ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

"ತಪ್ಪಿನಿಂದ ಕಲಿಯುವುದು ಬದುಕಿನ ನಿಜವಾದ ಪಾಠ" ಹಾಗಾಗಿ ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುವುದು ನಿಜವಾದ ಧೈರ್ಯ

 




ಲೇಖಕಿ: ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೭.೦೮.೨೦೨೫.

ಜೀವನದಲ್ಲಿ ತಪ್ಪನ್ನು ತಿದ್ದಿಕೊಳ್ಳುವುದು ಮತ್ತು ಅದನ್ನು ಒಪ್ಪಿಕೊಳ್ಳುವುದು ಎಷ್ಟು ಮುಖ್ಯ?

ಮನುಷ್ಯ ಜೀವಿಯು ಭೂಮಿಯ ಮೇಲಿನ ಬೇರೆಲ್ಲಾ ಜೀವಿಗಳಿಗಿಂತ ವಿಭಿನ್ನ ಮತ್ತು ಆಲೋಚನೆಯಲ್ಲಿ ವಿಲಕ್ಷಣತೆಯನ್ನು ಹೊಂದಿದ್ದಾನೆ  ಹೀಗಾಗಿ  ಮಾನವನ ಜೀವನವು ಒಂದು ನಿರಂತರ ಪಾಠಗಳ ಪಯಣ.

 ಮುನಷ್ಯನು ಹುಟ್ಟಿದ ಕ್ಷಣದಿಂದ ಕಲಿಯುತ್ತಾ, ಬೆಳೆಯುತ್ತಾನೆ.  ಬೆಳೆದು ತಪ್ಪುಗಳನ್ನು ಮಾಡುತ್ತಾ ಸಾಗುತ್ತಾನೆ.

ತಪ್ಪು ಮಾಡುವುದು ಸಹಜ ತಿದ್ದಿ ನಡೆಯು ನೀ ಮನುಜ ಎಂದು ಹಿರಿಯರು ಹೇಳಿದ್ದಾರೆ. ಹುಟ್ಟಿದ ಮೇಲೆ  ತಪ್ಪು ಮಾಡದೇ ಬದುಕಿ ಸಾಧಿಸಿದವರು ಯಾರೂ ಇಲ್ಲ. ಆದರೆ ಮಾಡಿದ ತಪ್ಪನ್ನು  ತಪ್ಪನ್ನು ಗುರುತಿಸುವುದು, ಅದನ್ನು ಒಪ್ಪಿಕೊಳ್ಳುವುದು ಮತ್ತು ತಿದ್ದಿಕೊಳ್ಳುವ ಧೈರ್ಯವನ್ನು ತೋರಿಸುವುದು ಎಲ್ಲಕ್ಕಿಂತ ಮುಖ್ಯವಾದದ್ದು.

ಇಂದಿನ ವೇಗದ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರು ತಪ್ಪನ್ನು ಮುಚ್ಚಿಡಲು ಅಥವಾ ಇನ್ನೊಬ್ಬರ ಮೇಲೆ ಹೊಣೆ  ಹೊರಿಸಲು  ಹೆಚ್ಚು ಪ್ರಯತ್ನಿಸುತ್ತಾರೆ. ಆದರೆ ನಿಜವಾದ  ಶಕ್ತಿ ಅಥವಾ ಧೈರ್ಯ ಎಂದರೆ ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿಪಡಿಸುವುದು. ಇದು ವ್ಯಕ್ತಿಯ ಪ್ರೌಢತೆಯನ್ನು, ನೈತಿಕತೆಯನ್ನು ಹಾಗೂ ಜವಾಬ್ದಾರಿತನವನ್ನು ತೋರಿಸುತ್ತದೆ.

 

ತಪ್ಪನ್ನು ಒಪ್ಪಿಕೊಳ್ಳುವುದರ ಮಹತ್ವ.

 ಯಾವುದೇ  ಸಂಬಂಧದಲ್ಲಾದರೂ ನಂಬಿಕೆಯೆನ್ನುವುದು ಬಹಳ ಮುಖ್ಯ. ಯಾರೇ ಆಗಲಿ ತಾವು ಮಾಡಿದ ತಪ್ಪನ್ನು  ಒಪ್ಪಿಕೊಂಡು ಎದುರಿರುವವರಿಗೆ ಕ್ಷಮೆ ಕೇಳುವ ಧೈರ್ಯ  ತೋರಿದರೆ, ಇತರರು ಅವರನ್ನು  ನಂಬುತ್ತಾರೆ ಮತ್ತು ಎಂದಿನಂತೆ ವಿಶ್ವಾಸ ತೋರುತ್ತಾರೆ.

 ಯಾವುದೇ ಸಂದರ್ಭದಲ್ಲಾದರೂ  ಮತ್ತು ಕಠಿಣ ಪರಿಸ್ಥಿತಿಯಲ್ಲಿ ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯವಿರುವ ಮತ್ತು ನಂಬಿಕೆಯನ್ನು ಗಳಿಸುವ  ವ್ಯಕ್ತಿಯನ್ನು ಸಮಾಜ ಹೆಚ್ಚು ಗೌರವಿಸುತ್ತದೆ.

 ಮಾಡಿದ  ತಪ್ಪನ್ನು ಒಪ್ಪಿಕೊಳ್ಳುವುದು ಸುಲಭದ ಮಾತಲ್ಲ ಹಾಗಿದ್ದಾಗ್ಯೂ  ತನ್ನ ತಪ್ಪನ್ನು ಒಪ್ಪಿಕೊಂಡ  ವ್ಯಕ್ತಿಯ ಮೌಲ್ಯಗಳನ್ನು ಹಾಗೂ ನೈತಿಕ ನಿಲುವುಗಳನ್ನು ತೋರಿಸುತ್ತದೆ.

ತಪ್ಪನ್ನು ಒಪ್ಪಿಕೊಂಡ ನಂತರ ಮನಸ್ಸಿನಲ್ಲಿ ಇರುವ ಭಾರ ತಗ್ಗುತ್ತದೆ ಮತ್ತು ಮನಶಾಂತಿ ದೊರೆಯುತ್ತದೆ.

 

ತಪ್ಪು ತಿದ್ದಿಕೊಳ್ಳುವ ವಿಧಾನಗಳು.

ಹೌದು, ನಾನು ತಪ್ಪು ಮಾಡಿದ್ದೇನೆಎಂದು ಮನಸಾರೆ ಒಪ್ಪಿಕೊಳ್ಳುವುದು ತಮ್ಮ ತಪ್ಪುಗಳನ್ನು ಸ್ವೀಕರಿಸುವ  ಮೊದಲ ಹೆಜ್ಜೆಯಾಗಿದೆ.

 ನಿಷ್ಕಲ್ಮಶ ಮನಸ್ಸಿನಿಂದ  ಕ್ಷಮೆಯಾಚಿಸುವುದರಿಂದ, ಸಂಬಂಧಗಳು  ಪುನರ್‌ ಮಿಲನಗೊಳ್ಳುತ್ತವೆ.

ಮಾಡಿದ  ತಪ್ಪಿನಿಂದ ಆಗಿರುವ ಹಾನಿ ಅಥವಾ ನೋವನ್ನು ಸರಿಪಡಿಸಲು ಸಾಧ್ಯವಾದ ಮಟ್ಟಿಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡುವುದರಿಂದ ತಮ್ಮ ನೈತಿಕತೆಯನ್ನು ಸುಧಾರಿಸಿಕೊಳ್ಳಬಹುದು.

 ತಪ್ಪನ್ನು ಒಮ್ಮೆ ಮಾಡುವುದು ಸಹಜ, ಆದರೆ ಅದೇ ತಪ್ಪನ್ನು   ಮತ್ತೆ ಮತ್ತೆ ಮಾಡುವುದನ್ನು ತಪ್ಪಿಸಬೇಕು.

 

ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದರಿಂದಾಗುವ  ವೈಯಕ್ತಿಕ ಲಾಭಗಳು

ತಾನು ಮಾಡಿದ  ತಪ್ಪನ್ನು ತಿದ್ದಿಕೊಂಡಾಗ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಆಗ  ಸ್ವತಃ ತನ್ನನ್ನು ತಾನು   ಗೌರವಿಸಿಕೊಳ್ಳಲು ಪ್ರಾರಂಭಿಸುತ್ತಾನೆ.

ತಪ್ಪು ಮಾಡುವ ಸಮಯದಲ್ಲಿದ್ದ ಮನಸ್ಸಿನ ಗೊಂದಲವು, ಅದನ್ನು ಒಪ್ಪಿಕೊಂಡಾಗ  ಮನಸ್ಸಿನ ಭಾರವು ಕಡಿಮೆಯಾಗಿ  ಹೃದಯದಲ್ಲಿ ಶಾಂತಿ ಮತ್ತು ತೃಪ್ತಿ ದೊರೆಯುತ್ತದೆ.

ಮಾಡಿದ  ಪ್ರತಿಯೊಂದು ತಪ್ಪುಗಳು ಕಲಿಕೆಯ  ಪಾಠವಾಗಿ ವಿಭಿನ್ನ ಅನುಭವಗಳನ್ನು ಪಡೆಯುತ್ತಾನೆ. ಮತ್ತು ಹೊಸದನ್ನು ಕಲಿತು ಅಭಿವೃದ್ಧಿ ಹೊಂದುತ್ತಾನೆ.

 

ತಪ್ಪುಗಳನ್ನು ಸರಿಪಡಿಸಿಕೊಳ್ಳುವುದರಿಂದಾಗುವ  ಸಾಮಾಜಿಕ ಮತ್ತು ವೃತ್ತಿಜೀವನದ ಲಾಭಗಳು

 ಕುಟುಂಬಗಳಲ್ಲಿ, ಸ್ನೇಹಿತರೊಡನೆ , ಪ್ರೇಮ ಸಂಬಂಧಗಳಲ್ಲಿ ಅಥವಾ ಉದ್ಯೋಗದ ಕ್ಷೇತ್ರದಲ್ಲಿ ತಪ್ಪನ್ನು ಒಪ್ಪಿಕೊಂಡರೆ ಸಂಬಂಧಗಳು ಬಲವಾಗುತ್ತವೆ.

ಕಚೇರಿಯಲ್ಲಿ ಒಬ್ಬರು ತಾವು ಮಾಡಿದ  ತಪ್ಪನ್ನು ಒಪ್ಪಿಕೊಂಡರೆ,  ಇತರ ಸಹೋದ್ಯೋಗಿಗಳು ಸಹ  ಅವರಲ್ಲಿ  ಹೆಚ್ಚು ನಂಬಿಕೆ ಇಡುತ್ತಾರೆ.

 ಉತ್ತಮ ನಾಯಕ ಎಂದರೆ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳದೆ, ಅದನ್ನು ಒಪ್ಪಿಕೊಂಡು  ತಂಡದ ಮುಂದೆ ತಿದ್ದಿಕೊಳ್ಳುವವನು ಎಂದಿಗೂ ಉತ್ತಮ ನಾಯಕನಾಗುತ್ತಾನೆ.

 

ಏಕೆ ಹಲವರು ತಮ್ಮ  ತಪ್ಪನ್ನು ಒಪ್ಪಿಕೊಳ್ಳಲು ಹೆದರುತ್ತಾರೆ?

 ನಾನು ತಪ್ಪು ಮಾಡಲು  ಸಾಧ್ಯವೇ ಇಲ್ಲಎಂಬ ಅಹಂಕಾರದ   ಮನೋಭಾವ ಹೊಂದಿರುವವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ.

 ಕೆಲವೊಮ್ಮೆ ಮಾಡಿದ ತಪ್ಪನ್ನು  ಒಪ್ಪಿಕೊಳ್ಳದೇ ಇರಲು, ತಮ್ಮ ಸುತ್ತಲೂ ಇರುವ ಇತರರು  ಏನೆಂದುಕೊಳ್ಳುತ್ತಾರೋ  ಎಂಬ ಭಯ ಯಾವಾಗಲೂ ಕಾಡುತ್ತಿರುತ್ತದೆ.

 ತಪ್ಪನ್ನು ಒಪ್ಪಿಕೊಂಡರೆ ಸಂಬಂಧಗಳಲ್ಲಿ   ತಮ್ಮ ಗೌರವ ಕಡಿಮೆಯಾಗುತ್ತದೆ ಹಾಗೂ ತಮ್ಮ ಆತ್ಮಗೌರವ ಕಳೆದುಹೋಗುತ್ತದೆ ಎಂಬ ತಪ್ಪು ಕಲ್ಪನೆ ಇರುವ ಕಾರಣ  ಎಷ್ಟೋ ಜನರು ತಾವು ಮಾಡಿದ ತಪ್ಪನ್ನು ಮುಚ್ಚಿಟ್ಟುಕೊಳ್ಳುತ್ತಾರೆ.

ಆದರೆ ವಾಸ್ತವದಲ್ಲಿ, ತಪ್ಪನ್ನು ಒಪ್ಪಿಕೊಳ್ಳುವುದು ಗೌರವವನ್ನು ಕಡಿಮೆ ಮಾಡುವುದಿಲ್ಲ, ಬದಲಾಗಿ ಆತ್ಮ ಗೌರವವನ್ನು ಅದು ಹೆಚ್ಚಿಸುತ್ತದೆ.

 

ತಪ್ಪನ್ನು  ಮಾಡುವುದು ಸಹಜವೇ ಆದರೂ, ಮಾಡಿದ   ತಪ್ಪನ್ನು ತಿದ್ದಿಕೊಳ್ಳುವುದು ಎಲ್ಲಕ್ಕಿಂತ  ಅಗತ್ಯ,  ಆದರೆ ಅದನ್ನು ಒಪ್ಪಿಕೊಳ್ಳುವುದು ನಿಜವಾದ ಧೈರ್ಯ ಮತ್ತು ಪ್ರಭುದ್ದತೆಯನ್ನು ತೋರಿಸುತ್ತದೆ.  ಜೀವನದಲ್ಲಿ ಪ್ರಗತಿ ಸಾಧಿಸಬೇಕಾದರೆ ನಾವು ತಪ್ಪುಗಳನ್ನು ಕಲಿಕೆಗೆ ದಾರಿಯಾಗಿ ಪರಿಗಣಿಸಿ ಅಭಿವೃದ್ಧಿ ಹೊಂದುವ ಮಾರ್ಗವನ್ನು ಕಂಡುಕೊಳ್ಳಬೇಕು.ತಪ್ಪು ಮಾಡುವವನು ಮಾನವ, ಅದನ್ನು ತಿದ್ದಿ ನಡೆಯುವವನೇ  ಮಹಾ ಅನುಜಎಂಬ ಮಾತು ಸಾರ್ಥಕವಾಗುತ್ತದೆ.

ಹೀಗಾಗಿ, ಮಾಡಿದ  ತಪ್ಪನ್ನು ಮರೆಮಾಚದೆ, ಅದನ್ನು ಒಪ್ಪಿಕೊಳ್ಳಿ, ತಿದ್ದಿಕೊಳ್ಳಿ  ಆಗ  ನಿಮ್ಮ ವೈಯಕ್ತಿಕ ಜೀವನವೂ, ಸಾಮಾಜಿಕ ಜೀವನವೂ ಯಶಸ್ವಿಯಾಗುತ್ತದೆ.

 

ಸಾಮಾಜಿಕ  ಜೀವನದಲ್ಲಿ ವಾಸಿಸುವವರು ತಮ್ಮ ತಪ್ಪುಗಳ ಕಡೆಗೆ ಗಮನ ವಹಿಸುವುದು ಏಕೆ ಮುಖ್ಯವಾಗುತ್ತದೆ?

 ಸಮಾಜ ಎಂಬುದು ಮನುಷ್ಯ ಜಗತ್ತಿನಲ್ಲಿ ಪರಸ್ಪರರು  ಅವಲಂಬಿತವಾಗಿರುವ ಜಾಲ, ಈ ಜಾಲದಲ್ಲಿ ಬದುಕುವ  ಮನುಷ್ಯನು ಸಂಘಜೀವಿ ಅವನು  ಒಂಟಿಯಾಗಿ ಬದುಕುವುದಿಲ್ಲ, ಅವನು ತನ್ನ  ಕುಟುಂಬ, ಸ್ನೇಹಿತರು, ನೆರೆಹೊರೆಯವರು, ಸಹೋದ್ಯೋಗಿಗಳೊಂದಿಗಿನ ಸಮುದಾಯದೊಂದಿಗೆ ಬದುಕುತ್ತಾನೆ. ಇಂತಹ ಸಂದರ್ಭಗಳಲ್ಲಿ ಮಾಡಿದ ತಪ್ಪುಗಳು ಕೇವಲ ಅವರಿಗಷ್ಟೆ ಅಲ್ಲದೇ, ಇತರರ ಮೇಲೂ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುತ್ತವೆ.

ಇವರು ತಾವು ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳದೆ, ನಿರ್ಲಕ್ಷಿಸಿದಾಗ ಆ ವ್ಯಕ್ತಿಯ ಬಗ್ಗೆ ಅವನ ಸುತ್ತಲಿನ ಸಮಾಜ ಅವನಲ್ಲಿ ವಿಶ್ವಾಸವಿರಿಸುವುದನ್ನು ನಿಲ್ಲಿಸುತ್ತಾರೆ. ಹಾಗಾಗಿ ಸಮಾಜದಲ್ಲಿನ ನಂಬಿಕೆ ಉಳಿಸಿಕೊಳ್ಳಲು ಮಾಡಿದ ತಪ್ಪನ್ನು ತಿದ್ದಿಕೊಂಡು ನಡೆಯುವುದರಿಂದ ನೆರೆಹೊರೆಯ ಸಂಬಂಧಗಳಲ್ಲಿ ಜನರು ವ್ಯಕ್ತಿಯನ್ನು ಹೆಚ್ಚು ಪ್ರಾಮಾಣಿಕ, ಹೊಣೆಗಾರಿಕೆಯುಳ್ಳವನು ಎಂದು ಕಾಣುತ್ತಾರೆ.

ಮಾನವ ಸಂಬಂಧಗಳ ಆಧಾರವೇ  ಸತ್ಯ”, ʼಪ್ರಾಮಾಣಿಕತೆʼ ಮತ್ತುʼ ನಂಬಿಕೆʼ ಇವುಗಳನ್ನು ಉಳಿಸಿಕೊಂಡರೆ ಉತ್ತಮ ಸಂಬಂಧಗಳನ್ನು ಕಟ್ಟಿಕೊಳ್ಳಲು ಸಾಧ್ಯ.  

ತಪ್ಪನ್ನು ಒಪ್ಪಿಕೊಳ್ಳದೆ ಹಠವಾದಿಯಾಗಿ ವರ್ತಿಸಿದರೆ ಸಂಬಂಧಗಳು ಹಾಳಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ  ಸಂಬಂಧಗಳನ್ನು ಉಳಿಸ ಬಯಸುವವರು  ಮಾಡಿದ ತಪ್ಪನ್ನು ತಿದ್ದಿಕೊಳ್ಳುವರು.  ಈ ಮೂಲಕ  ಸಮಾಜದಲ್ಲಿ ಸಹಾನುಭೂತಿ, ಕ್ಷಮೆ ಮತ್ತು ಗೌರವವನ್ನು ಗಳಿಸುತ್ತಾರೆ.

ಯಾರೊಬ್ಬರ  ನಿರ್ಲಕ್ಷ್ಯತೆಯಿಂದ ಅಥವಾ ತಪ್ಪಿನಿಂದ ಜಗಳಗಳು, ಮನಸ್ಥಾಪಗಳು, ಅಸಮಾಧಾನ, ಗಲಾಟೆಗಳು ಹುಟ್ಟಬಹುದು. ಇದರಿಂದ ಸಾಮಾಜಿಕವಾಗಿ ಅಸಮಾನತೆ ಮತ್ತು ಅಶಾಂತಿ ಉಂಟಾಗುತ್ತವೆ.

ಆದ್ದರಿಂದ  ನಡೆದ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದರೆ, ದೊಡ್ಡ ಸಮಸ್ಯೆಗಳು ನಡೆಯುವ ಮುನ್ನವೇ ಪರಿಹಾರ ಸಿಗುತ್ತದೆ, ಸಮಾಜದಲ್ಲಿ ಶಾಂತಿ ಉಳಿಯುತ್ತದೆ.

ಸಮಾಜದಲ್ಲಿ ಬದುಕುವಾಗ ಆದ ಮತ್ತು ಆಗುತ್ತಿರುವ   ತಪ್ಪುಗಳನ್ನು ಗುರುತಿಸಿಕೊಳ್ಳುವುದು ಮತ್ತು  ತಿದ್ದಿಕೊಂಡು ನಡೆಯುವುದರಿಂದ,  ವ್ಯಕ್ತಿಯ ಚರಿತ್ರೆ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ಉತ್ತಮಗೊಳಿಸುತ್ತದೆ. ಇದು ಸ್ವಯಂ ವಿಕಾಸಕ್ಕೆ ಮತ್ತು ಕಲಿಕೆಗೆ ದಾರಿಯಾಗುತ್ತದೆ. ಇದರಿಂದ  ಸಮಾಜದಲ್ಲಿನ  ಇತರರು ಕೂಡಾ ಅವನಿಂದ ಕಲಿಯುತ್ತಾರೆ. “ತಪ್ಪು ಮಾಡಿದರೂ ಅದನ್ನು ತಿದ್ದಿಕೊಳ್ಳಬಹುದುಎಂಬ ನಿದರ್ಶನಕ್ಕೆ ಉದಾಹರಣೆಯಾಗುತ್ತದೆ.

ಸಮಾಜದಲ್ಲಿ ಬದುಕುವವರು ಯಾವಾಗಲೂ ಅಲ್ಲದೇ ಹೋದರೂ ಹಲವು ಸಂದರ್ಭಗಳಲ್ಲಿ  ಕೇವಲ ತಮಗೆ ಇಷ್ಟ ಬಂದ ರೀತಿ ಬದುಕಲು ಸಾಧ್ಯವಿಲ್ಲ ಕಾರಣ ತನ್ನ ಸುತ್ತಲಿನ  ಇತರರಿಗೂ ಜವಾಬ್ದಾರರಾಗಿರುತ್ತಾರೆ. ಹಾಗಾಗಿ ಜವಾಬ್ದಾರಿಯಿಂದ ಬದುಕುವ   ಹೊಣೆಗಾರಿಕೆಯಿಂದ ವರ್ತಿಸುವ ಗುಣಗಳನ್ನು ರೂಢಿಸಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗಿರುತ್ತದೆ.

ಇಲ್ಲಿ ತಪ್ಪನ್ನು ಒಪ್ಪಿಕೊಳ್ಳುವುದು ಅಂದರೆನಾನು ಹೊಣೆಗಾರಎಂದು ಹೇಳುವುದೇ ಆಗಿದೆ.

ನೈಜ ಜೀವನದ ಉದಾಹರಣೆಗಳು

 ಮಕ್ಕಳಿಗೆ ತಾವು ಮಾಡಿದ  ತಪ್ಪನ್ನು ಒಪ್ಪಿಕೊಳ್ಳುವುದನ್ನು ಕಲಿಸಿದರೆ, ಮಂದೆ  ಅವರು ತಮ್ಮ  ಮುಂದಿನ ದಿನಗಳಲ್ಲಿ ತಾವು ತಪ್ಪು ಮಾಡಿದಾಗ ಅಥವಾ ನಿರಾಸೆ ಹೊಂದಿದ ಸಮಯದಲ್ಲಿ  ಜವಾಬ್ದಾರಿ  ಹೊಂದಿದ ನಾಗರಿಕರಾಗಲು ತಮ್ಮ ಕಡೆಯಿಂದ ಪೂರ್ತಿಯಾಗಿ ಪ್ರಯತ್ನ ಪಡುತ್ತಾರೆ. ಈ ಮೂಲಕ ಮಕ್ಕಳಿಗೆ ತಪ್ಪು ಮಾಡಿದಾಗ ಕೇವಲ ಶಿಕ್ಷೆ ಒಂದೇ ಇರುವುದಿಲ್ಲ ಅದನ್ನು ಸರಿಪಡಿಸಲು ಅವಕಾಶವೂ ಇರುತ್ತದೆ ಎಂಬುದನ್ನು ಕೂಡ ತಿಳಿಸಿದಂತಾಗುತ್ತದೆ.

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತಪ್ಪು ಮಾಡಿದಾಗ ಅಥವಾ ನಾಪಾಸಾಗಾದ ಯಾವುದೇ ರೀತಿಯ ಅಚಾತುರ್ಯಗಳನ್ನು ಮಾಡಿಕೊಳ್ಳದೆ,  ಅದನ್ನು ಒಪ್ಪಿಕೊಂಡು ಸರಿಪಡಿಸುವ ಮೂಲಕ  ಮುಂದಿನ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಹೆಚ್ಚು ಯಶಸ್ವಿಯಾಗುತ್ತಾರೆ.

ಕಚೇರಿ ಜೀವನದಲ್ಲಿರುವಾಗ, ಯಾವುದೇ  ಸಮಯದಲ್ಲಿ ಅಥವಾ ಪ್ರಾಜೆಕ್ಟ್ನಲ್ಲಿ ತಪ್ಪಾದಾಗ ಅದನ್ನು ಮುಚ್ಚಿಡದೆ, ತಕ್ಷಣ ಒಪ್ಪಿಕೊಂಡು ತಿದ್ದಿಕೊಂಡರೆ ಮಂದೆ  ತಂಡವು  ನಷ್ಟ  ಭರಿಸುವುದು ಕಡಿಮೆಯಾಗುತ್ತದೆ.

ತಪ್ಪನ್ನು ತಿದ್ದಿಕೊಂಡು ಒಪ್ಪಿಕೊಳ್ಳುವುದು ವ್ಯಕ್ತಿತ್ವದ ಮೇಲೆ ಹೇಗೆ ಧನಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ  ನನ್ನ ಜೀವನದಲ್ಲಿ ನಡೆದ ಒಂದು ಘಟನೆಯು, ನಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಿತು.

ನನಗಾಗ  ಒಂಭತ್ತು ವರ್ಷ ವಯಸ್ಸಿರಬೇಕು, ನಮ್ಮೂರಿನ  ಶಾಲೆಯಲ್ಲಿ  ಮೂರನೇ  ತರಗತಿ ಓದುತ್ತಿದ್ದ ಸಮಯ. ಒಂದು ಭಾನುವಾರದ ದಿನ  ಶಾಲೆಗೆ ರಜೆ ಇದ್ದ ಸಮಯದಲ್ಲಿ ನಮ್ಮ ತಾಯಿ  ಅಂಗಡಿಯಲ್ಲಿ ಸಕ್ಕರೆ ತರಲೆಂದು ದುಡ್ಡು ಕೊಟ್ಟು ಕಳುಹಿಸಿದ್ದರು. ಅಂಗಡಿಯಲ್ಲಿ ಸಕ್ಕರೆ ತೆಗೆದುಕೊಂಡ ನನಗೆ ಅಂಗಡಿಯ ಹೆಂಗಸು ಚಿಲ್ಲರೆ ನೀಡುವ ಸಮಯದಲ್ಲಿ ಇಪ್ಪತ್ತು ರೂಗಳನ್ನು ಹೆಚ್ಚಿಗೆ ನೀಡಿ ಬಿಟ್ಟಿದ್ದರು. ಅದು ನನಗೆ ಅವರು ಕೊಟ್ಟಾಗಲೇ ತಿಳಿಯಿತು. ಇಪ್ಪತ್ತು ರೂಗಳು ಹಿಚ್ಚಿಗೆ ಸಿಕ್ಕ ಖುಷಿಯಲ್ಲಿ ಹಾಗೆಯೇ ಬಂದುಬಿಟ್ಟೆ.   ಮನೆಗೆ ಬಂದು ಅದನ್ನು ನನ್ನ ತಾಯಿಗೆ ಹೇಳದೆ ಮುಚ್ಚಿಟ್ಟು ಸುಮ್ಮನಾದೆ. ಆ ಸಮಯದಲ್ಲಿ ಇಪ್ಪತ್ತು ರೂಪಾಯಿ ಹಣವೇ ಹೆಚ್ಚಿನದಾಗಿತ್ತು.  ಸ್ವಲ್ಪ ಸಮಯದ ನಂತರ ಅಂಗಡಿಯ ಆ ಹೆಂಗಸು ನೇರವಾಗಿ ನಮ್ಮ ಮನೆಗೆ ಬಂದು ಬಿಟ್ಟಿದ್ದರು, ಬಂದವರೇ ಇಪ್ಪತ್ತು ರೂಪಾಯಿಗಳನ್ನು ಹೆಚ್ಚಾಗಿ ಕೊಟ್ಟಿದ್ದು ವಾಪಸ್ಸು ನೀಡಬೇಕೆಂದು ನನ್ನ ತಾಯಿಯನ್ನು ಕೇಳಿದರು. ಮೊದಲಿಗೆ ನಾನು ಗೊತ್ತಿಲ್ಲವೆಂದೇ ಹೇಳಿದರೂ ನಂತರ ನನ್ನ ತಾಯಿ ಸ್ವಲ್ಪ ಜೋರಾಗಿ ಗದರಿಸಿದಾಗ ಹೌದು ಎಂದು ಒಪ್ಪಿಕೊಂಡು ಅದನ್ನು ಅವರಿಗೆ ಹಿಂತಿರುಗಿಸಿದೆ.

ನಂತರ  ನನ್ನ ಅಜ್ಜಿಯು ಬೇರೆಯವರ ವಸ್ತುವನ್ನು ಮುಟ್ಟುವುದು ತಪ್ಪು ಹಾಗೆ ಮಾಡಬಾರದು ಎಂದು ತಿಳಿಹೇಳಿದರು.  ಈ ಘಟನೆಯ ನಂತರ ನಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದನ್ನು ಅಬ್ಯಾಸ ಮಾಡಿಕೊಂಡೆ. ಕಾರಣ ಅವರ ದುಡ್ಡು ನನ್ನ ಹತ್ತಿರ ಇದ್ದ ಅಷ್ಟು ಸಮಯದವರೆಗೂ ಒಂದು ರೀತಿಯ ಭಯ ಮತ್ತು ಆತಂಕ ನನ್ನ ಮನಸ್ಸಿನಲ್ಲಿ ಮನೆ ಮಾಡಿತ್ತು, ಅವರ ಹಣವನ್ನು ಹಿಂದಿರುಗಿಸಿದ ನಂತರ  ಹೃದಯದಲ್ಲಿ ನಿರಾಳತೆ ಆವರಿಸಿತು. ಈ ಘಟನೆಯು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.   ಮಾಡಿದ ತಪ್ಪನ್ನು ಒಪ್ಪಿಕೊಂಡು  ಸರಿಪಡಿಸಿಕೊಳ್ಳುವುದನ್ನು ಇಂದಿಗೂ ನಾನು ಪಾಲಿಸುತ್ತಿದ್ದೇನೆ.


ಜೀವನದಲ್ಲಿ ತಪ್ಪನ್ನು ಒಪ್ಪಿಕೊಳ್ಳುವುದು ಅಂದರೆ ಪ್ರಾಮಾಣಿಕತೆ, ಹೊಣೆಗಾರಿಕೆ, ವಿಶ್ವಾಸ ಮತ್ತು ಶಾಂತಿಯ ದಾರಿ ಹಿಡಿಯುವುದು. ಇದು ಕೇವಲ ವ್ಯಕ್ತಿಯ ಬೆಳವಣಿಗೆಯಲ್ಲ, ಸಂಪೂರ್ಣ ಸಮಾಜದ ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

 

 

ಧನ್ಯವಾದಗಳು……..🌷🌷🌷

 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......