ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

"ಸಂಗಮವಿಲ್ಲದ ನೋಟ" : ಅರವಿಂದನ ಪ್ರೇಮಕಥೆ 💓💓💓

 


                                                     “ಸಂಗಮವಿಲ್ಲದ ನೋಟ”

ಪ್ರೀತಿ ಕುರುಡಾದರೂ, ಕೆಲವೊಮ್ಮೆ  ಪ್ರೀತಿಸುವ ಕಂಗಳು  ನಾವೆಲ್ಲಾ ಮರೆಮಾಡುವ ಸತ್ಯಗಳನ್ನು ನೋಡಬಲ್ಲದು.

ಬೆಂಗಳೂರು ನಗರದ ಅಂಚಿನಲ್ಲಿ ಹೊರಗಿನ ಹಳ್ಳಿಗಳನ್ನು ಸಿಟಿಗೆ ಬೆಸೆಯುವ ಮಧ್ಯದಲ್ಲಿ  ಇರುವ ಒಂದು ಸರ್ಕಾರಿ ಕಾಲೇಜು. ಅದೇ ಕಾಲೇಜಿನಲ್ಲಿ ಓದುತ್ತಿರುವ ಹುಡುಗ ಅರವಿಂದ.  ಜಮೀನ್ದಾರಿ ಮನೆತನದವರ ಊರಿನ ಮುಖ್ಯಸ್ಥರ  ಮನೆಯ ಹತ್ತಿರದ ಪಕ್ಕದ  ಊರಿನ ಹುಡುಗ ಅರವಿಂದ್,  ಆತನ ತಂದೆ ತಾಯಿಯರು  ಆ ಊರಿನ ಮುಖ್ಯಸ್ಥರ ಜಮೀನಿನಲ್ಲಿಯೇ ಕೆಲಸ ಮಾಡಿಕೊಂಡು ಮಗನನ್ನು ಬೆಂಗಳೂರಿನಲ್ಲಿ ಓದಿಸುತ್ತಿದ್ದರು.  ಕನ್ನಡ ಮಾಧ್ಯಮದಲ್ಲಿ ಓದಿ  ಬೆಳೆದವನಾಗಿದ್ದರೂ, ಕಲಿಯುವಾಸೆ ಹೆಚ್ಚಿರುವ  ಹುಡುಗ. ಸ್ವಾಭಾವಿಕವಾಗಿ ಎಲ್ಲರಿಗಿಂತ ನಿಧಾನವಾಗಿ ಮಾತನಾಡುವ ವ್ಯಕ್ತಿ, ಆದರೆ ಹೃದಯದಲ್ಲಿ ಹೆಚ್ಚು ಹೆಚ್ಚು ಪ್ರೀತಿಯ  ಭಾವನೆಗಳನ್ನೇ  ಹರಿಯಲು ಬಿಟ್ಟು ತನ್ನಲ್ಲೇ ಆನಂದಿಸುತ್ತಿದ್ದವ.

ಪ್ರತಿ ಬೆಳಗ್ಗಿನಂತೆ ಸೂರ್ಯ ತನ್ನ ಕೆಲಸವನ್ನು ದೀಪ ಬೆಳಗಿಸುವ ಮೂಲಕ  ಪ್ರಾರಂಭಿಸುವ ಹಾಗೆ  ಬೆಂಗಳೂರು  ವಾಹನ ದಟ್ಟಣೆಯ ಆ ಒತ್ತಡದ ಬದುಕಿನಲ್ಲಿ, ಅರವಿಂದನ  ಜೀವ ಒಂದು ನಿರೀಕ್ಷೆಯಲ್ಲಿ ಬಾಳುತ್ತಿತ್ತುಅವಳನ್ನು ಒಂದು ಬಾರಿ ಕಾಣುವ ಹಂಬಲದಿಂದಾಗಿ.

