ಆಗಸ್ಟ್ 15, 2025 – ಇತಿಹಾಸದ ನೆನಪಿನಲ್ಲಿ ಭಾರತದ ಸ್ವಾತಂತ್ರ್ಯೋತ್ಸವ. ಅಧ್ಯಾಯ:೧
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಲೇಖಕಿ: ನಾಗಲಕ್ಷ್ಮಿ ಕೆ.ಎನ್ ದಿನಾಂಕ: ೧೪.೦೮.೨೦೨೫
ಸ್ವಾತಂತ್ರ್ಯ ಪೂರ್ವದʼ ಅಖಂಡ ಭಾರತʼ
ಭಾರತವು
ಸರ್ವ ಸ್ವತಂತ್ರ ಪ್ರಜಾಸತ್ತಾತ್ಮಕ ಗಣರಾಜ್ಯ, ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆಗಸ್ಟ್ ೧೫, ೨೦೨೫ ರಂದು ೧೭೮ ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿದೆ.
ಸುದೀರ್ಘ ಎರಡು ಶತಮಾನಗಳ ಕಾಲ ವಿದೇಶಿಯರ ಆಡಳಿತಕ್ಕೆ ಒಳಪಟ್ಟಿದ್ದ ಅಖಂಡ ಭಾರತವು ಇಬ್ಭಾಗವಾಗಿ ಆಗಸ್ಟ್ ೧೫, ೧೯೪೭ ರಂದು ಪಾಕಿಸ್ತಾನ
ಮತ್ತು ಭಾರತವಾಗಿ ಜನ್ಮ ತಾಳಿದ ವಿಶೇಷ ದಿನವನ್ನು
ಸ್ಮರಿಸುವ ಮತ್ತು ಆಚರಣೆ ಮಾಡುವ ಈ ದಿನವೆ ಭಾರತದ ಸ್ವಾತಂತ್ರ್ಯೋತ್ಸವದ ದಿನ. ಈ ದಿನ ಭಾರತದ ಪ್ರಧಾನಮಂತ್ರಿಗಳು
ಕೆಂಪು ಕೋಟೆಯ ಮೇಲೆ ತ್ರಿವರ್ಣ ಝಂಡಾವನ್ನು ಹಾರಿಸುತ್ತಾರೆ. ರಾಷ್ಟ್ರಗೀತೆ ಮತ್ತು
ವಂದೇ ಮಾತರಂ ಗೀತೆಯನ್ನು ಹಾಡಲಾಗುತ್ತದೆ. ಭಾರತೀಯ
ಸಶಸ್ತ್ರ ಸೇನಾ ಪಡೆಗಳಿಂದ ಪರೇಡ್ ನಡೆಸಲಾಗುತ್ತದೆ.
ಇಡೀ ಭಾರತದ ಜನತೆಯನ್ನುದ್ಧೇಶಿಸಿ ಪ್ರಧಾನ ಮಂತ್ರಿಗಳು
ಬಾಷಣ ಮಾಡುತ್ತಾರೆ.
ಸ್ವಾತಂತ್ರ್ಯ
ಪೂರ್ವದ ʼಅಖಂಡ ಭಾರತʼ ಎಂದರೆ, ಇಂದಿನ ಭಾರತ ಮಾತ್ರವಲ್ಲದೆ ಪಾಕಿಸ್ತಾನ,
ಬಾಂಗ್ಲಾದೇಶ, ಮ್ಯಾನ್ಮಾರ್ನ ಭಾಗ, ಅಫ್ಘಾನಿಸ್ತಾನದ
ಕೆಲವು ಭಾಗಗಳು, ಟಿಬೆಟ್ ಗಡಿಭಾಗ, ಮತ್ತು ಶ್ರೀಲಂಕದೊಂದಿಗೆ ನಿಕಟ ಸಂಬಂಧ ಹೊಂದಿದ್ದ
ಒಂದು ದೊಡ್ಡ ಭೌಗೋಳಿಕ ಹಾಗೂ ಸಾಂಸ್ಕೃತಿಕ ಪ್ರದೇಶ.
