ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ನೈಸರ್ಗಿಕವಾಗಿ ಆರೋಗ್ಯ ಕಾಪಾಡಲು ನಮ್ಮ ಅಡುಗೆಮನೆಯ ಮನೆಮದ್ದುಗಳು

 



ಲೇಖಕಿ: ನಾಗಲಕ್ಷ್ಮಿ. ಕೆ.ಎನ್‌  ದಿನಾಂಕ: ೧೮.೦೮.೨೦೨೫

🌿 ನೈಸರ್ಗಿಕವಾಗಿ ಆರೋಗ್ಯ ಕಾಪಾಡಲು ಸರಳ ಮನೆಮದ್ದುಗಳು ಕನ್ನಡದಲ್ಲಿ ಮಾರ್ಗದರ್ಶನ

ಆರೋಗ್ಯವೆಂಬುದು ನಮ್ಮ ಅತ್ಯಮೂಲ್ಯ ಸಂಪತ್ತು( Health is Wealth).  ಆರೋಗ್ಯವೆಂಬುದು  ಇಂದು ಔಷಧಿ, ಕೆಮಿಕಲ್ ಉತ್ಪನ್ನಗಳ ಮೇಲೆ ಹೆಚ್ಚಾಗಿ  ಅವಲಂಬಸಿದ್ದರೂ ಸಹ, ನಮ್ಮ ಮನೆಮದ್ದುಗಳು (Home Remedies) ಸದಾ ಸುರಕ್ಷಿತ, ಪರಿಣಾಮಕಾರಿ ಹಾಗೂ ದೀರ್ಘಕಾಲಿಕವಾಗಿ  ಆರೋಗ್ಯವನ್ನು ಕಾಪಾಡುವ ಮಾರ್ಗಗಳಾಗಿ ಪರಿಣಮಿಸುತ್ತಿವೆ.

ದೈನಂದಿನ ಜೀವನದಲ್ಲಿ ಅನುಸರಿಸಬಹುದಾದ ಕೆಲವು ಆಯ್ದ ಮನೆಮದ್ದುಗಳ ಕುರಿತು ಕನ್ನಡದಲ್ಲಿ ಮಾರ್ಗದರ್ಶನ ನೀಡಲಾಗಿದೆ.

🌱   ದಿನದ ಬೆಳಗನ್ನು  ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿದು  ಆರಂಭಿಸುವುದರಿಂದ ದೇಹದ ವಿಷಕಣಗಳು ಹೊರ ಹೋಗುತ್ತವೆ. ನಿತ್ಯಕರ್ಮಗಳು ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ. ಜೀರ್ಣಕ್ರಿಯೆ ಸುಧಾರಿಸುತ್ತದೆ, ತೂಕ ನಿಯಂತ್ರಣದಲ್ಲಿರುತ್ತದೆ.

 

🍋  ದಿನಂಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ + ಒಂದು ಟೀ ಸ್ಪೂನ್ ಜೇನು ಬೆರೆಸಿದ ನಸುಬೆಚ್ಚಗಿನ  ನೀರನ್ನು ಕುಡಿದರೆ ರಕ್ತ ಶುದ್ಧವಾಗುತ್ತದೆ. ಮತ್ತು  ಇಮ್ಯೂನಿಟಿ ಹೆಚ್ಚುತ್ತದೆ, ಚರ್ಮಕ್ಕೆ ಕಾಂತಿ ಬರುತ್ತದೆ.

🧄  ಕಚ್ಚಾ ಬೆಳ್ಳುಳ್ಳಿಯನ್ನು ದಿನಕ್ಕೆ ಎಸಳಿನಷ್ಟು ಸೇವಿಸಿದರೆ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.

 

🌿  ಪ್ರತಿದಿನ ಬೆಳಿಗ್ಗೆ ತುಳಸಿ ಎಲೆಗಳನ್ನು ಜಗಿದು ತಿಂದರೆ ಶೀತ-ಜ್ವರದ ವಿರುದ್ಧ ರಕ್ಷಣೆ ನೀಡುತ್ತದೆ. ಮತ್ತು  ಉಸಿರಾಟದ ಸಮಸ್ಯೆಗಳನ್ನು ತಗ್ಗಿಸುತ್ತದೆ.

