ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

"ವಿದ್ಯಾರ್ಥಿಯಿಂದ ವೃತ್ತಿಪರರ ತನಕ ಭವಿಷ್ಯ ನಿರ್ಮಾಣದ ಹಾದಿ", "ನಿಮ್ಮ ಭವಿಷ್ಯವನ್ನು ಇಂದೇ ಸರಿಯಾದ ವೃತ್ತಿ ಮಾರ್ಗದರ್ಶನದಿಂದ ರೂಪಿಸಿಕೊಳ್ಳಿ!"

 


ಲೇಖಕಿ: ನಾಗಲಕ್ಷ್ಮಿ ಕೆ.ಎನ್.‌ ದಿನಾಂಕ:೨೦.೦೮.೨೦೨೫.

ಯುವಕರಿಗಾಗಿ ವೃತ್ತಿ ಮಾರ್ಗದರ್ಶನ: ಭವಿಷ್ಯ ನಿರ್ಮಾಣಕ್ಕೆ ಸಲಹೆಗಳು

ಇಂದು  ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಯುವಕರು ತಮ್ಮ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬ ಪ್ರಶ್ನೆ ಅತಿ ಮಹತ್ವದ್ದು. ಕಾಲೇಜು ಶಿಕ್ಷಣ ಮುಗಿದ ನಂತರ ಉದ್ಯೋಗವನ್ನು ಹರಸುತ್ತಾ ಹೊರಡುವ ಯುವಜನತೆಯು, ಕ್ಷಿಪ್ರ ಬೆಳವಣಿಗೆಯ  ಹಾದಿಯಲ್ಲಿರುವ ಉದ್ಯೋಗ ಕ್ಷೇತ್ರ, ತಂತ್ರಜ್ಞಾನ, ವ್ಯವಹಾರ ಮತ್ತು ಸಮಾಜದ ಅವಶ್ಯಕತೆಗಳ ಪ್ರತಿದಿನದ ಬದಲಾವಣೆಗಳ ಜ್ಞಾನವನ್ನು ಹೊಂದುವುದು ಬಹಳ ಮುಖ್ಯ. ಇಂತಹ ಸಂದರ್ಭದಲ್ಲಿ ಸರಿಯಾದ ವೃತ್ತಿ ಮಾರ್ಗದರ್ಶನವು ಯುವಕರಿಗೆ ದಾರಿ ತೋರಿಸಿ, ಯಶಸ್ವಿ ಭವಿಷ್ಯ ನಿರ್ಮಾಣಕ್ಕೆ ಸಹಾಯಕವಾಗುತ್ತದೆ.

1. ಸ್ವ-ಅರಿವು (Self Awareness)

ಯಾವುದೇ ವೃತ್ತಿ ಆಯ್ಕೆಗೆ ಮೊದಲು, ಯುವಕರು ತಮ್ಮ ಶಕ್ತಿಗಳು, ಆಸಕ್ತಿಗಳು ಮತ್ತು ಕೌಶಲ್ಯಗಳು ಏನೆಂಬುದನ್ನು ಅರಿತುಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ತಮ್ಮನ್ನು ತಾವೆ  ಒಂದಷ್ಟು ಪ್ರಶ್ನೆಗಳನ್ನು ಕೇಳಿಕೊಳ್ಳುವುದಾದರೆ ಅವು ಹೀಗಿವೆ.

  • ನನಗೆ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ?
  • ಯಾವ ಕೆಲಸ ಮಾಡಿದಾಗ ಸಂತೋಷ ಸಿಗುತ್ತದೆ?
  • ಯಾವ ಕ್ಷೇತ್ರದಲ್ಲಿ ನನ್ನ ಪ್ರತಿಭೆ ಹೆಚ್ಚು ಬೆಳಗುತ್ತದೆ?

ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ ಮಾತ್ರ ಸರಿಯಾದ ವೃತ್ತಿ ಆಯ್ಕೆಯು ಸುಲಭವಾಗುತ್ತದೆ.