ಇದು ರಾಜಕೀಯವಾಗಿ ಏಕವಾಗಿರದಿದ್ದರೂ, ಭೌಗೋಳಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿರಿಮೆ ಹೊಂದಿದ್ದ “ಅಖಂಡ ಭಾರತ” ಎಂಬ
ಕಲ್ಪನೆ ಇದ್ದದ್ದು ನಿಜವೆಂದು ಇತಿಹಾಸದಿಂದ ತಿಳಿದು
ಬರುತ್ತದೆ.
ಉತ್ತರದ
ಕಡೆಗೆ ಹಿಮಾಲಯ
ಶ್ರೇಣಿಗಳು, ಟಿಬೆಟ್ ನ ಗಡಿಗಳು, ಕಾಶ್ಮೀರದಿಂದ ಅರುಣಾಚಲವರೆಗೆ. ದಕ್ಷಿಣದಲ್ಲಿ ಶ್ರೀಲಂಕವರೆಗಿನ
ಹಿಂದೂ ಮಹಾಸಾಗರ ತೀರ. ಪಶ್ಚಿಮಕ್ಕೆ ಅಫ್ಘಾನಿಸ್ತಾನದ
ಗಡಿಗಳು, ಬಲೂಚಿಸ್ತಾನದ ಭಾಗ ಮತ್ತು ಪೂರ್ವ
ದ ಇಂದಿನ
ಮ್ಯಾನ್ಮಾರ್ (ಬರ್ಮಾ) ಪ್ರದೇಶದವರೆಗೂ ಅಖಂಡ ಭಾರತ ಹಬ್ಬಿತ್ತು.
ಗಂಗಾ,
ಸಿಂಧು, ಬ್ರಹ್ಮಪುತ್ರ ನದೀ ತಟಗಳು ಹಾಗೂ
ಕರಾವಳಿ ಪ್ರದೇಶಗಳು ಆರ್ಥಿಕವಾಗಿ ಮುಂದುವರೆದ ಪ್ರದೇಶಗಳಾಗಿದ್ದವು.
ಪೂರ್ವ
ಭಾರತದಲ್ಲಿನ ಭಾಷೆಗಳು ಬೇರೆಬೇರೆ
ಆದರೂ ಸಂಸ್ಕೃತ, ಪಾಳಿ, ಪರ್ಷಿಯನ್, ಉರ್ದು, ಹಿಂದಿ, ಬಂಗಾಳಿ, ತೆಲುಗು, ತಮಿಳು,
ಕನ್ನಡ ಮುಂತಾದ ಭಾಷೆಗಳು ಅಖಂಡ ಭಾರತದ ನಡುವಿನ
ಸಂಪರ್ಕ ಸೇತುವೆಯಾಗಿದ್ದವು.
ಈ
ಮೂಲಕ ಹಬ್ಬ-ಹರಿದಿನಗಳು,
ಯಾತ್ರಾಮಾರ್ಗಗಳು, ವ್ಯಾಪಾರ ಮಾರ್ಗಗಳು ಭಾರತದ ಉದ್ದಗಲಕ್ಕೂ ಎಲ್ಲೆಡೆ
ಸಂಪರ್ಕ ಕಲ್ಪಿಸುತ್ತಿದ್ದವು.
ವಾಣಿಜ್ಯ ಕ್ಷೇತ್ರದಲ್ಲಿ ಮಸಾಲೆ, ಹತ್ತಿ, ರೇಷ್ಮೆ, ಹಸ್ತಕಲೆ, ಮುಂತಾದವು
ವಿಶ್ವಪ್ರಸಿದ್ಧವಾಗಿದ್ದವು.
ಕ್ರಿ.
ಶ 17ನೇ ಶತಮಾನದ ಹೊತ್ತಿಗೆ, ಭಾರತವು ವಿಶ್ವ GDPಯಲ್ಲಿ ಸುಮಾರು 25% ಹಂಚಿಕೆಯನ್ನು ಹೊಂದಿತ್ತು.
ಕೃಷಿ,
ಗುಡಿಕೈಗಾರಿಕೆ (ಹಸ್ತಕಲೆ, ಲೋಹ ವಸ್ತುಗಳು),
ಮಸಾಲೆ ಪದಾರ್ಥಗಳು ಮತ್ತು ರೇಷ್ಮೆ
ಜಗತ್ತಿನ
ವ್ಯಾಪಾರದೊಂದಿಗೆ ಪ್ರಮುಖ
ರಫ್ತು ಪದಾರ್ಥಗಳಾಗಿದ್ದವು.