ಮೌಲಿಕಾ. ಹೆಸರು ಕೇಳಿದ ಮಾತ್ರಕ್ಕೆ  ಹೃದಯ ಬಿಸಿಯಾಗುವಂತ ಅನುಭವ. ಆಕೆ ಕ್ಲಾಸ್ಗೆ ಬಂದ ಮೊದಲ ದಿನವೇ,  ಅರವಿಂದ್ ಅವಳನ್ನು ನೋಡಿದ  ಮೊದಲ ನೋಟದಲ್ಲೇ  ಕಳೆದುಹೋಗಿದ್ದನು. ಆಕೆ ಚಿಕ್ಕಮಗಳೂರಿನ ಮಂಜಿನ  ಹಾಡು ಗುನುಗಿದಂತೆ ನಗುತ್ತಿದ್ದಳು. ಇಂಗ್ಲಿಷ್ನಲ್ಲಿ ಮಾತನಾಡುವವಳು, ಆದರೆ ಕನ್ನಡದ ಹಾಡುಗಳನ್ನ ಮೆಚ್ಚುವ ಹುಡುಗಿ. ಅವಳ ಕೂದಲಲ್ಲಿ ಮಳೆಯ ನರ್ತನವೇ  ಇದ್ದಂತೆ ಕಾಣುತ್ತಿತ್ತು.

ಅರವಿಂದ್ ಅವಳ ಪಕ್ಕದಲ್ಲಿ ಕುಳಿತಿದ್ದವನಿಗೆ, ಅವನ ಹೃದಯವು ಅವಳ ಅಂದಕ್ಕೆ  ಜ್ಞಾನಪೀಠ  ಪ್ರಶಸ್ತಿಯನ್ನೇ  ಅರ್ಹವೆಂದು  ಅರ್ಪಿಸಿತ್ತು. ಅವಳು ಮಾತನಾಡುತ್ತಿದ್ದ ಪ್ರತಿ ಮಾತುಗಳು , ಅವನ ಕಿವಿಗಳಿಗೆ ಸುಮಧುರ ಸಂಗೀತದಂತೆ ಭಾಸವಾಗುತ್ತಿತ್ತು.

ಅರವಿಂದ್‌ ಪ್ರತಿದಿನವೂ ಕಾಲೇಜು ಮುಗಿಸಿ  ಹಾಸ್ಟೆಲ್ ಗೆ ಹೋದ ಕೂಡಲೇ ತನ್ನ ಡೈರಿಯಲ್ಲಿ ಪ್ರತಿದಿನವೂ  ಅವಳ ಬಗ್ಗೆಯೇ  ಬರೆಯುತ್ತಿದ್ದ.  ಅವಳ ಮಾತು ಹಾವ ಭಾವ , ನಡಿಗೆ , ಅವಳ ಆ ಮಾರ್ಧವತೆ ತುಂಬಿದ ಇಂಗ್ಲೀಷ್‌ ಬಾಷೆ ಎಲ್ಲವೂ ಅವನನ್ನು ಅವಳೆಡೆಗೆ ಸೆಳೆದಿದ್ದವು. ಹಳ್ಳಿಯಲ್ಲಿ ಬೆಳೆದವನಿಗೆ ಮೌಲಿಕಾಳಷ್ಟು  ಸುಂದರಿಯಾದ ಹೆಣ್ಣನ್ನು ಅವನು ಇದುವರೆಗೂ ಕಂಡಿರಲಿಲ್ಲ.