 

2. ಮಾಹಿತಿ ಸಂಗ್ರಹ (Career Research)

ಪ್ರತಿಯೊಂದು ವೃತ್ತಿ ಕ್ಷೇತ್ರಕ್ಕೂ ಅದರದ್ದೇ  ಆದ ಅವಕಾಶಗಳು ಮತ್ತು ಸವಾಲುಗಳಿರುತ್ತವೆ.

  • ತಂತ್ರಜ್ಞಾನ (IT, AI, Robotics) ಕ್ಷೇತ್ರ.
  • ವೈದ್ಯಕೀಯ, ಆರೋಗ್ಯ ಕ್ಷೇತ್ರ.
  • ಕೃಷಿ ಮತ್ತು ಪರಿಸರ ಕ್ಷೇತ್ರ.
  • ಉದ್ಯಮಶೀಲತೆ (Startups).
  • ಶಿಕ್ಷಣ, ಕಲೆ, ಮಾಧ್ಯಮ.

ಎಲ್ಲ ಕ್ಷೇತ್ರಗಳ ಕುರಿತು ತಿಳಿದುಕೊಳ್ಳುವುದು ಮತ್ತು ಆ ಕ್ಷೇತ್ರಗಳ  ಅನುಭವಿಗಳೊಂದಿಗೆ ಮಾತನಾಡುವುದು ಹಾಗೂ ಆನ್ಲೈನ್ ಸಂಪನ್ಮೂಲಗಳನ್ನು ಬಳಸುವುದರಿಂದ ವೃತ್ತಿ  ಕ್ಷೇತ್ರದ ಅತ್ಯಂತ ಉಪಯುಕ್ತ ಮಾಹಿತಿಗಳು ದೊರೆಯುತ್ತವೆ.

3. ಕೌಶಲ್ಯಾಭಿವೃದ್ಧಿ (Skill Development)

ಇಂದಿನ ಕಾಲದಲ್ಲಿ ಉದ್ಯೋಗ ಮಾಡಲು  ಕೇವಲ ಕಾಲೇಜಿನಲ್ಲಿ ಕಲಿತ  ಪದವಿ ಸಾಕಾಗುವುದಿಲ್ಲ. ಅದರೊಂದಿಗೆ ಹೆಚ್ಚುವರಿ ಕೌಶಲ್ಯಗಳು ಸಹ ಅತ್ಯಗತ್ಯ.

  • ಸಂವಹನ ಕೌಶಲ್ಯ (Communication Skills).
  • ತಂತ್ರಜ್ಞಾನ ಜ್ಞಾನ (Digital Literacy).
  • ಸಮಸ್ಯೆ ಪರಿಹರಿಸುವ ಸಾಮರ್ಥ್ಯ (Problem Solving).
  • ತಂಡದೊಂದಿಗೆ ಕೆಲಸ ಮಾಡುವ ಕೌಶಲ್ಯ (Teamwork).

ಈ ಹೆಚ್ಚುವರಿ  ಕೌಶಲ್ಯಗಳು ಯುವಕರನ್ನು ಉದ್ಯೋಗ ಕ್ಷೇತ್ರದಲ್ಲಿ ಇತರರಿಗಿಂತ ವಿಭಿನ್ನರನ್ನಾಗಿ ತೋರಿಸುತ್ತವೆ.

4. ಗುರಿ ನಿಗದಿ (Goal Setting)

ಜೀವನದಲ್ಲಿ ಗುರಿ ಇಲ್ಲದೆ ನಡೆಯುವುದು ಅಸಾಧ್ಯ.

  • ಕಿರು ಅವಧಿ ಗುರಿ (Short-term Goals) – ಮುಂದಿನ 1–2 ವರ್ಷಗಳಲ್ಲಿ ಸಾಧಿಸಬೇಕಾದದ್ದು.
  • ದೀರ್ಘಾವಧಿ ಗುರಿ (Long-term Goals) – 5–10 ವರ್ಷಗಳ ಬಳಿಕ ತಲುಪಬೇಕಾದ ಸ್ಥಾನ.