ಕರಾವಳಿ
ಬಂದರುಗಳಾದ ಸುರತ್, ಕ್ಯಾಲಿಕಟ್, ಮದ್ರಾಸ್, ಬಂಗಾಳ ಮುಂತಾದವುಗಳು
ವಿದೇಶಿ
ವ್ಯಾಪಾರದ ಕೇಂದ್ರಗಳಾಗಿದ್ದವು.
ಮೊಘಲ್
ಸಾಮ್ರಾಜ್ಯದ ಕಾಲದಲ್ಲಿ
ಬಹುತೇಕ ಭಾರತ ಉಪಖಂಡವು ಒಟ್ಟಾಗಿ
ಆಡಳಿತಕ್ಕೊಳಪಟ್ಟಿತ್ತು. ಅದರಲ್ಲಿ ಪ್ರಾದೇಶಿಕ ರಾಜವಂಶಗಳಾದ, ಮರಾಠರು,
ಸಿಖ್ ಸಾಮ್ರಾಜ್ಯ, ಮೈಸೂರು ಸಾಮ್ರಾಜ್ಯ, ಅಸ್ಸಾಂ ರಾಜ್ಯ, ಜೈಪುರ್ ಜೋಧ್ಪುರ
ಮುಂತಾದವು ಸ್ಥಳೀಯವಾಗಿ ಆಡಳಿತ ನಡೆಸುತ್ತಿದ್ದವು.
ಬ್ರಿಟಿಷರ
ಕಾಲದಲ್ಲಿ ಬ್ರಿಟಿಷ್ ಇಂಡಿಯಾ ಮತ್ತು ಸ್ಥಳೀಯ ಸಂಸ್ಥಾನ ರಾಜ್ಯಗಳು ಎಂದು ವಿಭಜನೆಗೊಂಡು ಆಡಳಿತಕ್ಕೆ ಒಳಪಟ್ಟಿತ್ತು.
ಬ್ರಿಟಿಷ್
ಇಂಡಿಯಾದ ಭಾಗವು ನೇರವಾಗಿ
ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದರೆ, ಸ್ಥಳೀಯ ಸಂಸ್ಥಾನ ರಾಜರುಗಳು ನೇರವಾಗಿ ಬ್ರಿಟಿಷರ
ಪ್ರಭಾವಕ್ಕೆ ಒಳಪಟ್ಟು, ಸ್ಥಳೀಯ ರಾಜರು ಆಡಳಿತ ನಡೆಸುತ್ತಿದ್ದ ಪ್ರದೇಶಗಳಾಗಿ ಆಡಳಿತ ನಡೆಸುತ್ತಿದ್ದರು.
ಸ್ವಾತಂತ್ರ್ಯ
ಪೂರ್ವದಲ್ಲಿ 1857ರ
ಪ್ರಥಮ ಸ್ವಾತಂತ್ರ್ಯ ಸಮರದ ಬಳಿಕ ಬ್ರಿಟಿಷರು
ನೇರವಾಗಿ ಅಖಂಡ ಭಾರತದಲ್ಲಿ ತಮ್ಮ ಆಡಳಿತ ಸ್ಥಾಪನೆ ಮಾಡಿದರು. ಅಖಂಡ ಭಾರತವನ್ನು ನೇರವಾಗಿ ಆಡಳಿತ ಮಾಡಲು ಅಸಾಧ್ಯವಾದಾಗ
ಭಾರತ ಉಪಖಂಡವನ್ನು ಪ್ರಾಂತಗಳಾಗಿ
ವಿಭಜಿಸಿ ನಿರ್ವಹಣೆ ಮಾಡಲಾರಂಭಿಸಿದರು.
ಭಾರತದಲ್ಲಿನ
ಬ್ರಿಟೀಷರ ಆಡಳಿತದ ಜೊತೆ
ವಸಾಹತುಶಾಹಿ ಶೋಷಣೆಯಿಂದ ಭಾರತದಲ್ಲಿನ ಗುಡಿಕೈಕಾರಿಕೆಗಳು
ನಶಿಸಲಾರಂಭಿಸಿದವು, ಸ್ಥಳೀಯ ವ್ಯಾಪಾರವನ್ನು ಬ್ರಿಟೀಷರು ತಮ್ಮ ವಸ್ತುಗಳಿಂದ ತುಂಬಿಸಿದರು ಈ ಮೂಲಕ
ಭಾರತದಲ್ಲಿನ ಆರ್ಥಿಕತೆ
ಕುಸಿಯಲಾರಂಭಿಸಿತು.
