ಕಾರಣವಾಯಿತು.

ಒಂಟಿತನ = ಶಕ್ತಿ + ದೃಢತೆ + ದೃಷ್ಟಿಕೋನ ಎಂಬ ಸಮೀಕರಣ ನಾಯಕರ ಮೂಲಕ ಸಾಬೀತಾಗಿದೆ.

 

"ಒಂಟಿಯಾಗಿ ಬದುಕಿ ಬೆಳಕು ಕಂಡ ಕಥೆಗಳು" ಎನ್ನುವುದು ಕೇವಲ ಕಹಿ ಸತ್ಯಗಳ ಸಂಗ್ರಹವಲ್ಲ. ಅದು ಜೀವನದ ಹಲವು ಹಂತಗಳಲ್ಲಿ ವ್ಯಕ್ತಿಯ ಒಳಜೀವನ ಮತ್ತು ಭಾವನೆಗಳ ಪುನರ್ಜನ್ಮವಾಗಬಹುದು ಎಂಬ ಸಾಕ್ಷಿ. ತಾರ್ಕಿಕವಾಗಿ ನೋಡಿದರೆ, ಒಂಟಿತನ ಒಂದು ಅವಕಾಶಅದು ಸಂಕಟವಲ್ಲ, ಒಂದು ಮಾರ್ಗ. ಒಂದು ದಾರಿಬೆಳಕಿನತ್ತ.

 

$$ನೀವು ಕೂಡ ಒಂಟಿತನ ಅನುಭವಿಸುತ್ತಿದ್ದರೆ, ಅದನ್ನು ನಿಮ್ಮ ಶತ್ರುವಾಗಿ ನೋಡಬೇಡಿ. ಅದು ನಿಮ್ಮ ಒಳಜೀವನವನ್ನು ಬೆಳಗಿಸಬಲ್ಲ ದೀಪವಾಗಬಹುದು.$$

 

 

 

ಧನ್ಯವಾದಗಳು…….🌷🌷🌷🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......