ಗುರಿ ಸ್ಪಷ್ಟವಾಗಿದ್ದರೆ ದಾರಿಯಲ್ಲಿ ಸಾಗುವುದು ಸುಲಭವಾಗುತ್ತದೆ.

5. ಮಾರ್ಗದರ್ಶಕರ ಸಹಾಯ (Mentorship)

ಯಾವುದೇ ವಿಚಾರ ಅಥವಾ ಆ ಕ್ಷೇತ್ರದ ಹಿರಿಯ ಅನುಭವಿಗಳಿಂದ ಸಲಹೆ ಪಡೆಯುವುದು ಯುವಕರಿಗೆ ಸರಿಯಾದ ದಿಕ್ಕು ತೋರುತ್ತದೆ. ಶಿಕ್ಷಕರು, ಹಿರಿಯರು, ಉದ್ಯೋಗ ತಜ್ಞರು ನೀಡುವ ಸಲಹೆ ಭವಿಷ್ಯದ ನಿರ್ಧಾರಗಳಲ್ಲಿ ಬಹಳ ಸಹಾಯಕವಾಗುತ್ತದೆ.

6. ವೈಫಲ್ಯವನ್ನು ಸ್ವೀಕರಿಸುವ ಮನೋಭಾವ (Accepting Failures)

ಯಶಸ್ಸು ಅರಸುತ್ತಾ ನಡೆಯುವ ಪ್ರತಿ ಹಾದಿಯಲ್ಲೂ ಸವಾಲುಗಳು, ವಿಫಲತೆಗಳು ಬಂದೇ ಬರುತ್ತವೆ. ಅವುಗಳನ್ನು ಸೋಲುಗಳೆಂದು ನಿರಾಸೆ ಅನುಭವಿಸದೆ,  ಅನುಭವವೆಂದು ತೆಗೆದುಕೊಂಡರೆ ಯಶಸ್ಸು ಕಟ್ಟಿಕೊಳ್ಳಲು ಸಹಾಯವಾಗುತ್ತದೆ.

 

7. ಜೀವನವೃತ್ತಿ ಸಮತೋಲನ (Work-Life Balance)

ಯಾವುದೇ ವೃತ್ತಿ ಆಯ್ಕೆ ಮಾಡಿದರೂ ಆರೋಗ್ಯ, ಮನೋಶಾಂತಿ ಮತ್ತು ಸಂಬಂಧಗಳು ಸಮತೋಲನದಲ್ಲಿರುವಂತೆ  ನೋಡಿಕೊಳ್ಳಬೇಕು. ಅದೇ ದೀರ್ಘಾವಧಿಯಲ್ಲಿ ಸಂತೋಷದ ಜೀವನಕ್ಕೆ ಆಧಾರ.

 

ವೃತ್ತಿ ಮಾರ್ಗದರ್ಶನದ ಮಹತ್ವ: ಯುವಕರ ಭವಿಷ್ಯದ ದಾರಿದೀಪ

ಶಿಕ್ಷಣ ಪಡೆದ ನಂತರ ಯುವಕರು ಯಾವ ದಾರಿಯಲ್ಲಿ ಸಾಗಬೇಕು, ಯಾವ ಉದ್ಯೋಗ ಕ್ಷೇತ್ರವನ್ನು ಆರಿಸಬೇಕು, ತಮ್ಮ ಸಾಮರ್ಥ್ಯ ಮತ್ತು ಆಸಕ್ತಿಯ ಆಧಾರದ ಮೇಲೆ ಹೇಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ಹಲವು ಯುವಕರಿಗೆ ಗೊಂದಲವಾಗಿರುತ್ತದೆ. ಗೊಂದಲವೇ ಅನೇಕ ಬಾರಿ ನಿರುದ್ಯೋಗ (Unemployment) ಸಮಸ್ಯೆಗೆ ಕಾರಣವಾಗುತ್ತದೆ.

ವೃತ್ತಿ ಮಾರ್ಗದರ್ಶನದ ಅಗತ್ಯತೆ

  1.  ಪ್ರತಿಯೊಬ್ಬ ಯುವಕ/ಯುವತಿಗೆ ತನ್ನಲ್ಲಿರುವ ಕೌಶಲ್ಯ, ಪ್ರತಿಭೆ ಹಾಗೂ ಯಾವ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಎಂಬ ಅರಿವು ಬರಬೇಕು. ವೃತ್ತಿ ಮಾರ್ಗದರ್ಶನವು ಈ ಸಾಮರ್ಥ್ಯದ   ಅರಿವನ್ನು ತಂದುಕೊಡುತ್ತದೆ.
  2. ಉದ್ಯೋಗ ಮಾರುಕಟ್ಟೆಯಲ್ಲಿ ಇಂದಿನ ದಿನದಲ್ಲಿ ಯಾವ ಉದ್ಯೋಗಗಳು  ಹೆಚ್ಚು ಬೇಡಿಕೆಯಲ್ಲಿವೆ ಮತ್ತು ಯಾವ ತಂತ್ರಜ್ಞಾನಗಳು ಮಾರುಕಟ್ಟೆಯನ್ನು  ಮುನ್ನಡೆಸುತ್ತಿವೆ ಎಂಬ ಮಾಹಿತಿಯನ್ನು ನೀಡುವುದರಲ್ಲಿ  ವೃತ್ತಿ ಮಾರ್ಗದರ್ಶನವು  ಪಾತ್ರವಹಿಸುತ್ತದೆ.
  3. ಉದ್ಯೋಗದ ಆಯ್ಕೆಯಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳದೆ, ತಪ್ಪು ದಾರಿಯಲ್ಲಿ ಹೋದರೆ ಕಾಲ, ಹಣ ಮತ್ತು ಶ್ರಮ ವ್ಯರ್ಥವಾಗುತ್ತದೆ. ಸರಿಯಾದ ಉದ್ಯೋಗ ಮಾರ್ಗದರ್ಶನವು  ಯುವಕರಿಗೆ ಭವಿಷ್ಯದ ಬಗ್ಗೆ ಸ್ಪಷ್ಟ ತೀರ್ಮಾನ ಮಾಡಲು ಸಹಾಯ ಒದಗಿಸುತ್ತದೆ.
  4. ಜೀವನದ  ಗುರಿ ಸ್ಪಷ್ಟವಾದಾಗ ಆತ್ಮವಿಶ್ವಾಸವು ಹೆಚ್ಚುತ್ತದೆ ಮತ್ತು ಉದ್ಯೋಗ ಹುಡುಕುವ ಪ್ರಕ್ರಿಯೆ ಸುಲಭವಾಗುತ್ತದೆ. ಆತ್ಮವಿಶ್ವಾಸ ನಿರ್ಮಾಣದಲ್ಲಿ ವೃತ್ತಿ ಮಾರ್ಗದರ್ಶನವು ಬಂಡೆಯಂತೆ ನಿಲ್ಲುತ್ತದೆ

 

ಶಾಲಾಕಾಲೇಜು ಕಲಿಕೆಯಲ್ಲಿ ವೃತ್ತಿ ಮಾರ್ಗದರ್ಶನದ ಅವಶ್ಯಕತೆ

ಇಂದಿನ ಸಮಾಜದಲ್ಲಿ ಶಿಕ್ಷಣವು ಕೇವಲ ಪಠ್ಯಪುಸ್ತಕಗಳ ಕಲಿಕೆಯ ಜ್ಞಾನಾರ್ಜನೆಯಾಗಿರದೇ, ಭವಿಷ್ಯ ನಿರ್ಮಾಣದ ದಾರಿದೀಪವಾಗಿಯೂ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಗಳು  ಕಾಲೇಜು ಹಂತದಲ್ಲಿಯೇ ತಮ್ಮ ಭವಿಷ್ಯದ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ. ಆದರೆ, ಯಾವ ದಾರಿಯನ್ನು ಆರಿಸಬೇಕು, ಯಾವ ವಿಷಯದಲ್ಲಿ ತೊಡಗಬೇಕು, ತಮ್ಮ ಆಸಕ್ತಿಗೆ ಹೊಂದುವ ವೃತ್ತಿ ಯಾವುದು ಎಂಬ ಗೊಂದಲದಲ್ಲಿ ಬೀಳುತ್ತಾರೆ. ಸಂದರ್ಭದಲ್ಲಿ ವೃತ್ತಿ ಮಾರ್ಗದರ್ಶನವು ಅತ್ಯಗತ್ಯವಾಗುತ್ತದೆ.

ಶಾಲಾಕಾಲೇಜಿನಲ್ಲಿ ಓದುತ್ತಿರುವ ಸಮಯದಲ್ಲಿಯೇ  ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಸಾಮರ್ಥ್ಯ,  ಕೌಶಲ್ಯಗಳು ಹಾಗೂ ಆಸಕ್ತಿಗಳು ಯಾವ ವಿಷಯದಲ್ಲಿ  ಇವೆ ಎಂಬ ಅರಿವು ಮೂಡಿಸಲು ಈ  ಮಾರ್ಗದರ್ಶನ ಸಹಕಾರಿಯಾಗುತ್ತದೆ.

ಉದಾಹರಣೆಗೆ, ಕೆಲವರು ವಿಜ್ಞಾನ ವಿಷಯಗಳಲ್ಲಿ ಉತ್ತೇಜನ ತೋರುತ್ತಾರೆ, ಕೆಲವರಿಗೆ ಕಲೆ, ಸಂಗೀತ ಅಥವಾ ಕ್ರೀಡೆಗಳಲ್ಲಿ ಆಸಕ್ತಿ ಇರುತ್ತದೆ.

10ನೇ ತರಗತಿ ಅಥವಾ ಪಿಯುಸಿ ಹಂತದಲ್ಲಿರುವ ಸಮಯದಲ್ಲಿ  ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು (ಸೈನ್ಸ್, ಕಾಮರ್ಸ್, ಆರ್ಟ್ಸ್) ಎಂಬ ನಿರ್ಧಾರದಲ್ಲಿ ಗೊಂದಲಕ್ಕೊಳಗಾಗುತ್ತಾರೆ.

ಹಾಗಾಗಿ ಈ ಮಾರ್ಗದರ್ಶನವು ಇವರಿಗೆ ಸರಿಯಾದ ವಿಷಯ ಆಯ್ಕೆ ಮಾಡುವಲ್ಲಿ ಸಹಕಾರಿಯಾಗುತ್ತದೆ.

ಇಂದು  ಜಗತ್ತಿನಾದ್ಯಂತ  ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ  ಅದಕ್ಕೆ ತಕ್ಕಂತೆ ಉದ್ಯೋಗ ಮಾರುಕಟ್ಟೆಯು ಬದಲಾಗುತ್ತಿದೆ. ಹಾಗಾಗಿ ಈ  ಉದ್ಯೋಗ ಮಾರುಕಟ್ಟೆಯಲ್ಲಿ ಯಾವ ವೃತ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಆದ್ದರಿಂದ  ಶಾಲಾಕಾಲೇಜು ಹಂತದಲ್ಲಿಯೇ ಮಾಹಿತಿಯನ್ನು ನೀಡಿದರೆ, ವಿದ್ಯಾರ್ಥಿಗಳು ಭವಿಷ್ಯದ ಅವಶ್ಯಕತೆಗೆ ತಕ್ಕಂತೆ  ತಯಾರಾಗಬಹುದು.

ಆಸಕ್ತಿ ಇಲ್ಲದ ಕ್ಷೇತ್ರವನ್ನು ಆರಿಸಿಕೊಂಡರೆ ವಿದ್ಯಾರ್ಥಿಯು  ನಿರಾಸೆಯಿಂದ ಬಳಲುತ್ತಾನೆ ಮತ್ತು ಕಲಿಕೆಯಲ್ಲಿ ಹಿನ್ನಡೆಯಾಗುತ್ತದೆ. ಇದರಿಂದ ಸರಿಯಾದ ಮಾರ್ಗದರ್ಶನವು ತಪ್ಪು ನಿರ್ಧಾರಗಳನ್ನು ತಡೆಯುತ್ತದೆ.

ಭವಿಷ್ಯದ ದಾರಿಯ ಬಗ್ಗೆ ಸ್ಪಷ್ಟತೆ ಬಂದಾಗ ವಿದ್ಯಾರ್ಥಿಗಳಲ್ಲಿ ತಮ್ಮ  ಆತ್ಮವಿಶ್ವಾಸ ವೃದ್ಧಿಯಾಗಿ   ಗುರಿಯ ಕಡೆಗೆ ಸಾಗುತ್ತಾರೆ.

 

ಶಾಲಾಕಾಲೇಜಿನಲ್ಲಿ ಮಾರ್ಗದರ್ಶನ ನೀಡುವ ವಿಧಾನಗಳು

ಕೆರಿಯರ್ ಕೌನ್ಸೆಲಿಂಗ್ ಶಿಬಿರಗಳು.

ಸೈಕೋಮೆಟ್ರಿಕ್ ಪರೀಕ್ಷೆಗಳು (aptitude/interest tests).

ವೃತ್ತಿಪರ ತಜ್ಞರಿಂದ ಉಪನ್ಯಾಸಗಳು.

ಇಂಟರ್ನ್ಶಿಪ್ ಅಥವಾ ಪ್ರಾಯೋಗಿಕ ಅನುಭವಗಳು.

ಶಾಲಾಕಾಲೇಜು ಹಂತವೇ ವಿದ್ಯಾರ್ಥಿಗಳ ಭವಿಷ್ಯದ ಬುನಾದಿ. ಹಂತದಲ್ಲಿಯೇ ಸೂಕ್ತ ವೃತ್ತಿ ಮಾರ್ಗದರ್ಶನ ದೊರೆತರೆ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಹೊಂದುವ ದಾರಿಯಲ್ಲಿ ಮುಂದುವರಿಯಬಹುದು. ಇದರಿಂದ ಕೇವಲ ವೈಯಕ್ತಿಕ  ಬದುಕಿನ  ಯಶಸ್ಸಿನೊಂದಿಗೆ ಸಮಾಜ ಮತ್ತು ದೇಶದ ಏಳಿಗೆಯಲ್ಲಿಯೂ  ಸಮರ್ಥ, ನಿಪುಣ ಮಾನವ ಸಂಪನ್ಮೂಲ ಬೆಳೆದು ಬರಲು ಸಹಕಾರಿಯಾಗುತ್ತದೆ.

👉 ಹೀಗಾಗಿ ಶಾಲಾಕಾಲೇಜು ಕಲಿಕೆಯಲ್ಲಿ ವೃತ್ತಿ ಮಾರ್ಗದರ್ಶನವು ಅಗತ್ಯವಷ್ಟೇ ಅಲ್ಲದೆ, ಭವಿಷ್ಯದ ಕಟ್ಟಡಕ್ಕೆ ಬುನಾದಿಯಂತಾಗಿದೆ.

ಯುವಕರಿಗೆ  ವೃತ್ತಿ ಮಾರ್ಗದರ್ಶನವೆಂದರೆ ಕೇವಲ ಉದ್ಯೋಗ ಹುಡುಕುವುದಲ್ಲ, ಅದು ಸಮಗ್ರ ವ್ಯಕ್ತಿತ್ವ ನಿರ್ಮಾಣ. ಸರಿಯಾದ ದಾರಿ, ಸೂಕ್ತ ಕೌಶಲ್ಯಗಳು ಮತ್ತು ಆತ್ಮವಿಶ್ವಾಸದಿಂದ ಯುವಕರು ತಮ್ಮ ಭವಿಷ್ಯವನ್ನು ಮಾತ್ರವಲ್ಲ, ಸಮಾಜದ ಭವಿಷ್ಯವನ್ನೂ ಬೆಳಗಿಸಬಹುದು.

ನಿರುದ್ಯೋಗ ಮತ್ತು ವೃತ್ತಿ ಮಾರ್ಗದರ್ಶನದ ಸಂಬಂಧ

ಅನೇಕ ಸಂದರ್ಭಗಳಲ್ಲಿ ಯುವಕರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರೂ ಕೌಶಲ್ಯ ಅಭಾವದ (Skill Gap) ಕಾರಣದಿಂದ ಉದ್ಯೋಗ ಪಡೆಯಲು ಸಾಧ್ಯವಾಗುವುದಿಲ್ಲ.

ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಹೊಂದುವ ಕ್ಷೇತ್ರದಲ್ಲಿ ಅವಕಾಶ ಹುಡುಕದೆ, ಎಲ್ಲರೂ ಹೋಗುವ  ಒಂದೇ ತರಹದ ಉದ್ಯೋಗಗಳಿಗೆ ಅರ್ಜಿ ಹಾಕುವುದರಿಂದ ಪ್ರತಿಸ್ಪರ್ಧೆ ಹೆಚ್ಚಾಗಿ ನಿರುದ್ಯೋಗ ಉಂಟಾಗುತ್ತದೆ.

ವೃತ್ತಿ ಮಾರ್ಗದರ್ಶನ ದೊರೆತರೆ, ಯುವಕರು ವೈವಿಧ್ಯಮಯ ವೃತ್ತಿ ಆಯ್ಕೆಗಳನ್ನು ಅರಿತು, ಬೇಡಿಕೆಯ ಕ್ಷೇತ್ರಗಳಲ್ಲಿ ಕೌಶಲ್ಯ ಬೆಳೆಸಿಕೊಂಡು ಉದ್ಯೋಗವನ್ನು ಹೊಂದಿದರೆ, ನಿರುದ್ಯೋಗವನ್ನು ಕಡಿಮೆ ಮಾಡಬಹುದು.

 


ವೃತ್ತಿ ಮಾರ್ಗದರ್ಶನವು ಕೇವಲ ಮಾರ್ಗ ತೋರಿಸುವ ಕೆಲಸವಲ್ಲ, ಅದು ಯುವಕರ ಸಾಮರ್ಥ್ಯ, ಆಸಕ್ತಿ ಮತ್ತು ಅವಕಾಶಗಳ ನಡುವಿನ ಸೇತುವೆಯಾಗಿದೆ. ಸರಿಯಾದ ಮಾರ್ಗದರ್ಶನ ಇದ್ದರೆ ಯುವಕರು ಕೇವಲ ಉದ್ಯೋಗ ಪಡೆಯುವುದಲ್ಲದೆ ತಮ್ಮ ಬದುಕಿನಲ್ಲಿ ತೃಪ್ತಿ ಮತ್ತು ಯಶಸ್ಸನ್ನು ಕಾಣಲು ಸಾಧ್ಯ. ಅದೇ ರೀತಿ ದೇಶದ ಮಟ್ಟದಲ್ಲಿ ನಿರುದ್ಯೋಗ ಪ್ರಮಾಣವೂ ಕಡಿಮೆಯಾಗುತ್ತದೆ.

👉 ಹೀಗಾಗಿವೃತ್ತಿ ಮಾರ್ಗದರ್ಶನವು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುಖ್ಯ ಚಾವಿಎಂದೇ  ಹೇಳಬಹುದು.

 

 

ಧನ್ಯವಾದಗಳು………🌷🌷🌷🌷

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......