 

🍯  ಕೆಮ್ಮು ಅಥವಾ ಗಂಟಲು ನೋವಿದ್ದಾಗ ಜೇನು  ಮತ್ತು  ಶುಂಠಿ ರಸದ  ಸೇವನೆ ಬಹಳ ಪರಿಣಾಮಕಾರಿ. ದೇಹಕ್ಕೆ ಶಕ್ತಿ ನೀಡುತ್ತದೆ, ಶೀತ ನಿವಾರಣೆ ಮಾಡುತ್ತದೆ.

🥒  ಬೇಸಿಗೆ ಸಮಯದಲ್ಲಿ ಸೌತೆಕಾಯಿ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

ನೀರಿನ ಅಂಶ ಹೆಚ್ಚಿರುವುದರಿಂದ ದೇಹ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ.

 

🌸 ಒಂದು ಗ್ಲಾಸ್ ಹಾಲಿನಲ್ಲಿ ಚಿಟಿಕೆ  ಅರಿಶಿನ ಹಾಕಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ತಲೆ ನೋವು, ಶೀತ-ಜ್ವರ, ಗಾಯ-ಗಾಯದ ಸೋಂಕುಗಳನ್ನು ತಡೆಯುವಲ್ಲಿ  ಪರಿಣಾಮಕಾರಿಯಾಗಿದೆ.

 

🥥 ನೈಸರ್ಗಿಕವಾಗಿ ದೊರೆಯುವ ತೆಂಗಿನಕಾಯಿ ನೀರು ಅಥವಾ ಎಳನೀರು  ಎಲೆಕ್ಟ್ರೋಲೈಟ್ಗಳ ಮೂಲವಾಗಿದೆ. ದೇಹದಲ್ಲಿ ನೀರಿನ ಕೊರತೆ ನಿವಾರಿಸುತ್ತದೆ, ಚರ್ಮಕ್ಕೆ ತಾಜಾತನ ನೀಡುತ್ತದೆ.

 

🍵 ತುಳಸಿ, ಶುಂಠಿ, ಮೆಣಸು, ಜೇನು ಸೇರಿಸಿ ತಯಾರಿಸಿದ ಕಷಾಯ (ಹೋಮ್ ಮೇಡ್ ಹರ್ಬಲ್ ಟೀ)ವು ಶೀತ-ಜ್ವರವನ್ನು ತಡೆಯುತ್ತದೆ. ಮತ್ತುಇಮ್ಯೂನಿಟಿ ಹೆಚ್ಚಿಸುತ್ತದೆ.

 

🥭  ಹಣ್ಣುಗಳ ನಿಯಮಿತ ಸೇವನೆಯಿಂದ ಹಣ್ಣುಗಳಲ್ಲಿ ಇರುವ ವಿಟಮಿನ್ಗಳು ಮತ್ತು ಫೈಬರ್ಗಳು ಜೀರ್ಣಕ್ರಿಯೆಗೆ ಸಹಕಾರಿಯಾಗಿ ದೇಹದ ತೂಕ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತವೆ.

ಮಾವು, ಬಾಳೆ, ಸೇಬು, ಪರಂಗಿ ಹಣ್ಣು ಇತ್ಯಾದಿ  ಪ್ರತಿಯೊಂದು ಹಣ್ಣುಗಳು  ದೇಹಕ್ಕೆ ವಿಭಿನ್ನ ಪೋಷಕಾಂಶ ನೀಡುತ್ತದೆ.

 

   ಮನೆಮದ್ದುಗಳು ಪುರಾತನ ಕಾಲದಿಂದಲೂ ಆರೋಗ್ಯ ಕಾಪಾಡುವ ಪ್ರಾಥಮಿಕ  ನೈಸರ್ಗಿಕ ಮಾರ್ಗಗಳಾಗಿವೆ. ಮನೆಮದ್ದುಗಳ ನಿಯಮಿತ ಸೇವನೆಯ  ಪ್ರಯೋಜನ ಪಡೆಯುವ ಜೊತೆಗೆ ನಿಯಮಿತ ವ್ಯಾಯಾಮ, ಸಮತೋಲನ ಆಹಾರ ಮತ್ತು ಸಾಕಷ್ಟು ನಿದ್ರೆ ಅವಶ್ಯಕ. ಸಣ್ಣ ಸಣ್ಣ ಅಭ್ಯಾಸಗಳು ದೀರ್ಘಕಾಲದ ಆರೋಗ್ಯದ ಗುಟ್ಟುಗಳಾಗಿವೆ.

 

🌿   ಅನಾರೋಗ್ಯದ ಸಮಯಕ್ಕೆ  ಪ್ರಾಥಮಿಕ ಕಷಾಯದ ರೆಸಿಪಿಗಳು

ಕಷಾಯ (Herbal Decoction) ನಮ್ಮ ಮನೆಮದ್ದುಗಳ  ಪ್ರಮುಖ ಭಾಗ. ಶೀತ, ಕೆಮ್ಮು, ಗಂಟಲು ನೋವು, ಅಸಿಡಿಟಿ,  ಅಜೀರ್ಣತೆ ಇತ್ಯಾದಿ ಸಾಮಾನ್ಯ ಖಾಯಿಲೆಗಳಿಗೆ ತಾಯಿಯ ಕೈಯಲ್ಲಿ ತಯಾರಾಗುವ ಕಷಾಯವೇ ಮೊದಲ ಚಿಕಿತ್ಸೆ. ಇಲ್ಲಿವೆ  ನಿಮಗಾಗಿ ಸರಳ ಮತ್ತು ಪರಿಣಾಮಕಾರಿ ಕಷಾಯ ರೆಸಿಪಿಗಳು:

 

🍵 . ಶೀತಕೆಮ್ಮಿಗೆ ತುಳಸಿ ಕಷಾಯ

ಬೇಕಾಗುವ ಪದಾರ್ಥಗಳು  ತುಳಸಿ ಎಲೆ ರಿಂದ ೧೦

  • ಶುಂಠಿ ಇಂಚು (ಸಣ್ಣದಾಗಿ  ತುಂಡು ಮಾಡಿದ್ದು)
  • ಕರಿಮೆಣಸು- ಕಾಳು
  • ಜೇನು ಟೀ ಸ್ಪೂನ್
  • ನೀರು ಕಪ್

ಮಾಡುವ ವಿಧಾನ:

ಮೊದಲು ಎರಡು ಕಪ್‌ ನೀರನ್ನು ಕುದಿಸಿ ಅದರಲ್ಲಿ ತುಳಸಿ, ಶುಂಠಿ, ಕರಿಮೆಣಸು ಹಾಕಿ ೧೦ ನಿಮಿಷ ಕುದಿಸಬೇಕು. ಕುದಿಸಿದ ನೀರು ಅರ್ಧಕ್ಕೆ ಇಳಿದ ಬಳಿಕ ನೀರನ್ನು ಕೆಳಗಿಳಿಸಿ, ಸ್ವಲ್ಪ ತಣ್ಣಗಾದ ಮೇಲೆ ಜೇನು ಸೇರಿಸಿ ಕುಡಿಯಿರಿ.

 

🍵 . ಗಂಟಲು ನೋವಿಗೆ ಶುಂಠಿಜೇನು ಕಷಾಯ

ಬೇಕಾಗುವ ಪದಾರ್ಥಗಳು:

  • ಶುಂಠಿ ಇಂಚು ತುಂಡು
  • ಏಲಕ್ಕಿ
  • ಚಕ್ಕೆ ಸಣ್ಣ ತುಂಡು
  • ಜೇನು ಟೀ ಸ್ಪೂನ್
  • ನೀರು. ಕಪ್

ಮಾಡುವ ವಿಧಾನ:

ಒಂದುವರೆ ಕಪ್‌ ನೀರನ್ನು ತೆಗೆದುಕೊಂಡು  ಕುದಿಸಿ ಅದರಲ್ಲಿ ಶುಂಠಿ, ಏಲಕ್ಕಿ, ಚಕ್ಕೆ ಹಾಕಿ ೧೦ ನಿಮಿಷ ಕುದಿಸಬೇಕು ನಂತರ ಜಾಲರಿಯಲ್ಲಿ  ಸೋಸಿಕೊಂಡು   ನಂತರ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಜೇನು ಸೇರಿಸಿ ನಿಧಾನವಾಗಿ ಕುಡಿಯಿರಿ. ಗಂಟಲು ಉರಿಯೂತ ಕಡಿಮೆಯಾಗುತ್ತದೆ.

 

🍵 . ಜೀರ್ಣಕ್ರಿಯೆಗೆ ಜೀರಿಗೆಸೋಂಪು ಕಷಾಯ

ಬೇಕಾಗುವ ಪದಾರ್ಥಗಳು:

  • ಜೀರಿಗೆ ಟೀ ಸ್ಪೂನ್
  • ಸೋಂಪು ಟೀ ಸ್ಪೂನ್
  • ಶುಂಠಿ ಪುಡಿಅರ್ಧ ಟೀ ಸ್ಪೂನ್
  • ಬೆಲ್ಲಸ್ವಲ್ಪ
  • ನೀರು ಕಪ್

ತಯಾರಿಸುವ ವಿಧಾನ:

ಎರಡು ಕಪ್‌  ನೀರನ್ನು ಒಂದು ಪಾತ್ರೆಗೆ ಹಾಕಿ  ಕುದಿಸಿ ಜೀರಿಗೆ, ಸೋಂಪು, ಶುಂಠಿ ಹಾಕಿ ೧೦೧೨ ನಿಮಿಷ ಕುದಿಸಬೇಕು. ನಂತರ ಸೋಸಿಕೊಂಡು  ಬೆಲ್ಲ ಸೇರಿಸಿ ಕುಡಿಯಿರಿ. ಇದರಿಂದ ಹೊಟ್ಟೆಯುಬ್ಬರ, ಅಜೀರ್ಣ ಶಮನವಾಗುತ್ತದೆ.

 

🍵 . ದೇಹ ಶಕ್ತಿರೋಗನಿರೋಧಕ ಶಕ್ತಿಗೆ ಅಶ್ವಗಂಧ ಕಷಾಯ

ಬೇಕಾಗುವ ಪದಾರ್ಥಗಳು:

  • ಅಶ್ವಗಂಧ ಪುಡಿ ಟೀ ಸ್ಪೂನ್
  • ಹಾಲು ಕಪ್
  • ನೀರು ಕಪ್
  • ಜೇನು ಅಥವಾ ಬೆಲ್ಲಸ್ವಲ್ಪ

ತಯಾರಿಸುವ ವಿಧಾನ:

ಹಾಲು  ಸ್ವಲ್ಪ ನೀರು ಸೇರಿಸಿದ ಮಿಶ್ರಣವನ್ನು ಕುದಿಸಿ ಅದರಲ್ಲಿ ಅಶ್ವಗಂಧದ  ಪುಡಿ ಸೇರಿಸಿ ನಿಮಿಷದವರೆಗೆ  ಕುದಿಸಿ ಸೋಸಿರಿ. ಕಹಿ ಹೋಗಲಾಡಿಸಲು  ಸ್ವಲ್ಪ ಸಿಹಿ ಹಾಕಿ ಕುಡಿಯಿರಿ. ಇದರಿಂದ  ಶಕ್ತಿ ಹೆಚ್ಚುತ್ತದೆ ಮತ್ತು  ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

 

🍵 . ತಲೆನೋವಿಗೆ ಮೆಂತೆಸೊಪ್ಪು ಕಷಾಯ

ಬೇಕಾಗುವ ಪದಾರ್ಥಗಳು:

  • ಮೆಂತೆ ಕಾಳುಅರ್ಧ ಟೀ ಸ್ಪೂನ್
  • ಧನಿಯಾ ಟೀ ಸ್ಪೂನ್
  • ಕರಿಬೇವಿನ ಎಲೆ
  • ನೀರು ಕಪ್

ತಯಾರಿಸುವ ವಿಧಾನ:

ಎರಡು ಕಪ್‌ ನೀರನ್ನು ಒಂದು ಪಾತ್ರೆಗೆ ಹಾಕಿ  ಕುದಿಸಿ ಮೆಂತ್ಯ, ಧನಿಯಾ, ಕರಿಬೇವು  ಹಾಕಿ ೧೦ ನಿಮಿಷ ಕುದಿಸಬೇಕು. ಕುದಿಸಿದ ನೀರನ್ನು ಬೇರೊಂದು ಪಾತ್ರೆಗೆ ಸೋಸಿಕೊಂಡು   ಬಿಸಿ ಬಿಸಿ ಕುಡಿಯಿರಿ.  ಇದರಿಂದ ತಲೆನೋವು, ದೇಹದ ಅಲಸ್ಯ ಕಡಿಮೆಯಾಗುತ್ತದೆ.

 

ಕಷಾಯವನ್ನು ಹೆಚ್ಚು ಉಪಯೋಗಿಸದೆ, ಮಿತವಾಗಿ ಕುಡಿಯುವುದು ಒಳಿತು.

ಪ್ರತಿಯೊಂದು ರೆಸಿಪಿಯಲ್ಲೂ ಜೇನು ಅಥವಾ ಬೆಲ್ಲವನ್ನು ಕೊನೆ ಹಂತದಲ್ಲಿ  ಸೇರಿಸಿ ಕುಡಿಯಿರಿ.

 

🍲 “ಆಹಾರವೇ ಔಷಧ”

“ಆಹಾರವೇ ಔಷಧ” (Food is Medicine) ಎಂಬ ಮಾತು ಪುರಾತನ ಭಾರತೀಯ ಆಯುರ್ವೇದದಿಂದ ಬಂದಿರುವ ಮಹತ್ವದ ತತ್ತ್ವ. ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಕಾಪಾಡುವುದು ಆರೋಗ್ಯದ ಮೂಲ. ಇದರ ಆಧಾರವೇ ನಮ್ಮ ದೈನಂದಿನ ಆಹಾರ.

🌱 ನಾವು ತಿನ್ನುವ ಆಹಾರವೇ ನಮ್ಮ ದೇಹಕ್ಕೆ ಒದಗುವ  ಇಂಧನ. ಸರಿಯಾದ ಪೌಷ್ಟಿಕಾಂಶವಿರುವ ಆಹಾರ ಸೇವಿಸುವುದರಿಂದ  ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಅಹಿತಕರ ಆಹಾರ ಸೇವನೆ ಮಾಡಿದರೆ ಅನಾರೋಗ್ಯ, ದೀರ್ಘಕಾಲಿಕ ಖಾಯಿಲೆಗಳು, ಮಾನಸಿಕ ಒತ್ತಡ  ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

 

🌱 ೨. ಔಷಧಿಯಂತೆ ಕೆಲಸ ನಿರ್ವಹಿಸುವ  ಆಹಾರಗಳು

  • ತುಳಸಿ: ಸಾಮಾನ್ಯ ಶೀತ, ಕೆಮ್ಮಿಗೆ ಪ್ರಾಕೃತಿಕ ಔಷಧಿ.
  • ಬೆಳ್ಳುಳ್ಳಿ: ಹೃದಯದ ಆರೋಗ್ಯಕ್ಕೆ ಶ್ರೇಷ್ಠ.
  • ಅರಿಶಿನ: ಸೋಂಕು ತಡೆದು ದೇಹ ಶುದ್ಧೀಕರಣ ಮಾಡುತ್ತದೆ.
  • ಸೋಂಪು ಮತ್ತು ಜೀರಿಗೆ: ಅಜೀರ್ಣ ನಿವಾರಣೆ.
  • ಸೌತೆಕಾಯಿ: ದೇಹ ತಂಪಾಗಿಸುತ್ತದೆ.
  • ಹಣ್ಣುಗಳು ಮತ್ತು ತರಕಾರಿಗಳು: ವಿಟಮಿನ್ ಮತ್ತು ಖನಿಜಗಳ ಮೂಲ.

ಇವುಗಳನ್ನು ನಾವು ದಿನನಿತ್ಯದ ಅಡುಗೆಯಲ್ಲಿ ಬಳಸಿದರೆ, ಔಷಧಿ ಬಳಸಬೇಕಾಗುವ ಸಂದರ್ಭವೇ ಕಡಿಮೆಯಾಗುತ್ತದೆ.

🌱 ೩. ನೈಸರ್ಗಿಕ ಔಷಧಗಳನ್ನು ಒದಗಿಸುವ ಪೋಷಕಾಂಶಗಳು

ವಿಟಮಿನ್‌ C ಇರುವ ಹಣ್ಣುಗಳು (ಸೀತಾಫಲ, ಕಿತ್ತಳೆ, ನಿಂಬೆ)  ರೋಗ ನಿರೋಧಕ ಶಕ್ತಿಯನ್ನು  ಹೆಚ್ಚಿಸುತ್ತವೆ.

ಐರನ್ ಅಂಶ ಇರುವ ಸೊಪ್ಪುಗಳು  ರಕ್ತಹೀನತೆ ತಡೆಯುತ್ತವೆ.

ಕ್ಯಾಲ್ಸಿಯಂ ಇರುವ ಹಾಲು, ಎಳ್ಳು   ಎಲುಬುಗಳನ್ನು ಬಲಪಡಿಸುತ್ತವೆ.

ಪ್ರೋಟೀನ್ ಇರುವ ಬೇಳೆ  ದೇಹ ಬೆಳವಣಿಗೆಗೆ ಅವಶ್ಯ.

🌱 ೪. ಸಮತೋಲನಯುತ ಆಹಾರ: ಆರೋಗ್ಯದ ರಹಸ್ಯ

ಆಹಾರವು ಔಷಧಿಯಂತೆ ಕೆಲಸ ಮಾಡಬೇಕಾದರೆ, ಅದು ಸಮತೋಲನವಾಗಿರಬೇಕು:

ಧಾನ್ಯ + ಬೇಳೆ + ಹಣ್ಣು + ತರಕಾರಿ + ಹಾಲು ಹಾಲಿನ ಉತ್ಪನ್ನಗಳ ಸಮತೋಲನ.

ಕಡಿಮೆ ಎಣ್ಣೆ, ಕಡಿಮೆ ಸಕ್ಕರೆ, ಕಡಿಮೆ ಉಪ್ಪು  ಹೆಚ್ಚು ಹಸಿರು ಸೊಪ್ಪು, ಹಣ್ಣು, ನೈಸರ್ಗಿಕ ಆಹಾರ.

 

🌱  “ಆಹಾರವೇ ಔಷಧ” ಎಂದರೆ  ಔಷಧಿಗಳ ಅಗತ್ಯವಿಲ್ಲ ಎಂದಲ್ಲ. ಬದಲಿಗೆ  ಆಹಾರದ ಸರಿಯಾದ ಸೇವನೆಯೆ ರೋಗ ಬಾರದಂತೆ ತಡೆಯುವ ಶ್ರೇಷ್ಠ ಮಾರ್ಗ. ಒಳ್ಳೆಯ ಆಹಾರ ಸೇವನೆ ಮಾಡಿದರೆ ಔಷಧಿಯ ಅಗತ್ಯ ಕಡಿಮೆಯಾಗುತ್ತದೆ. ಆರೋಗ್ಯಕರ ಜೀವನದ ಕೀಲಿ ನಮ್ಮ ಅಡುಗೆಮನೆಯಲ್ಲಿಯೇ ಇದೆ ಎಂಬುದನ್ನು ಈ  ಮೇಲಿನ ವಿಷಯಗಳು  ಸಾಬೀತುಪಡಿಸುತ್ತವೆ.

 

 

 

ಧನ್ಯವಾದಗಳು…….🌷🌷🌷

 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????