ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಅರವಿಂದನ ಪ್ರೇಮ ಇಂದು – ಹೊಸ ಛಾಯೆ, ಹಳೆಯ ಬೆಳಕು

 



ಸಾಹಿತ್ಯ ಮೇಳದ ನಂತರ ದಿನಗಳು ಅನಾಯಾಸಾವಾಗಿ ಮುಂದೂಡಿದ್ದವು. ಆದರೆ ಮೌಲಿಕಾಳನ್ನು ಮೈಸೂರಿನ ಪುಸ್ತಕ ಮೇಳದಲ್ಲಿ ಮತ್ತೆ ಭೇಟಿಯಾದ ಕ್ಷಣ, ಅವನೊಳಗಿನ ಮುಚ್ಚಿದ ಎಲ್ಲ ಬಾಗಿಲುಗಳನ್ನು ಪುನಃ ತಟ್ಟಿದವು. ಆಕೆಯ ನಗುವಲ್ಲಿ ಇನ್ನೂ ಏನೋ ಇತ್ತು.  ಆಗ ಮನಸ್ಸಿಗೆ ಗೊತ್ತಾದದು ಒಂದೇ ವಿಷಯ:

"ಅವಳ ಪಕ್ಕದಲ್ಲಿದ್ದ ವ್ಯಕ್ತಿ ಗಂಡನಾಗಿದ್ದರೂ, ಅವಳ ಮನಸ್ಸಿನಲ್ಲಿ ನನ್ನ ನೆನಪೊಂದು ಇನ್ನೂ ಜೀವಂತವಿದೆ."

ಒಂದು ಹಳೆಯ  ಛಾಯೆ...

ಹೀಗೆಯೇ  ಹಲವು ದಿನಗಳು ಹೋದರೂ, ಆಕೆಯ ಮಾತು ಮತ್ತೆ ಮತ್ತೆ ಅವನ ಡೈರಿಯಲ್ಲಿ  ಅಕ್ಷರಗಳಾಗಿ ತಿರುಗುತ್ತಿತ್ತು:

"ನಾನು ಓದಿದ್ದೆ ಪತ್ರ. ಆದರೆ ನಾನು ಹೇಳೋಕೆ ತಡವಾಯಿತು. ಬೇರೆಯವರ ಅವಸರದಿಂದ  ನನ್ನ ಬದುಕು ಬದಲಾಯಿತು…"

ಅವನೊಳಗಿನ ಮಾತು:
"ನೀನು ನನ್ನ ಪತ್ರವನ್ನು  ಓದಿದ್ದೆ ಅಂದ್ರೆ ಸಾಕು. ಆದರೆ ಅದನ್ನು ಓದಿದ ಮೇಲೆ  ಏನಾದರೂ ಹೇಳಬಹುದಿತ್ತಲ್ವಾ?"


ಪುನರ್ ಭೇಟಿಯ ನಿರೀಕ್ಷೆ

ಒಂದು ದಿನ, ಅರವಿಂದನ ಪರ್ಸನಲ್‌ ಅಕೌಂಟ್ಗೆ  ಇಮೇಲ್ ಒಂದು  ಬಂದಿತ್ತು.
From: [moolika.rk@...com]
Subject: Can I read that letter… again?

"ಅರವಿಂದ್,
ಅದೊಂದು ಚಿಕ್ಕ ಕ್ಷಣ. ಪುಸ್ತಕ ಮೇಳದಲ್ಲಿ ನಿನ್ನನ್ನು ಮತ್ತೆ ನೋಡಿದ ಮೇಲೆ, ಎಷ್ಟೋ ಬದಲಾವಣೆಯಾಯಿತು. ನನ್ನೊಳಗಿನ ಆ ನಿಶ್ಯಬ್ದ ಕೂಗು ಮತ್ತೆ ಜೀವ ಪಡೆಯಿತು ಅನ್ನಿಸಿತು. ಹಿಂದೆ ನಾನೂ ಪ್ರೀತಿಸುತ್ತಿದ್ದೆ, ಆದರೆ ನನ್ನ ಪ್ರೀತಿ  ಬೇರೆಯವರ ನಿರೀಕ್ಷೆಗಳಿಗೆ ಬಲಿಯಾಗಿ ಹೋದದ್ದುಸತ್ಯ.
ನಿನ್ನ ಪತ್ರಅದು ನನ್ನೊಳಗಿನ ನನ್ನನ್ನು ಮತ್ತೆ ಮತ್ತೆ ನೋಡುವ ಕಂಗಳಾಯಿತು.
ಹೀಗಾಗಿಓದಿದ ಪತ್ರವನ್ನು, ಮತ್ತೊಮ್ಮೆ ಓದಬಹುದಾ?"**

ಅರವಿಂದನ  ಕಣ್ಣುಗಳು  ತುಂಬಿದವು. ಆದರೆ ಅದು ನೋವಿನಿಂದಲ್ಲ ಬದಲಿಗೆ ತೃಪ್ತಿಯಿಂದ.

ಪ್ರೇಮಕಥೆ  ಯಾವಾಗಲೂಒಟ್ಟಾಗಿ ಬದುಕುವ ಕಥೆಯೇ  ಆಗಬೇಕೆಂದಿಲ್ಲ. ಕೆಲವೊಮ್ಮೆ ಅದುಒಬ್ಬನೇ ಬದುಕುವ ನೆನಪುಕೂಡ  ಆಗಬಹುದು.
ಆದರೆ ಸತ್ಯವಾಗಿ, ಪ್ರಾಮಾಣಿಕವಾಗಿ  ಪ್ರೀತಿಸಿದವರು ಎದುರಿರುವರೂ ಮರೆತರೂ, ಉಳಿದೇ ಇರುತ್ತದೆ.

ಅರವಿಂದ್ ತನ್ನ ಮುಂದಿನ ಪುಸ್ತಕಕ್ಕೆ ಹೆಸರಿಟ್ಟ:
"ಬದುಕು ಬದಲಾಯಿತು"

 

ಮೈಸೂರಿನ ಪುಸ್ತಕ ಮೇಳದ ನಂತರ, ಒಂದು ಕ್ಷಣ ಒಂದು ಸಂಭಾಷಣೆಮೌಲಿಕಾಳ ಮಾತುಗಳು ಅರವಿಂದನ ಹೃದಯದಲ್ಲಿ ಜೀವಂತವಾಗಿ ಉಳಿದಿದ್ದವು. ಆಕೆ ಕ್ಷಮೆ ಕೇಳಿದ್ದಳು, ಆದರೆ ಹೆಚ್ಚು ಮುಖ್ಯವಾಗಿ, ಆಕೆ ಪ್ರೇಮಪತ್ರವನ್ನು ಓದಿದ್ದಳುಅರವಿಂದನಿಗೆ ಅವನ ಪ್ರೀತಿಯಲ್ಲಿ  ಇದುವರೆಗೆ ದೊರೆತ  ಅತಿದೊಡ್ಡ ಗೆಲುವು.

ದಿನದ ನಂತರ ಅವರಿಬ್ಬರೂ ಮತ್ತೆ ಭೇಟಿಯಾಗಲಿಲ್ಲ. ಆಕೆ ಎಲ್ಲವನ್ನೂ ಮುಕ್ತಾಯ ಮಾಡಿ  ದೂರ ಸರಿದಳು. ಆದರೆ ಅರವಿಂದನೊಳಗಿನ ಪ್ರೀತಿ ಅದಕ್ಕೆ ಮುಕ್ತಿಯಿಲ್ಲ. ತನ್ನವಳ ಜೊತೆಯಿಲ್ಲದ ಪ್ರೇಮದ ಸಂಗಮವಾಯಿತು, ಆದರೆ ಅದರಲ್ಲೂ ಜೀವವಂತಿಕೆಯನ್ನು ಕಾಣುವ ಅರವಿಂದ, ತಾನು ಬರೆಯುತ್ತಿರುವ ಪ್ರತಿಯೊಂದು ಲೇಖನದಲ್ಲೂ ಅವಳನ್ನು ಅವಳ ಪ್ರೀತಿಯನ್ನು  ಬದುಕಿಸುತ್ತ ಹೋದ.

ಅವನ ಬದುಕು ಬರವಣಿಗೆಯಿಂದ ಬದಲಾಯಿತಲ್ಲದೇ, ಪುನರ್ಜನ್ಮ ಪಡೆದಂತಾಯಿತು.


ಅರವಿಂದ ಈಗ ಬೆಂಗಳೂರಿನಲ್ಲಿ ಒಬ್ಬ ಪ್ರಸಿದ್ದ ಲೇಖಕನಾಗಿದ್ದ. ಕಾಲೇಜಿನ ಹಿಂದಿನ ದಿನಗಳನ್ನು ನೆನೆಸುತ್ತ, cafeteria-ಯ ದ ಒಂದು  ಕೋಣೆಯಲ್ಲಿ  ಕುಳಿತುಕೊಂಡು, ತನ್ನ ಪ್ರೇಮದ ವಿವಿಧ ಆಯಾಮಗಳನ್ನು  ಕಾಗದಗಳ ಮೇಲೆ ಬರೆಯುತ್ತಿದ್ದ.

ನಾನು ಪ್ರೀತಿಯ ಬಗ್ಗೆ ಬರೆಯುವಾಗ, ನಿಜವಾಗಿಯೂ ಯಾರನ್ನೋ ಪ್ರೀತಿಸುತ್ತಲೇ ಇರುತ್ತೀನಿ” – ಮಾತು ಅವನ ಬಹುಶಃ ಎಲ್ಲಾ ಬರಹದ ಕೇಂದ್ರಭಾವ.

ಅವನ ಪುಸ್ತಕಗಳು ಯುವಪೀಳಿಗೆಯು ಪ್ರೀತಿ, ನಿರೀಕ್ಷೆ, ಮತ್ತು ನೋವನ್ನು ಹೇಗೆ ಸಾಗಿಸಬೇಕೆಂಬುದನ್ನು ಕಲಿಸುತ್ತಿದ್ದವು. “ಸಂಗಮವಿಲ್ಲದ ನೋಟಮೊದಲ ಪುಸ್ತಕವಾಗಿತ್ತು, ನಂತರ "ಅವನ ನೋವಿನ ನುಡಿಗಳು", "ಅವಳ ಛಾಯೆ", "ಅಪೂರ್ಣ ಸ್ವಪ್ನಗಳು" ಎಂಬ ಹತ್ತಕ್ಕೂ ಹೆಚ್ಚು ಕಿರುಸಂಕಲನಗಳು ಹೊರಬಂದವು.

ಪ್ರತಿ ಕಥೆಯಲ್ಲಿಯೂ ಯಾವುದೋ ಒಂದು ಪಾತ್ರ ಮೌಲಿಕಳ ಛಾಯೆಯಂತೆ ಕಾಣುತ್ತಿತ್ತುಅವಳ ನಗು, ಅವಳ ಮಾತು, ಅವಳ ಪ್ರಾಮಾಣಿಕತೆ, ಅವಳ ಭಾವನೆಗಳ ಗಂಭೀರತೆ, ಕಾಲೇಜಿನಲ್ಲಿದ್ದಾಗಿನ ಅವಳ ರೂಪ ಹೀಗೆ ಯಾವುದಾದರೊಂದು.


ಮೌಲಿಕಾಳ ಜೀವನ

ಮೌಲಿಕಾ ಮದುವೆಯಾದ ನಂತರ ಪಣಜಿಯಲ್ಲಿ ತನ್ನ ಪತಿಯೊಂದಿಗೆ ನೆಲೆಸಿದ್ದಳು. ಅಪಾರ್ಟ್ಮೆಂಟ್ಹೊಗಿನ ಹೆಸರಿನ ಪ್ಲೇಟ್ನಲ್ಲಿ "Mrs. Maulika Sharma" ಎಂದು ಹೆಸರಿದ್ದು, ಆಕೆಗೆ ಹೊಸದಾದ ಗುರುತು ನೀಡಿದ್ದರೂ, ಅವಳೊಳಗಿನ ಮೌಲಿಕಾ ಎಲ್ಲವನ್ನೂ ಮರೆತಿರಲಿಲ್ಲ.

ಗೃಹಿಣಿಯ ಬದ್ಧತೆಯಲ್ಲಿ, ಕುಟುಂಬದ ಜವಾಬ್ದಾರಿಗಳಲ್ಲಿ ಅವಳ ಬದುಕು ಸಾಮಾನ್ಯವಾಗಿಯೇ ಸಾಗುತ್ತಿತ್ತು.  ಆದರೆ ಕೆಲವೊಮ್ಮೆ, ಕಿಟಕಿಯಿಂದ ಕಾಣಸಿಗುವ ಮಳೆಯ ನೋಟ  ಆಕೆಯನ್ನು ಗತಕಾಲದ  ಕಾಲೇಜಿನ ಲೈಬ್ರರಿಯ ಕ್ಷಣಗಳನ್ನು ನೆನಪಿಸಿಬಿಡುತ್ತಿತ್ತು.

ಒಂದು ದಿನ ಮೌಲಿಕಾಳಿಗೆ ಅವಳ ಪುಟ್ಟ ಮಗಳು ಕೇಳಿದಳು – “ಅಮ್ಮಾ, ನೀನು  ಕಾಲೇಜು ಡೇಸ್ನಲ್ಲಿ ಯಾರನ್ನಾದರೂ ಪ್ರೀತಿಸುತ್ತಿದ್ದ?” ಪ್ರಶ್ನೆಗೆ ಮೌಲಿಕಾಳಿಗೆ ತಕ್ಷಣ ಉತ್ತರ ಕೊಡಲಾಗಲಿಲ್ಲ. ಮೌನವಾದಳು. ಆದರೆ ಆಕೆಯ ಕಣ್ಣುಗಳ ಒಳಗೆ ದಡವಿಲ್ಲದ ಆ ಪ್ರೀತಿಯ ನದಿ ಮಾತ್ರ ಕಾಣುತ್ತಿತ್ತು.

ಹೊರಗಿಂದ ಬಂದ ಪ್ರಶ್ನೆಗೆ, ಅವಳ ಮನಸ್ಸಿನ ಒಳಗಿಂದ ಬಂದು  ಆವಿಯಾದ ಉತ್ತರ: “ಹೌದು,  ನಾವು, ನಿಜವಾಗಿಯೂ ಪ್ರೀತಿಸಿದವರೊಂದಿಗೆ ಬಾಳಲ್ಲ, ಪ್ರೀತಿಯ ಭಾವನೆಯೊಂದಿಗೆ ಬದುಕುತ್ತೇವೆ.


ಅರವಿಂದನು ಲೇಖಕನಾಗಿ ತಾನು ಕಟ್ಟಿದ ಸತ್ಯಗಳು

ಅರವಿಂದನ ಪುಸ್ತಕಗಳು ಬೇಗನೆ ಜನಪ್ರಿಯವಾದವು. ಪ್ರೇಮದಲ್ಲಿ ಸೋತು ಹೋದವರು, ಪ್ರೀತಿಯಲ್ಲಿ ಉತ್ತರ ಸಿಗದವರು, ನೋವಿನ ನೆನಪಿನ ಕೊಳದಲ್ಲಿ ತೇಲುತ್ತಿರುವವರು, ಮುಖ್ಯ  ಓದುಗರುಇವರಿಗೆ ಅರವಿಂದನ ಲೇಖನಗಳು ಬದುಕಿನ ಹೊತ್ತಿಗೆ ಆದವು.

ಸಂದರ್ಶಕ ಒಂದು ಸಂದರ್ಶನದಲ್ಲಿ ಕೇಳಿದನು: “ನಿಮ್ಮ ಲೇಖನಗಳಲ್ಲಿ ಯಾವಾಗಲೂ ಒಂದು ಅದೃಶ್ಯವಾದ ಅತೃಪ್ತ ನೋವಿದೆ. ಅದು ನಿಮ್ಮದೇನು?”

ಅರವಿಂದನ ಉತ್ತರ ಸರಳವಾಗಿತ್ತು: ನೋವು ಇಲ್ಲದಿರುವ ಪ್ರೀತಿ ಅನ್ನೋದು ಇಲ್ಲ. ಹಾಗೆಂದು  ನಾನು ಪ್ರೀತಿಯಲ್ಲಿ  ನೋವನ್ನು ಹೊತ್ತಿದ್ದೇನೆಂದು ಅಲ್ಲ, ಆದರೆ,  ನಾನು ಪ್ರೀತಿಯ ತೀವ್ರತೆಯ ಅಳತೆಯಾಗಿ ನೋವನ್ನು ನೋಡುತ್ತಿದ್ದೇನೆ.”

ಹಲವಾರು ವರ್ಷಗಳ ನಂತರ, ಅರವಿಂದನ ಪುಸ್ತಕಅವಳು ಓದಿದ್ದ ಪತ್ರಭಾರತೀಯ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಯಿತು. ಪುಸ್ತಕವು ಪ್ರೇಮ ಪತ್ರದ ರೂಪದಲ್ಲಿ ಸಾಗುವ ಅಪೂರ್ಣ ಕತೆಪಾಠದ ನಡುವೆ ಅವಳ ಮಾತು, ಉತ್ತರವಿಲ್ಲದ  ಅಂತಿಮ.

ಮೌಲಿಕಾ ಪುಸ್ತಕವನ್ನು ಓದಿದಳು. ತನ್ನ ಹೆಸರನ್ನು ಎಡವಣಿಯಿಂದ ಬದಲಾಯಿಸಿದರೂ, ತನ್ನ ಕಥೆಯ ಪ್ರತಿಬಿಂಬವು ಅದರೊಳಗೆ ಕಾಣಿಸಿತ್ತು.

ಮೌಲಿಕಾಳ  ಕಣ್ಣಿಂದ  ನೀರೊಂದು ಬಿದ್ದಿತು, ಆದರೆ ನೋವು ಇಂದಿನ ನೋವಲ್ಲಅದು ಭವಿಷ್ಯ ಕಂಡುಕೊಳ್ಳದ ಭಾವನೆಗೆ ಬಂದ ಭಾವನಾತ್ಮಕ ಶ್ರದ್ದಾಂಜಲಿ!

ಅವರಿಬ್ಬರೂ ಮತ್ತೆ ಭೇಟಿಯಾಗಲಿಲ್ಲ. ಆದರೆ ಮೌಲಿಕಾ ಅರವಿಂದನ ಪ್ರತಿಯೊಂದು ಪುಸ್ತಕವನ್ನೂ ಓದುತ್ತಿದ್ದಳು.

ಅವನ ಪ್ರೀತಿಯು ಪುಸ್ತಕದ ಪುಟಗಳ ಮಧ್ಯೆ, ಯುವ ಮನಸ್ಸುಗಳ ನೆನಪಿನಲ್ಲಿ, ಬರಹದ ಕಡೆಯ ಅಕ್ಷರದಲ್ಲಿ ಮಾತ್ರವೇ ಉಳಿಯಿತು.

ಅರವಿಂದ cafeteria-ಯಾದ  ಕೊನೆಯ ಟೇಬಲ್ಲಲ್ಲಿ ಕುಳಿತು ಇವತ್ತೂ ಕೂಡ  ಬರೆಯುತ್ತಾನೆ:

ನಾನು ಅವಳನ್ನು ಇಂದೂ ಪ್ರೀತಿಸುತ್ತೇನೆ, ನನಗೆ ಅವಳಿಂದ ಪ್ರತಿಕ್ರಿಯೆ ಬೇಕಿಲ್ಲ. ಏಕೆಂದರೆ ಪ್ರೀತಿಗೆ ಪ್ರತಿಕ್ರಿಯೆ ಇಲ್ಲದಿರುವುದೇ ಇವತ್ತಿನ ನನ್ನ ಲೇಖನಗಳ ಆತ್ಮ.”

ಮೈಸೂರಿನ ಮೇಳದ ನಂತರ ವರ್ಷಗಳು ಕಳೆದಿದ್ದವು. ಅರವಿಂದನು ಈಗ ಬೆಂಗಳೂರಿನಲ್ಲಿ ಸ್ಥಿರವಾದರೂ, ಬರೆದ ಪ್ರತಿಯೊಂದು ಪುಸ್ತಕವೂ ದೇಶದ ವಿವಿಧ ಭಾಷೆಗಳಲ್ಲಿ ಅನುವಾದವಾಗುತ್ತಿತ್ತು. ಪತ್ರಿಕೆಗಳು, ಡಿಜಿಟಲ್ ಮ್ಯಾಗಜೀನ್ಗಳು ಅವನ ಬರಹಗಳಿಗೆ ಹೆಚ್ಚಿನ ಸ್ಥಾನ ನೀಡುತ್ತಿದ್ದವು. ಅವನಿಗೆ ಬರೆಯುವ ಸಾಮರ್ಥ್ಯ ಮಾತ್ರವಲ್ಲ, ನೋವನ್ನು ನುಡಿಯಲ್ಲಿ ಕೆತ್ತಿ ಶಿಲ್ಪ ಮಾಡುವ  ಶಕ್ತಿ ಜನರನ್ನು ಸೆಳೆಯುತ್ತಿತ್ತು.

"ಮೌಲಿಕಾ ನನ್ನ ಪ್ರೀತಿಯ ಪ್ರೇರಣೆಆದರೆ ನಾನು ಬರೆದಿರುವ ಪ್ರತಿ ಕಥೆಯು ಮತ್ತೊಂದು ಪ್ರೀತಿಗೆ ದಾರಿ ಹುಡುಕಲು ಸಹಾಯ ಮಾಡಲಿ"ಅರವಿಂದ ಒಂದು ಭಾಷಣದಲ್ಲಿ ಹೇಳಿದ್ದ ಮಾತು.


ಹೊಸಪಾತ್ರ: ಅನನ್ಯಾಓದುಗ ಬೆಳಕು

"ನಾನೇಕೆ ಕಥೆ ಓದಿ ಅತ್ತೆ ಅಂತ ನನಗೆ ಈಗಲೂ  ಅರ್ಥವಾಗಲಿಲ್ಲ. ಆದರೆ ಇದರ ಲೇಖಕನೊಳಗೆ ಇದ್ದ ಪ್ರೀತಿ, ಅದೆಷ್ಟು ತೀವ್ರವಾಗಿತ್ತು ಅಂದರೆ  ಅದನ್ನು ತಾನೇ ಅನುಭವಿಸುತ್ತಿದ್ದೆ ಎನಿಸಿಬಿಟ್ಟಿತ್ತು ." – ಮಾತುಗಳನ್ನು  ತಾನೇ ಮೊದಲ ಬಾರಿಗೆ ಇಮೇಲ್ಮೂಲಕ ಅರವಿಂದನಿಗೆ ಬರೆಯುತ್ತಿದ್ದಳು ಅನನ್ಯಾ, ಚೆನ್ನೈ ಮೂಲದ ಓದುಗಳು. ಬ್ಲಾಗ್ಇಟ್ಟುಕೊಂಡು ಕಿರು ಕಥೆಗಳನ್ನು, ತಾನೇ ಬರೆಯುತ್ತಿದ್ದಳು. ಆದರೆ ಅರವಿಂದನ "ಅವಳು ಓದಿದ್ದ ಪತ್ರ" ಓದಿದ ಮೇಲೆ ಆಕೆಯ ಬರವಣಿಗೆಯೇ ಬದಲಾಗಿತ್ತು.

ಅವಳು ಬರೆಯುವ ಮೇಲ್‌ ನಲ್ಲಿ  ಸಂಭ್ರಮ, ತಲ್ಲಣ, ಶುದ್ಧತೆ ತುಂಬಿತ್ತು. ಅವಳ ಪ್ರತಿಯೊಂದು ಇಮೇಲ್ ಅರವಿಂದನೊಳಗಿನ ಮೌನವನ್ನು  ಸ್ಪರ್ಶ ಮಾಡುತ್ತಿದ್ದವು. ಅವಳ ಇ-ಮೇಲ್‌ ಗಳು ಅವನ ಬರಹಕ್ಕೆ ಓರ್ವ ಅಭಿಮಾನಿ ನೀಡುವ ಪ್ರಶಸ್ತಿಯ ಗರಿಗಳಾಗಿದ್ದವು. ಅವಳ ಇ-ಮೇಲ್‌ ಗಳಿಗೆ ಅರವಿಂದನ ಆಗೊಂದು ಈಗೊಂದುಬರಹ ರೂಪದ ಉತ್ತರ ದೊರೆಯುತ್ತಿತ್ತು. ಹೀಗೆಯೇ  ಬರವಣಿಗೆಯ ಮೂಲಕ  ಅನನ್ನಾ ಮತ್ತು ಅರವಿಂದ ಅಕ್ಷರಗಳ ಸ್ನೇಹಿತರಾದರು.


ಮುಂದುವರಿಯುತ್ತದೆ…..

 

ಧನ್ಯವಾದಗಳು…..🌷🌷🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????