 ಅರವಿಂದನ ಡೈರಿಯ ಪ್ರತಿ ಪುಟದಲ್ಲಿಯೂ ಬರೆಯಲ್ಪಟ್ಟ ಅಕ್ಷರವೆಲ್ಲವೂ  ಅವಳದೇ  ಇಂದು ಅವಳು ನನ್ನ ಪಕ್ಕ ಬಂದು ನಿಂತಾಗ , ಬಟ್ಟೆಗಳಲ್ಲಿ ಮೊದಲ  ಮಳೆಯ ಘಮ.  ಅವಳ ಮಾತುಗಳಲ್ಲಿ  ಆ ಇಂಗ್ಲೀಷ್‌  ಬಾಷೆಯ  however,  because, but… ಇದ್ದರೂ, ನನ್ನಲ್ಲಿ ಅವಳನ್ನು ಕೇಳೋ ಶಬ್ದ ಮಾತ್ರ ''… ನನ್ನ ಪ್ರೇಮ ದೇವತೆಹೀಗೆಯೇ   ದಿನದಿನಕ್ಕೆ ಅರವಿಂದನಲ್ಲಾಗುತ್ತಿದ್ದ ಆ ಬದಲಾವಣೆಗಳು  ಅವನ ಗೆಳೆಯರ ಗಮನಕ್ಕೂ ಬಂದಿದ್ದವು.

 ಕಾಲೇಜಿನ ಆವರಣದಲ್ಲಿ ಒಂದು ದಿನ

  ಅವನ ಗೆಳೆಯರು ಅವನ ಪ್ರೀತಿಯ ಬಗ್ಗೆ ಕೇಳಿದರು:
ಅಲ್ವೋ ಅರವಿಂದ, ಪ್ರೀತಿ ಅನ್ನೋದು ಕುರುಡಾ ಅಂತಾರೆ. ಅದರಲ್ಲೂ ನಿಂದು ವನ್‌ ವೇ ಲವ್‌ , ಅವಳೋ ಬ್ರಿಟೀಷ್‌ ರಾಜ್ಕುಮಾರಿ, ನೀನು  ಹಳ್ಳಿಲಿ ವ್ಯವಸಾಯ ಮಾಡೋನು, ಹಿಂಗೆ ಆದರೆ  ನಿನ್ನ ಪ್ರೀತಿ ಕೇವಲ ಕನಸು ಬಿಡು.”
 ಗೆಳೆಯರ ಞಿ ಮಾತಿಗೆ  ಅವನ ಉತ್ತರ ಸ್ಪಷ್ಟ:
ನಾನು  ಕಣ್ಣಾರೆ ನೋಡಿರದು ಅವಳ ಅಂದನೇ ಆದರೂ .ಪ್ರೀತಿ ಹುಟ್ಟಿರದು ಮಾತ್ರ ನನ್ನ  ಹೃದಯದಲ್ಲಿ ಅದು ಯಾವಾಗಲೂ  ನಿಜನೇ ಹೇಳುತ್ತೆ. ನಾನು ಅವಳನ್ನು ನನ್ನ ಪ್ರಾಣಕ್ಕಿಂತ ಹೆಚ್ಚಾಗಿ  ಪ್ರೀತಿ ಮಾಡುತ್ತೀನಿ , ನನಗೆ  ಅದು ಸಾಕು, ಈ ಪ್ರೀತಿ ಅವಳಿಗೂ ತಿಳಿಯೋ ಸಮಯ ಬಂದೇ ಬರುತ್ತೇ ನಾನು ಅಲ್ಲಿವರೆಗೂ ಕಾಯುತ್ತೀನಿ.”


ಒಂದು ದಿನ ಲೈಬ್ರರಿಯಲ್ಲಿ ಅರವಿಂದ್ ಯಾರದೋ  ನಿರೀಕ್ಷೆ ಮಾಡುತ್ತಾ  ಕುಳಿತಿದ್ದ. ಮೌಲಿಕಾ ಆತನ ಹತ್ತಿರ ಬಂದು ಕೇಳಿದಳು:

ಅರವಿಂದನ ಕೈಯಲ್ಲಿದ್ದ ಪುಸ್ತಕ ರವಿ ಬೆಳಗೆರೆ ಅವರ “ಹೇಳಿಹೋಗು ಕಾರಣ”  ಪುಸ್ತಕವನ್ನು ಕಂಡವಳೇ ಮೌಲಿಕ ಅರವಿಂದನನ್ನು,

" ಪುಸ್ತಕ ನನಗೆ ಇನ್ನೂ ಓದಲು  ಸಿಕ್ಕಿಲ್ಲ ಅರವಿಂದ್, ನೀನು ತಗೊಂಡ ಬಿಟ್ಟಾ?" ಅವಳ ಆ ಮಾತುಗಳು  ಅವನ ಹೃದಯದಲ್ಲಿ  ಮುತ್ತುಗಳ ರಾಶಿಯನ್ನೇ  ಹರಡಿತ್ತು.
"ಹ್ಞಾ ನಾನು ಈಗ ತಗೋಂಡೆ ತಗೋ ನೀನು ಓದು  ಕೊಡ್ತೀನಿ," ಎಂದ.

ಕ್ಷಣದ ಆಕೆ  ಮುಖದಲ್ಲಿ ಕಂಡ  ನಗು, ಅವನ ಜೀವನದ ಕೊನೆಯವರೆಗೂ ಉಳಿಯುವ ಛಾಯೆ ಆಗಿ ಬಿಟ್ಟಿತು.


ಅವನೊಳಗಿನ ಪ್ರೇಮದ ಸುಪ್ತ ಭಾವಗಳು ದಿನದಿಂದ ದಿನಕ್ಕೆ ತುಂಬಿ ಹರಿಯುತ್ತಿದ್ದವು. ಆದರೆ ಆಕೆಯ ಅವನೆಡೆಗಿನ  ಕೆಲವೊಮ್ಮೆ ಬೀಳುವ  ನೋಟಗಳು ಮತ್ತು ಮಾತುಗಳು ಅವನೊಬ್ಬ ಸ್ನೇಹಿತನೆಡೆಗೆ ತೋರುವ ಸಲುಗೆಯಂತೆಯೇ  , ನಕ್ಕು ಮಾತಾಡುತ್ತಿದ್ದಳು. ಪ್ರೀತಿಯ ನೋಟದಿಂದ ನೋಡಿದ್ದರೆ ಅವಳಿಗೆ ಅವನ ಪ್ರೀತಿ ತಿಳಿಯುತ್ತಿತ್ತು.

ಸ್ನೇಹ ಬೆಳೆದಂತೆ ಅವರೊಡಗಿನ ಒಡನಾಟವು ಬೆಳೆಯಿತೇ ಹೊರತು . ಆದರೆ ಆಕೆಯ ಮಾತುಗಳಲ್ಲಿ ಅರವಿಂದನೆಡೆಗೆ ಯಾವುದೇ  ಪ್ರೇಮ ಭಾವ  ಸ್ಪಷ್ಟವಾಗಿರಲಿಲ್ಲ.

ಅರವಿಂದನ ಹೃದಯದಲ್ಲಿ ಬೆಳೆದು ಹೆಮ್ಮರವಾದ ಪ್ರೀತಿ ಭಾವನೆಗಳನ್ನು ಇನ್ನು ಅದುಮಿಡಲಾರದೇ

ಒಂದು ದಿನ, ಆತ ತನ್ನ ಎಲ್ಲ ಭಾವನೆಗಳನ್ನು ಒಂದು ಪತ್ರದಲ್ಲಿ ಬರೆದ.
ಅದು ಕೇವಲ ಪತ್ರವಾಗಿರಲಿಲ್ಲ , ಅವನ ಜೀವದ ನಕ್ಷೆಯಾಗಿತ್ತು.

ಮೌಲಿಕಾ,
ನಾನು ನಿನ್ನನ್ನು ನೋಡಿದ ಮೊದಲ ಕ್ಷಣದಿಂದಲೇ  ಪ್ರೀತಿ ಮಾಡುತ್ತಿದ್ದೇನೆ. ನೀನು ನನ್ನ  ಈ ಹೃದಯದ  ಮಾತು ಓದಿದರೆ ಸಾಕು, ಉತ್ತರ  ಬರೆಯಬೇಕಾಗಿಲ್ಲ. ನಿನ್ನ ನಗುವಿನಲ್ಲಿ ನಾನು ಬಾಳುತ್ತಿದ್ದೇನೆ. ನೀನು ನನ್ನ ಬದುಕಿಗೆ ಪ್ರೀತಿಯ ಬೆಳಕು ತಂದ ತಾರೆಯಾಗಿದ್ದೀಯ...”

ಪತ್ರವನ್ನು  ಅವಳು ಓದಿದಂತೆ, ತನ್ನ ಪ್ರೀತಿಯನ್ನು ಒಪ್ಪಿ, ಓಡಿಬಂದು ತನ್ನನ್ನು ಅಪ್ಪಿಕೊಂಡು ಮುತ್ತಿನ ಮಳೆಗರೆದಂತೆ  ತನ್ನ ಹೃದಯ ಕನಸು ಕಂಡಿತ್ತು.

 ಆದರೆ ಪತ್ರ ತಲುಪಿಸಿ  ದಿನ ಕಳೆದರೂ, ಆಕೆಯಿಂದ ಯಾವ ಪ್ರತಿಕ್ರಿಯೆಯು ಬರಲಿಲ್ಲ. ಬದಲಿಗೆ  ಕಾಲೇಜಿಗೆ ಬರುತ್ತಿದ್ದ ಆಕೆ, ಒಂದು ದಿನ ಅಚಾನಕ್‌ ಆಗಿ ಕಾಲೇಜಿಗೆ ಬರುವುದನ್ನೇ ನಿಲ್ಲಿಸಿಬಿಟ್ಟಳು.


ನೋವಿನ ಅರಿವಿನ ದಿನ

ಒಂದು ದಿನ ಅರವಿಂದ್ ತನ್ನ ಸ್ನೇಹಿತನ ಫೋನ್ನಲ್ಲಿದ್ದ ಫೋಟೋ  ನೋಡಿ ಬೆರಗಾದನು.
ಮೌಲಿಕಾ ಮದುವೆ ಆಗಿದ್ದಳು.

ಅವನಿಗೆ ಮೌನ ತುಂಬಿದ  ಫೋಟೋ,ಸುತ್ತಮುತ್ತಲಿನ ವಾತಾವರಣವೇ   ಮೌನ ಆದಂತೆ ಅನಿಸಿತು. ಮುಖದಲ್ಲಿ ಒಂದು ವಿಷಣ್ಣತೆಯ ನಗು, ಆದರೆ ಹೃದಯದಲ್ಲಿ ಬಂಡೆಗಲ್ಲು ಸ್ಪೋಟಿಸಿದ ಧ್ವನಿ.

ಆದರೂ ಆತ ನಕ್ಕಒಳಗೊಳಗೆ ಅತ್ತ. ಎನೋ ಒಂದು ರೀತಿಯ ನೋವು ಎನಿಸುತ್ತಿತ್ತು, ಆದರೂ  ಒಂದು ವಿಚಿತ್ರ ತೃಪ್ತಿ:
"ಅವಳು ನನ್ನೊಂದಿಗೆ ಇರ್ಲಿಲ್ಲನಿಜ  , ಆದರೆ ನಾನು ಅವಳೊಂದಿಗೆ ಬದುಕಿದ್ದೆ, ಮುಂದೆಯೂ ಕೂಡ ಹೀಗೆಯೇ ಬದುಕುತ್ತೇನೆ ."


ಕಾಲ ಕಳೆದರೂಪ್ರೀತಿ ಉಳಿಯುತ್ತದೆ

ಅವನ ಪ್ರೀತಿ ಪತ್ರವಾಗಿತ್ತು, ನಂತರ ಲೇಖನವಾಗಿ, ನಂತರ ಪುಸ್ತಕವಾಗಿ.
"ಸಂಗಮವಿಲ್ಲದ ನೋಟ" ಎಂಬ ಕಿರುಕಥಾ ಸಂಕಲನ ಪ್ರಕಟವಾಯಿತು. ಮೈಸೂರಿನ ಪುಸ್ತಕ ಮೇಳದಲ್ಲಿ.

ಸಾಹಿತ್ಯದ ಮೇಳದಲ್ಲಿ ಅವನ ಮಾತು ಕೇಳುವ ಜನ ತುಂಬಿದ್ದರು. ಅವನು ಏನೇ ಹೇಳಿದರೂ, ಅವನ ಉಸಿರಲ್ಲಿ ಇನ್ನೂ ಹೆಸರು ಇತ್ತು.

ಪುಸ್ತಕ ಮೇಳದ ಕೊನೆಗೆ ಒಂದು ಹುಡುಗಿ ಹತ್ತಿರ ಬಂದು ಕೇಳಿದಳು:
" ಕಥೆ ನಿಜನಾ?"

ಅವನ ಕಣ್ಣು ತುಂಬಿತ್ತು. ಅವಳುಮೌಲಿಕಾ!
ಮುಖದ ಮೇಲೆ ತುಂಟ ನಗು, ಕಣ್ಣಲ್ಲಿ ಕ್ಷಮೆ, ಹೃದಯದಲ್ಲಿ ಹೇಳತೀರದ ಭಾವನೆ.

"ನಾನು ಓದಿದ್ದೆ ಆ ಪ್ರೇಮಪತ್ರವನ್ನು, ಆದರೆ ನಿನಗೆ ಹೇಳುವ ಮೊದಲೇನನ್ನ ಜಗತ್ತು ಬದಲಾಗಿತ್ತು. ನಾನು ಯಾವತ್ತೂ ನಿನ್ನ ಸ್ನೇಹವನ್ನು ತಪ್ಪಾಗಿ ನೋಡಿಲ್ಲ, ದಯವಿಟ್ಟು ಕ್ಷಮಿಸು ."

ಅರವಿಂದ ; "ನೀನು ಓದಿದ್ದೆ ಅಂದ್ರೆ ಸಾಕು ನನ್ನ ಪ್ರೇಮದ ಅಲೆಗಳು ನಿನ್ನ ಹೃದಯವನ್ನು ತಾಕಿದ್ದರೆ ಸಾಕು. ಪ್ರೀತಿಗೆ ಸಫಲತೆಯ ಅಗತ್ಯವಿಲ್ಲ, ಮನಸ್ಸಿಗೆ ತಾಕುವ ಸತ್ಯವಿದ್ದರೆ ಸಾಕು."


ಅವರು ನಂತರ ಮತ್ತೆ ಭೇಟಿಯಾಗಲು ಸಾಧ್ಯವಾಗಲೇ ಇಲ್ಲ.

ಆದರೆ ಅರವಿಂದ್ ಯಾವಾಗಲೂ  cafeteria-ಯದ ಒಂದು ಕೋಣೆಯಲ್ಲಿ ಕುಳಿತು, ಅವಳ ನಗುವನ್ನು ನೆನೆಸುತ್ತಲೇ ಬರೆದಿದ್ದ:

ಪ್ರೀತಿಗೆ ಕಣ್ಣು ಇರೋದಿಲ್ಲ ನಿಜ. ಆದರೆ ಅದಕ್ಕೆ  ನಮ್ಮನ್ನು ನೋಡುವ ದೃಷ್ಟಿಯಿರುತ್ತೆ.”


 

ಮುಂದುವರಿಯುತ್ತದೆ…💓💓💓


ಧನ್ಯವಾದಗಳು.....🌷🌷🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????