ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಏಕಾಗ್ರತೆ, ನಿಸ್ವಾರ್ಥತೆ ಮತ್ತು ವ್ಯಕ್ತಿತ್ವ ನಿರ್ಮಾಣ – ಸ್ವಾಮಿ ವಿವೇಕಾನಂದರಿಂದ ಜೀವನ ಪಾಠಗಳು ✨ "ರಾಷ್ಟ್ರ ಜಾಗೃತಿ & ವ್ಯಕ್ತಿತ್ವ ನಿರ್ಮಾಣ – ಬದುಕಿಗೆ ದಿಕ್ಕು ತೋರಿದ ಪುಸ್ತಕಗಳು"

 


ಲೇಖಕಿ:ನಾಗಲಕ್ಷ್ಮಿ. ಕೆ.ಎನ್.‌  ದಿ:೧೨.೦೮.೨೦೨೫.

ಮುಂದುವರಿದ ಭಾಗ………

ಮಾನಸಿಕ ಶಕ್ತಿಯು ಅನಂತವಾದುದು, ಅದಕ್ಕೆ ಮಿತಿಯಿಲ್ಲ. ಮನಸ್ಸು ಯಾವುದೇ ವಿಷಯದ ಮೇಲೆ ಏಕಾಗ್ರತೆ ವಹಿಸಿದಷ್ಟೂ  ಹೆಚ್ಚು  ಶಕ್ತಿ ಕೇಂದ್ರೀಕೃತವಾಗುತ್ತದೆ.

ಏಕಾಗ್ರತೆ ಎಂದರೇನು?????

ಹಿಂದೆ ಮಹಾಋಷಿಗಳು ಮತ್ತು ತಪಸ್ವಿಗಳು ಏನು ಮಾಡಿದರು?  ಇಡೀ ಮಾನವ ಜನಾಂಗದ ಬದುಕನ್ನು  ತಮ್ಮ ಒಂದೇ ಜೀವನದಲ್ಲಿ ಬಾಳಿದರು.  ಸಾಧಾರಣ ಮಾನವರಾಗಿ ಮನುಷ್ಯ ಜೀವನ ನಡೆಸುವವರು ಮುಕ್ತಿಯನ್ನು ಪಡೆಯಲು  ಹಲವು ಜನ್ಮಗಳ ದಾರಿಯನ್ನ ಸವೆಸಬೇಕಾದ ಸಮಯದಲ್ಲಿ , ಇವರು ಒಂದೇ ಜನ್ಮದಲ್ಲಿ ಪೂರ್ಣತೆಯನ್ನು ಸಾಧಿಸಿಕೊಂಡರು. ಕಾರಣ ಅವರು ತಮ್ಮ ಧ್ಯೇಯವನ್ನು ಬಿಟ್ಟು ಬೇರಾವುದನ್ನೂ ಆಲೋಚಿಸುತ್ತಲೇ  ಇರಲಿಲ್ಲ.  ಒಂದು ಗಳಿಗೆಯೂ ಬೇರೆ ವಿಷಯಗಳ ಕುರಿತು ಯೋಚನೆಯೇ ಮಾಡುತ್ತಿರಲಿಲ್ಲ.   ಹೀಗೆ ಕಾಲದ ದೂರವನ್ನು ಕಡಿಮೆ ಮಾಡಿಕೊಳ್ಳುವ  ದಾರಿಯನ್ನೇ ʼ ಏಕಾಗ್ರತೆʼ ಎನ್ನುವರು.

            ಗಹನ ವಿಷಯಗಳನ್ನು ರಕ್ತಗತಮಾಡಿಕೊಳ್ಳುವ ಶಕ್ತಿಯನ್ನು ತೀವ್ರಗೊಳಿಸಿಕೊಂಡು, ಕಾಲದ ಮಿತಿಯನ್ನು ಕಡಿಮೆ ಮಾಡುವುದೇ ಏಕಾಗ್ರತೆ ಆಗಿದೆ.  ಏಕಾಗ್ರತೆ ಇರುವುದರಿಂದಲೇ ಜ್ಞಾನಾರ್ಜನೆಯಾಗುವುದು. ಜ್ಞಾನದ ಬೆಳವಣಿಗೆಗೆ ಇರುವುದು ಇದೊಂದೇ ಏಕೈಕ ಮಾರ್ಗ. ಬಟ್ಟೆ ಹೊಲೆಯುವವನಿಗೆ ಏಕಾಗ್ರತೆ ಇದ್ದಷ್ಟೂ ಇನ್ನೂ ಚೆನ್ನಾಗಿ  ಬಟ್ಟೆ ವಿನ್ಯಾಸ ಮಾಡುತ್ತಾನೆ.  ಅಡಿಗೆ ಮಾಡುವವನಿಗೆ   ಏಕಾಗ್ರತೆ ಹೆಚ್ಚು ಇದ್ದಷ್ಟು ಇನ್ನೂ  ಚೆನ್ನಾಗಿ ಅಡುಗೆ ಮಾಡಬಲ್ಲ. ದೇವರ ಪೂಜೆಯಾಗಲಿ, ವ್ಯಾಪಾರದಲ್ಲಾಗಲಿ ಹೆಚ್ಚು ಏಕಾಗ್ರತೆ ಇದ್ದಷ್ಟೂ ಇನ್ನೂ ಚೆನ್ನಾಗಿ ಅದನ್ನು ಮಾಡಬಹುದು. ಈ ಏಕಾಗ್ರತೆ ಕರೆಯೊಂದೆ ಪ್ರಕೃತಿಯ ದ್ವಾರಗಳನ್ನು ತೆರೆದು ಜ್ಞಾನಪ್ರವಾಹವನ್ನು ನೀಡುವುದು.

            ಮನುಷ್ಯರಿಗೂ ಪ್ರಾಣಿಗಳಿಗೂ ಇರುವ ಮುಖ್ಯ ವ್ಯತ್ಯಾಸವೇ, ಇವರ ಏಕಾಗ್ರತೆಯ ಶಕ್ತಿಯಲ್ಲಿನ ವ್ಯತ್ಯಾಸ.  ಯಾವುದೇ ಕ್ಷೇತ್ರದಲ್ಲಿನ ಯಶಸ್ಸು…. ಈ ಏಕಾಗ್ರತೆಯ  ಪರಿಣಾಮವೆ.  ಮನುಷ್ಯರಲ್ಲಿನ ಪರಸ್ಪರರ ವ್ಯತ್ಯಾಸಕ್ಕೆ  ಅವರಲ್ಲಿನ ಏಕಾಗ್ರತ ಶಕ್ತಿ.  ಅತಿಕೀಳು ಮತ್ತು ಅತಿಶ್ರೇಷ್ಠ ವ್ಯಕ್ತಿಗಳನ್ನು ಪರಸ್ಪರರಿಗೆ ಹೋಲಿಸಿ ನೋಡಿ , ಆಗ ಅವರಲ್ಲಿನ ವ್ಯತ್ಯಾಸಕ್ಕೆ ಕಾರಣ ಅವರಲ್ಲಿನ ಏಕಾಗ್ರತೆ ಶಕ್ತಿಯ ಹೆಚ್ಚುಕಡಿಮೆಯೇ .!

ಮನಸ್ಸಿನ ಶಕ್ತಿಯಲ್ಲಿ ಶೇಕಡ ತೊಂಭತ್ತು  ಭಾಗವನ್ನು  ವಿನಾ ಕಾರಣ ವ್ಯರ್ಥ ಮಾಡುತ್ತಿರುವನು ಸಾಧಾರಣ ಮನುಷ್ಯ, ಆದ್ದರಿಂದಲೇ ಅವನು ಪದೇ ಪದೇ ತಪ್ಪು ಮಾಡುತ್ತಿರುವನು. ಏಕಾಗ್ರತೆಯಲ್ಲಿ ಪಳಗಿದ ಮನಸ್ಸು ಎಂದಿಗೂ ತಪ್ಪು ಮಾಡುವುದಿಲ್ಲ.

ಆತಂಕರಹಿತರಾಗಿರಿ, ಎಂದು ಹೃದಯದಲ್ಲಿ ಮಹಾ ವೇದನ ಉಂಟಾಗುತ್ತದೋ,  ಯಾವಾಗ ನಾಲ್ಕು ದಿಕ್ಕುಗಳಲ್ಲೂ  ದುಃಖವೆಂಬ ಬಿರುಗಾಳಿ ಬೀಸುವುದೋ, ಇನ್ನೇನು ಬೇಳಕು ಕಾಣದಂತೆ ಮಾಯವಾಗುವುದೋ, ಎಂದು ಭರವಸೆ ಮತ್ತು ಧೈರ್ಯ ಬತ್ತಿ ಹೋಗುವುದೋ, ಆಗಷ್ಟೇ ಈ ಮಹಾ ಆಧ್ಯಾತ್ಮಿಕದಲ್ಲಿ ಅಲ್ಲೋಲಕಲ್ಲೋಲವಾಗುವುದು. ಆಂತರಿಕ ಬ್ರಹ್ಮಜ್ಯೋತಿಯಲ್ಲಿ ಸ್ಫೂರ್ತಿ ಮಿನುಗುವುದು.  ಸುಖದಲ್ಲಿ ಹುಟ್ಟಿ, ಹಂಸತೂಲಿಕಾತಲ್ಪದ ಮೇಲೆ ಮಲಗಿ, ಒಂದಿಂಚು ಕಣ್ಣಿರನ್ನೂ ಸುರಿಸದೇ ಯಾರಿಗೂ ಮಹೋನ್ನೌತ್ಯ ದೊರೆತಿಲ್ಲ. ತಮ್ಮಲ್ಲಿ ಅಂತರ್ಗತವಾಗಿರುವ ಬ್ರಹ್ಮನನ್ನು ಪ್ರಕಾಶಿಸಿಕೊಳ್ಳುವಲ್ಲಿ ಯಾರಿಗಾದರೂ ಅಸಕ್ತಿಯಿದೆಯೇ!! ಎಂದಾದರೂ ಪ್ರಯತ್ನಿಸುರುವಿರೇ???

ಹೃದಯಕ್ಕೆ ಮತ್ತು ಮೆದುಳಿಗೆ ಸಂಘರ್ಷಣೆಯಾದಾಗ, ಯಾವಾಗಲೂ ನಿಮ್ಮ ಹೃದಯವನ್ನೇ ಅನುಸರಿಸಿ. ಏಕೆಂದರೆ  ಮೆದುಳಿಗೆ ಇರುವುದು ಬುದ್ಧಿ ಒಂದೇ ಅವಸ್ಥೆ ಅಂದರೆ ಯುಕ್ತಿ ಅಥವಾ ವಿಚಾರ,  ಈ ಎಲ್ಲೆಯಲ್ಲಿ ಮಾತ್ರವೇ ಬುದ್ಧಿ ತನ್ನ ಕೆಲಸ ಮಾಡಬಲ್ಲದು ಎಂದಿಗೂ ಅತಿಕ್ರಮಿಸಲಾರದು, ಆದರೆ  ಹೃದಯವಾದರೂ  ಬುದ್ಧಿ ಎಂದಿಗೂ ತಲುಪಲಾರದ ಉನ್ನತ ಮಟ್ಟಕ್ಕೆ ಒಬ್ಬನನ್ನು ತೆಗೆದುಕೊಂಡು ಹೋಗಬಲ್ಲದು. ಹೃದಯ ಬುದ್ಧಿಗೆ ಅತೀತವಾಗಿ ಸ್ಫೂರ್ತಿಯನ್ನು ಹೊಂದಬಲ್ಲದು.   ಘರ್ಷಣೆಯ ಹಾದಿಯಲ್ಲಿ  ಹೃದಯವಂತರಿಗೆ  ಬೆಣ್ಣೆ ಸಿಕ್ಕುವುದು. ಬೌದ್ಧಿಕರಿಗೆ ಮಜ್ಜಿಗೆ ಮಾತ್ರವೆ ಉಳಿಯುವುದು.

ಜೀವನದಲ್ಲಿ ಯಶಸ್ವಿಯಾದ ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ಅವನ ಪ್ರಾಮಾಣಿಕತೆ ಮತ್ತು ನಿರ್ವ್ಯಾಜ್ಯತೆ ಇದೆ. ಇದೇ ಅವನ ಅನುಪಮ ಯಶಸ್ಸಿಗೆ ಕಾರಣ. ಅವನು ಸಂಪೂರ್ಣ ನಿಸ್ವಾರ್ಥಿಯಲ್ಲದೆ ಇರಬಹುದು ಆದರೆ ಆ ಕಡೆಗೆ ಅವನು ಪ್ರವೃತ್ತಿಯುಳ್ಳವನಾಗಿರುತ್ತಾನೆ.  ಆದರೆ ಸಂಪೂರ್ಣ ನಿಸ್ವಾರ್ಥಿಯಾಗಿದ್ದರೆ  ಯೇಸು ಕ್ರಿಸ್ತ ಬುದ್ಧನಷ್ಟೇ ಜಯವನ್ನು ಗಳಿಸುತ್ತಿದ್ದನು.

ಎಷ್ಟರಮಟ್ಟಿಗೆ ನಿಸ್ವಾರ್ಥಪರತೆಯಿಂದಿರುವುದೋ ಅಷ್ಟೇ ಯಶಸ್ಸು ಹೊಂದುವುದನ್ನು ನಾವು ಎಲ್ಲಾ ಕಡೆಗಳಲ್ಲಿಯೂ ನೋಡುವೆವು.

“ವ್ಯಕ್ತಿತ್ವ ನಿರ್ಮಾಣ” ಮತ್ತೊಂದು ಪುಸ್ತಕ.

ವ್ಯಕ್ತಿತ್ವ ಎಂದರೇನು?

            ಕೇಂಬ್ರಿಜ್‌ ಇಂಗ್ಲೀಷ್‌ ನಿಘಂಟಿನ ಪ್ರಕಾರ ʼ ನೀವು ಎಂತಹ ವ್ಯಕ್ತಿಯಾಗಿರುವಿರೊ ಅದು ನಿಮ್ಮ ವ್ಯಕ್ತಿತ್ವʼ. ನಿಮ್ಮ ವರ್ತನೆ ,ಭಾವನೆ, ನಡೆ ನುಡಿ ಮತ್ತು ಚಿಂತನೆಗಳು ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ʼ ವ್ಯಕ್ತಿಯ ಪೂರ್ಣ ಸ್ವಭಾವ ಚಾರಿತ್ರ್ಯ ಅವನ ವ್ಯಕ್ತಿತ್ವ.

ವ್ಯಕ್ತಿಯ ಬಾಹ್ಯ ನೋಟ, ಹಾವಭಾವ, ಅವನ ಮಾತುಗಾರಿಕೆಗಳು ಅವನ ವ್ಯಕ್ತಿತ್ವದ ಹೊರಪದರವಷ್ಟೇ. ನಿಜವಾದ ಅರ್ಥದಲ್ಲಿ ವ್ಯಕ್ತಿತ್ವವೆಂಬುದು ಅವನ ಆಂತರಿಕಪದರಗಳಿಗೆ ಸಂಬಂಧಿಸಿರುತ್ತದೆ. ಒಬ್ಬ ವ್ಯಕ್ತಿಯ ವರ್ತನೆ ಅವನ ಚಿಂತನಾಭಾವ. ಯಾವುದೇ ಪರಿಸ್ಥಿತಿಯಲ್ಲಿ ತನ್ನನ್ನು ಹೇಗೆ ಬಿಂಬಿಸಿಕೊಳ್ಳುತ್ತಾನೆ ಎಂಬುದು ಅವನ ಮಾನಸಿಕ ಸ್ಥಿತಿಯನ್ನು ಅವಲಂಭಿಸಿರುತ್ತದೆ. ಆದ್ದರಿಂದ ಅವನ ಮಾನಸಿಕ ಸ್ಥಿತಿ ಮತ್ತು ಅದರ ಕ್ರಿಯೆಗಳನ್ನು ಸ್ಪಷ್ಟವಾಗಿ ಅರಿಯುವ ಮೂಲಕ ಅವನ ವ್ಯಕ್ತಿತ್ವವನ್ನು ನಾವು ತಿಳಿಯಬಹುದು.

 

ʼನಮ್ಮ ಮನಸ್ಸನ್ನು ತಿಳಿಯಲೇ ಬೇಕಾದ ಅವಶ್ಯಕತೆʼ

ನಾವು ಏನೇನೋ ಮಾಡಬೇಕೆಂದು  ಆಸೆ ಪಡುತ್ತೇವೆ. ದುಶ್ಚಟಗಳನ್ನು ತೊರೆದು  ಒಳ್ಳೆಯ ಅಭ್ಯಾಸಗಳನ್ನೇ ರೂಢಿಸಿಕೊಳ್ಳಬೇಕೆಂದು ಸಂಕಲ್ಪ ಸಹ ಮಾಡುತ್ತೇವೆ. ಏಕಾಗ್ರತೆಯಿಂದ ಏನಾದರೂ ಮಾಡಬೇಕೆಂದು ಕುಳಿತಾಗ ಮನಸ್ಸು ಕೇಳುವುದಿಲ್ಲ ಅದು ಮುಷ್ಕರ ಹೂಡಿಬಿಡುತ್ತದೆ. ಆಗ ನಮ್ಮ ಸಂಕಲ್ಪ ಬುಡಮೇಲಾಗುತ್ತದೆ.  ಪುಸ್ತಕ ಓದಬೇಕೆಂದು ಕುಳಿತಿರುತ್ತೇವೆ, ಪುಸ್ತಕವು ತೆರೆದಿರುತ್ತದೆ ಕಣ್ಣುಗಳು ಪುಸ್ತಕದ ಮೇಲೆಯೇ ಇರುತ್ತವೆ, ಆದರೆ ಮನಸ್ಸು ಮಾತ್ರ ಬೇರೆಲ್ಲೋ ಅಲೆಯುತ್ತಿರುತ್ತದೆ. ಅನಗತ್ಯ ವಿಷಯಗಳಲ್ಲಿ ತಿರುಗುತ್ತಿರುತ್ತದೆ. ಧ್ಯಾನ ಅಥವಾ ಪ್ರಾರ್ಥನೆ ಮಾಡುವಾಗಲೂ ಇದೇ ಸ್ಥಿತಿ.

ಸ್ವಾಮಿ ವಿವೇಕಾನಂದರು ಹೇಳುತ್ತಾರೆ” ನಾವು ಸ್ವತಂತ್ರರೇ ಆದರೆ ನಮ್ಮ ಮನಸ್ಸನ್ನು ಕ್ಷಣಕಾಲ ನಿಗ್ರಹಿಸಲಾರೆವು ಅದನ್ನು ಆಳಲಾರೆವು. ಒಂದೇ ವಿಷಯದ ಮೇಲೆ ಅದನ್ನು ಕೇಂದ್ರೀಕರಿಸಿ ಏಕಾಗೃತಗೊಳಿಸಲಾರೆವು- ಆದರೂ ನಾವು ಸ್ವ ತಂತ್ರರು ಎಂದುಕೊಳ್ಳುತ್ತೇವೆ! ಯೋಚಿಸಿ ನೋಡಿ!”

ಭಗವದ್ಗೀತೆಯ ಪ್ರಕಾರ ಅಪಕ್ವ ಮನಸ್ಸು ನಮ್ಮ ಶತ್ರುವಿನಂತೆಯೂ ಪಳಗಿದ ಮನಸ್ಸು ನಮ್ಮ ಮಿತ್ರನಂತೆಯೂ ವರ್ತಿಸುತ್ತದೆ. ಆದ್ದರಿಂದ ನಮ್ಮ ಮನಸ್ಸಿನ ಸ್ವರೂಪವನ್ನು ತಿಳಿದುಕೊಳ್ಳುವುದು ಅವಶ್ಯಕ.

ಸಂಕಲ್ಪ-ವಿಕಲ್ಪ

ನೋಡಿದ  ಅಥವಾ ಕೇಳಿದ ವಸ್ತು ಅಥವಾ ವ್ಯಕ್ತಿ ಮುಂತಾದವುಗಳ ಕುರಿತು ಮನಸ್ಸು ಆಲೋಚಿಸುತ್ತಿರುತ್ತದೆ. ಈ ಕಲ್ಪನೆಗಳು ಕೆಲವೊಮ್ಮೆ ಯತಾರ್ಥ(ಸಂಕಲ್ಪ)ವೂ ಕೆಲವೊಮ್ಮೆ ವಿಕೃತ(ವಿಕಲ್ಪ)ವೂ ಆಗಿರುತ್ತದೆ. ಕೆಲವೊಮ್ಮೆ ಹಗಲುಗನಸುಗಳನ್ನು ಕಾಣುತ್ತಿರುತ್ತದೆ. ನೆನಪಿನ ಆಧಾರದ ಮೇಲೆಯೂ ಅನೇಕ ಆಲೋಚನೆಗಳು ಏಳುತ್ತವೆ. ಮನಸ್ಸಿನ ಈ ಕ್ರಿಯೆಗೆ ಸಂಸ್ಕ್ರತದಲ್ಲಿ ಮನಸ್‌ ಎನ್ನುವರು.

ಚಿತ್ತ

ಹಳೆಯ ನೆನಪುಗಳು ಮತ್ತು ಸಂಸ್ಕಾರಗಳ ಆಗರವೇ ಚಿತ್ತ. ರಾಗದ್ವೇಷ ಬಾವಗಳು ಈ ಚಿತ್ತದಲ್ಲಿ ನೆಲೆಗೊಂಡು ನಮ್ಮ ಆಲೋಚನೆಗಳ ಮೇಲೆ ಪ್ರಬಾವ ಬೀರುತ್ತವೆ.

ಉದಹರಣೆಗೆ ನಾವು ಯಾವುದಾದರೂ ಒಬ್ಬ ವ್ಯಕ್ತಿಯ ಕುರಿತು ಚಿಂತಿಸುತ್ತಿರುವಾಗ, ಅವರ ಬಗ್ಗೆ ಇರುವ ರಾಗ ದ್ವೇಷ, ಕರುಣೆ, ಭಯ, ಆತಂಕ, ಪ್ರೀತಿ, ಸಹಾನುಭೂತಿ ಇನ್ಯಾವುದೇ ಭಾವಗಳು ನಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುವವು.

 ಪ್ರೀತಿ, ಮಮತೆ, ಸುಖ, ಸಹಾನುಭೂತಿ, ಕರುಣೆ, ಉತ್ಸಾಹ ಇವುಗಳು ಉತ್ತಮ ಭಾವಗಳು.

ರಾಗ ದ್ವೇಷ, ಕೋಪ, ಅಸೂಯೆ, ದುರಹಂಕಾರ, ಭಯ, ದುಃಖ, ಚಿಂತೆ ಇವುಗಳು ನಿಷೇದಾತ್ಮಕ ಭಾವಗಳು.

ಈ ಭಾವಗಳು ವ್ಯಕ್ತಿತ್ವ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ನಾವು ಪ್ರಯತ್ನಿಸುವ ಮೂಲಕ ನಿಷೇಧಾತ್ಮಕ ಭಾವಗಳನ್ನು ನಿಗ್ರಹಿಸಿ ನಮ್ಮ ಭಾವನೆಗಳನ್ನು ಸುಸಂಸ್ಕ್ರತಗೊಳಿಸಬೇಕು.

 

ಬುದ್ದಿ

ಯಾವುದಾದರೂ ವಿಷಯದಲ್ಲಿ ನಿರ್ಣಯ ಮಾಡುವುದು ಬುದ್ಧಿಯ ಕೆಲಸ. ಇದನ್ನು ನಿರ್ಣಾಯಕ ಬುದ್ಧಿ ಅತವಾ ಇಚ್ಛೆ ಎನ್ನುತ್ತಾರೆ. ಮೊದಲು ಆಲೋಚನೆ, ನಂತರ ಭಾವ ತನ್ನ ಪ್ರಬಾವವನ್ನುಂಟುಮಾಡುತ್ತದೆ ನಂತರ ಏನು ಮಾಡಬೇಕೇಂಬುದನ್ನು ಬುದ್ಧಿ ನಿರ್ಣಯಿಸುತ್ತದೆ. ಇದಕ್ಕೆ ಅನುಗುಣವಾಗಿ ಬಾಹ್ಯದಲ್ಲಿ ಕ್ರಿಯೆಯು ನಡೆಯುತ್ತದೆ. ನಾವು ಯಾವುದಾದರೂ ಒಬ್ಬ ವ್ಯಕ್ತಿಯ ಕುರಿತು ಚಿಂತಿಸುವಾಗ  ಮನಸ್ಸು ಆಲೋಚಿಸಿ ಅವನನ್ನು ಗುರುತಿಸುತ್ತದೆ. ಕೂಡಲೇ ರಾಗ ದ್ವೇಷ ಭಾವ ಕೆಲಸ ಮಾಡಲು ಆರಂಭಿಸುತ್ತದೆ, ನಂತರ ಬುದ್ಧಿಯು ಅವನನ್ನು ಪ್ರೀತಿಯಿಂದ ಮಾತನಾಡಿಸುವಂತೆಯೋ, ಕೋಪದಿಂದ ಹೊಡೆಯುವಂತೆಯೋ, ಅಥವಾ ಭಯದಿಂದ ಓಡಿಹೋಗುವಂತೆಯೋ ನಮ್ಮನ್ನು ಪ್ರೇರೇಪಿಸುತ್ತದೆ.

ಅಹಂಕಾರ

 ನಮ್ಮ ವ್ಯಕ್ತಿತ್ವದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳ ಹಿಂದೆಯೂ ʼ ನಾನು ಮಾಡುತ್ತಿದ್ದೇನೆʼ ಎನ್ನುವ ಪ್ರಜ್ಞೆಯೇ ಅಹಂಕಾರ.  ನಾನು ತಿನ್ನುತ್ತೇನೆ, ನಾನು ಮಾತನಾಡುತ್ತೇನೆ, ನನ್ನಿಂದ ಮಾತ್ರ ಆಗುತ್ತದೆ, ನಾನು ಸುಖವಾಗಿದ್ದೇನೆ ಇತ್ಯಾದಿ. ಈ ನಮ್ಮ ಎಲ್ಲ ಕ್ರಿಯೆಗಳನ್ನು ಒಟ್ಟುಗೂಡಿಸಿದ ಒಂದು ಸಮಗ್ರತೆಯನ್ನು ನೀಡಿದ ವ್ಯಕ್ತಿಭಾವಕ್ಕೆ ಕಾರಣವಾಗಿದೆ.

ಈ ಅಹಂಕಾರವು ಸರಿಯಾಗಿ ಕೆಲಸ ಮಾಡದೇ ಇದ್ದರೆ  ವ್ಯಕ್ತಿತ್ವದ ಸಮತೋಲನದಲ್ಲಿ ಬಿರುಕು ಮೂಡುತ್ತದೆ.

ವ್ಯಕ್ತಿತ್ವ ನಿರ್ಮಾಣ

ಹೃದಯವಂತಿಕೆ, ವಿಚಾರಶಕ್ತಿ ಮತ್ತು ಕಾರ್ಯೋನ್ಮುಖತೆ ಈ ಮೂರು ವಿಚಾರಗಳಲ್ಲಿ ಒಬ್ಬ ವ್ಯಕ್ತಿಯು ಸಮನಾಗಿ ಪಕ್ವತೆಯನ್ನು ಹೊಂದಿರುವುದನ್ನು ನಾವು ನೋಡಲು ಬಯಸುತ್ತೇವೆ.  ಪ್ರಪಂಚದ ಕಷ್ಟ ದುಃಖಗಳನ್ನು ಹೃತ್ಪೂರ್ವಕವಾಗಿ ಅನುಭವಿಸುವಂತಹ ವ್ಯಕ್ತಿ, ವಸ್ತುವಿನ ಅಮತರಾಳಕ್ಕೆ ಪ್ರವೇಶಿಸಿ ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು ನಮಗೆ ಬೇಕು. ಅವನು ಎಲ್ಲಿಯೂ ನಿಲ್ಲಕೂಡದು, ಹಾಗೆಯೇ ತಾನು ಏನನ್ನು ಅನುಭವಿಸಿರುವನೋ ಮತ್ತು ತಿಳಿದುಕೊಂಡಿರುವನೋ ಅದನ್ನು ಕಾರ್ಯರೂಪಕ್ಕೆ ತರುವ ವ್ಯಕ್ತಿ ನಮಗೆ ಬೇಕು.

ನಮ್ಮ ಸುತ್ತಲೂ ಆಗುತ್ತಿರುವುದನ್ನು ನಾವು ನೋಡುತ್ತಿರುತ್ತೇವೆ. ಜಗತ್ತಿನ ಪ್ರತಿಯೊಂದು ಪರಸ್ಪರ ಪ್ರಭಾವವುಳ್ಳವುಗಳು. ‌

ನಮ್ಮ ದೇಹ ರಕ್ಷಣೆಗೆ ಮನಸ್ಸಿನ ಸ್ವಲ್ಪಭಾಗವನ್ನು ಉಪಯೋಗಿಸುವೆವು. ಉಳಿದ ಮನಸ್ಸಿನಶಕ್ತಿಯನ್ನು ಹಗಲು ರಾತ್ರಿ ಇತರರ ಮೇಲೆ ತಮ್ಮ ಪರಿಣಾಮವನ್ನು ಬೀರುವುದರಲ್ಲಿ ಉಪಯೋಗಿಸುತ್ತಿದ್ದೇವೆ. ಹೀಗೆ ನಮ್ಮ ದೇಹ   ಗುಣ  ಬುದ್ಧಿ, ಆಧ್ಯಾತ್ಮ ನಿರಂತರವಾಗಿ ಇತರರ ಮೇಲೆ ಪರಿಣಾಮ ಬೀರುತ್ತಿವೆ. ಇದರಂತೆಯೇ ನಾವು ಸಹ ಇತರರ ಪರಿಣಾಮಕ್ಕೆ ಒಳಗಾಗುತ್ತಿದ್ದೇವೆ. ಇದು ನಮ್ಮ ಸುತ್ತಲೂ ನಡೆಯುತ್ತಿರುತ್ತದೆ.

ಒಂದು ಉದಾಹರಣೆಯ ಮೂಲಕ ನೋಡುವುದಾದರೆ, ಒಬ್ಬ ನಿಮ್ಮ ಬಳಿಗೆ ಬರುವನು, ಅವನು ಬುದ್ದಿವಂತನೆಂದು ನಿಮಗೆ ಗೊತ್ತಿದೆ, ಹಾಗೆ ಅವನ ಬಾಷೆ ಸುಂದರವಾಗಿದೆ ಅವನು ನಿಮ್ಮ ಬಳಿ ಗಂಟೆಗಟ್ಟಲೆ ಮಾತನಾಡುತ್ತಾನೆ, ಆದರೆ ಅವನು ನಿಮ್ಮ ಮನಸ್ಸಿನ   ಮೇಲೆ  ಯಾವುದೇ ಪರಿಣಾಮ ಬೀರುವುದಿಲ್ಲ.

ಮತ್ತೊಬ್ಬ ಬರುತ್ತಾನೆ ನಿಮ್ಮೊಂದಿಗೆ ಮಾತನಾಡುತ್ತಾನೆ. ಅವನ ಭಾಷೆ ಅಷ್ಟು ಸುಂದವಾಗಿಲ್ಲ, ವಿಷಯದ ಜೋಡಣೆ ಸರಿಯಾಗಿಲ್ಲ, ವ್ಯಾಕರಣ ಸ್ಪಷ್ಟವಾಗಿಲ್ಲ, ಅಲ್ಪ ಸ್ವಲ್ಪವೇ ಮಾತನಾಡುತ್ತಾನೆ. ಆದರೂ ಅವನು ನಿಮ್ಮ ಮನಸ್ಸಿನ ಮೇಲೆ ಅದ್ಭುತ  ಪರಿಣಾಮ ಬೀರುತ್ತಾನೆ.  ನಾವು ಹೀಗೆ ತುಂಬಾ ಗಮನಿಸಿರುತ್ತೇವೆ.  ಆದ ಕಾರಣ ಇಲ್ಲಿ ಕೇವಲ ಮಾತು ಮಾತ್ರವೇ ಪರಿಣಾಮಕಾರಿಯಲ್ಲ ಎಂಬುದು ಸಾಭೀತಾಯಿತು.

ಮತ್ತೊಬ್ಬರ ಮೇಲೆ ಪರಿಣಾಮ ಬೀರುವುದರಲ್ಲಿ ಭಾಷೆ ಮತ್ತು ಆಲೋಚನೆ ಕೇವಲ ಮೂರನೇ ಒಂದು ಭಾಗ ಮಾತ್ರ. ಅದರ ಹಿಂದೆ ಇರುವ ವ್ಯಕ್ತಿತ್ವ ಮೂರನೇ ಎರಡು ಭಾಗದ್ದು. ಆದ್ದರಿಂದ ವ್ಯಕ್ತಿತ್ವದ ಆಕರ್ಷಣೆಯು  ನಮ್ಮನ್ನು ಮುಗ್ಧರನ್ನಾಗಿಸುತ್ತದೆ.

 

ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾದ ಮುಖ್ಯ ಗುಣಗಳು

ಆತ್ಮವಿಶ್ವಾಸ

ಆಂತರಿಕ ದಿವ್ಯತೆಯಲ್ಲಿರುವ ಶ್ರದ್ಧೆಯೇ  ವ್ಯಕ್ತಿತ್ವ ನಿರ್ಮಾಣದ ಮೂಲವೆಂದು ಸ್ವಾಮಿ ವಿವೇಕಾನಂದರು ತಿಳಿಸುತ್ತಾರೆ. ಭಗವತ್‌ ಶ್ರದ್ದೆಯೂ ಸಹ ಆತ್ಮಶ್ರದ್ದೆಯ ನಂತರ ಬರುವುದು. ತಾನು ದೇಹ ಮನಸ್ಸುಗಳಲ್ಲ, ತಾನು ಚೈತನ್ಯ ಸ್ವರೂಪ ಎಂದು ನಂಬಿದರೆ, ವ್ಯಕ್ತಿಯು ಉತ್ತಮ ಚಾರಿತ್ರ್ಯವನ್ನು ಹೊಂದಿ ಅತ್ಯುತ್ತಮನಾಗುತ್ತಾನೆ.

ಸದ್ವಿಚಾರ

“ಒಳ್ಳೆಯದನ್ನು ಮಾಡುತ್ತಾ ಹೋಗಿ, ನಿರಂತರ ಒಳ್ಳೆಯ ಭಾವನೆಗಳನ್ನು ಚಿಂತಿಸಿ…. ಕೆಟ್ಟ ಸಂಸ್ಕಾರಗಳನ್ನು ನಾಶ ಮಾಡಲು ಇದೊಂದೇ ಮಾರ್ಗ…..ಚಾರಿತ್ರ್ಯವೆಂದರೆ ಪುನರಾವರ್ತಿತ ಅಭ್ಯಾಸಗಳು. ಪುನರಾವರ್ತಿತ ಅಭ್ಯಾಸಗಳು ಮಾತ್ರವೇ  ಚಾರಿತ್ರ್ಯವನ್ನು ಬದಲಾಯಿಸಬಲ್ಲವು.

ಸೋಲು ತಪ್ಪುಗಳನ್ನು ಲೆಕ್ಕಿಸದಿರುವುದು

ಸಾವಿರ ಭಾರಿ ಸೋತರೂ ಆದರ್ಶವನ್ನು ಬಿಡದೇ ಮುನ್ನಡೆಯಬೇಕು. ತಪ್ಪಾಗುವುದು ಸಹಜ ಅದರ ಮೂಲಕ ನಾವು ಪಾಠ ಕಲಿಯಬೇಕು.

ಆತ್ಮನಿರ್ಭರತೆ

ಮಾನವ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳಬೇಕು. ನಾವೇನಾಗಬೆಕೆಂದು ಬಯಸಿರುವೆವೋ ಅದರಂತಾಗುವ ಶಕ್ತಿ ನಮ್ಮಲ್ಲಿಯೇ ಇದೆ.

ತ್ಯಾಗ ಮತ್ತು ಸೇವೆ

ಚಾರಿತ್ರ್ಯ ನಿರ್ಮಾಣದಲ್ಲಿ ನಿಃಸ್ವಾರ್ಥ ಸೇವೆ ಬಹುಮುಖ್ಯ. ಸ್ವಾರ್ಥತ್ಯಾಗ ಮತ್ತು ಫಲಾಪೇಕ್ಷೆಯಿಲ್ಲದೆ ಸೇವಾಕಾರ್ಯ ಮಾಡುವುದನ್ನು  ರಾಷ್ಟ್ರೀಯ ಆದರ್ಶಗಳೆಂದು ಸ್ವಾಮಿ ವಿವೇಕಾನಂದರು ಪರಿಗಣಿಸುತ್ತಾರೆ. ಮತ್ತು “ ದೇಶವನ್ನು ಈ ಎರಡು ಆದರ್ಶಗಳಲ್ಲಿ ತೊಡಗಿಸಿ, ಉಳಿದೆದಲ್ಲವೂ ಸರಿಹೋಗುತ್ತವೆ “ ಎಂದು ಹೇಳಿದ್ದಾರೆ.

 

ಈ ಪುಸ್ತಕಗಳು ನನ್ನ ಬದುಕಿನಲ್ಲಿ, ವ್ಯಕ್ತಿತ್ವ ನಿರ್ಮಾಣಕ್ಕೆ  ಹೆಚ್ಚು ಕೊಡುಗೆಯನ್ನು ನೀಡಿದವುಗಳಾಗಿವೆ .ಸುಮಾರು ಹದಿನೈದು ವರ್ಷಗಳಿಂದ ಮೇಲ್ಪಟ್ಟು ಈ ಪುಸ್ತಕಗಳನ್ನು ಓದುತ್ತಿದ್ದೇನೆ. ಈ ಕಾರಣದಿಂದಾಗಿಯೇ  ಬದುಕನ್ನು ಹೇಗೇಗೋ ಬದುಕುವುದಲ್ಲ, ಹೀಗೆಯೇ  ಬದುಕಬೇಕು ಎಂದು  ಸೈದ್ಧಾಂತಿಕ ಭಾವನೆಗಳನ್ನು ತುಂಬಿಕೊಂಡ ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವಾಗುತ್ತಿದೆ ಎಂದು ಬರೆಯಲು ಹೆಮ್ಮೆಯೆನಿಸುತ್ತಿದೆ.

ಈ ಪುಸ್ತಕವು ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿಯ ಎಂಟು ಸಂಪುಟಗಳಲ್ಲಿ ಹರಡಿಕೊಂಡಿರುವ, ರಾಷ್ಟ್ರ ಜಾಗೃತಿ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಸಂಬಂಧಿಸಿದ ಬಾವನೆಗಳ ಸಂಗ್ರಹವಾಗಿವೆ. ಈ ಕಿರುಹೊತ್ತಿಗೆಯ ಅಧ್ಯಯನದಿಂದ ನನಗೆ ವೈಯಕ್ತಿಕವಾಗಿ , ಸ್ವಾಮಿವಿವೇಕಾನಂದರ ಕೃತಿಗಳ ಆಳವಾದ ಅಧ್ಯಯನ ಮಾಡಲು ತೀವ್ರಾಕಾಂಕ್ಷೆಯನ್ನು ಜಾಗೃತಗೊಳಿಸಿದೆ.

 


ಧನ್ಯವಾದಗಳು……..🌷🌷🌷🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......