ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

"ಸತ್ಯ ಮತ್ತು ಪ್ರಾಮಾಣಿಕತೆ – ಜೀವನದ ನಿಜವಾದ ಬಂಡವಾಳ” ಹೌದೋ ?? ಅಲ್ಲವೋ??

 


ಸತ್ಯ ಮತ್ತು ಪ್ರಾಮಾಣಿಕತೆಜೀವನದ ನಿಜವಾದ ಬಂಡವಾಳ.!!!

ಮಾನವನ ಜೀವನದಲ್ಲಿ ಹಣ, ಸಂಪತ್ತು, ಅಧಿಕಾರ, ಖ್ಯಾತಿ, ಪ್ರಶಂಸೆ  ಎಲ್ಲವೂ  ಇರಬೇಕೆಂದು  ಬಯಸುತ್ತಾನೆ ಮತ್ತು ತನ್ನೊಂದಿಗೆ ಉಳಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತಾನೆ. ಆದರೆ ಈ ಎಲ್ಲಕ್ಕಿಂತಲೂ ಮಿಗಿಲಾಗಿ ಜೀವನದಲ್ಲಿ   ಶಾಶ್ವತವಾಗಿ ಉಳಿಯುವುದು ಏನೆಂದರೆ, ಸತ್ಕರ್ಮ,  ನಾವು ಮಾಡುವ ದಾನ ಧರ್ಮ ಮತ್ತು ನಾವು ಜೀವನದಲ್ಲಿ ನಿರಂತರವಾಗಿ ಪಾಲಿಸುವ  ಸತ್ಯ ಮತ್ತು ಪ್ರಾಮಾಣಿಕತೆ. ಇವು ಕೇವಲ ನೈತಿಕ ಮೌಲ್ಯಗಳು ಮಾತ್ರವಲ್ಲ, ನಮ್ಮ ವ್ಯಕ್ತಿತ್ವದ ಮೂಲಾಧಾರ. ಒಮ್ಮೆ ಕಳೆದುಕೊಂಡ ವಿಶ್ವಾಸವನ್ನು ಮತ್ತೆ ಪಡೆಯುವುದು ಅತ್ಯಂತ ಕಷ್ಟಕರ. ಆದ್ದರಿಂದ ನಂಬಿಕೆಯೇ ನಿಜವಾದ ಬಂಡವಾಳ; ನಂಬಿಕೆ ನಿರ್ಮಿಸಲು ಬೇಕಾದ ಎರಡು ಮುಖ್ಯ ಆಧಾರ ಸ್ಥಂಭಗಳುಸತ್ಯ ಮತ್ತು ಪ್ರಾಮಾಣಿಕತೆ.

ಸತ್ಯ ಎಂದರೇನು?

ಸತ್ಯವೆಂದರೆ ನಿಜವಾದದ್ದು, ಯಥಾರ್ಥವಾದದ್ದು, ವಾಸ್ತವಕ್ಕೆ ಸರಿಹೊಂದಿದ್ದು.
ಇದರ ಅರ್ಥ ಕೇವಲ ಸುಳ್ಳು ಹೇಳದಿರುವುದು ಮಾತ್ರವಲ್ಲ, ಮನಸ್ಸಿನಲ್ಲಿ, ಮಾತಿನಲ್ಲಿ, ಹಾಗೂ ಕೃತ್ಯದಲ್ಲಿ ಒಂದೇ ರೀತಿಯ ಶುದ್ಧತೆ ಇಟ್ಟುಕೊಳ್ಳುವುದು.

ಸತ್ಯ- ನೈತಿಕ ಶಕ್ತಿಯ ಮೂಲ.

ಸತ್ಯವನ್ನು ಅರ್ಥಮಾಡಿಕೊಳ್ಳುವ ಮೂರು ಹಂತಗಳು:

ವಾಸ್ತವ ಸತ್ಯ (Factual Truth):- ನಮ್ಮ  ಪಂಚೇಂದ್ರಿಯಗಳ ಅನುಭವದಿಂದ  ನಮಗೆ ತಿಳಿಯುವ ನಿಜವಾದ ವಿಷಯವನ್ನು ವಾಸ್ತವ ಸತ್ಯ ಎನ್ನಲಾಗುತ್ತದೆ.

ಉದಾ: ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ. ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ.

ನೈತಿಕ ಸತ್ಯ (Moral Truth):- ನಮ್ಮ ನಡೆ-ನುಡಿಯಲ್ಲಿ ಪ್ರಾಮಾಣಿಕತೆ, ನ್ಯಾಯ, ಮತ್ತು ಹಿತಚಿಂತನೆಯ ಪಾಲನೆ ಮಾಡುವುದು.

ಉದಾ: ವಾಗ್ದಾನ ಮಾಡಿದ್ದನ್ನು ನುಡಿದಂತೆ  ನಿಭಾಯಿಸುವುದು.

ಆಧ್ಯಾತ್ಮಿಕ ಸತ್ಯ (Spiritual Truth):- ಮಾನವನ ಅಸ್ತಿತ್ವ, ಜೀವನದ ಗುರಿ, ಆತ್ಮ ಮತ್ತು ಬ್ರಹ್ಮಾಂಡದ ನಿಜಸ್ವರೂಪ.

ಉದಾ: "ಆತ್ಮ ಅಮರ" ಎನ್ನುವುದು ಆಧ್ಯಾತ್ಮಿಕ ಸತ್ಯ.

ಭಾರತೀಯ ಸಂಸ್ಕೃತಿಯಲ್ಲಿ ಸತ್ಯದ ಸ್ಥಾನ

  • "ಸತ್ಯಮೇವ ಜಯತೇ" – ಸತ್ಯವೇ ಜಯಿಸುತ್ತದೆ ಎಂಬುದು ನಮ್ಮ ರಾಷ್ಟ್ರ ಲಾಂಛನದಲ್ಲಿರುವ ವಾಕ್ಯ.
  • ಧರ್ಮಶಾಸ್ತ್ರಗಳಲ್ಲಿ ಸತ್ಯವನ್ನು ಧರ್ಮದ ಆಧಾರವೆಂದು ಹೇಳಲಾಗಿದೆ.
  • ಮಹಾಭಾರತದ ಪಾಂಡವರಲ್ಲಿ ಹಿರಿಯವನಾದ  ಯುಧಿಷ್ಠಿರನು ಧರ್ಮದ ಆಚರಣೆಗೆ ಹೆಸರಾಗಿ ಧರ್ಮರಾಯನೆಂದೆ ಖ್ಯಾತಿ ಪಡೆದನು.
  • ಸೂರ್ಯವಂಶದ ರಾಜ ಹರಿಶ್ಚಂದ್ರ ನು ತನ್ನ ಜೀವಿತಾವಧಿಯಲ್ಲಿ ಎಲ್ಲವನ್ನು ಕಳೆದುಕೊಂಡು ನಿರ್ಗತಿಕನಾದರೂ ಸತ್ಯವನ್ನು ಬಿಡಲಿಲ್ಲ, ಕೊನೆಗೆ ಸತ್ಯ ಹರಿಶ್ಚಂದ್ರನೆಂದೇ ಹೆಸರಾದನು.

ಸತ್ಯ ನುಡಿಯುವುದರಿಂದ ಉಂಟಾಗುವ ಸ್ವಪ್ರಯೋಜನಗಳು.!!

ನಿತ್ಯವೂ ಸತ್ಯ ನುಡಿಯುವ ವ್ರತ ಪಾಲಿಸಿದರೆ, ಮನಸ್ಸು ಶಾಂತಿಯನ್ನು ಹೊಂದುತ್ತದೆ. ಯಾವುದೇ  ಸುಳ್ಳು ಹೇಳುವ ಭಯ ಮತ್ತು  ಒತ್ತಡ ಇಲ್ಲದೆ.

ಸತ್ಯವನ್ನು ನುಡಿಯುವುದರಿಂದ   ಇತರರು ವಿಶ್ವಾಸದಿಂದ ನಮ್ಮ ಮಾತು ನಂಬುತ್ತಾರೆ.

ಸತ್ಯವನ್ನೇ ಹೇಳುವುದರಿಂದ ಸಮಾಜದಲ್ಲಿ ನಮ್ಮ  ಮಾನ-ಗೌರವ ಹೆಚ್ಚುತ್ತದೆ.

ಸದಾ ಸತ್ಯವನ್ನೇ ಹೇಳುವುದರಿಂದ ನಿರ್ಧಾರ ತೆಗೆದುಕೊಳ್ಳುವಲ್ಲಿ ದೃಢತೆ ಬರುತ್ತದೆ.

 

ಪ್ರಾಮಾಣಿಕತೆ ಎಂದರೇನು?

ಪ್ರಾಮಾಣಿಕತೆಬದುಕಿನ ದಾರಿ

ಪ್ರಾಮಾಣಿಕತೆ ಎಂದರೆ ತನ್ನ  ಸ್ವಾರ್ಥಕ್ಕಾಗಿ ಸತ್ಯ, ನ್ಯಾಯ, ಮತ್ತು ನೈತಿಕ ಮೌಲ್ಯಗಳನ್ನು  ಬಿಟ್ಟು ಕೊಡದೆ, ನ್ಯಾಯಸಮ್ಮತವಾಗಿ ನಿಷ್ಠೆಯಿಂದ ನಡೆದುಕೊಳ್ಳುವ ಗುಣವನ್ನೇ ಪ್ರಾಮಾಣಿಕತೆ ಎನ್ನುವರು.
ಅರ್ಥಾತ್ — ಮಾತು, ನಡೆ, ಮತ್ತು ಮನಸ್ಸಿನಲ್ಲಿ ಒಂದೇ ರೀತಿಯ ಶುದ್ಧತೆ ಇರುವುದು.
ಪ್ರಾಮಾಣಿಕ ವ್ಯಕ್ತಿ ಸ್ವಾರ್ಥಕ್ಕಾಗಿ ಸುಳ್ಳು ಹೇಳುವುದಿಲ್ಲ, ವಂಚನೆ ಮಾಡುವುದಿಲ್ಲ, ಹಾಗೂ ತನ್ನ ನಡೆ ನುಡಿಗೆ ಜವಾಬ್ದಾರಿ ಹೊರುತ್ತಾನೆ.

ಬದುಕಿನ ದಾರಿಯಲ್ಲಿ ಪ್ರಾಮಾಣಿಕತೆಯ ಪ್ರಯೋಜನಗಳು:

ವಿಶ್ವಾಸ ನಿರ್ಮಾಣ:- ಪ್ರಾಮಾಣಿಕ ವ್ಯಕ್ತಿಯ ಮೇಲೆ ಇತರರು ಸುಲಭವಾಗಿ ನಂಬಿಕೆ ಇಡುತ್ತಾರೆ.  ಕುಟುಂಬ, ಸ್ನೇಹ, ಉದ್ಯೋಗ  ಎಲ್ಲ ಸಂಬಂಧಗಳ ಬಲವಾದ ಆಧಾರವೇ ವಿಶ್ವಾಸ.

ಮನಃಶಾಂತಿ:- ಸುಳ್ಳು ಹೇಳಿದ ನಂತರದ ಭಯ ಅಥವಾ ಪಾಪಭಾವ ಇಲ್ಲದಿರುವುದರಿಂದ ಮನಸ್ಸು ಹಗುರಾಗುತ್ತದೆ.

ಗೌರವ ಮತ್ತು ವ್ಯಕ್ತಿತ್ವದ ಔನ್ನತ್ಯ:- ಸಮಾಜದಲ್ಲಿ ಪ್ರಾಮಾಣಿಕವಾಗಿ ನಡೆಯುವ  ವ್ಯಕ್ತಿಗೆ ಗೌರವ ಹೆಚ್ಚಾಗುತ್ತದೆ, ಮತ್ತು ಅವನ  ಹೆಸರು ಒಳ್ಳೆಯ ಕೆಲಸಗಳನ್ನು ಮಾಡುವವರಿಗೆ ಉದಾಹರಣೆಯಾಗಿ ಯಾವಾಗಲೂ ನೆನಪಾಗುತ್ತಾನೆ  ಮತ್ತು ಸಮಾಜದಲ್ಲಿ ಅವನ ವ್ಯಕ್ತಿತ್ವ ಎತ್ತರಕ್ಕೇರುತ್ತದೆ.

ದೀರ್ಘಕಾಲದ ಯಶಸ್ಸು:- ತಾತ್ಕಾಲಿಕ ಲಾಭಕ್ಕಾಗಿ ಸುಳ್ಳು ಮಾರ್ಗ ಹಿಡಿದವರು ಶೀಘ್ರ ಕುಸಿಯುತ್ತಾರೆ, ಪ್ರಾಮಾಣಿಕರು ನಿಧಾನವಾಗಿಯೇ  ಆದರೂ ಕಾಲಾಂತರದಲ್ಲಿ ಸ್ಥಿರವಾಗಿ ಮುಂದುವರಿಯುತ್ತಾರೆ.

ನೈತಿಕ ನಾಯಕತ್ವ:- ಪ್ರಾಮಾಣಿಕ ವ್ಯಕ್ತಿ ಸಹಜವಾಗಿಯೇ ಇತರರಿಗೆ ಮಾದರಿಯಾಗುತ್ತಾನೆ.

ತಂಡವನ್ನು, ಸಂಸ್ಥೆಯನ್ನು, ಅಥವಾ ಸಮುದಾಯವನ್ನು ನೈತಿಕ ಮಾರ್ಗದಲ್ಲಿ ಮುನ್ನಡೆಸಲು ಸಹಾಯ ಮಾಡುತ್ತಾನೆ.

ಸಂಬಂಧಗಳ ಗಾಢತೆ:- ಪ್ರಾಮಾಣಿಕತೆ ಇರುವೆಡೆ  ಪರಸ್ಪರರಲ್ಲಿ ಗೌರವ ಮತ್ತು ಬಾಂಧವ್ಯ ಯಾವಾಗಲೂ ಗಟ್ಟಿಯಾಗಿರುತ್ತದೆ.

ಪ್ರಾಮಾಣಿಕ ವ್ಯಕ್ತಿಯು ಯಾವಾಗಲೂ ತಾನು ಮಾಡುವ ಕೆಲಸಕ್ಕೆ ಜವಾಬ್ದಾರಿ ವಹಿಸುತ್ತಾನೆ. ಮತ್ತು ತನ್ನ ಸ್ವಾರ್ಥ ಸಾಧನೆಯ ಲಾಭಕ್ಕಾಗಿ ತಪ್ಪು ಮಾರ್ಗಕ್ಕೆ ಹೋಗುವುದಿಲ್ಲ.  ತನ್ನ ಮಾತು, ಕೆಲಸ, ನಡೆಗಳಲ್ಲಿ ಒಂದೇ ರೀತಿಯ ಶುದ್ಧತೆ ಇಟ್ಟುಕೊಳ್ಳುತ್ತಾನೆ

ಉದ್ಯೋಗ ಕ್ಷೇತ್ರದಲ್ಲಿಯೂ ಪ್ರಾಮಾಣಿಕತೆಗೆ ಅಪಾರ ಬೆಲೆ ಇದೆ. ಉದ್ಯೋಗದಾತರು, ಸಹೋದ್ಯೋಗಿಗಳು, ಗ್ರಾಹಕರು  ಎಲ್ಲರಲ್ಲೂ ವಿಶ್ವಾಸ ಗಳಿಸಲು ಪ್ರಾಮಾಣಿಕತೆ ಮುಖ್ಯ.

 

ಸತ್ಯ ಮತ್ತು ಪ್ರಾಮಾಣಿಕತೆಯ ಪ್ರಯೋಜನಗಳು.

ದೀರ್ಘಕಾಲಿಕ ವಿಶ್ವಾಸ:ಒಮ್ಮೆ ವಿಶ್ವಾಸ ಗಳಿಸಿದರೆ ಅದು ಸಂಬಂಧಗಳನ್ನು ಗಟ್ಟಿ ಮಾಡುತ್ತದೆ.

ಮನಃಶಾಂತಿ:ಸುಳ್ಳು ಹೇಳದಿರುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ.

ಸಮಾಜದಲ್ಲಿ ಗೌರವ:ಪ್ರಾಮಾಣಿಕ ವ್ಯಕ್ತಿಗೆ ಎಲ್ಲರೂ ಗೌರವ ಕೊಡುತ್ತಾರೆ.

ವೃತ್ತಿಜೀವನದ ಯಶಸ್ಸು:ನೈತಿಕತೆ ಹೊಂದಿರುವವರಲ್ಲಿ ನಾಯಕತ್ವದ ಗುಣ ಹೆಚ್ಚಿರುತ್ತದೆ.

 

 ಸತ್ಯ ಮತ್ತು ಪ್ರಾಮಾಣಿಕತೆಯೊಂದಿಗೆ ಪ್ರಸ್ತುತ ಕಾಲದ ಸವಾಲುಗಳು.!!

ಈ ಆಧುನಿಕ ಡಿಜಿಟಲ್‌  ಕಾಲದಲ್ಲಿ, ತ್ವರಿತ ಲಾಭ, ಸ್ಪರ್ಧಾತ್ಮಕ ಮನೋಭಾವ, ಮತ್ತು ಸಾಮಾಜಿಕ ಒತ್ತಡಗಳು ಸತ್ಯ-ಪ್ರಾಮಾಣಿಕತೆಯ ಪರೀಕ್ಷೆ ಮಾಡುತ್ತವೆ.

ಸುಳ್ಳು ಸುದ್ದಿಗಳ (Fake news)ನ್ನು ಹರಡುವುದು.

ಆರ್ಥಿಕತೆಯ ಲಾಭಕ್ಕಾಗಿ ನೈತಿಕತೆ ಬಿಟ್ಟು ಹೋಗುವುದು.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಪ್ರದರ್ಶಿಸುವುದು.

ಎಲ್ಲವನ್ನು ಎದುರಿಸಲು ಆತ್ಮಶಕ್ತಿಯ ಹಾಗೂ ಸ್ಪಷ್ಟ ನೈತಿಕ ಮೌಲ್ಯಗಳ ಅರಿವು ಅಗತ್ಯ.

 

ಸತ್ಯ ಮತ್ತು ಪ್ರಾಮಾಣಿಕತೆಯನ್ನು ಉಳಿಸುವ ವಿಧಾನಗಳು!!

ಸಣ್ಣ ವಿಷಯದಲ್ಲಿಯೂ ಸತ್ಯ ಹೇಳುವುದು  ನಂಬಿಕೆಗೆ ಬುನಾದಿ. ಆದ್ದರಿಂದ  ನಾವು ತಮಾಷೆಗೆಂದು ಹೇಳುವ ಸಣ್ಣ ಸುಳ್ಳು ಸಹ ಬುನಾದಿಗೆ  ಹಾನಿ ಮಾಡಬಹುದು.

ಆಕರ್ಷಿಸುವ  ತಪ್ಪು ಮಾರ್ಗ ತಪ್ಪಿಸುವುದು ಒಳ್ಳೆಯದು, ಏಕೆಂದರೆ  ತಾತ್ಕಾಲಿಕ ಲಾಭದ ಮಾರ್ಗವನ್ನು ತಪ್ಪಿಸಿ ಶಾಶ್ವತ ಗೌರವವನ್ನು ಆರಿಸಿಕೊಳ್ಳಿ.

ಪ್ರತಿದಿನ ನಿಮ್ಮ ನಡೆ-ನುಡಿಗಳ ಬಗ್ಗೆ ಆಲೋಚಿಸಿ ಮತ್ತು ಸ್ವಯಂ ಪರಿಶೀಲನೆ ಮಾಡಿಕೊಳ್ಳಿ..

 ನಿಮ್ಮ ಸುತ್ತಲಿನವರ ಪ್ರಭಾವ ನಿಮ್ಮ ನಡೆ ನುಡಿಯಲ್ಲಿ ಸ್ಪಷ್ಟವಾಗಿ  ಗೋಚರಿಸುತ್ತದೆ ಆದ್ದರಿಂದ ಯಾವಾಗಲೂ ನೈತಿಕ ವ್ಯಕ್ತಿಗಳ ಸಂಗ ಮಾಡಿರಿ.


ಸತ್ಯ ಮತ್ತು ಪ್ರಾಮಾಣಿಕತೆಜೀವನದ ಪಾಠ

ಸತ್ಯ ಮತ್ತು ಪ್ರಾಮಾಣಿಕತೆ ಎನ್ನುವುದು ಕೇವಲ ನೈತಿಕ ಮೌಲ್ಯಗಳು ಮಾತ್ರವಲ್ಲ, ಜೀವನಕ್ಕೆ ಬೆಳಕು ನೀಡುವ ದೀಪಸ್ತಂಭಗಳು. ಮೌಲ್ಯಗಳನ್ನು ಅಳವಡಿಸಿಕೊಂಡವರು ಮಾತ್ರ ದೀರ್ಘಕಾಲದ ಯಶಸ್ಸು ಮತ್ತು ಗೌರವವನ್ನು ಗಳಿಸುತ್ತಾರೆ. ಇವನ್ನು ಅರ್ಥಮಾಡಿಕೊಳ್ಳಲು ಒಂದು ಕಥೆ ನೋಡೋಣ.


ಕಥೆ: “ಅಣ್ಣನ ಕಳೆದು ಹೋದ ವಾಚು

ಒಂದು ಮಧ್ಯಮ ಗಾತ್ರದ  ಹಳ್ಳಿಯಲ್ಲಿ ಕಿಶೋರ್‌  ಎಂಬ ಯುವಕನಿದ್ದನು.

 ಬಡ ಕುಟುಂಬದಲ್ಲಿ ಹುಟ್ಟಿದ್ದರೂ, ತನ್ನ ಓದನ್ನು ಅರ್ಧಕ್ಕೆ ನಿಲ್ಲಿಸಿ  ಕುಟುಂಬಕ್ಕೆ ನೆರವಾಗಲೆಂದು ಸಣ್ಣ ಚಹಾ ಅಂಗಡಿ ಇಟ್ಟುಕೊಂಡಿದ್ದ. ಅವನು ಸದಾ ಹರ್ಷಿತನಾಗಿ ಲವಲವಿಕೆಯಿಂದಿದ್ದು,  ಪರರ ಕಷ್ಟಕ್ಕೆ ಸಹಾಯಮಾಡುವ ಗುಣ ಹೊಂದಿದ್ದ.
ಒಂದು ದಿನ ಆ  ಹಳ್ಳಿಯ  ಬಡಗಿಯಾದ ಸುರೇಂದ್ರ  ಅವರು ಆ ಹಳ್ಳಿಯ ಬಾವಿಯ ಹತ್ತಿರ ಕೆಲಸ ಮಾಡುತ್ತಿದ್ದರು. ಆಗ  ಅವರ ಕೈಯಲ್ಲಿದ್ದ  ಬಂಗಾರದ ವಾಚ್‌ ಅವರು  ಕೆಲಸ ಮಾಡುವ ಸಮಯದಲ್ಲಿ ಬಾವಿಗೆ ಬಿತ್ತು.

ಸುರೇಂದ್ರ ಅವರು ಬೇಸರಗೊಂಡು ಕಳವಳದಿಂದ ಎಲ್ಲರನ್ನು ಕೇಳಿದರು:

"ಯಾರಾದರೂ ನನ್ನ ವಾಚು  ತೆಗೆದುಕೊಟ್ಟರೆ ಬಹುಮಾನ ಕೊಡುತ್ತೇನೆ."

ಅಲ್ಲಿದ್ದ ಕೆಲವರು  ಬಾವಿಗೆ ಹಾರಿ ನೋಡಿದರು ಹುಡುಕಿದರು, ಆದರೆ ವಾಚು ಮಾತ್ರ ಸಿಗಲಿಲ್ಲ. ಕಿಶೋರ್‌  ಬಾವಿಯ ಬಳಿ ಹೋಗಿ ನೋಡಿದನು, ಮತ್ತು  ಅವನು ಸ್ವಲ್ಪ ಹೊತ್ತು ಶಾಂತವಾಗಿ ಕಾಯ್ದನು. ನೀರಿನ ತಳದಲ್ಲಿ ಹೊಳೆಯುತ್ತಿರುವ ವಾಚನ್ನು  ಕಂಡನು,  ನಂತರ ಬಾವಿಯಲ್ಲಿ ಇಳಿದು ವಾಚನ್ನು  ತೆಗೆದುಕೊಂಡು ಬಂದನು.

ಸುರೇಂದ್ರ  ಸಂತೋಷದಿಂದ ಹೇಳಿದನು:

"ನೀನು ನನ್ನ ವಾಚನ್ನು ಹುಡುಕಿ ಕೊಟ್ಟಿದ್ದಕ್ಕೆ ಧನ್ಯವಾದಗಳು, ತಗೋ ನಿನಗೆ ಬಹುಮಾನ." ಎಂದನು

ಆದರೆ ಕಿಶೋರ್‌ ನಗುಮೊಗದಿಂದ  ಹೇಳಿದ,

"ಸುರೇಂದ್ರಣ್ಣ, ಇದು ನಿಮ್ಮದೇ ವಾಚು. ನಾನು ಅದನ್ನು ನಿಮಗೆ ಹಿಂತಿರುಗಿಸುತ್ತಿದ್ದೇನೆ ಅಷ್ಟೇ, ಬಹುಮಾನ ಬೇಡ." ಎಂದನು.

ಸುರೇಂದ್ರ  ಕಣ್ಣಿರು ತುಂಬಿಕೊಂಡು ಹೇಳಿದನು,

"ಕಿಶೋರ್‌ , ನಿನ್ನ ಪ್ರಾಮಾಣಿಕತೆ ಮತ್ತು ಸತ್ಯ ನಿನ್ನನ್ನು ಜೀವನದಲ್ಲಿ ಬಹುದೂರ ಕರೆದೊಯ್ಯಲಿದೆ." ಎಂದು ಆಶೀರ್ವದಿಸಿದನು.

 

ಸತ್ಯ- ನಿಜವಾದದ್ದು ಹೇಳುವುದು ಮತ್ತು ಮಾಡುವುದೇ ಜೀವನದ ಬಲವಾದ ಆಧಾರ.

ಪ್ರಾಮಾಣಿಕತೆಸ್ವಾರ್ಥಕ್ಕಾಗಿ ಇತರರ ಹಕ್ಕು ಕಸಿಯದೇ, ನ್ಯಾಯಯುತವಾಗಿ ನಡೆದುಕೊಳ್ಳುವುದು.

ಗೌರವನೈತಿಕ ಮೌಲ್ಯಗಳನ್ನು ಪಾಲಿಸಿದವರಿಗೆ ಸಮಾಜ ಸದಾ ಗೌರವ ನೀಡುತ್ತದೆ.

 

ಸತ್ಯ ಮತ್ತು ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದರಿಂದ, ದೀರ್ಘಕಾಲದವರೆಗೆ  ವಿಶ್ವಾಸ ನಿರ್ಮಾಣವಾಗುತ್ತದೆ. ಮತ್ತು ಮನಸ್ಸಿಗೆ ಶಾಂತಿ, ಜೀವನದಲ್ಲಿ ಸ್ಥಿರ ಯಶಸ್ಸು ಸಮಾಜದಲ್ಲಿ ಗೌರವ ಮತ್ತು ಉತ್ತಮ ಹೆಸರು ದೊರೆಯುತ್ತದೆ.

*ಸಮಾರೋಪ*

ಸತ್ಯ ಮತ್ತು ಪ್ರಾಮಾಣಿಕತೆ ನಮ್ಮ ಜೀವನದ ಅತ್ಯಮೂಲ್ಯ ಆಸ್ತಿಗಳು. ಅವುಗಳಿಂದ ಬರುವ ಗೌರವ, ವಿಶ್ವಾಸ, ಮನಃಶಾಂತಿ ಯನ್ನು  ಹಣದಿಂದ ಅಥವಾ ಅಧಿಕಾರದಿಂದ ಕೊಳ್ಳಲಾಗುವುದಿಲ್ಲ.
ಹೀಗಾಗಿ, "ನಂಬಿಕೆ ಕಟ್ಟಲು ವರ್ಷಗಳು ಬೇಕು, ಕಳೆದುಕೊಳ್ಳಲು ಕ್ಷಣ ಸಾಕು"  ಕುಂಬಾರನಿಗೆ ವರುಷ  ದೊಣ್ಣೆಗೆ ನಿಮಿಷ”  ಎಂಬ ಮಾತನ್ನು ನೆನಸಿಕೊಂಡು, ಜೀವನದಲ್ಲಿ ಸದಾ ಸತ್ಯ ಹಾಗೂ ಪ್ರಾಮಾಣಿಕತೆಯನ್ನು ಪಾಲಿಸೋಣ.

ಸತ್ಯ ಮತ್ತು ಪ್ರಾಮಾಣಿಕತೆ ಇಂದಿನ ವೇಗದ ಬದುಕಿನಲ್ಲಿ ಅಪರೂಪವಾಗುತ್ತಿದ್ದರೂ, ಅವುಗಳ ಮಹತ್ವ ಶಾಶ್ವತ. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ   ಮೌಲ್ಯಗಳನ್ನು ಪಾಲಿಸಿದರೆ, ನಮ್ಮ ಬದುಕು ಮಾತ್ರವಲ್ಲನಮ್ಮ ಸುತ್ತಲಿನವರ ಬದುಕೂ ಸುಂದರವಾಗುತ್ತದೆ.

"ನಂಬಿಕೆ ಕಟ್ಟಲು ವರ್ಷಗಳು ಬೇಕು, ಕಳೆದುಕೊಳ್ಳಲು ಕ್ಷಣ ಸಾಕು" – ಆದ್ದರಿಂದ ಸದಾ ಸತ್ಯ ಮತ್ತು ಪ್ರಾಮಾಣಿಕತೆಯನ್ನು ನಮ್ಮ ಜೀವನದ ದಾರಿಯಾಗಿ ಆರಿಸಿಕೊಳ್ಳೋಣ.

 

 

ಧನ್ಯವಾದಗಳು…...🌷🌷🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......