ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಕರ್ನಾಟಕದಲ್ಲಿ ಮೈಕ್ರೊ ಫೈನಾನ್ಸ್ ತಡೆಗೆ ಸುಗ್ರೀವಾಜ್ಞೆ: ಜನಸಾಮಾನ್ಯರ ರಕ್ಷಣೆಗಾದ ಹೆಜ್ಜೆ

 

             



        ರ್ನಾಟಕ ಸರ್ಕಾರ ಇತ್ತೀಚೆಗೆ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಒಂದು ಮಹತ್ವದ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದೆ. ನಿರ್ಧಾರದಿಂದ ರಾಜ್ಯದ ಸಾವಿರಾರು ಬಡ ಕುಟುಂಬಗಳು ಆರ್ಥಿಕ ಶೋಷಣೆಯಿಂದ ಮುಕ್ತವಾಗುವ ಸಾಧ್ಯತೆ ಇದೆ. ಮೈಕ್ರೊ ಫೈನಾನ್ಸ್ ಸಂಸ್ಥೆಗಳು ಕಡಿಮೆ ಆದಾಯದ ಜನಸಂಖ್ಯೆಗೆ ಸಣ್ಣ ಮೊತ್ತದ ಸಾಲಗಳನ್ನು ನೀಡುವಂತೆ ಗುರುತಿಸಲ್ಪಟ್ಟಿವೆ. ಆದರೆ, ಅವುಗಳ ಮೇಲೆ ಹೆಚ್ಚು ಬಡ್ಡಿ ವಿಧಿಸುವ ಮತ್ತು ವಸೂಲಿಯ ಮಾರ್ಗಗಳಲ್ಲಿ ಅನೀತಿಪೂರಿತ ಕ್ರಮಗಳನ್ನು ಅನುಸರಿಸುವ ಆರೋಪಗಳು ವರ್ಷಗಳಿನಿಂದ ಕೇಳಿ ಬರುತ್ತಿದ್ದವು.

ಸುಗ್ರೀವಾಜ್ಞೆಯ ಅವಶ್ಯಕತೆ ಏಕೆ?

ಮೈಕ್ರೊ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಹಲವಾರು ಬಡ ಕುಟುಂಬಗಳು ಮತ್ತು ರೈತ ಸಂಘಟನೆಗಳು ದೂರುಗಳನ್ನು ದಾಖಲಿಸಿದ್ದವು. ಸಂಸ್ಥೆಗಳು ಸಾಲ ವಿತರಣೆಯ ವೇಳೆ ಅತಿಯಾದ ಬಡ್ಡಿದರ ವಿಧಿಸುವುದರೊಂದಿಗೆ, ಸಾಲ ಮರುಪಾವತಿಯ ವೇಳೆ ಸಾಲಗಾರರ ಮೇಲೆ ಶಾರೀರಿಕ ಮತ್ತು ಮಾನಸಿಕ ಒತ್ತಡ ತರುವುದಾಗಿ ವರದಿಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಆರ್ಥಿಕ ಶೋಷಣೆಯನ್ನು ತಡೆಯುವ ಉದ್ದೇಶದಿಂದ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದೆ.

ಸುಗ್ರೀವಾಜ್ಞೆಯ ಪ್ರಭಾವ ಮತ್ತು ಪರಿಣಾಮಗಳು

  1. ಬಡ್ಡಿದರ ನಿಯಂತ್ರಣ: ಹೊಸ ನಿಯಮಾವಳಿಯ ಪ್ರಕಾರ ಮೈಕ್ರೊ ಫೈನಾನ್ಸ್ ಸಂಸ್ಥೆಗಳು ನಿರ್ದಿಷ್ಟ ಬಡ್ಡಿದರ ಮಿತಿಯ ಒಳಗೇ ಸಾಲ ನೀಡಬೇಕಾಗುತ್ತದೆ.
  2. ಕಾನೂನುಪೂರಿತ ಸಾಲ ವಿತರಣಾ ಪ್ರಕ್ರಿಯೆ: ನಿಗದಿತ ನಿಯಮಗಳ ಪ್ರಕಾರ ಮಾತ್ರ ಸಾಲ ನೀಡಲು ಅವಕಾಶ.
  3. ಬೇಡಿಕೆ ವಸೂಲಿ ಶಿಷ್ಟಾಚಾರ: ಕಠಿಣ ಮತ್ತು ಅನೀತಿಪೂರಿತ ವಸೂಲಿಯ ವಿಧಾನಗಳನ್ನು ತಡೆಯಲು ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
  4. ಬಡ ಜನಸಾಮಾನ್ಯರಿಗೆ ರಕ್ಷಣಾ ಮೆಕ್ಯಾನಿಸಮ್: ಸಾಲಗಾರರಿಗೆ ದೂರು ಸಲ್ಲಿಸಲು ಸೂಕ್ತ ವೇದಿಕೆಗಳನ್ನು ಒದಗಿಸುವುದು.

ಸಮಾಜದ ಪ್ರತಿಕ್ರಿಯೆ

ನಿರ್ಧಾರವನ್ನು ಕೃಷಿಕರು, ದೈನಂದಿನ ಕೂಲಿ ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ಜನರು ಸ್ವಾಗತಿಸಿದ್ದಾರೆ. ಇಂತಹ ಸುಗ್ರೀವಾಜ್ಞೆಯ ಜಾರಿಯಿಂದ ಅವರು ಮೇಲಾದ ಒತ್ತಡದಿಂದ ಮುಕ್ತಿ ಪಡೆಯಬಹುದು. ಆದರೆ, ಬೇರೆಬೇರೆ ಆರ್ಥಿಕ ವಲಯಗಳ ಪ್ರಕಾರ, ಇದು ಸೂಕ್ಷ್ಮ ಹಣಕಾಸು ಸಂಸ್ಥೆಗಳ ಮೇಲೆ ತೀವ್ರವಾದ ಪರಿಣಾಮ ಬೀರಬಹುದು, ಏಕೆಂದರೆ ಅವರ ವ್ಯಾಪಾರ ಮಾದರಿಯೇ ಹೆಚ್ಚಿನ ಬಡ್ಡಿದರ ಮತ್ತು ವಸೂಲಿಯ ತಂತ್ರದ ಮೇಲೆ ಅವಲಂಬಿತವಾಗಿದೆ.

ಕರ್ನಾಟಕ ಸರ್ಕಾರವು ಮೈಕ್ರೊಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕಾಗಿ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಲು ಮುಂದಾದಾಗ, ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಹಂತ ಹಂತವಾಗಿ ಕೆಲವು ಘಟನೆಗಳು ನಡೆದವು.

  1. ಸುಗ್ರೀವಾಜ್ಞೆಯ ಪ್ರಸ್ತಾವನೆ: ಸರ್ಕಾರವು ಮೈಕ್ರೊಫೈನಾನ್ಸ್ ಸಂಸ್ಥೆಗಳ ಮತ್ತು ಖಾಸಗಿ ಲೇವಾದೇವಿಗಾರರ ಮೇಲೆ ನಿಯಂತ್ರಣವನ್ನು ಕಠಿಣಗೊಳಿಸಲು ಸುಗ್ರೀವಾಜ್ಞೆಯನ್ನು ತಯಾರಿಸಿತು.
  2. ರಾಜ್ಯಪಾಲರ ಅನುಮೋದನೆಗಾಗಿ ಸಲ್ಲಿಕೆ: ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ಅನುಮೋದನೆಗಾಗಿ ಕಳುಹಿಸಲಾಯಿತು.
  3. ರಾಜ್ಯಪಾಲರ ಪರಿಶೀಲನೆ: ರಾಜ್ಯಪಾಲರು ಸುಗ್ರೀವಾಜ್ಞೆಯ ವಿಷಯವನ್ನು ಪರಿಶೀಲಿಸಿದರು ಮತ್ತು ಅದರ ಕಾನೂನುಬದ್ಧತೆ ಹಾಗೂ ಪರಿಣಾಮಗಳನ್ನು ಗಮನಿಸಿದರು.

ಫೆಬ್ರವರಿ  ೧೨ ರಂದು ಸುಗ್ರೀವಾಜ್ಞೆ ಗೆ ರಾಜ್ಯಪಾಲರು ಅಂಕಿತ ಹಾಕುವ ಕೆಲವು ದಿನಗಳ ಹಿಂದೆ ಯೇ ಸುಗ್ರೀವಾಜ್ಞೆಗೆ ಸಂಬಂಧಿಸಿದ ಕರಡನ್ನು ಮೊದಲು ನಿರಾಕರಿಸಿ ಅದರಲ್ಲಿರುವ ಕಾನೂನು  ತೊಡಕುಗಳನ್ನು ನಿವಾರಿಸಿ ಪರಿಷ್ಕರಿಸಲು ಸರ್ಕಾರಕ್ಕೆ ವಾಪಸ್‌ ನೀಡಿದ್ದರು.

 

ಮತ್ತೆ ಸರ್ಕಾರವು ಸುಗ್ರೀವಾಜ್ಞೆಯನ್ನು ಪರಿಷ್ಕರಿಸಿ ರಾಜ್ಯಪಾಲರ ಬಳಿಗೆ ಡ್ರಾಫ್ಟ್‌ ಅನ್ನು ಮತ್ತೆ ಅಂಕಿತ ಹಾಕಲು ಕಳುಹಿಸಿತು, ಕೊನೆಗೆ ಫೆಬ್ರವರಿ ೧೨ ರಂದು ರಾಜ್ಯಪಾಲರ ಅಧಿಕೃತ ಮುದ್ರೆ ಬೀಳುವುದರೊಂದಿಗೆ  ಸುಗ್ರೀವಾಜ್ಞೆ ಜಾರಿಯಾಯಿತು.

ಅದರ ಮುಖ್ಯಾಂಶಗಳು:-

 ಸಾಲ ವಸೂಲಾತಿ ವೇಳೆ ಮೈಕ್ರೋ ಫೈನಾನ್ಸ್‌ ಗಳು ನಡೆಸುತ್ತಿದ್ದ ದೌರ್ಜನ್ಯ ತಡೆಹಿಡಿಯಲು ಜಾರಿಗೊಳಿಸಿರುವ ಸಣ್ಣಸಾಲ ಮತ್ತು ಕಿರುಸಾಲಗಳ ಪ್ರತಿಬಂಧಕ – ೨೦೨೫ .ಆದೇಶ ವಾಗಿದೆ.

ಮೈಕ್ರೋ ಫೈನಾನ್ಸ್‌ ಗಳು ಮತ್ತು ಖಾಸಗೀ ಲೇವಾದಾರರು ಹೇರುವ ಅಧಿಕ ಬಡ್ಡಿದರ ಮತ್ತು ಬಲವಂತದ ಸಾಲ ವಸೂಲಾತಿಯಿಂದ ಸಾಲಗಾರರು ಅನುಭವಿಸುವ ಕಿರುಕುಳವನ್ನು ತಡೆಯಲು ಸುಗ್ರೀವಾಜ್ಞೆ ಜಾರಿಮಾಡಲಾಗಿದೆ.

ದುರ್ಬಲರು, ಮಹಿಳೆಯರು, ರೈತರು, ಮಹಿಳಾ ಸ್ವ ಸಹಾಯ ಸಂಘಗಳಿಗೆ ಸಾಲ ವಾಪಸ್‌ ನೀಡುವಲ್ಲಿ ಕಿರುಕುಳ ನೀಡುತ್ತಿರುವಾಗ ಅದನ್ನು ತಪ್ಪಿಸಲು  ಸುಗ್ರೀವಾಜ್ಞೆ ಜಾರಿ ಮಾಡಲಾಗಿದೆ.

 

ಮೈಕ್ರೋ ಫೈನಾನ್ಸ್‌ ಗಳು ಸಾಲ ನೀಡುವಾಗ ಯಾವುದೇ ಭದ್ರತೆ ಪಡೆಯುವ ಆಗಿಲ್ಲ. ಎಂದು ಜಾರಿ ಮಾಡಲಾಗಿದೆ.

 

ಸಾಲ ನೀಡುವಾಗ ಬಡ್ಡಿ ದರವನ್ನು ಪಾರದರ್ಶಕವಾಗಿ ನಮೂದಿಸತಕ್ಕದ್ದು ಎಂದು ಹೇಳಲಾಗಿದೆ. ಈ ಷರತ್ತುಗಳು ಆರ್‌ ಬಿ ಐ  ಕೇಂದ್ರ ಹಾಗೂ ರಾಜ್ಯಸರ್ಕಾರಗಳಲ್ಲಿ ನೊಂದಾವಣಿ ಮಾಡಲಾಗದ ಮೈಕ್ರೋ ಫೈನಾನ್ಸ್‌ ಮತ್ತು ಮನಿ ಲೆಂಡಿಂಗ್‌ ದಾರರಿಗೆ ಅನ್ವಯವಾಗುತ್ತದೆ.

ನೊಂದಣಿ ಆಗದ ಮೈಕ್ರೊಫೈನಾನ್ಸ್‌  ಮತ್ತು ಖಾಸಗಿ ಲೇವಾದೇವಿದಾರರು ಆಯಾ ಜಲ್ಲೆಗಳ ಮೈಕ್ರೋ ಪೈನಾನ್ಸ್‌ ಗಳು ಆ ಜಿಲ್ಲೆಗಳ  ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನೊಂದಣಿ ಮಾಡಿಸಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.   ಈ ರೀತಿ ನೊಂದಣಿ ಮಾಡಿಸುವ ಸಮಯದಲ್ಲಿ  ವಿಧಿಸುವ ಬಡ್ಡಿದರ, ಸಾಲಗಾರರ ಮಾಹಿತಿ, ಸುಸ್ಥಿರ ಸಾಲಗಳ ವಿವರ ಎಲ್ಲವನ್ನು  ಜಿಲ್ಲಾಧಿಕಾರಿಗಳ ಬಳಿ ನೀಡತಕ್ಕದ್ದು.

ಈ ರೀತಿ ನೊಂದಣಿ ಮಾಡಿಸಿದ ನಂತರ ಪ್ರತಿ ಮೂರು ತಿಂಗಳಿಗೊಮ್ಮೆ ಮತ್ತು ವರ್ಷಕ್ಕೊಮ್ಮೆ ತಮ್ಮ ವ್ಯವಹಾರದ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ವರದಿ ರೂಪದಲ್ಲಿ  ಮಾಹಿತಿ ನೀಡತಕ್ಕದ್ದು ಎಂದು ಸಹ ಉಲ್ಲೇಖಿಸಲಾಗಿದೆ.

ಮೇಲಿನ ಆದೇಶಗಳನ್ನು ಪಾಲಿಸದಿದ್ದರೆ, ಆರು ತಿಂಗಳು ಜೈಲು ಶಿಕ್ಶೆ ಅಥವಾ ಹತ್ತು ಸಾವಿರ ರೂಪಾಯಿಗಳ ದಂಡ ಇರುತ್ತದೆ.

ಈ ಎಲ್ಲಾ ಅಂಶಗಳ ಪಾಲನೆಗಾಗಿ ಕೆ ಎಎಸ್‌ ಅಧಿಕಾರಿಗಳ ಮಟ್ಟದಲ್ಲಿ ಓಂಬುಡ್ಸಮನ್‌ ಒಬ್ಬರನ್ನು ನೇಮಿಸುವ ಅಧಿಕಾರ ಸರ್ಕಾರಕ್ಕಿದೆ,  ಈ ಅಧಿಕಾರಿಯು ಸುಗ್ರೀವಾಜ್ಞೆಗೆ ಸಂಬಂಧಿಸಿದ  ಕಾನೂನುಗಳನ್ನು ಅನುಷ್ಠಾನಗೊಳಿಸಲು  ನೇಮಕವಾಗಿರುತ್ತಾರೆ.

 

ಫೆಬ್ರವರಿ ೧೨ ರಂದು  ಕರ್ನಾಟಕ ಸರ್ಕಾರವು ರಾಜ್ಯಪಾಲರ ಅಂಕಿತದೊಂದಿಗೆ ಸುಗ್ರೀವಾಜ್ಞೆ ಜಾರಿ ಮಾಡಿದೆ. ಇದರಿಂದ ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್‌ ಗಳು ಬಲವಂತವಾಗಿ ಗ್ರಾಹಕರಿಂದ ಸಾಲ ವಸೂಲಾತಿ ಮಾಡುತ್ತಿರುವ ವಿಚಾರದಲ್ಲಿ ಇನ್ನಾದರೂ ಜನರು ಚೇತರಿಸಿಕೊಳ್ಳಲು ಭರವಸೆ  ಸಿಕ್ಕಂತಾಗಿದೆ.

 

“ಮೈಕ್ರೊ ಫೈನಾನ್ಸ್‌  ಸಿಬ್ಬಂದಿಗಳಿಂದ  ಬಲವಂತದ ಸಾಲ ವಸೂಲಾತಿಗಳಿಗೆ ಬ್ರೇಕ್‌ ಹಾಕಿ”  ಎಂದು  ಸಿಎಂ ಸಿದ್ದರಾಮಯ್ಯ  ವಿಡಿಯೋ ಕಾನ್ಫ್‌ ರೆನ್ಸ್‌  ಮೂಲಕ ಜಿಲ್ಲಾಧಿಕಾರಿ ಮತ್ತು  ಎಸ್‌ ಪಿಗಳಿಗೆ  ಸೂಚನೆ ನೀಡಿದ್ದಾರೆ.

 

ರಾಜ್ಯದಲ್ಲಿ ಸಾಲ ವಸೂಲಾತಿಗೆ ಮೈಕ್ರೋ ಫೈನಾನ್ಸ್‌  ಸಿಬ್ಬಂದಿಗಳು ಬಡ ಜನರಿಗೆ ಸಾಲ ವಸೂಲಾತಿ ವಿಚಾರದಲ್ಲಿ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಲು , ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ( ಬಲವಂತದ ಕ್ರಮಗಳ  ಪ್ರತಿಬಂಧಕ) ಆಧ್ಯಾದೇಶ – ೨೦೨೫ ಜಾರಿಗೆ ತಂದಿದ್ದು ,  ಇದನ್ನು ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೆ ತರುವ ಮೂಲಕ  ಬಡಜನರನ್ನು  ಮೈಕ್ರೊಫೈನಾನ್ಸ್‌ ನ ಸಾಲ ವಸೂಲಾತಿ ಕಿರುಕಳದಿಂದ ರಕ್ಷಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 

ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಾತಿ ವೇಳೆ ಸಾಲಗಾರರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಈ ಸಮಸ್ಯೆಯನ್ನು ತಡೆಯಲು ಕ್ರಮಗಳನ್ನು ಕೈಗೊಂಡಿದೆ. ಜನವರಿ 30, 2025 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅಮಾನವೀಯ ಸಾಲ ವಸೂಲಾತಿ ಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸುಗ್ರೀವಾಜ್ಞೆ (ಆರ್ಡಿನನ್ಸ್) ಜಾರಿಗೆ ಅನುಮೋದನೆ ನೀಡಲಾಗಿದೆ.

 

ಈ ಸುಗ್ರೀವಾಜ್ಞೆಯು ನೋಂದಣಿ ರಹಿತವಾಗಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ಮತ್ತು ಸಾಲಗಾರರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಿದೆ. ಮಸೂದೆ ಕರಡು ಪ್ರಕಾರ, ನೋಂದಣಿ ಇಲ್ಲದೆ ಸಾಲ ನೀಡುವ ಸಂಸ್ಥೆಗಳು ಮತ್ತು ಲೇವಾದೇವಿದಾರರು ನೀಡಿದ ಸಾಲದ ಅಸಲು ಮತ್ತು ಬಡ್ಡಿಯನ್ನು ಮರುಪಾವತಿ  ವೇಳೆ, ಸಾಲಗಾರರಿಗೆ ಕಿರುಕುಳ ನೀಡುವ, ಆಸ್ತಿ ಜಪ್ತಿ ಮಾಡುವ ಅಥವಾ ಅವಾಚ್ಯ ಶಬ್ದಗಳಿಂದ ನಿಂದಿಸುವಂತಹ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ, ಆರು ತಿಂಗಳುವರೆಗೆ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶ ಮಾಡಿಕೊಡಲಾಗಿದ

ಸಾಲ ವಸೂಲಾತಿ ವೇಳೆ ಅಮಾನವೀಯ ವರ್ತನೆ ತಡೆಯಲು, ಸರ್ಕಾರವು ಮಾಸಿಕ ಮತ್ತು ವಾರ್ಷಿಕ ವರದಿಗಳನ್ನು ಸಲ್ಲಿಸುವಂತೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ನಿಯಮ ಉಲ್ಲಂಘನೆಯಾದರೆ, ಯಾವುದೇ ಪೂರ್ವ ನೋಟಿಸ್ ಇಲ್ಲದೆ ಸಂಸ್ಥೆಯ ಮಾನ್ಯತೆಯನ್ನು ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಸುಗ್ರೀವಾಜ್ಞೆ ಜಾರಿಯಾದ ನಂತರ, ನೋಂದಣಿ ಮಾಡಿಸಿಕೊಳ್ಳದೇ ವಹಿವಾಟು ನಡೆಸುವವರಿಗೆ ಅವಕಾಶ ನೀಡುವುದಿಲ್ಲ, ಮತ್ತು ಒಂದು ವರ್ಷಕ್ಕೊಮ್ಮೆ ನೋಂದಣಿಯನ್ನು ಮರುನವೀಕರಣ ಮಾಡಿಕೊಳ್ಳುವುದು ಕಡ್ಡಾಯವಾಗಿ

ಸುಗ್ರೀವಾಜ್ಞೆ ಜಾರಿಗೆ ಬರುವವರೆಗೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ, ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸಾಲಗಾರರು ಕಿರುಕುಳಕ್ಕೆ ಒಳಗಾದರೆ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಅವಕಾಶವಿದ್ದು, ಡಿವೈಎಸ್ಪಿ ಹಂತದ ಅಧಿಕಾರಿ ಪ್ರಕರಣದ ತನಿಖೆ ನಡೆಸುವರು.

ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಮಾತನಾಡಿ ಮೈಕ್ರೋ ಫೈನಾನ್ಸ್‌  ನಿಯಂತ್ರಣಕ್ಕೆ ಫೆಬ್ರವರಿ ೧೨ ರಂದು ಸುಗ್ರೀವಾಜ್ಞೆ ಜಾರಿಯಾಗಿದ್ದು, ಇದನ್ನು ಜಿಲ್ಲೆಗಳಲ್ಲಿ ಹೆಚ್ಚು ಪ್ರಚಾರ ಕಾರ್ಯ ಕೈಗೊಳ್ಳಬೇಕು, ನೊಂದವರು ದೂರು ಸಲ್ಲಿಸಲು  ಸಹಾಯವಾಣಿ  ವ್ಯವಸ್ಥೆ ಮಾಡಬೇಕು, ದೂರು ಬಂದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದಿದ್ದಾರೆ.

ಸುಗ್ರೀವಾಜ್ಞೆ ಜಾರಿಗೆ ಬರುವ ನಂತರ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೋಂದಾಯಿತ ಕಚೇರಿಯನ್ನು ಸ್ಥಾಪಿಸಬೇಕು, ಬಡ್ಡಿ ದರ ಮತ್ತು ಹಣಕಾಸು ವಹಿವಾಟು ವಿಚಾರದಲ್ಲಿ ಪಾರದರ್ಶಕತೆ ಇರಬೇಕು, ಮತ್ತು ಸಾಲ ನೀಡಿದಾಗ ಸೂಕ್ತ ರಸೀದಿಯನ್ನು ಸಾಲಗಾರರಿಗೆ ನೀಡಬೇಕು. ಸಾಲಗಾರರ ವಿವರ, ಸಾಲದ ಪ್ರಮಾಣ, ಬಡ್ಡಿ ಮೊತ್ತ, ಮತ್ತು ಮುಚ್ಚಳಿಕೆಗಳನ್ನು ಲಿಖಿತವಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಈ ಕ್ರಮಗಳ ಮೂಲಕ, ಸರ್ಕಾರವು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅಮಾನವೀಯ ಸಾಲ ವಸೂಲಾತಿ ಕ್ರಮಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದೆ.

 ಸುಗ್ರೀವಾಜ್ಞೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ನೊಂದಣಿ ಮಾಡದೇ ಆರ್‌ ಬಿ ಐ ನಿರ್ದೇಶಿತ ತತ್ವಗಳಿಗೆ ಒಳಪಟ್ಟಿರದ, ಮೈಕ್ರೊಫೈನಾನ್ಸ್‌ ಗಳು ಮತ್ತು ಖಾಸಗೀ ಲೇವಾದೇವೀ ಮಾಡುವವರಿಗೆ  ಮಾತ್ರವೇ ಅನ್ವಯವಾಗುತ್ತದೆ.

ಸಾಲಗಾರರಿಂದ ಸಾಲ ವಸೂಲಾತಿ ಮಾಡುವ ವಿಚಾರದಲ್ಲಿ ಜನರಿಗೆ ಕಿರುಕುಳ ನೀಡುವುದು, ದೌರ್ಜನ್ಯ ನಡೆಸುವುದನ್ನು ತಪ್ಪಿಸಲು ಈ ಸುಗ್ರೀವಾಜ್ಞೆಯನ್ನು ಜಾರಿ ಮಾಡಲಾಗಿದೆ.

ಸರ್ಕಾರದ  ಕ್ರಮವು ಬಡಜನರನ್ನು ಆರ್ಥಿಕ ಶೋಷಣೆಯಿಂದ ರಕ್ಷಿಸಲು ಸಹಾಯಕವಾಗಿದೆಆದರೆಅದರ ಪರಿಣಾಮಕಾರಿತ್ವ ಮತ್ತು ಯಶಸ್ಸುಜಾರಿಗೊಂಡ ನಿಯಮಗಳ ಕಟ್ಟುನಿಟ್ಟಾದ ಅನುಷ್ಠಾನದ ಮೇಲೆ ಅವಲಂಬಿತವಾಗಿದೆಬದಲಾಗಿಬಡಜನರಿಗೆ ಸೌಲಭ್ಯ ಕಲ್ಪಿಸುವ ಬೇರೊಂದು ಪ್ರಭಾವೀ ಸಾಲ ವ್ಯವಸ್ಥೆ ರೂಪಿಸುವ ಅಗತ್ಯವಿದೆಸರ್ಕಾರಿ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಸರ್ಕಾರ ಹೊಸ ತಂತ್ರಗಳನ್ನು ಅನುಸರಿಸಬೇಕು.

ನಂತರದ ದಿನಗಳಲ್ಲಿ  ಸುಗ್ರೀವಾಜ್ಞೆಯ ಪರಿಣಾಮಗಳನ್ನು ವಿಶ್ಲೇಷಿಸಿಅಗತ್ಯವಾದಷ್ಟು ತಿದ್ದುಪಡಿ ಮಾಡುವುದು ಸರ್ಕಾರದ ಕರ್ತವ್ಯಕರ್ನಾಟಕದ  ನಿರ್ಧಾರವು ಇತರ ರಾಜ್ಯಗಳಿಗೂ ಮಾದರಿಯಾಗಬಹುದು ಎಂಬ ನಿರೀಕ್ಷೆಯಲ್ಲಿದೆ.

 

 

ಧನ್ಯವಾದಗಳು…🌷

 

 

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????