ಶೌರ್ಯ, ವೀರತೆ, ತೇಜಸ್ಸು, ಧೈರ್ಯ, ದಕ್ಷತೆ ಮತ್ತು ಯುದ್ದದಲ್ಲಿ ಹೆಚ್ಚಿನ ಸಂಕಟ ಉಂಟಾದರೂ ಓಡಿಹೋಗದಿರುವುದು, ದಾನವನ್ನು ಕೊಡುವುದು ಇದೆಲ್ಲವೂ ಕ್ಷತ್ರಿಯನ ಸ್ವಾಭಾವಿಕವಾದ ಕರ್ಮಗಳಾಗಿವೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ದಾನ ಕೊಡುವುದು
ಎಂದರೇನು?
ಉತ್ತರ:- ತನ್ನ
ಸತ್ತ್ವವನ್ನು ಉದಾರತೆಯಿಂದ ಯಥಾವಶ್ಯಕ ಯೋಗ್ಯ ಪಾತ್ರರಿಗೆ ಕೊಡುತ್ತಾ ಇರುವುದು ದಾನಕೊಡುವುದಾಗಿದೆ.
ದಕ್ಷತೆ ಎಂದರೇನು?
ಉತ್ತರ:- ಪರಸ್ಪರ
ಜಗಳ ಮಾಡುವವರ ನ್ಯಾಯ ಮಾಡುವುದರಲ್ಲಿ ತನ್ನ ಕರ್ತವ್ಯದ ನಿರ್ಣಯದಲ್ಲಿ ಮತ್ತು ಪಾಲನೆ ಮಾಡುವುದರಲ್ಲಿ
, ಯುದ್ದ ಮಾಡುವುದರಲ್ಲಿ ಹಾಗೂ ಮಿತ್ರ-ಶತ್ರು ಮತ್ತು ಮಧ್ಯಸ್ಥರಲ್ಲಿ ಯಥಾ ಯೋಗ್ಯ
ವ್ಯವಹಾರ ಮಾಡುವುದು ಮೊದಲಾದವುಗಳಲ್ಲಿ ಯಾವ ʼಕುಶಲತೆʼ ಇದೆಯೊ ಅದರ ಹೆಸರು ʼದಕ್ಷತೆʼ ಯಾಗಿದೆ.
ಯುದ್ದದಲ್ಲಿ
ಓಡದೇ ಇರುವುದು ಎಂದು ಯಾವುದಕ್ಕೆ ಹೇಳುತ್ತಾರೆ?
ಉತ್ತರ:- ಯುದ್ದ ಮಾಡುತ್ತಿದ್ದಾಗ ಭಾರಿ ದೊಡ್ಡ ಸಂಕಟವು ಒದಗಿದಾಗಲೂ ಕೂಡ ಬೆನ್ನು ತೋರಿಸದೇ ಇರುವುದು, ಪ್ರತಿಯೊಂದು ಪರಿಸ್ಥಿಯಲ್ಲೂ ನ್ಯಾಯ ಪೂರ್ವಕವಾಗಿ ಎದುರಿಸಿ
ತನ್ನ ಶಕ್ತಿಯ ಪ್ರಯೋಗ ಮಾಡುತ್ತಾ ಇರುವುದು ಮತ್ತು ಪ್ರಾಣಗಳ ಪರಿವೆ ಇಲ್ಲದೆ ಯುದ್ದದಲ್ಲ ನೆಲೆನಿಲ್ಲುವುದೆ
ಯುದ್ದದಲ್ಲಿ ಓಡದೇ ಇರುವುದಾಗಿದೆ.ಇದೇ ಧರ್ಮವನ್ನು
ಧ್ಯಾನದಲ್ಲಿಟ್ಟುಕೊಂಡು ವೀರ ಬಾಲಕ ಅಭಿಮನ್ಯುವು
ಆರು ಮಂದಿ ಮಹಾರಥಿಕರೊಂದಿಗೆ ಓರ್ವನೇ ಯುದ್ದ
ಮಾಡಿ ಪ್ರಾನವನ್ನು ತೆತ್ತನು ಆದರೆ ಶಸ್ತ್ರವನ್ನು
ತ್ಯಜಿಸಲಿಲ್ಲ.
ಆಧುನಿಕ ಕಾಲದಲ್ಲಿಯೂ ರಾಜಸ್ತಾನದ ಇತಿಹಾಸದಲ್ಲಿ ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ಅದರಲ್ಲಿ ವೀರರಜಪೂತರು ಯುದ್ದದಲ್ಲಿ ಸೋತುಹೋದರೂ ಶತ್ರುವಿಗೆ ಬೆನ್ನು ತೋರಿಸುತ್ತಿರಲಿಲ್ಲ ಮತ್ತು ಒಬ್ಬಂಟಿಗರಾಗಿ ಸಾವಿರಾರು
ಸೈನಿಕರೊಡನೆ ಹೋರಾಡಿ ಪ್ರಾನಗಳನ್ನು ತೆರುತ್ತಿದ್ದರು.
ಯಾವುದನ್ನು ಧೈರ್ಯ
ಎಂದು ಹೇಳುತ್ತಾರೆ?
ಉತ್ತರ:- ದೊಡ್ಡ ದೊಡ್ಡ ಸಂಕಟಗಳು ಬಂದೊದಗಿದರೂ, ಯುದ್ದಸ್ಥಳದಲ್ಲಿ ಶರೀರಕ್ಕೆ ಬಾರಿ ಏಟು ತಗುಲಿದರೂ ತನ್ನ ಪುತ್ರ – ಪೌತ್ರರು ಸತ್ತು ಹೋದಾಗ , ಸರ್ವಸ್ವ ನಾಶವಾದಾಗ ಅಥವಾ ಇದೇ ರೀತಿಯ ಬೇರೆ ಯಾವುದೇ ಪ್ರಕಾರದ
ಬಾರೀದೊಡ್ಡ ವಿಪತ್ತುಗಳು ಬಂದು ಒದಗಿದರೂ ವ್ಯಾಕುಲನಾಗದಿರುವುದು ಮತ್ತು ತನ್ನ ಕರ್ತವ್ಯ ಪಾಲನೆಯಲ್ಲಿ ಎಂದೂ ವಿಚಲಿತನಾಗದೇ ನ್ಯಾಯಾನುಕೂಲ
ಕರ್ತವ್ಯ ಪಾಲನೆಯಲ್ಲಿ ಸಂಲಗ್ನನಾಗಿರುವುದು – ಇದರ ಹೆಸರು ʼಧೈರ್ಯʼವಾಗಿದೆ.
ತೇಜಸ್ಸು ಯಾವುದರ
ಹೆಸರಾಗಿದೆ?
ಉತ್ತರ:- ಯಾವ ಶಕ್ತಿಯ ಪ್ರಭಾವದಿಂದ ಬೇರೆಯವರ ಒತ್ತಡವನ್ನು ಒಪ್ಪಿಕೊಂಡು ಯಾವುದೇ ಕರ್ತವ್ಯ ಪಾಲನೆಯಿಂದ ಎಂದೂ ವಿಮುಖನಾಗುವುದಿಲ್ಲವೋ ; ಮತ್ತು ಬೇರೆ ಜನರು ಅನ್ಯಾಯದ
ಮತ್ತು ಅವನಿಗೆ ಪ್ರತಿಕೂಲ ವ್ಯವಹಾರ ಮಾಡುವುದರಲ್ಲಿ
ಹೆದರುತ್ತಾರೋ ಆ ಶಕ್ತಿಯ ಹೆಸರು ತೇಜಸ್ಸಾಗಿದೆ. ಇದನ್ನೇ ಪ್ರತಾಪ ಮತ್ತು ಪ್ರಭಾವ ಎಂದೂ ಹೇಳುತ್ತಾರೆ.
ಯಾವುದನ್ನು ಶೂರತೆ-ವೀರತೆ
ಎಂದು ಹೇಳುತ್ತಾರೆ?
ಉತ್ತರ:- ದೊಡ್ಡ ದೊಡ್ಡ ಬಲಿಷ್ಠನಾದ ಶತ್ರುವನ್ನು ನ್ಯಾಯ ಯುಕ್ತವಾಗಿ ಎದುರಿಸಲು ಭಯಪಡದೇ ಇರುವುದು ಹಾಗೂ ನ್ಯಾಯಯುಕ್ತ ಯುದ್ಧ ಮಾಡುವುದರಲ್ಲಿ ಸದಾಕಾಲ ಉತ್ಸಾಹಿತನಾಗಿರುವುದು ಮತ್ತು ಯುದ್ದದ ಸಮಯದಲ್ಲಿ ಸಾಹಸ ಪೂರ್ವಕ ಗಂಭೀರತೆಯಿಂದ ಯುದ್ಧ ಮಾಡುತ್ತಾ ಇದುವುದೇ ʼಶೂರ – ವೀರತೆʼ ಯಾಗಿದೆ. ಭೀಷ್ಮ ಪಿತಾಮಹರ ಜೀವನ ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ.
ಶೌರ್ಯ, ವೀರತೆ,
ತೇಜಸ್ಸು, ಧೈರ್ಯ, ದಕ್ಷತೆ ಮತ್ತು ಯುದ್ದದಲ್ಲಿ ಹೆಚ್ಚಿನ
ಸಂಕಟ ಉಂಟಾದರೂ ಓಡಿಹೋಗದಿರುವುದು, ದಾನವನ್ನು ಕೊಡುವುದು ಮತ್ತು ಸ್ವಾಮಿಭಾವ ಹೀಗೆ ಇದೆಲ್ಲವೂ
ಕ್ಷತ್ರಿಯನ ಸ್ವಾಭಾವಿಕವಾದ ಕರ್ಮಗಳಾಗಿವೆ.
🏹🏹🏹🏹🏹🏹🏹🏹🏹🏹🏹🏹🏹🏹
ನಮ್ಮ
ಪ್ರೀತಿಯ ಪುರಾಣ ಕಥೆಗಳಿಂದ ಸ್ಪೂರ್ತಿ ಪಡೆವಂತ ಮಹಾನ್ ನಾಯಕರ
ಕಿರು ಪರಿಚಯ
ರಾಮಾಯಣ
ಮತ್ತು ಮಹಾಭಾರತವು ಕೇವಲ ಭಾರತದ ಪುರಾತನ ಕಥೆಗಳು ಮಾತ್ರವಲ್ಲ, ಇಂದಿನ ಜೀವನಕ್ಕೂ ಅನ್ವಯಿಸಬಹುದಾದ ಅಮೂಲ್ಯ ಪಾಠಗಳನ್ನು ಹೊಂದಿವೆ. ಈ ಮಹಾಕಾವ್ಯಗಳು ನೈತಿಕತೆ,
ಧರ್ಮ, ಹಾಗೂ ಮಾನವೀಯ ಮೌಲ್ಯಗಳ
ಸಂಕಲನ. ಈ ಲೇಖನದಲ್ಲಿ, ಕೆಲವು
ಪ್ರಮುಖ ಪುರಾಣ ಕಥೆಗಳು ಮತ್ತು ಅವುಗಳಿಂದ ನಾವು ಇಂದಿನ ಜೀವನಕ್ಕೆ
ತೆಗೆದುಕೊಳ್ಳಬಹುದಾದ ಪಾಠಗಳನ್ನು ಆಧುನಿಕ ಉದಾಹರಣೆಗಳೊಂದಿಗೆ ತೋರಿಸಲಾಗಿದೆ.
ಭೀಷ್ಮನು
ಮಹಾಭಾರತದ ಮಹಾನ್ ಪಾತ್ರಗಳಲ್ಲಿ ಒಬ್ಬರು. ಅವರು ಕ್ಷಾತ್ರಗುಣಗಳ ನಿಜವಾದ
ಪ್ರತೀಕ. ಭೀಷ್ಮನ ಜೀವನದ ಪ್ರತಿಯೊಂದು ಹಂತವು ಧರ್ಮ, ತ್ಯಾಗ, ಮತ್ತು ಶ್ರದ್ಧೆಯ ಪ್ರತಿರೂಪವಾಗಿದೆ.
ಭೀಷ್ಮನ
ಕ್ಷಾತ್ರಗುಣಗಳು
1. ಪ್ರತಿಜ್ಞಾ
ಪಾಲನೆ (ವಚನ ಪಾಲನೆ)
ಭೀಷ್ಮನು
ಶಂತನು ಮಹಾರಾಜನಿಗೆ ಮಾಡಿದ ಭೀಷ್ಮಪ್ರತಿಜ್ಞೆಯು ಅವರ ಮಹಾನ್ ಕ್ಷಾತ್ರಗುಣದ
ಪರಾಕಾಷ್ಠೆ. ತಂದೆಯ ಪ್ರೀತಿಗಾಗಿ ಅವರು ತಮ್ಮ ಜೀವಮಾನ ಪರ್ಯಂತ ಬ್ರಹ್ಮಚರ್ಯವ್ರತದ ಪ್ರತಿಜ್ಞೆ ಮಾಡಿದರು. ತಮ್ಮ ಮಾತುಗಳನ್ನು ಯಾವ
ಪರಿಸ್ಥಿತಿಯಲ್ಲಿಯೂ ಮುರಿಯದೆ, ಜೀವನದ ಕೊನೆಯ ಕ್ಷಣದವರೆಗೂ ಪಾಲಿಸಿದರು. ಇದು ಪ್ರತಿಜ್ಞೆ ಮತ್ತು
ನಿಷ್ಠೆಯ ಬಗ್ಗೆ ನಮಗೆ ದೊಡ್ಡ ಪಾಠವನ್ನು
ಕಲಿಸುತ್ತದೆ.
2. ಧರ್ಮನಿಷ್ಠೆ
ಭೀಷ್ಮನು
ಸದಾ ಧರ್ಮದ ಮಾರ್ಗವನ್ನು ಅನುಸರಿಸಿದರು. ಅವರು ಯಾವಾಗಲೂ ನ್ಯಾಯ
ಮತ್ತು ಸತ್ಯದ ಪರವಾಗಿ ನಿಂತರು. ಕುರುಕುಲದ ಹಿರಿಯರೆಂಬ ನಿಲುವಿನಿಂದ ಪಾಂಡವರು ಮತ್ತು ಕೌರವರು ಇಬ್ಬರಿಗೂ ಸಮನ್ಯಾಯವಾಗಿ ವರ್ತಿಸಿದರು. ಮಹಾಭಾರತದ ಯುದ್ಧದಲ್ಲಿ, ತಮ್ಮ ಕರ್ತವ್ಯಕ್ಕಾಗಿ ಕೌರವರ
ಪರವಾಗಿ ಹೋರಾಡಿದರೂ ಧರ್ಮವನ್ನು ಮರೆಯಲಿಲ್ಲ.
3. ಅಹಂಕಾರರಹಿತ
ಸೇವಾ ಮನೋಭಾವ
ಭೀಷ್ಮನು
ಅರಸನಾಗುವ ಹಕ್ಕನ್ನು ತ್ಯಜಿಸಿ, ಪಿತಾಮಹನಾಗಿ ರಾಜವಂಶದ ಕಲ್ಯಾಣಕ್ಕಾಗಿ ಶ್ರಮಿಸಿದರು.
ತಮ್ಮ
ವೈಯಕ್ತಿಕ ಇಚ್ಛೆಗಳಿಗೆ ಆದ್ಯತೆ ನೀಡದೆ, ಕುರುವಂಶದ ಗೌರವ ಮತ್ತು ಕಲ್ಯಾಣಕ್ಕಾಗಿ
ಕೆಲಸ ಮಾಡಿದರು.
4. ಶತ್ರುವಿನ
ಮೇಲಿನ ಸೌಹಾರ್ದತೆ
ಯುದ್ಧಕ್ಷೇತ್ರದಲ್ಲೂ
ಸಹ ಭೀಷ್ಮನು ಶತ್ರುಗಳ ಮೇಲೂ ಕೃಪೆ ಮತ್ತು
ಗೌರವವನ್ನು ತೋರಿಸಿದರು.
ಅವರ
ಶಿಸ್ತು, ಧೈರ್ಯ, ಮತ್ತು ಶಾಂತಿಯ ಪರಿಪೂರ್ಣ ಉದಾಹರಣೆಗಳು ನಮ್ಮಲ್ಲಿ ಮಾನವೀಯತೆಯ ಬೆಲೆಗಳನ್ನು ಬೆಳೆಸುತ್ತವೆ.
5. ಬುದ್ಧಿಮತ್ತೆ
ಮತ್ತು ಶಿಸ್ತಿನ ಪ್ರತಿರೂಪ
ಭೀಷ್ಮನು
ಅಸ್ತ್ರ-ಶಸ್ತ್ರಗಳಲ್ಲಿ ನಿಪುಣರಾಗಿದ್ದು, ಮಹಾನ್ ಯೋಧನಾಗಿದ್ದರು. ಅವರ ತಂತ್ರಜ್ಞಾನ ಮತ್ತು
ಯುದ್ಧಕೌಶಲ್ಯ ಅಸಾಧಾರಣವಾಗಿತ್ತು. ಶಿಸ್ತಿನ ಪಾಲನೆ ಮತ್ತು ಶತ್ರುವಿನ ಮೇಲಿನ ಸಂಯಮವು ಅವರನ್ನು ಪರಮ ಕ್ಷತ್ರಿಯನಂತೆ ಮಾಡಿತು.
ನಮ್ಮ
ಜೀವನಕ್ಕೆ ಭೀಷ್ಮನ ಪಾಠಗಳು
ನಂಬಿಕೆ
ಮತ್ತು ಧರ್ಮವನ್ನು ಮೀರದೇ ಏನನ್ನೂ ಪಾಲಿಸುವ ಮಹತ್ವ. ಪ್ರತಿಯೊಂದು ನಿರ್ಧಾರದಲ್ಲಿ ನಿಷ್ಠೆಯಿಂದ ನಡೆಯುವುದು.
ತ್ಯಾಗ,
ಸೇವಾ ಮನೋಭಾವ, ಮತ್ತು ಅಹಂಕಾರವನ್ನು ತ್ಯಜಿಸುವ ಹಾದಿಯನ್ನು ಅನುಸರಿಸುವುದು.
ಭೀಷ್ಮನ
ಜೀವನ ಪಾಠಗಳು ನಮ್ಮ ಜೀವನದ ಸಂಕಟಗಳಲ್ಲಿ
ಧೈರ್ಯ ಮತ್ತು ಸತ್ಯಸಂಧತೆಯ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸುತ್ತವೆ.
ಮಹಾಭಾರತದ
ವಿದುರನ ಚತುರತೆ ಮತ್ತು ಕ್ಷತ್ರೀಯ ಜೀವನ
ವಿದುರನು
ಮಹಾಭಾರತದ ಮಹತ್ವದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಧೃತರಾಷ್ಟ್ರ ಮತ್ತು
ಪಾಂಡುರಾಜ ಅವರ ಸಹೋದರನಾಗಿದ್ದು, ಧರ್ಮಬೋಧನೆ
ಮತ್ತು ನೀತಿಶಾಸ್ತ್ರದ ಬಗ್ಗೆ ಅಪ್ರತಿಮ ಜ್ಞಾನ ಹೊಂದಿದ್ದರು. ವಿದುರನು ಕ್ಷತ್ರಿಯನಾಗಿರಲಿಲ್ಲ; ಅವರ ಜನ್ಮ ಕ್ಷತ್ರೀಯ
ಮತ್ತು ಶೂದ್ರ ಮಹಿಳೆಯ ಸಂಯೋಗದಿಂದ ಆಗಿರುವ ಕಾರಣ, ಅವರು ಕ್ಷತ್ರಿಯ ಧರ್ಮವನ್ನು
ಅನುಸರಿಸಬೇಕಾದ ಅಗತ್ಯವಿರಲಿಲ್ಲ. ಆದಾಗ್ಯೂ, ರಾಜಮಂದಿರದಲ್ಲಿ ಅವರು ನೀಡಿದ ಮಾರ್ಗದರ್ಶನಗಳು,
ಅನುಸರಿಸಿರುವ ಚತುರತೆ ಮತ್ತು ಧರ್ಮಜ್ಞಾನದಿಂದ ಅವರು ಕ್ಷತ್ರಿಯ ಗುಣಗಳ
ಪ್ರತಿರೂಪವಾಗಿದ್ದರು.
ಉದಾಹರಣೆಗೆ,
ವಿದುರನು ಧೃತರಾಷ್ಟ್ರನಿಗೆ ಪಾಂಡವರಿಗೆ ನ್ಯಾಯವೊಂದನ್ನು ನೀಡುವಂತೆ ಹಲವಾರು ಸಲಹೆಗಳನ್ನು ನೀಡಿದರೂ, ರಾಜನು ದುರ್ಯೋಧನನ ಪ್ರಭಾವಕ್ಕೆ ಒಳಗಾಗಿದ್ದನು.
ವಿದುರನ
ನಂಬಿಕೆ: "ಧರ್ಮದಿಂದ ಜೀವಿಸುವವರು ಸದಾ ವಿಜಯಿಗಳಾಗುತ್ತಾರೆ, ಅದನ್ನು ತ್ಯಜಿಸಿದವರು ಪರಾಭವಕ್ಕೊಳಗಾಗುತ್ತಾರೆ."
ವಿದುರನು
ಕೃಷ್ಣನಂತೆ ಸಂಧಾನ ಮತ್ತು ಶಾಂತಿದೂತರಾಗಿ ಕಾರ್ಯನಿರ್ವಹಿಸಿದರು, ಆದರೆ ದುರ್ಯೋಧನನ ಬುದ್ಧಿಮೌಢ್ಯತೆಯನ್ನು
ವಿರೋಧಿಸಿದರು.
ವಿದುರನು
ಹೇಳಿದರು: "ಕೋಪ, ಲೋಭ, ಮೋಹ - ಇವು ರಾಜನಿಗೆ ಅನಾರೋಗ್ಯಕಾರಕ. ನ್ಯಾಯವಂತ ಮತ್ತು ಶಾಂತ ಸ್ವಭಾವವು ರಾಜನಿಗೆ ಚಿರಾಯುಷ್ಯವನ್ನು ತರುತ್ತವೆ."
4. ಮಹಾಭಾರತ
– ಯುಧಿಷ್ಠಿರನ ಸತ್ಯಪ್ರಮೇಯತೆ
ಯುಧಿಷ್ಠಿರನು ಯಾವಾಗಲೂ ಸತ್ಯ ಹೇಳುತ್ತಿದ್ದ. ಬಿಕ್ಕಟ್ಟಿನ
ಸಂದರ್ಭದಲ್ಲೂ ಸತ್ಯವನ್ನೇ ಆಯ್ಕೆ ಮಾಡಿಕೊಂಡ. ಸತ್ಯವನ್ನು
ಪಾಲಿಸುವುದು ನಮ್ಮ ವ್ಯಕ್ತಿತ್ವವನ್ನು ಬಲಪಡಿಸುತ್ತದೆ.
ಆಧುನಿಕ
ಉದಾಹರಣೆ:
- ವೃತ್ತಿಜೀವನದಲ್ಲಿ ಮತ್ತು ವ್ಯವಹಾರದಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳುವುದು.
- ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಮಾತು ಹರಡದೆ, ನಿಜವಾದ ಮಾಹಿತಿಗಳನ್ನು ಹಂಚಿಕೊಳ್ಳುವುದು.
ಮಹಾಭಾರತದ
ಕರ್ಣನ ಪಾತ್ರ
ಕರ್ಣನ
ದಾನಶೀಲತೆ ಆತನ ಅತ್ಯಂತ ವಿಶಿಷ್ಟ
ಗುಣವಾಗಿತ್ತು. ಎಲ್ಲವನ್ನೂ
ಕೊಡುವ ಔದಾರ್ಯವಂತನಾಗಿದ್ದ ಕರ್ಣನು, ತನ್ನ ಕವಚ ಮತ್ತು
ಕುಂಡಲವನ್ನು ಭಿಕ್ಷೆಗಾಗಿ ಬಂದ ಇಂದ್ರನಿಗೆ ಸ೦ಪೂರ್ಣ
ನಿಸ್ಸ೦ದೇಹವಾಗಿ ದಾನ ಮಾಡಿದನು.
ಇದರಿಂದ
ಅವನು ತನ್ನ ಶತ್ರುಗಳಿಗೆ ಅವಕಾಶ
ನೀಡಿದರೂ, ಅವನ ಧರ್ಮದ ಹಾದಿಯ
ಮೇಲಿನ ನಿಷ್ಠೆ ನಿಕಟವಾಗಿಯೇ ಉಳಿಯಿತು.
✅ ಧರ್ಮಪರಾಯಣತೆ ಮತ್ತು ದಾನಶೀಲತೆ
ಕರ್ಣನ
ದಾನಶೀಲತೆ ಆತನ ಅತ್ಯಂತ ವಿಶಿಷ್ಟ
ಗುಣವಾಗಿತ್ತು. ಎಲ್ಲವನ್ನೂ
ಕೊಡುವ ಔದಾರ್ಯವಂತನಾಗಿದ್ದ ಕರ್ಣನು, ತನ್ನ ಕವಚ ಮತ್ತು
ಕುಂಡಲವನ್ನು ಭಿಕ್ಷೆಗಾಗಿ ಬಂದ ಇಂದ್ರನಿಗೆ ಸ೦ಪೂರ್ಣ
ನಿಸ್ಸ೦ದೇಹವಾಗಿ ದಾನ ಮಾಡಿದನು.
ಇದರಿಂದ
ಅವನು ತನ್ನ ಶತ್ರುಗಳಿಗೆ ಅವಕಾಶ
ನೀಡಿದರೂ, ಅವನ ಧರ್ಮದ ಹಾದಿಯ
ಮೇಲಿನ ನಿಷ್ಠೆ ನಿಕಟವಾಗಿಯೇ ಉಳಿಯಿತು.
✅ ಕುರುಕ್ಷೇತ್ರ ಯುದ್ಧ ಮತ್ತು
ಅಂತ್ಯ
ಕುರುಕ್ಷೇತ್ರ ಯುದ್ಧದಲ್ಲಿ, ಕರ್ಣನು ಪಾಂಡವರ ವಿರುದ್ಧ ದುರ್ಯೋಧನನ ಪರವಾಗಿ ಹೋರಾಡಿದನು. ಯುದ್ಧದ ಪ್ರಮುಖ ಕ್ಷಣದಲ್ಲಿ, ಭೂಮಿಯ ಶಾಪದಿಂದ ಕರ್ಣನ ರಥದ ಚಕ್ರ ಭೂಮಿಯಲ್ಲಿ ಸಿಕ್ಕಿಕೊಂಡಿತು. ಅರ್ಜುನನಿಗೆ ಕರ್ಣನನ್ನು ಕೊಲ್ಲುವ ಅವಕಾಶ ದೊರಕಿದಾಗ, ಕೃಷ್ಣನ ಸಲಹೆಯಂತೆ ಅರ್ಜುನನು ಆ ಕ್ಷಣದಲ್ಲಿ ಕರ್ಣನನ್ನು ಸಂಹರಿಸಿದನು.
✅ ಕರ್ಣನ ವ್ಯಕ್ತಿತ್ವದ
ಪಾಠಗಳು
- ಸ್ನೇಹ ನಿಷ್ಠೆ: ನಿಜವಾದ ಸ್ನೇಹಿತರಿಗಾಗಿ ಎಲ್ಲವನ್ನು ತ್ಯಜಿಸಲು ಸಿದ್ಧನಾಗಿದ್ದ ಕರ್ಣನು, ಅಸಾಧಾರಣ ಸ್ನೇಹಭಾವವನ್ನು ತೋರಿಸಿದ್ದ.
- ದಾನಶೀಲತೆ: ಕರ್ಣನ ಉದಾತ್ತ ದಾನಶೀಲತೆ, ಪ್ರಪಂಚದ ಯಾವ ಪರಿಸ್ಥಿತಿಯಲ್ಲೂ ತ್ಯಾಗ ಮತ್ತು ಪ್ರಾಮಾಣಿಕತೆಯ ಮಹತ್ವವನ್ನು ಬೋಧಿಸುತ್ತದೆ.
- ಆತ್ಮವಿಶ್ವಾಸ: ತನ್ನ ಕುಲವನ್ನೇ ವಿರೋಧಿಸಿದ ಜಗತ್ತಿನ ಮಧ್ಯೆ, ಆತ್ಮವಿಶ್ವಾಸದಿಂದ ತನ್ನ ಶಕ್ತಿಯನ್ನು ನಿರೂಪಿಸಿದ ಕರ್ಣನ ಜೀವನವೇ ಪ್ರೇರಣೆಯಾಗಿದೆ.
ಮಹಾಭಾರತದ ಕರ್ಣನ ಪಾತ್ರವು ಆಸ್ಥೆ, ತ್ಯಾಗ, ಧರ್ಮ, ಸ್ನೇಹ, ಮತ್ತು ಸತ್ಯಸಂಧತೆಯ ಸಾರ್ಥಕತೆಗಳನ್ನು ಸಾರುತ್ತದೆ. ಅವನ ಬಾಳು ನಮ್ಮ
ಜೀವನಕ್ಕೆ ಹಲವಾರು ಪಾಠಗಳನ್ನು ನೀಡುತ್ತದೆ.
ಧನ್ಯವಾದಗಳು.........🌷🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು