ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

“ಪರಶುರಾಮನು ರಾಮಾಯಣ ಮತ್ತು ಮಹಾಭಾರತದ ಎರಡೂ ಕಾಲಗಳಲ್ಲಿ ಇದ್ದದ್ದು ಸತ್ಯವೇ?” ಇಲ್ಲಿದೆ ನೋಡಿ ರಿಯಲ್‌ ಸ್ಟೋರಿ………

 

                   



ಜಮದಗ್ನಿ ಋಷಿಯ ಮಗನಾದ ಪರಶುರಾಮನ ಕಥೆ ಪುರಾಣಗಳಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಪರಶುರಾಮನು ವಿಷ್ಣುವಿನ ಆವತಾರಗಳಲ್ಲಿ ಏಳನೇ ಅವತಾರವಾಗಿದ್ದು, ಕ್ಷತ್ರಿಯ ವರ್ಗದ ಅಹಂಕಾರ ಮತ್ತು ಅಕ್ರಮವನ್ನು ಸಂಹಾರ  ಮಾಡುವ ಧರ್ಮಯೋಧನಾಗಿ ಗುರುತಿಸಲ್ಪಟ್ಟಿದ್ದಾನೆ.

 

ಪರಶುರಾಮ ಚಿರಂಜೀವಿ

ಪರಶುರಾಮನು ಚಿರಂಜೀವಿ (ಅಮರ) ಆಗಿದ್ದು, ಭವಿಷ್ಯ ಕಾಲದಲ್ಲಿ ಪರಶುರಾಮನು ಕಲ್ಕಿ ಅವತಾರದ ಗುರುವಾಗುವವನು ಎಂದು ಪುರಾಣಗಳು ಹೇಳುತ್ತವೆ.

ಪರಶುರಾಮನ ಬಗ್ಗೆ ತಿಳಿಯಲೇಬೇಕಾದ  ವಿಷಯಗಳು

  • ಪರಶುರಾಮನ ವಿಷ್ಣುವಿನ ಅವತಾರ.
  • ಜಮದಗ್ನಿ ಋಷಿ ಮತ್ತು ಕಾರ್ತವೀರ್ಯಾರ್ಜುನನ ಕಥೆ.
  • 21 ಬಾರಿ ಕ್ಷತ್ರಿಯರ ಸಂಹಾರ.
  • ಶ್ರೀರಾಮ ಮತ್ತು ಪರಶುರಾಮನ ನಡುವಿನ ಸಂಘರ್ಷ.
  • ಮಹಾಭಾರತದಲ್ಲಿ ಪರಶುರಾಮನ ಪಾತ್ರ.
  • ಚಿರಂಜೀವಿಯಾಗಿ ಉಳಿದ ಪರಶುರಾಮ.

 ಧರ್ಮ ಮತ್ತು ನ್ಯಾಯದ ಪರಿಪಾಲನೆಯಲ್ಲಿ ಪರಶುರಾಮನ ಪಾತ್ರವನ್ನು ಸ್ಪಷ್ಟಪಡಿಸುತ್ತದೆ.

ಪರಶುರಾಮನು ಅಪಾರ ಶಕ್ತಿಯುಳ್ಳ ಮಹಾನ್ ಯೋಧನಾಗಿದ್ದನು. ಅವನ ಶಸ್ತ್ರಾಸ್ತ್ರಗಳು ದಿವ್ಯಶಕ್ತಿಯುಳ್ಳವುಗಳಾಗಿದ್ದು, ಅವುಗಳ ಮೂಲಕ ಕ್ಷತ್ರಿಯ ಸಂಹಾರ ಮತ್ತು ಅನೇಕ ಮಹಾ ಯುದ್ಧಗಳನ್ನು ನಡೆಸಿದನು. ಅವನ ಮುಖ್ಯ ಅಸ್ತ್ರಗಳು ಮತ್ತು ಅವುಗಳ ಮಹತ್ವವನ್ನು ನೋಡೋಣ:


1. ಪರಶು (ಕೊಡಲಿ)

  • ಪರಶುರಾಮನ ಪ್ರತ್ಯೇಕ ಗುರುತು ನೀಡುವ ಶಸ್ತ್ರ( ಸಿಗ್ನೇಚರ್‌ ವೆಪನ್) ಪರಶು (ಕೊಡಲಿ).
  • ಕೊಡಲಿಯನ್ನು ಭಗವಂತ ಈಶ್ವರನು  ತನ್ನ  ಕೈಯಾರೆ ಪರಶುರಾಮನಿಗೆ ಅನುಗ್ರಹಿಸಿದ್ದರು.
  • ಇದು ಅಸಾಧಾರಣ ತೀಕ್ಷ್ಣ ಮತ್ತು ಶಕ್ತಿಯುತವಾಗಿದ್ದು, ಶತ್ರುಗಳನ್ನು ಕ್ಷಣಾರ್ಧದಲ್ಲಿ ಸಂಹಾರ ಮಾಡಬಹುದಾಗಿತ್ತು.
  • ಪರಶುರಾಮನು ಪರಶುವಿನಿಂದ 21 ಬಾರಿ ಭೂಮಿಯ ಮೇಲಿನ ಕ್ಷತ್ರಿಯರನ್ನು ಸಂಹಾರ ಮಾಡಿದ್ದನು.

2. ಶಿವಧನುಸ್ಸು

  • ಪರಶುರಾಮನು ಶಿವನ ಪರಮ ಭಕ್ತನಾಗಿದ್ದರಿಂದ, ಶಿವಧನಸ್ಸಿನ (ಪಿನಾಕ ಧನುಸ್ಸು) ಸ್ವಾಮಿ.
  • ಇದು ಭಾರೀ ಮತ್ತು ಅಪಾರ ಶಕ್ತಿಯುಳ್ಳ ಧನಸ್ಸಾಗಿದ್ದು,
  • ರಾಮಾಯಣದಲ್ಲಿ, ಪರಶುರಾಮನು ಶ್ರೀರಾಮನನ್ನು ಧನಸ್ಸಿನಿಂದ ಪರೀಕ್ಷಿಸಲು ಮುಂದಾಗುತ್ತಾನೆ.
  • ಶ್ರೀರಾಮನು ಧನುಸ್ಸನ್ನು ಹಿಡಿದಾಗ, ಪರಶುರಾಮನು ವಿಷ್ಣು ಅವತಾರದ ಮಹಿಮೆ ತಿಳಿದು ತನ್ನ ಹೋರಾಟ ನಿಲ್ಲಿಸುತ್ತಾನೆ.

3. ಭೃಗು ಅಸ್ತ್ರ

  • ಇದು ಪರಶುರಾಮನ ಕುಲಗುರು ಭೃಗು ಋಷಿಯ ಅನುಗ್ರಹದಿಂದ ದೊರೆತ ವಿಶೇಷ ಆಘಾತಕಾರಿ ಅಸ್ತ್ರ.
  • ಅಸ್ತ್ರವನ್ನು ಒಮ್ಮೆ ಉಪಯೋಗಿಸಿದರೆ, ಅದನ್ನು ತಪ್ಪಿಸಿಕೊಳ್ಳುವುದು ಕಷ್ಟ.
  • ಇದು ಶತ್ರುಗಳ ಪಾಳಯವನ್ನು ಸುಟ್ಟುಹಾಕುವ ಶಕ್ತಿ ಹೊಂದಿತ್ತು.

4. ಬ್ರಹ್ಮಾಸ್ತ್ರ

  • ಇದು ಬ್ರಹ್ಮ ದೇವರಿಂದ ಲಭಿಸಿದ ಪರಮ ಅಸ್ತ್ರ.
  • ಬ್ರಹ್ಮಾಸ್ತ್ರವನ್ನು ಬಳಕೆ ಮಾಡಿದರೆ, ಅದರಿಂದ ಬಚಾವ್ ಆಗಲು ಯಾರಿಗೂ ಸಾಧ್ಯವಿಲ್ಲ.
  • ಪರಶುರಾಮನು ಅಸ್ತ್ರವನ್ನು ತನ್ನ ಶಿಷ್ಯ ಭೀಷ್ಮ, ದ್ರೋಣಾಚಾರ್ಯ, ಕರ್ಣನಿಗೆ ವಿದ್ಯಾಭ್ಯಾಸದ ಸಮಯದಲ್ಲಿ ಕಲಿಸಿದ್ದನು.

5. ನಾಗಾಸ್ತ್ರ

  • ಇದು ಶತ್ರುವಿನ ಮೇಲೆ ಹಾವುಗಳಂತೆ ಗಾಳಿಯಲ್ಲಿ ಆವರಿಸಿಕೊಂಡು ಆಕ್ರಮಣ ಮಾಡುವ ಅಸ್ತ್ರ.
  • ಅಸ್ತ್ರವನ್ನು ಹಿಮಾಲಯದ ನಾಗರಾಷ್ಟ್ರ ರಾಜರಿಂದ ಪರಶುರಾಮನು ಪಡೆದಿದ್ದನು.

6. ವರುಣಾಸ್ತ್ರ

  • ಇದು ಅಗ್ನಿಯನ್ನು ತಕ್ಷಣ ತಡೆದುಹಾಕುವ ಮತ್ತು ಜಲಶಕ್ತಿಯಿಂದ ಶತ್ರುಗಳನ್ನು ನಾಶ ಮಾಡುವ ಅಸ್ತ್ರ.
  • ಇದನ್ನು ಸಮುದ್ರದ ದೇವತೆ ವರುಣ ದೇವನಿಂದ ಪಡೆದಿದ್ದನು.
  • ಅಸ್ತ್ರವನ್ನು ಉಪಯೋಗಿಸಿದರೆ, ವಿರೋಧಿಯ ಶಸ್ತ್ರಗಳು ಜಲಪ್ರವಾಹದಲ್ಲಿ ಮುಳುಗುವಂತೆ ಮಾಡಬಹುದು.

7. ನಾರಾಯಣಾಸ್ತ್ರ

  • ಇದು ವಿಷ್ಣುವಿನ ಶಕ್ತಿಯುಳ್ಳ ಅತ್ಯಂತ ಅಪಾಯಕಾರಿಯ ಅಸ್ತ್ರ.
  • ಪರಶುರಾಮನು ಇದನ್ನು ತಪಸ್ಸಿನಿಂದ ಪಡೆದುಕೊಂಡಿದ್ದಾನೆ.
  • ಅಸ್ತ್ರವನ್ನು ಬಳಸಿದಾಗ, ಶತ್ರುಗಳು ಬಲಹೀನರಾಗುತ್ತಾ ಹೋಗುತ್ತಾರೆ ಮತ್ತು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

8. ವಾಯವ್ಯಾಸ್ತ್ರ

  • ಇದರಿಂದ ಗಾಳಿಯ ಬಲವನ್ನು ತೀವ್ರಗೊಳಿಸಿ ಶತ್ರುಸೈನ್ಯವನ್ನು ಹಾರಿ ಬೀಳುವಂತೆ ಮಾಡಬಹುದು.
  • ಇದು ಶತ್ರುಸೈನ್ಯವನ್ನು ಚದುರಿಸಿ ಅವರ ಯುದ್ಧಶಕ್ತಿ ಕಡಿಮೆ ಮಾಡುವುದರಲ್ಲಿ ಬಹಳ ಪ್ರಭಾವಶಾಲಿ.

9. ಪಾಶುಪತಾಸ್ತ್ರ

  • ಇದು ಶಿವನ ಪರಮ ಪ್ರಿಯ ಮತ್ತು ಅಪಾಯಕಾರಿಯಾದ ಅಸ್ತ್ರ.
  • ಇದನ್ನು ಬಳಸಿದರೆ ಸಂಪೂರ್ಣ ವಿಶ್ವವೇ ನಾಶವಾಗುವ ಸಾಧ್ಯತೆ ಇತ್ತು, ಆದ್ದರಿಂದ ಪರಶುರಾಮನು ಇದನ್ನು ದುರುಪಯೋಗ ಮಾಡಲಿಲ್ಲ.
  • ಅಸ್ತ್ರವು ಹೆಚ್ಚಾಗಿ ಶಿವಭಕ್ತರಿಗೆ ಮಾತ್ರ ಲಭ್ಯವಾಗುತ್ತಿತ್ತು.

10. ಸುದರ್ಶನ ಚಕ್ರದ ವಿದ್ಯೆ

  • ಪರಶುರಾಮನು ವಿಷ್ಣುವಿನ ದಿವ್ಯ ಅಸ್ತ್ರವಾದ ಸುದರ್ಶನ ಚಕ್ರದ ಬಗ್ಗೆ ಸಂಪೂರ್ಣ ಅರಿವು ಹೊಂದಿದ್ದನು.
  • ಪರಶುರಾಮನು ಇದನ್ನು ಶ್ರೀಕೃಷ್ಣನಿಗೆ ತಿಳಿಸಿ, ಭವಿಷ್ಯದಲ್ಲಿ ಉತ್ತಮ ಯೋಧನಾಗಿ ಪರಿವರ್ತನೆ ಮಾಡಲು ಸಹಾಯ ಮಾಡಿದ.

ಪರಶುರಾಮನು ಶಿವನ ಅನುಗ್ರಹದಿಂದ ಅಪಾರ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಮಹಾಯೋಧನಾಗಿದ್ದನು. ಅವನಿಗೆ ಶಕ್ತಿಯುತ ಕೊಡಲಿ (ಪರಶು), ಬ್ರಹ್ಮಾಸ್ತ್ರ, ಪಾಶುಪತಾಸ್ತ್ರ, ನಾರಾಯಣಾಸ್ತ್ರ, ನಾಗಾಸ್ತ್ರ, ವರುಣಾಸ್ತ್ರ ಮುಂತಾದ ಅಸ್ತ್ರಗಳು ಲಭಿಸಿದ್ದವು. ಅಸ್ತ್ರಗಳ ಪ್ರಭಾವದಿಂದ ಅವನು ಕ್ಷತ್ರಿಯರನ್ನು 21 ಬಾರಿ ಸಂಹಾರ ಮಾಡಿದನು.

ಪರಶುರಾಮನ ಶಸ್ತ್ರಾಸ್ತ್ರಗಳು ವೈದಿಕ ಯುಗದ ಅತ್ಯಂತ ಶಕ್ತಿಶಾಲಿ ಮತ್ತು ಅಪರೂಪದ ಅಸ್ತ್ರಗಳಾಗಿದ್ದು, ಅವನ ಶೌರ್ಯವನ್ನು ಮೆರೆದಿದ್ದು ಅಕ್ಷಯ ಮತ್ತು ಅಮರವಾಗಿದೆ.

 

ಪರಶುರಾಮನ ಜನನ ಮತ್ತು ಬಾಲ್ಯ

ಜಮದಗ್ನಿ ಋಷಿ ಭಾರಧ್ವಜ ಗೋತ್ರದ ಮಹಾನ್ ಋಷಿಯಾಗಿದ್ದು, ಅವರು ರೇಣುಕಾ ದೇವಿಯೊಂದಿಗೆ ವಿವಾಹವಾಗಿದ್ದರು. ಇವರಿಗೆ ಐದು ಪುತ್ರರು ಜನಿಸಿದರು, ಅವರ ಪೈಕಿ ರಾಮನು ಅತ್ಯಂತ ಶಕ್ತಿಶಾಲಿ, ತಪಸ್ವಿ ಮತ್ತು ಮಹಾನ್ ಯೋಧನಾಗಿದ್ದನು. ಅಯೋಧ್ಯಾದ ದಶರಥನ ಪುತ್ರನಾದ ರಾಮನಿಗಿಂತ ಮುಂಚೆಯೇ ಜನಿಸಿದ್ದರಿಂದ ಈತನಿಗೆ "ಪರಶುರಾಮ" (ಪರಶು = ಕೊಡಲಿ) ಎಂದು ಹೆಸರಾಯಿತು.

ಕಾರ್ತವೀರ್ಯಾರ್ಜುನನ ದುರಾಚಾರ ಮತ್ತು ಜಮದಗ್ನಿ ಋಷಿಯ ಹತ್ಯೆ

ಕಾರ್ತವೀರ್ಯಾರ್ಜುನನ ಹೈಹಯ ವಂಶದ  ಅತ್ಯಂತ ಪರಾಕ್ರಮಿ ರಾಜನಾಗಿದ್ದನು. ಅವನು ದಿವ್ಯವಿದ್ಯೆ ಮತ್ತು ಸಹಸ್ರಬಾಹು (ಸಾವಿರ ಕೈಗಳುಳ್ಳವನು) ಎಂಬ ಬಿರುದನ್ನು ಹೊಂದಿದ್ದ. ಒಂದು ದಿನ ಅವನು ಜಮದಗ್ನಿ ಋಷಿಯ ಆಶ್ರಮಕ್ಕೆ ಬಂದು, ಅವರ ವಶದಲ್ಲಿದ್ದ ಕಾಮಧೇನು ಎಂಬ ದಿವ್ಯ ಹಸುವನ್ನು ಬಲವಂತವಾಗಿ ಕೊಂಡುಹೋಗಲು ಪ್ರಯತ್ನಿಸಿದನು. ಇದರಿಂದ ಕೋಪಗೊಂಡ ಪರಶುರಾಮನು ಅವನನ್ನು ಯುದ್ಧದಲ್ಲಿ ಸೋಲಿಸಿ, ಹತ್ಯೆ ಮಾಡಿದನು.

ಆದರೆ ಕಾರ್ತವೀರ್ಯನ ಪುತ್ರರು ಘಟನೆಯನ್ನು ಸಹಿಸಲಾಗದೆ, ಜಮದಗ್ನಿ ಋಷಿಯನ್ನು ಮೋಸದಿಂದ ಕೊಂದುಹಾಕಿದರು. ಘಟನೆಯಿಂದ ಪರಶುರಾಮನು ತುಂಬಾ ಕೋಪಗೊಂಡು ಕ್ಷತ್ರಿಯರ ವಿರುದ್ಧ ಯುದ್ಧ ಸಾರಿದನು.

ಪರಶುರಾಮನ ಕ್ಷತ್ರಿಯ ಸಂಹಾರ

ತಂದೆಯ ಹತ್ಯೆಯ ಪ್ರತೀಕಾರವಾಗಿ ಪರಶುರಾಮನು 21 ಬಾರಿ ಭೂಮಿಯಲ್ಲಿದ್ದ ಎಲ್ಲ ಕ್ಷತ್ರಿಯರನ್ನು ಸಂಹಾರ ಮಾಡಿದನು. ಇದರಿಂದ ಭೂಮಿಯ ಶಕ್ತಿಶಾಲಿ ಕ್ಷತ್ರಿಯ ರಾಜರು ಅಳಿದುಹೋದರು, ಮತ್ತು ಭೂಮಿಯನ್ನು ಬ್ರಾಹ್ಮಣರಿಗೆ ಅರ್ಪಿಸಿದನು.

ಪರಶುರಾಮ ಮತ್ತು ಶ್ರೀರಾಮ

ರಾಮಾಯಣದಲ್ಲಿ, ಪರಶುರಾಮನು ಶ್ರೀರಾಮನಿಗೆ ಎದುರಾಗುವ ಪ್ರಸಂಗವಿದೆ. ಸೀತಾಸ್ವಯಂವರದಲ್ಲಿ ಶ್ರೀರಾಮನು ಶಿವಧನುಸ್ಸನ್ನು ಮುರಿದಾಗ ಪರಶುರಾಮನು ಕೋಪಗೊಂಡು ಅಯೋಧ್ಯೆಗೆ ಬಂದು ಶ್ರೀರಾಮನನ್ನು ಪರೀಕ್ಷಿಸಲು ಮುಂದಾದನು. ಆದರೆ ಶ್ರೀರಾಮನಿಗೆ ನಿಜವಾದ ವಿಷ್ಣು ತೇಜಸ್ಸು ಇರುವುದನ್ನು ಅರಿತುಕೊಂಡು, ತಾನು ಕ್ಷತ್ರಿಯ ಸಂಹಾರವನ್ನು ನಿಲ್ಲಿಸಿ, ಮಹೇಂದ್ರ ಪರ್ವತಕ್ಕೆ ತಪಸ್ಸಿಗೆ ತೆರಳಿದನು.

ಪರಶುರಾಮ ಮತ್ತು ಮಹಾಭಾರತ

ಮಹಾಭಾರತದಲ್ಲಿ ಪರಶುರಾಮನು ಕರ್ಣನ ಗುರುವಾಗಿದ್ದನು. ಕರ್ಣನು ಪರಶುರಾಮರಿಂದ ಬ್ರಹ್ಮಾಸ್ತ್ರ ವನ್ನು ಕಲಿಯಲು ಪರಶುರಾಮರ ಬಳಿಗೆ ಬಂದಿದ್ದನು. ಪರಶುರಾಮರು ಕೇವಲ ಬ್ರಾಹ್ಮಣ ಕುಲದವರಿಗೆ ಮಾತ್ರ ವಿದ್ಯೆ ಹೇಳಿಕೊಡುವ ಷರತ್ತನ್ನು ವಿಧಿಸಿಕೊಂಡಿದ್ದು ಅರಿತಿದ್ದ ಕರ್ಣನು ಸೂತಪುತ್ರನಾಗಿದ್ದರೂ, ಬ್ರಾಹ್ಮಣನೆಂದು ಸುಳ್ಳು ಹೇಳಿ ಪರಶುರಾಮರ ಬಳಿಗೆ ಸೇರಿದ್ದನು.

ಒಮ್ಮೆ  ಕಾಡಿನಲ್ಲಿ ಸಂಚರಿಸುತ್ತಿರುವಾಗ, ಪರಶುರಾಮರು ಆಯಾಸಗೊಂಡು ಅಲ್ಲಿಯೇ  ಕರ್ಣನ ತೊಡೆಯ ಮೇಲೆ ಮಲಗಿದರು. ಸ್ವಲ್ಪಹೊತ್ತಿನ ನಂತರ  ದೈತ್ಯ ಕೀಟವೊಂದು ಕರ್ಣನ ತೊಡೆಯನ್ನು ಕಚ್ಚಿ, ರಕ್ತ ಹೊಸರುತಿತ್ತು, ತಾನು ಅಲುಗಾಡಿದರೆ  ಮಲಗಿರುವ ಗುರುಗಳ ನಿದ್ರೆಗೆ ಬಂಗವಾಗುವುದೆಂದು, ಸುಮ್ಮನೆ ಕುಳಿತು ಬಿಟ್ಟನು. ಹೊಸರುತಿದ್ದ ರಕ್ತವು ಪರಶುರಾಮರ ದೇಹಕ್ಕೆ ತಗುಲಿ  ಎಚ್ಚರವಾದರು. ಎದ್ದು ಕರ್ಣನನ್ನು ಆ ಸ್ಥಿತಿಯಲ್ಲಿ ಕಂಡವರಿಗೆ ಇವನು ಬ್ರಾಹ್ಮಣನಲ್ಲ ಎಂದು ತಿಳಿದು ಹೋಗಿತ್ತು. ಸುಳ್ಳು ಹೇಳಿ ತನ್ನಿಂದ ವಿದ್ಯೆ ಕಲಿತದ್ದು ತಿಳಿದು ಕೋಪಗೊಂಡು ಅವನಿಗೆ ಸಮಯಕ್ಕೆ ಸರಿಯಾಗಿ ಅವನು ಕಲಿತ ವಿದ್ಯೆಯು ಅವನಿಗೆ ನೆನಪಿಗೆ ಬಾರದಿರಲಿ ಎಂದು  ಶಾಪ ಕೊಟ್ಟನು.

ಕೋಪದ ಕ್ಷಣದಲ್ಲಿ  ತನ್ನ ನೆಚ್ಚಿನ ಶಿಷ್ಯನಿಗೆ ಶಾಪ ಕೊಟ್ಟಿದ್ದಕ್ಕೆ  ಪಶ್ಚಾತ್ತಾಪ ಪಟ್ಟರು, ಶಾಪವನ್ನು ಹಿಂದೆ ಪಡೆಯಲು ಸಾಧ್ಯವಾಗದ ಕಾರಣ, ತಮ್ಮ ದೈವಿಕ ಬಿಲ್ಲು, ರಥವನ್ನು ಕರ್ಣನಿಗೆ ನೀಡಿ “ ಯಾವ ಕ್ಷತ್ರಿಯನೂ ನಿನಗೆ ಸಮಾನನಾಗುವುದಿಲ್ಲ “ಎಂದು ಆಶೀರ್ವದಿಸಿದರು.

                              

 

ಅಲ್ಲದೆ, ಭೀಷ್ಮ, ದ್ರೋಣ, ಕೃಪಾಚಾರ್ಯರು ಸಹ  ಪರಶುರಾಮನಿಂದ ಶಸ್ತ್ರ ವಿದ್ಯೆಯನ್ನು ಕಲಿತಿದ್ದರು.

 

ಪರಶುರಾಮನು ಅಸ್ತ್ರಗಳನ್ನು ಪಡೆದ ಕಥೆಯು ವ್ಯಾಸ ಮಹಾಭಾರತದ ಕರ್ಣಪರ್ವದಲ್ಲಿ ಬರುತ್ತದೆ. ಪರಶುರಾಮನ ಶಿಷ್ಯನಾದ ಕರ್ಣನ ಮಹತ್ವವನ್ನು ಹೇಳುತ್ತಾ ಕಥೆಯನ್ನು ದುರ್ಯೋಧನನು ಶಲ್ಯನಿಗೆ ಹೇಳಿದನು.

ಭಾರ್ಗವರ ಕುಲದಲ್ಲಿ ಮಹಾತಪಸ್ವಿ ಜಮದಗ್ನಿಯು ಮಗನು ರಾಮನೆಂದು ಹೆಸರಾದವನು, ಅಸ್ತ್ರಗಳಿಗೋಸ್ಕರವಾಗಿ ಪ್ರಸನ್ನಾತ್ಮನಾಗಿನಿಯತಾತ್ಮನಾಗಿ ಮತ್ತು ಇಂದ್ರಿಯಗಳನ್ನು ಸಂಯಮದಲ್ಲಿರಿಸಿಕೊಂಡು ತೀವ್ರ ತಪಸ್ಸನ್ನಾಚರಿಸಿ  ಭಗವಂತನನ್ನುನನ್ನು ತೃಪ್ತಿಗೊಳಿಸಿದನು.

 ಅವನ ಭಕ್ತಿ ಮತ್ತು ಸಂಯಮಗಳಿಗೆ ಮೆಚ್ಚಿದ ಮಹಾದೇವ ಶಂಕರನು ಅವನ  ಭಕ್ತಿ ಹೃದಯದಲ್ಲಿರುವುದನ್ನು ತಿಳಿದು ಪ್ರತ್ಯಕ್ಷನಾದನು.

ಈಶ್ವರನು ಹೇಳಿದನು: “ರಾಮಸಂತುಷ್ಟನಾಗಿದ್ದೇನೆನಿನಗೆ ಮಂಗಳವಾಗಲಿನೀನು ಬಯಸಿರುವುದು ನನಗೆ ತಿಳಿದಿದೆನಿನ್ನನ್ನು ಪರಿಶುದ್ಧಗೊಳಿಸಿಕೋಬಯಸಿದುದೆಲ್ಲವನ್ನೂ ಪಡೆದುಕೊಳ್ಳುವೆನೀನು ಪವಿತ್ರನಾದಾಗ ನಾನು ನಿನಗೆ ಅಸ್ತ್ರಗಳನ್ನು ನೀಡುತ್ತೇನೆಅಸ್ತ್ರಗಳು ಅಪಾತ್ರನನ್ನು ಮತ್ತು ಅಸಮರ್ಥನನ್ನು ಸುಟ್ಟುಬಿಡುತ್ತವೆ.”

ದೇವದೇವ ಶಿವನು ಹೀಗೆ ಹೇಳಲು ಜಾಮದಗ್ನಿಯ ರಾಮನು ಮಹಾದೇವನಿಗೆ ಶಿರಸಾವಹಿಸಿ ಪ್ರತ್ಯುತ್ತರಿಸಿದನು: “ದೇವನಾನು ಅಸ್ತ್ರಧಾರಣೆಗೆ ಪಾತ್ರನೆಂದು ನಿನಗೆ ಎಂದು ಅನಿಸುತ್ತದೆಯೋ ಆಗಲೇ ನೀನು ನಿನ್ನ ಶುಶ್ರೂಷಣೆಯಲ್ಲಿ ನಿರತನಾದ ನನಗೆ ಅಸ್ತ್ರಗಳನ್ನು ದಯಪಾಲಿಸು!”

ರಾಮನು ನಿತ್ಯ  ತಪಸ್ಸುಹೋಮನಿಯಮಪೂಜೆಉಪಾಹಾರಬಲಿಮತ್ತು ಮಂತ್ರಾದಿಗಳಿಂದ ಈಶ್ವರನನ್ನು ಅನೇಕ ವರ್ಷಗಳವರೆಗೆ ಆರಾಧಿಸಿದನುಮಹಾತ್ಮ ಭಾರ್ಗವನ ಮೇಲೆ ಮಹಾದೇವನು ಪ್ರಸನ್ನನಾದನು

ಶಂಕರನು ದೇವಿಯ ಸಮೀಪದಲ್ಲಿಯೇ “ದೃಢವ್ರತನಾದ ರಾಮನಿಗೆ ನನ್ನಲ್ಲಿ ಸತತ ಭಕ್ತಿಯಿದೆ!” ಎಂದು ರಾಮನ ಅನೇಕ ಗುಣಗಳನ್ನು ವರ್ಣಿಸಿದನು ರೀತಿಯ ಅವನ ಗುಣಗಳನ್ನು ಸಂತೋಷಗೊಂಡ ಮಧುಸೂದನ ಪ್ರಭುವು ಅನೇಕ ಬಾರಿ ದೇವತೆಗಳು ಮತ್ತು ಪಿತೃಗಳ ಸಮಕ್ಷಮದಲ್ಲಿ ಹೇಳಿದನು.

ಇದೇ ಸಮಯದಲ್ಲಿ ದೈತ್ಯರು ಮಹಾಬಲಶಾಲಿಗಳಾದರು. ಅವರು ದರ್ಪಮೋಹಗಳಿಂದ ಮುಗ್ಧರನ್ನು ಬಾಧಿಸುತ್ತಿದ್ದರುಆಗ ದೇವತೆಗಳೆಲ್ಲರೂ ಒಟ್ಟಾಗಿ ಅವರನ್ನು ಸಂಹರಿಸಲು ನಿಶ್ಚಯಿಸಿ ಶತ್ರುವಧೆಗಾಗಿ ಬಹಳ ಪ್ರಯತ್ನನಡೆಸಿದರುಆದರೆ ಅವರನ್ನು ಗೆಲ್ಲಲು ಸಾಧ್ಯವಾಗಲಿಲ್ಲಆಗ ದೇವತೆಗಳು ಮಹೇಶ್ವರನಲ್ಲಿಗೆ ಹೋಗಿ ಅವನನ್ನು ಭಕ್ತಿಯಿಂದ ಪ್ರಸನ್ನಗೊಳಿಸಿ ಶತ್ರುಗಣಗಳನ್ನು ಸಂಹರಿಸೆಂದು ಕೇಳಿಕೊಂಡರು.

 ಶತ್ರುಗಳು ಶೀಘ್ರದಲ್ಲಿಯೇ  ಕ್ಷಯವಾಗುವರೆಂದು ದೇವತೆಗಳಿಗೆ ಪ್ರತಿಜ್ಞೆಮಾಡಿ ದೇವ ಶಂಕರನು ಭಾರ್ಗವ ರಾಮನನ್ನು ಕರೆದು ಹೀಗೆ ಹೇಳಿದನು: “ಭಾರ್ಗವಒಂದಾಗಿರುವ ದೇವತೆಗಳ ವೈರಿಗಳೆಲ್ಲರನ್ನೂ ಸಂಹರಿಸುಲೋಕಗಳ ಕಾಮಾರ್ಥಹಿತಕ್ಕಾಗಿ ಮತ್ತು ನನ್ನ ಪ್ರೀತಿಗಾಗಿ ಕೆಲಸವನ್ನು ಮಾಡು!”

ರಾಮನು ಹೇಳಿದನು: “ದೇವೇಶಅಸ್ತ್ರವಿದ್ಯೆಯನ್ನೇ ತಿಳಿಯದಿರುವ ನನಗೆ ಕೃತಾಸ್ತ್ರರೂ ಹಾಗೂ ಯುದ್ಧಧರ್ಮದರೂ ಆದ ದಾನವರೆಲ್ಲರನ್ನೂ ಸಂಹರಿಸಲು ಹೇಗೆ ಸಾಧ್ಯ?”

ಈಶ್ವರನು ಹೇಳಿದನು: “ಹೋಗುನನ್ನ ಅನುಧ್ಯಾನದಿಂದ ನೀನು ದಾನವರನ್ನು ಸಂಹರಿಸುತ್ತೀಯೆ ರಿಪುಗಳೆಲ್ಲರನ್ನೂ ಜಯಿಸಿ ಪುಷ್ಕಲ ಗುಣಗಳನ್ನು ಪಡೆಯುವೆ!”

ಅವನ ಮಾತನ್ನು ಕೇಳಿ ಎಲ್ಲವನ್ನೂ ಸ್ವೀಕರಿಸಿ ರಾಮನು ಸ್ವಸ್ತಿವಾಚನಗಳನ್ನು ಮಾಡಿಸಿಕೊಂಡು ದಾನವರಿದ್ದಲ್ಲಿಗೆ ಹೋದನು

ಭಾರ್ಗವನು ಮದದರ್ಪಬಲಾನ್ವಿತ ದೇವಶತ್ರುಗಳನ್ನು ವಜ್ರಾಯುಧ ಸ್ಪರ್ಷಕ್ಕೆ ಸಮಾನ ಪ್ರಹಾರಗಳಿಂದಲೇ ವಧಿಸಿದನುದ್ವಿಜೋತ್ತಮ ಜಮದಗ್ನನ ದೇಹವನ್ನು ದಾನವರು ಗಾಯಗೊಳಿಸಿದ್ದರುಈಶ್ವರನು ಅವನನ್ನು ಸ್ಪರ್ಶಿಸಿದ ಮಾತ್ರದಿಂದ ಅವನು ಗಾಯಗಳಿಲ್ಲದವನಾದನುಅವನ ಕರ್ಮಗಳಿಂದ ಸಂತೃಪ್ತನಾದ ಭಗವಂತನು ಮಹಾತ್ಮ  ಭಾರ್ಗವನಿಗೆ ವರಗಳನ್ನಿತ್ತನು.

 ಪ್ರೀತಿಯುಕ್ತ ದೇವದೇವ ಶೂಲಿಯು ಹೇಳಿದನು: “ಭೃಗುನಂದನಶಸ್ತ್ರಗಳ ನಿಪಾತಗಳಿಂದ ನಿನ್ನ ಶರೀರದಲ್ಲಿ ಆಗಿರುವ ಗಾಯಗಳಿಂದ ಮನುಷ್ಯಸಂಬಂಧವಾದ ನಿನ್ನ ಕರ್ಮಗಳೆಲ್ಲವೂ ಕಳೆದುಹೋದವು (ನೀನೀಗ ಸಂಪೂರ್ಣವಾಗಿ ದೇವಸದೃಶನಾಗಿರುವೆ!). ನಿನ್ನ ಇಚ್ಛೆಯಂತೆಯೇ ನನ್ನಿಂದ ದಿವ್ಯಾಸ್ತ್ರಗಳನ್ನು ಸ್ವೀಕರಿಸು!”

ಆಗ ಮನಸ್ಸಿನಲ್ಲಿ ಬಯಸಿದ ಬಹುವಿಧದ ಅಸ್ತ್ರಗಳನ್ನೂ ವರಗಳನ್ನೂ ಪಡೆದ ರಾಮನು ಶಿವನಿಗೆ ಶಿರಸಾ ಪ್ರಣಾಮಮಾಡಿ ದೇವೇಶನ ಅನುಜ್ಞೆಯನ್ನು ಪಡೆದು ಹೊರಟುಹೋದನು.



ಧನ್ಯವಾದಗಳು.........🌷🌷

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......