ಬ್ರಿಟೀಷರ
ರಾಜಕೀಯ ನೀತಿಗಳು ಅವರ
ಆಡಳಿತವನ್ನು ಬಲಪಡಿಸಲು
ಮತ್ತು ಭಾರತದ ಸಂಪತ್ತನ್ನು ಲೂಟಿ ಮಾಡಲು ವಿನ್ಯಾಸಗೊಳಿಸಲ್ಪಟ್ಟಿದ್ದವು.
ಅವು ಜನರಲ್ಲಿ ಅಸಮಾಧಾನ ಮತ್ತು ಸ್ವಾತಂತ್ರ್ಯದ ತೀವ್ರ ಬಯಕೆಯನ್ನು ಹುಟ್ಟಿಸಿದವು. ಅಂತಿಮವಾಗಿ, ಈ ನೀತಿಗಳೇ 1947ರ
ಸ್ವಾತಂತ್ರ್ಯದ ಪ್ರಮುಖ ಕಾರಣಗಳಲ್ಲಿ ಒಂದಾದವು.
1947ರ ಮೊದಲು,
“ಆಖಂಡ ಭಾರತ” ಎಂದರೆ ಇಂದಿನ ಭಾರತ + ಪಾಕಿಸ್ತಾನ + ಬಾಂಗ್ಲಾದೇಶ ಸೇರಿದ್ದ ಉಪಖಂಡವಾಗಿತ್ತು.
ವಿವಿಧ
ಧಾರ್ಮಿಕತೆ, ಭಾಷೆ,
ಸಂಸ್ಕೃತಿಗಳ ವೈವಿಧ್ಯತೆ ಇದ್ದರೂ
ಬ್ರಿಟೀಷರ ವಸಾಹತುಶಾಹಿತ್ವದ ವಿರುದ್ಧ ಹೋರಾಟದಲ್ಲಿ ಭಾರತೀಯರೆಲ್ಲರೂ ಒಂದಾಗಿದ್ದರು.
ಭಾರತದ
ಸ್ವಾತಂತ್ರ್ಯ ಚಳುವಳಿಯಲ್ಲಿ ಮುಸ್ಲಿಂ ಲೀಗ್ ಮತ್ತು ಭಾರತೀಯ ಕಾಂಗ್ರೇಸ್ ಒಟ್ಟಾಗಿ ಕೆಲಸ ಮಾಡಿದ್ದವು. ಬ್ರಿಟೀಷರು ತಮ್ಮ ಒಡೆದು ಹಾಳುವ ನೀತಿಯ ಮೂಲಕ ಸ್ವಾತಂತ್ರ್ಯ
ಚಳುವಳಿಯನ್ನು ಹತ್ತಿಕ್ಕುವ ಕೆಲಸ ಮಾಡಿದರು. ಇಷ್ಟಾದರೂ
ಬ್ರಿಟಿಷರು ಹಿಂದು-ಮುಸ್ಲಿಂ ಗಲಭೆಗಳನ್ನು ಬಳಸಿಕೊಂಡು ಅಖಂಡ ಭಾರತವನ್ನು ಸ್ವಾತಂತ್ರಯ
ನೀಡುವ ಸಮಯದಲ್ಲಿ ವಿಭಜನೆ
ಮಾಡಿದರು.
ಭಾರತವು
೧೯೪೭ ರಲ್ಲಿ ಸ್ವತಂತ್ರಗೊಂಡದ್ದು ನಿಜವೇ ಆದರೂ , ಭಾರತವನ್ನು ಬ್ರಿಟೀಷರ ವಸಾಹತು ಶಾಹಿತ್ವದಿಂದ ಬಿಡಿಸುವಲ್ಲಿ
ಅನೇಕ ಮಹನೀಯರ ತ್ಯಾಗ ಬಲಿದಾನಗಳು ಇಲ್ಲಿ ಕೆಲಸ ಮಾಡಿವೆ.
ಭಾರತವು
ಸ್ವಾತಂತ್ರ್ಯಗೊಳ್ಲೂವ ಮುನ್ನ ಬ್ರಿಟೀಷರ ಕೈವಶವಾಗಿದ್ದು, ಹದಿನೆಂಟನೇ ಶತಮಾನದ ಮಧ್ಯಭಾಗದಲ್ಲಿ ಅಂದರೆ
೧೭೫೭ರ ಪ್ಲಾಸಿ ಕದನದಲ್ಲಿ ಜಯಿಸಿದ ನಂತರ ಹಂತ ಹಂತವಾಗಿ ತಮ್ಮ ರಾಜಕೀಯ ಅಧಿಕಾರದ ವ್ಯಾಪ್ತಿಯನ್ನು
ವಿಸ್ತರಿಸಿಕೊಂಡರು.
ಭಾರತಕ್ಕೆ
ವ್ಯಾಪಾರಕ್ಕೆಂದು ಬಂದವರಲ್ಲಿ ಬ್ರಿಟೀಷರೇನು ಮೊದಲಿಗರಲ್ಲ, ಇವರಿಗಿಂತಲೂ ಮೊದಲೇ ಅನೇಕ ವಿದೇಶಿಗರು
ಭಾರತಕ್ಕೆ ಬಂದು ಹೋಗಿದ್ದಾರೆ.
ಪ್ರಾಚೀನ
ಕಾಲದಿಂದಲೂ ಭಾರತದೊಂದಿಗಿದ್ದ ವಿದೇಶಿ ಸಂಪರ್ಕಗಳು
ಕ್ರಿ.ಪೂ
೩೨೬ ರಲ್ಲಿ ಅಲೆಕ್ಸಾಂಡರ್ ಭಾರತದ ಉತ್ತರ ಮತ್ತು
ಪಶ್ಚಿಮ ಭಾಗದ ಮೇಲೆ ದಂಡಯಾತ್ರೆ ಕೈಗೊಂಡಿದ್ದನು.
೩ನೇ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದ ವ್ಯಾಪಾರಿಗಳು, ಭಾರತದೊಂದಿಗೆ ಮಸಾಲೆ, ರೇಷ್ಮೆ ಮತ್ತು
ಮುತ್ತು ರತ್ನಗಳ ವ್ಯಾಪಾರ ಆರಂಭಿಸಿದರು. ಅರಬ್ ವ್ಯಾಪಾರಿಗಳು ಕೂಡ ಮಲಬಾರ್ ಕರಾವಳಿಗೆ ಬಂದು ವ್ಯಾಪಾರ
ಮಾಡುತ್ತಿದ್ದರು.
ಕ್ರಿ.ಶ
೭೧೨ ರಲ್ಲಿ ಮೊಹಮ್ಮದ್ ಬಿನ್ ಕಾಸಿಂ ಭಾರತದ ಸಿಂಧ್ ಪ್ರಾಂತ್ಯದ ಮೇಲೆ ದಾಳಿ ನಡೆಸಿದನು.
ಈ
ಮೂಲಕ ೧೨೦೬ರಲ್ಲಿ ದೆಹಲಿಯಲ್ಲಿ ಮುಸ್ಲಿಂ ಗುಲಾಮ ವಂಶದ ಸ್ಥಾಪನೆಯಾಗಿ ದಿಲ್ಲಿ ಸುಲ್ತಾನರ ಆಳ್ವಿಕೆ
ಆರಂಭವಾಯಿತು.
೧೫೨೬
ರಲ್ಲಿ ಬಾಬರ್ ನು ಪಾಣಿಪಟ್ ಯುದ್ಧದಲ್ಲಿ ಗೆದ್ದು
ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು.
ವಿದೇಶೀಯರು
ಭಾರತಕ್ಕೆ ಬಂದ ದಿನಗಳಿಂದ 1947ರ ಸ್ವಾತಂತ್ರ್ಯ ಪಡೆಯುವವರೆಗಿನ ಪ್ರಮುಖ ಐತಿಹಾಸಿಕ ಘಟ್ಟಗಳು.
೧೪೫೩
ರಲ್ಲಿ ಆಟೋಮನ್ ತುರ್ಕರು ಕಾನ್‌ಸ್ಟಾಂಟಿನೋಪಲ್
ನಗರವನ್ನು ವಶಪಡಿಸಿಕೊಂಡಾಗ, ಯುರೋಪಿಯನ್ನರು ಏಷ್ಯಾದ ರಾಷ್ಟ್ರಗಳೊಂದಿಗಿನ ವ್ಯಾಪಾರಕ್ಕಾಗಿ ಸಮುದ್ರದ
ಮೂಲಕ ಜಲಮಾರ್ಗಗಳನ್ನು ಕಂಡು ಹಿಡಿಯುವ ಪ್ರಯತ್ನವನ್ನು ಮಾಡಿದರು ಈ ಪ್ರಯತ್ನಗಳ ಫಲವಾಗಿ 1498
ರಲ್ಲಿ ವಾಸ್ಕೊ ಡ ಗಾಮಾನು ಕೇರಳದ ಕ್ಯಾಲಿಕಟ್ಟಿಗೆ
ಬಂದನು.
ನಂತರದಲ್ಲಿ ಭಾರತ ಮತ್ತು
ಯೂರೋಪ್ ರಾಷ್ಟ್ರಗಳ ನಡುವೆ ನೇರ ಸಮುದ್ರ ಮಾರ್ಗವನ್ನು
ಆರಂಭಿಸುವ (ಪೋರ್ಚುಗೀಸರ ಪ್ರಭಾವ) ತಮ್ಮ ವ್ಯಾಪಾರಗಳನ್ನು ನಡೆಸಿದರು.
ಹೀಗೆ
ಡಚ್ಚರು, ಫ್ರೆಂಚರು ನಂತರ ಬ್ರಿಟೀಷರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದರು.
ಕ್ರಿ.ಶ.
1600 ರಲ್ಲಿ ಭಾರತದಲ್ಲಿ ಬ್ರಿಟೀಷರು
ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪನೆ
ಮಾಡಿದರು.
ಕ್ರಿ.ಶ.
1608 ರಲ್ಲಿ ಕ್ಯಾಪ್ಟನ್ ವಿಲಿಯಂ ಹಾಕಿನ್ಸ್
ಸುಲ್ತಾನ್
ಜಹಾಂಗೀರ್ ಅವರ ಅರಮನೆಗೆ ಭೇಟಿ
ನೀಡಿದನು.
ಕ್ರಿ.ಶ.
1615ರಲ್ಲಿ ಸರ್
ಥಾಮಸ್ ರೋ ಜಹಾಂಗೀರ್ನಿಂದ
ವ್ಯಾಪಾರಕ್ಕೆ
ಅನುಮತಿ ಪಡೆದರು.
ಕ್ರಿ.ಶ.
1664 – ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ.
17ನೇ-18ನೇ ಶತಮಾನದಲ್ಲಿ ಪೋರ್ಚುಗೀಸ್,
ಡಚ್, ಫ್ರೆಂಚ್, ಇಂಗ್ಲೀಷ್ ತಮ್ಮ ವ್ಯಾಪಾರ
ಕೇಂದ್ರಗಳನ್ನು ಭಾರತದ ವಿವಿಧೆಡೆ ಸ್ಥಾಪಿಸಿದರು.
1757 ರಲ್ಲಿ ನಡೆದ ಬಂಗಾಳದ ಪ್ಲಾಸಿ
ಯುದ್ಧವು ಭಾರತದ ಇತಿಹಾಸದಲ್ಲಿ ತೀವ್ರವಾಗಿ
ತಿರುವು ತರುವ ಯುದ್ಧಗಳಲ್ಲಿ ಒಂದಾಯಿತು. ಬಂಗಾಳದಲ್ಲಿ ವ್ಯಾಪಾರ ಮಾಡುತ್ತಾ ತಮ್ಮ ಕೋಟೆಯನ್ನು ಬ್ರಿಟೀಷರು
ಭದ್ರಪಡಿಸಿಕೊಳ್ಳುತ್ತಿದ್ದ ಸಮಯದಲ್ಲಿ ಬಂಗಾಳದ ನವಾಬನಾದ ಸಿರಾಜುದ್ದೌಲನು ಬ್ರಿಟೀಷರ ಅಧಿಕಾರಿ ರಾಬರ್ಟ್
ಕ್ಲೈವ್ ಮೇಲೆ ಯುದ್ದವನ್ನು ಸಾರಿದನು. ಆದರೆ ಯುದ್ಧದ ಸಮಯದಲ್ಲಿ ನವಾಬ್‌ನ ಸೇನೆಯ ಮುಖ್ಯಸ್ಥ ಮೀರ್ ಜಾಫರ್, ಬ್ರಿಟಿಷರೊಂದಿಗೆ
ರಹಸ್ಯ ಒಪ್ಪಂದವನ್ನು ಮಾಡಿಕೊಂಡು ತಾನು ನವಾಬನಾಗಬೇಕೆಂಬ ದುರಾಸೆಯಲ್ಲಿ ಒಳಸಂಚಿನಿಂದ, ನವಾಬ ಸಿರಾಜುದ್ದೌಲನು
ಸೋಲುವಂತೆ ಮಾಡಿದನು. ಈ ಯುದ್ಧದ ಕಾರಣದಿಂದಲೇ ಭಾರತದಲ್ಲಿ ಇಂಗ್ಲೀಷರ ರಾಜಕೀಯ
ಆಧಿಪತ್ಯ ಆರಂಭವಾಯಿತು.
ಕ್ರಿ.ಶ.1764
ರಲ್ಲಿ ಬಕ್ಸರ್ ಯುದ್ಧದ ಪರಿಣಾಮ, ಇಂಗ್ಲೀಷರಿಗೆ
ಬಂಗಾಳ, ಬಿಹಾರ ಮತ್ತು ಒಡಿಶಾದ
ಮೇಲೆ ದಿವಾನಿ ಹಕ್ಕು ದೊರೆಯಿತು..
ಕ್ರಿ.ಶ.
1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು (Sepoy Mutiny) ಬ್ರಿಟೀಷರು
ಕೇವಲ ಸಿಪಾಯಿ ದಂಗೆ ಎಂದು ಹೆಸರಿಸಿ, ಮೊಗಲ್ ಸಾಮ್ರಾಟ
ಬಹಾದುರ್ ಶಾ ನನ್ನು ಬಂಧಿಸಿ
ರಂಗೂನ್ ಜೈಲಿಗೆ ಕಳಿಸಿದರು. ಈ ಮೂಲಕ ತಮ್ಮ ಷಡ್ಯಂತ್ರಗಳಿಂದ ಈ ಪ್ರಥಮ ಸ್ವಾತಂತ್ರ್ಯ
ಸಂಗ್ರಾಮವನ್ನು ಬ್ರಿಟೀಷರು ಹತ್ತಿಕ್ಕಿದರು. ಈ ಮೂಲಕ
ಕ್ರಿ.ಶ. 1858 ರಲ್ಲಿ
ಈಸ್ಟ್
ಇಂಡಿಯಾ ಕಂಪನಿಯಿಂದ ಭಾರತವು ನೇರವಾಗಿ
ಬ್ರಿಟಿಷ್ ಸರ್ಕಾರದ ಅಧೀನಕ್ಕೆ ಒಳಪಟ್ಟಿತು.
ಸ್ವಾತಂತ್ರ್ಯ
ಹೋರಾಟದ ಹಂತಗಳು
ಕ್ರಿ.ಶ.
1885ರಲ್ಲಿ ಭಾರತೀಯ
ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ.
ಕ್ರಿ.ಶ.
1905ರಲ್ಲಿ ಬಂಗಾಳ ವಿಭಜನೆ (Lord Curzon)ಯಿಂದ ಸ್ವದೇಶಿ
ಚಳುವಳಿ ಆರಂಭ.
ಕ್ರಿ.ಶ.
1919ರಲ್ಲಿ ನಡೆದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ
(ಜನರಲ್ ಡೈಯರ್).
ಕ್ರಿ.ಶ.
1920-22 ರಲ್ಲಿ ಗಾಂಧೀಜಿಯವರಿಂದ
ಅಸಹಕಾರ
ಚಳುವಳಿ .
ಕ್ರಿ.ಶ.
1930 ರಲ್ಲಿ ಗಾಂಧೀಜಿಯವರ
ನೇತೃತ್ವದಲ್ಲಿ ಭಾರತದಾದ್ಯಂತ ಉಪ್ಪಿನ ಸತ್ಯಾಗ್ರಹ / ದಂಡಿ ಯಾತ್ರೆ.
ಕ್ರಿ.ಶ.
1942ರಲ್ಲಿ ಭಾರತ
ಬಿಟ್ಟು ತೊಲಗಿ ಚಳುವಳಿ
("Quit India Movement").
ಮುಂದುವರೆಯುವುದು.......
ಧನ್ಯವಾದಗಳು........🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು