ಕೈಗೆ ಕೋಳ, ಕಾಲಿಗೆ ಚೈನು ಅಕ್ರಮ ಭಾರತೀಯ ವಲಸಿಗರನ್ನು ಹೊರದಬ್ಬಿದ ಅಮೇರಿಕ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
: ಕೈಯಿಗೆ ಕೋಳ,
ಕಾಲಿಗೆ ಬೇಡಿಯೋಂದಿಗೆ: ಅಕ್ರಮ ವಲಸೆಗಾರರ ವಾಪಸಾತಿ , ಅಮೇರಿಕದಿಂದ ವಾಪಸಾದ ಅಕ್ರಮ ವಲಸೆಗಾರರ ಕಣ್ಣೀರ ಕಥೆ.
ಅಮೇರಿಕವು ವಿಶ್ವದ ಪ್ರಭಾವಶಾಲಿ
ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಇದು
ಕನಸುಗಳ ಕಾರ್ಖಾನೆ ಎಂದರೂ ತಪ್ಪಿಲ್ಲ. ವಿಶ್ವದ ಅನೇಕ ರಾಷ್ಟ್ರಗಳ ಜನರು ಉದ್ಯೋಗವನ್ನು ಅರಸಿ ಇಲ್ಲಿಗೆ
ಬರುತ್ತಾರೆ., ಈ ವಿಚಾರದಲ್ಲಿ ಭಾರತೀಯರೂ ಕೂಡ ಹೊರತಲ್ಲ.
ಕಳೆದ ವರ್ಷದ ನವೆಂಬರ್ ನಲ್ಲಿ ನಡೆದ ಅಮೇರಿಕದ ಅಧ್ಯಕ್ಷೀಯ
ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ವಿಜಯಶಾಲಿಯಾಗುವ ಮೂಲಕ ಎರಡನೇ ಬಾರಿಗೆ
ಅಮೇರಿಕದ ಅಧ್ಯಕ್ಷ ಗದ್ದುಗೆ ಏರಿದ್ದಾರೆ.
ಚುನಾವಣಾ ಪೂರ್ವದಲ್ಲಿ ಅಮೇರಿಕದ ನಾಗರೀಕರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಕಾರ್ಯತಂತ್ರಗಳನ್ನು
ಪ್ರಾರಂಭಿಸಿದ್ದಾರೆ.
ಅಮೇರಿಕವು ವಲಸೆ ಕಾನೂನುಗಳನ್ನು ಬಿಗಿಗೊಳಿಸುತ್ತಿದೆ
ಎಂದು ಅಮೇರಿಕದ ರಾಯಬಾರ ಕಛೇರಿಯು ಮಂಗಳವಾರ ಅಂದರೆ ಫೆಬ್ರವರಿ ನಾಲ್ಕರಂದು ತಿಳಿಸಿತ್ತು.
ಅದರ ಪ್ರಥಮ ಹೆಜ್ಜೆಯಾಗಿಯೇ ಅಕ್ರಮ ವಲಸಿಗರ
ಗಡಿಪಾರು.
ಭೂಗೋಳದ ನಮ್ಮ ಭಾರತ ಸೇರಿದಂತೆ ಇತರ ರಾಷ್ಟ್ರಗಳ
ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ.
ಈ ವಿಚಾರವು ಮೊದಲಿಗೆ ಅಂತೆ ಕಂತೆ ಊಹಾ ಪೋಹ ಎಂದು ಕೇಳಿಬಂದಿದ್ದವು. ಅದರಲ್ಲಿ ಅಷ್ಟು ಸಂಖ್ಯೆಯ
ಜನರು ಇಷ್ಟು ಸಂಖ್ಯೆಯ ಜನರನ್ನು ವಿಮಾನದ ಮೂಲಕ ಗಡಿಪಾರು ಮಾಡಲಾಗಿದೆ ಎಂಬ ವರದಿಗಳು ಕೇಳಿ ಬಂದಿದ್ದವು.
ಇದರಲ್ಲಿ ಭಾರತಕ್ಕೆ ಸಂಬಂಧಿಸಿದ ಕೆಲವು ಸುದ್ದಿಗಳು ಸಹ ಕೇಳಿಬರುತ್ತಿದ್ದವು ಆರಂಭದಲ್ಲಿ ಈ ಸುದ್ದಿಗಳು
ಗೊಂದಲಮಯವಾಗಿದ್ದವು.
ಆದರೆ ಬಾರತಕ್ಕೆ ಮೊದಲ ಹಂತವೆಂಬಂತೆ ಫೆಬ್ರವರಿ
೫ ನೇ ತಾರೀಖಿನ ಮಧ್ಯಾಹ್ನದಂದು ಅಕ್ರಮ ವಲಸಿಗರನ್ನು
ಹೊತ್ತ ವಿಮಾನವು ಬಾರತಕ್ಕೆ ಬಂದಿತು.
ಈ ವಿಚಾರವಾಗಿ ಅಮೇರಿಕದ ರಾಯಬಾರ ಕಛೇರಿಯ ಪ್ರತಿಕ್ರಿಯೆಯು ಹೀಗಿದೆ.
ಅಮೇರಿಕದಲ್ಲಿ ನೂತನ ವಲಸೆ ನೀತಿಯನ್ನು ಜಾರಿ
ಮಾಡಲಾಗಿದ್ದು, ಅದರ ಪ್ರಕಾರವೇ ಕೆಲವು ಅಕ್ರಮ ವಲಸಿಗರನ್ನು ಕೋಳ ತೊಡಿಸಿ ಬೇಡಿ ಹಾಕಿ ಗಡಿಪಾರು ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಅಮೇರಿಕದ ಗಡಿ ಗಸ್ತು ಮುಖ್ಯಸ್ಥ ಮೈಖೆಲ್ ಡಬ್ಲ್ಯೂ ಬ್ಯಾಂಕ್ಸ್ ಬಿಡುಗಡೆ ಮಾಡಿದ್ದರು.
ಮೂಲಕ ಅಮೇರಿಕ ರಾಷ್ಟ್ರೀಯ ಭದ್ರತೆಗೆ ವಲಸೆ
ಕಾನೂನುಗಳನ್ನು ಜಾರಿಗೊಳಿಸುವುದು ಅತ್ಯಗತ್ಯ ಎಂದು ಅಮೇರಿಕದ ರಾಯಭಾರ ಕಛೇರಿಯು ತಿಳಿಸಿದೆ.
ಅಕ್ರಮ ವಲಸಿಗರಿಗೆ ಕೋಳ ತೊಡಿಸಿ ಬೇಡಿ ಹಾಕಿ ಗಡಿಪಾರು ಮಾಡಿರುವ ವಿಚಾರವು ಭಾರತದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸಂಸತ್ತಿನಲ್ಲಿಯೂ
ಸಹ ತೀವ್ರ ಕೋಲಾಹಲವನ್ನುಂಟು ಮಾಡಿದೆ.
“ ಅಮೇರಿಕದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಠಿಗೆ ನಿರ್ಣಾಯಕವಾದ ವಿದೇಶಿಯರ ವಿರುದ್ದದ ವಲಸೆ ಕಾನೂನುಗಳನ್ನು ನಿಷ್ಠೆಯಿಂದ
ಜಾರಿಗೊಳಿಸುವುದು ಅಮೇರಿಕದ ನೀತಿಯಾಗಿದೆ ಎಂದು ಅಮೇರಿಕದ ರಾಯಬಾರ ಕಛೇರಿಯ ವಕ್ತಾರರು ತಿಳಿಸಿದ್ದಾರೆ.
ಮತ್ತು ಅಮೇರಿಕದಿಂದ ಅಕ್ರಮ ವಲಸಿಗರನ್ಬು ಭಾರತಕ್ಕೆ
ಕಳುಹಿಸಿದ ವಿಮಾನದ ಕುರಿತು ವಿವರಗಳನ್ನು ಪಡೆಯಲು ಸಾಧ್ಯವಿಲ್ಲ ಎಂದೂ ಸಹ ಹೇಳಿದ್ದಾರೆ.
ಯು.ಎಸ್ ಕಸ್ಟಮ್ಸ್ ಮತ್ತು
ಗಡಿರಕ್ಷಣೆ ವಿಭಾಗ ಮತ್ತು ಸಂಬಂಧಪಟ್ಟ ಇಲಾಖೆಗಳು ಅಕ್ರಮ ವಲಸಿಗರನ್ನು ಭಾರತಕ್ಕೆ ಯಶಸ್ವಿಯಾಗಿ ಕಳುಹಿಸಿದೆ. ಇದು ಮಿಲಿಟರಿ
ಸಾರಿಗೆಯನ್ನು ಬಳಸಿಕೊಂಡು ಮಾಡಿದ ಅತ್ಯಂತ ದೂರದ ಗಡಿಪಾರಿಗೆ ಬಳಸಿದ ವಿಮಾನವಾಗಿದೆ. ಈ ಕಾರ್ಯಾಚರಣೆಯು ವಲಸೆ ಕಾನೂನುಗಳನ್ನು ಜಾರಿಗೊಳಿಸುವ ಮತ್ತು ತ್ವರಿತವಾಗಿ
ತೆಗೆದುಹಾಕುವುದನ್ನು ಖಚಿತಪಡಿಕೊಳ್ಳುವುದು ನಮ್ಮ
ಬದ್ದತೆಯನ್ನು ತೋರಿಸುತ್ತದೆ ಎಂದು ಯು. ಎಸ್ ನ ಕಸ್ಟಮ್ಸ್‌ನ ಇಲಾಖೆಯು ತಿಳಿಸಿದೆ.
ಈ ವಿಚಾರವಾಗಿ ಭವಿಷ್ಯದಲ್ಲಿ ಗಡಿಪಾರು ಮಾಡಲ್ಪಡುವ ಭಾರತೀಯರ ಮೇಲೆ ಯಾವುದೇ
ರೀತಿಯಲ್ಲಿ ಕೆಟ್ಟದಾಗಿ ವರ್ತಿಸದಂತೆ ನೋಡಿಕೊಳ್ಳಲು , ಭಾರತ ಸರ್ಕಾರವು ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಮಾತುಕತೆ ನಡೆಸುತ್ತದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭರವಸೆ ನೀಡಿದ್ದಾರೆ. ಯು. ಎಸ್ ನಿಂದ
ಗಡಿಪಾರುಗಳನ್ನು ವಲಸೆ ಮತ್ತು ಕಸ್ಟಮ್ಸ್
(ಐಸಿಐ) ಜಾರಿ ಮಾಡುತ್ತದೆ, ೨೦೧೨ ರಿಂದ ವಿಮಾನಗಳ ಮೂಲಕ ಗಡಿಪಾರು ಮಾಡುವ ಎಸ್ ಓ ಪಿ ಸಂಯಮದ ಬಳಕೆಯನ್ನು
ಜಾರಿ ಮಾಡುವುದರಿಂದ , ಮಹಿಳೆಯರು ಮತ್ತು ಮಕ್ಕಳನ್ನು ನಿರ್ಬಂಧಿಸುವುದಿಲ್ಲ ಎಂದು ಐಸಿಐ ನಮಗೆ ತಿಳಿಸಿದೆ ಎಂದು ಜೈಶಂಕರ್ ಅವರು ಹೇಳಿದ್ದಾರೆ. ನಿನ್ನೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು ಯು ಎಸ್ ಅನುಸರಿಸಿದ ಪ್ರಮಾಣಿತ ಕಾರ್ಯಾಚರಣಾ ವಿಧಾನ ಎಂದು ಸಹ ಕರೆದಿದ್ದಾರೆ.
ಭಾರತವು ಅಕ್ರಮ ವಲಸೆಯನ್ನು ವಿರೋಧಿಸುತ್ತದೆ. ಭಾರತದ ಪ್ರಜೆಗಳು ಅಕ್ರಮವಾಗಿ ಅಮೇರಿಕದಲ್ಲಿ
ವಾಸಿಸುತ್ತಿದ್ದರೆ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಕಲೆಗಳನ್ನು ನೀಡಿದರೆ ಅವರನ್ನು ಬಾರತಕ್ಕೆ ವಾಪಸ್ಸು
ಕರೆಸಿಕೊಳ್ಳಲು ಸಿದ್ದರಿದ್ದೇವೆ ಎಂದು ಬಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಳೆದ ತಿಂಗಳು ಹೇಳಿತ್ತು.
ಹರಿಯಾಣ, ಗುಜರಾತ್ , ಪಂಜಾಬ್,
ಚಂಡೀಗಡ , ಮಹಾರಾಷ್ಟ್ರ ಮೂಲದ ಒಟ್ಟು ೧೦೪ ಭಾರತೀಯ
ಪ್ರಜೆಗಳನ್ನು ಹೊತ್ತ ಅಮೇರಿಕದ ಸಿ-೧೭ ಮಿಲಿಟರಿ ವಿಮಾನವು , ಫೆಬ್ರವರಿ ೫ ರಂದು ಮಧ್ಯಾಹ್ನದ ವೇಳೆಗೆ
ಅಮೃತಸರದ ಶ್ರೀ ಗುರುರಾಮದಾಸ್ ಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಮಂಗಳವಾರ ಮಧ್ಯಾಹ್ನ
ಟೆಕ್ಸಾಸ್ ನ ಸ್ಯಾನ್ ಆಂಟೋನಿಯಾದಿಂದ ಹೊರಟ ಈ ವಿಮಾನದಲ್ಲಿ ೧೧ ಸಿಬ್ಬಂದಿ ಮತ್ತು ೪೫ ಅಮೇರಿಕದ
ಅಧಿಕಾರಿಗಳು ಇದ್ದರು.
ಗಡಿಪಾರು ಮಾಡಲಾದ ಒಟ್ಟು ಮಂದಿಯಲ್ಲಿ ಇಪ್ಪತ್ತೈದು ಮಹಿಳೆಯರು, ಎಪ್ಪತ್ತೊಂಭತ್ತು ಪುರುಷರು, ಮತ್ತು ಹನ್ನೆರಡು ಅಪ್ರಾಪ್ತ
ವಯಸ್ಕರು ಸೇರಿದ್ದಾರೆ. ಇದರಲ್ಲಿ ಗುಜರಾತ್ ಸೇರಿದ ೩೩ ಮಂದಿ, ಪಂಜಾಬ್ ನ ೩೦ ಮಂದಿ, ಉತ್ತರ ಪ್ರದೇಶ ಮತ್ತು ಚಂಡೀಗಡದ ತಲಾ ಇಬ್ಬರು ಮತ್ತು ಮಹಾರಾಷ್ಟ್ರದ
ಮೂರು ಮಂದಿ ಸೇರಿದ್ದಾರೆ.
ಭಾರತೀಯರು ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮಯದಲ್ಲಿ ಯಾವುದೇ ಕೋಳ , ಬೇಡಿ ಚೈನುಗಳನ್ನು
ಹಾಕಿಕೊಂಡಿಲ್ಲ. ಈ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬೇಡಿ ಕೋಳಗಳನ್ನು ಹಾಕಿ ಬಂಧಿಸಿದ
ಪ್ರಜೆಗಳ ಚಿತ್ರಗಳು ಭಾರತೀಯರದ್ದಲ್ಲ. ಬದಲಿಗೆ ಅಕ್ರಮ
ವಲಸಿಗರಾದ ಬ್ರೆಜಿಲ್ , ಕೊಲಂಬಿಯಾ, ಈಕ್ವೇಡಾರ್ ನ ಪ್ರಜೆಗಳನ್ನು ಕಳುಹಿಸಿ ಕೊಡುವ ರೀತಿಯಲ್ಲಿ ಕಳುಹಿಸಿಕೊಟ್ಟಿಲ್ಲ
ಎಂದು ತಿಳಿದು ಬಂದಿದೆ.
ಗುಜರಾತ್ ಮತ್ತು ಹರಿಯಾಣ ಮೂಲದ ಹೆಚ್ಚು ಮಂದಿ ಅಕ್ರಮ ವಲಸಿಗರಾಗಿದ್ದಾರೆ.
ಇದು ಮೊದಲ ಹಂತದ ಗಡಿಪಾರು ಪ್ರಕ್ರಿಯೆ ಆಗಿದ್ದು, ಇದೇ ತಿಂಗಳ ೧೨ ಅಥವಾ ೧೩ ನೇ ತಾರೀಖಿನಂದು ಭಾರತ ಪ್ರಧಾನಿ ನರೇಂದ್ರ ಮೋದಿ ಅವರು
ಅಮೇರಿಕಕ್ಕೆ ಭೇಟಿ ನೀಡಲಿದ್ದು, ಟ್ರಂಪ್ ಜೊತೆ ಮಾತುಕತೆ ನಡೆಯಲಿದ್ದು , ಈ ಬಗ್ಗೆ ಅಮೇರಿಕದ ಮುಂದಿನ
ಪ್ರಕ್ರಿಯೆಯ ಹೇಗಿದೆ ಎಂದು ಕಾದು ನೋಡಬೇಕಿದೆ.
ಮೊದಲ
ಹಂತದಲ್ಲಿ ಭಾರತದ ಹದಿನೆಂಟು ಸಾವಿರ ಅಕ್ರಮ ವಲಸಿಗರನ್ನು
ಪತ್ತೆ ಹಚ್ಚಲಾಗಿದ್ದು, ಅವರೆಲ್ಲರನ್ನು ಗಡಿಪಾರು ಮಾಡುವ ಉದ್ದೇಶ ಹೊಂದಿದೆ. ಒಟ್ಟಾರೆ ಹದಿನೇಳು ಲಕ್ಷದ
ಇಪ್ಪತ್ತೈದು ಸಾವಿರ ಮಂದಿ ಅಕ್ರಮ ವಲಸೆಗಾರರು ಭಾರತೀಯರೇ ಇದ್ದಾರೆ ಎಂದು ಅಮೇರಿಕವು ತಿಳಿಸಿದೆ.
ಭಾರತದಿಂದ ಅಮೇರಿಕಕ್ಕೆ ತೆರಳುವ ವಲಸಿಗರ ಸಂಖ್ಯೆಯಲ್ಲಿ ಭಾರತವು ಇಡೀ ಪ್ರಪಂಚದ ಪಟ್ಟಿಯಲ್ಲಿ
ಎರಡು ಅಥವಾ ಮೂರನೇ ಸ್ಥಾನದಲ್ಲಿದೆ.
ಹಾಗೆಯೇ ಅಕ್ರಮ ವಲಸಿಗರ ವಿಶ್ವದ ಪಟ್ಟಿಯಲ್ಲಿಯೂ ಸಹ ಎರಡು ಅಥವಾ ಮೂರನೇ ಸ್ಥಾನದಲ್ಲಿರುವುದು
ನಿಜಕ್ಕೂ ಖೇದಕರ ವಿಷಯವಾಗಿದೆ.
ಇದರಿಂದ ಅಮೇರಿಕದ ಅಕ್ರಮ ವಲಸಿಗರ ಗಡಿಪಾರು ವಿಚಾರವು ಭಾರತಕ್ಕೆ ಸಂಬಂಧಿಸಿದಂತೆ
ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಭಾರತದಿಂದ ವಲಸಿಗರು ಹೇಗೆ ಅಮೇರಿಕವನ್ನು
ಸೇರುತ್ತಾರೆ ಎಂಬುದನ್ನು ನೋಡುವುದಾದರೆ,
ಉದ್ಯೋಗಕ್ಕೆ ಅಮೇರಿಕಕ್ಕೆ ಹೋಗುವುದಾದರೆ ಎಚ್ ೧ ಬಿ ವಿಸಾವನ್ನು ನೀಡುತ್ತಾರೆ, ಈ ಮೂಲಕ
ನಾಗರಿಕರು ಅಮೇರಿಕಕ್ಕೆ ತೆರಳಬಹುದಾಗಿದೆ. ಈ ವೀಸಾವು ಆರು ವರ್ಷದ ಅವಧಿಗೆ ಚಾಲ್ತಿಯಲ್ಲಿರುತ್ತದೆ. ನಂತರದ ಮೂರು ವರ್ಷಗಳನ್ನು ಮತ್ತೆ ಎಕ್ಷಟೆಂಡ್ ಮಾಡಿಕೊಳ್ಳಲು
ಅವಕಾಶವಿರುತ್ತದೆ. ನಂತರದಲ್ಲಿ ಬಯಸಿದರೆ ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಈ ಗ್ರೀನ್ ಕಾರ್ಡ್ ಸಿಕ್ಕ ನಂತರ ಅಮೇರಿಕದ ಶಾಶ್ವತ ಪ್ರಜೆಯಾಗಿ ನೆಲೆಸಲು ಅಮೇರಿಕ ಅವಕಾಶ ನೀಡುತ್ತದೆ.
ಇದಲ್ಲದೆ ಟೂರಿಸ್ಟ್ ವೀಸಾ ಮತ್ತು ಸ್ಟೂಡೆಂಟ್
ವೀಸಾದ ಮೂಲಕ ಅಮೇರಿಕಕ್ಕೆ ತೆರಳುವ ಅವಕಾಶವಿರುತ್ತದೆ.
ಇನ್ನು ಅಕ್ರಮ ವಲಸೆಯೆಂದರೆ, ಎರಡು ರೀತಿಗಳಲ್ಲಿನ
ಅಕ್ರಮ ವಲಸಿಗರನ್ನು ಗುರುತಿಸಬಹುದು.
ಒಂದು ವೀಸಾ ಅವಧಿ ಮುಗಿದ ನಂತರವೂ ಅಲ್ಲೆ ವಾಸಿಸುತ್ತಿರುವುದು. ಈಗ ಉದಾಹರಣೆಗೆ ನೋಡುವುದಾದರೆ
ಎಚ್‌೧ಬಿ ವೀಸಾವನ್ನು ಪಡೆದು ಉದ್ಯೋಗಕ್ಕೆಂದು ಹೋದವರು, ವೀಸಾ ಅವಧಿ ಮುಗಿದ ಮೇಲೂ ಎಕ್ಷ್ ಟೆಂಡ್ ಮಾಡಿಸಿಕೊಳ್ಳದೆ ಅಲ್ಲಿಯೇ
ವಾಸಿಸುತ್ತಿದ್ದರೆ ಅದನ್ನು ಅಕ್ರಮ ವಲಸೆ ಎನ್ನುತ್ತಾರೆ.
ಇನ್ನು ಎರಡನೆಯದು , ಜೀವದ ಹಂಗು ತೊರೆದು, ಪ್ರಾಣ ಹೋಗುವಂತಹ ಪರಿಸ್ಥಿತಿಗಳನ್ನು ಎದುರಿಸಿ
, ಸೇಫ್ ಆಗಿ , ಯಾವುದೇ ವಿಸಾ ಅಥವಾ ಸಂಬಂಧಿಸಿದ ದಾಖಲೆಗಳನ್ನು ಹೊಂದಿರದೇ ಅಮೇರಿಕವನ್ನು ಪ್ರವೇಶಿಸಿದರೆ
ಅದನ್ನು ಇಲ್ಲೀಗಲ್ ಅಥವಾ ಅಕ್ರಮ ವಲಸೆ ಎನ್ನಬಹುದು.
ಅಕ್ರಮ ವಲಸೆ ಹೇಗೆ ಆಗುತ್ತದೆ.
ಡಂಕರ್ ಗಳೆಂದು ಕರೆಯಲ್ಪಡುವ ಭಾರತದ ಒಂದಷ್ಟು ಏಜೆಂಟ್ ಗಳು ಜನರಿಗೆ ಇಂತಿಷ್ಟು ಹಣ ನೀಡಿದರೆ
ಅಮೇರಿಕಾಗೆ ಕಳುಹಿಸಿಕೊಡುತ್ತೇವೆ ಎಂದು ಆಸೆ ಹುಟ್ಟಿಸಿ
ಒಂದಷ್ಟು ಹಣವನ್ನು ತೆಗೆದುಕೊಳ್ಳುತ್ತಾರೆ.
ಭಾರತೀಯರಿಗೆ ಸುಲಭಕ್ಕೆ ವೀಸಾ ಸಿಗುವಂತಹ
ದೇಶಗಳಿಗೆ ಮೊದಲು ವಿಮಾನದ ಮೂಲಕ ಅವರನ್ನು ಈಕ್ವೇಡಾರ್, ಬ್ರೆಝಿಲ್, ಕೊಲಂಬಿಯಾ ದಂತಹ ದೇಶಗಳಿಗೆ
ಮೊದಲು ರವಾನೆ ಮಾಡಲಾಗುತ್ತದೆ.
ಅಲ್ಲಿಂದ ನಂತರ ಕಾರು ಅಥವಾ ಬೋಟ್ ನ ಮೂಲಕ
ಪನಾಮಾ ದೇಶವನ್ನು ತಲುಪಿಸಲಾಗುತ್ತದೆ. ಈ ಮಧ್ಯೆ ಕೊಲಂಬಿಯಾದಿಂದ ಪನಾಮಾಕ್ಕೆ ತಲುಪಲು ದುರ್ಗಮ ಕಾಡುಗಳನ್ನು
ಮತ್ತು ನದಿಗಳನ್ನು ದಾಟಬೇಕು. ಈ ಪ್ರದೇಶವು ಯಾವುದೇ ದೇಶದ
ಆಡಳಿತಕ್ಕೆ ಒಳಪಟ್ಟಿಲ್ಲದ ಕಾರಣ ಆ ಹಂತಕ ಪ್ರದೇಶವನ್ನು ದಾಟಬೇಕಾದರೆ ಯಾವುದೇ ಸುರಕ್ಷಿತ
ವ್ಯವಸ್ಥೆ ಅಲ್ಲಿರುವುದಿಲ್ಲ. ಅಲ್ಲಿ ಏನು ಬೇಕಾದರೂ ನಡೆಯಬಹುದು, ಜೀವ ಕಳೆದುಕೊಂಡರೂ ಯಾರು ಕೇಳುವವರಿರುವುದಿಲ್ಲ.
ಈ ಡೇರಿಯನ್ ಗ್ಯಾಪ್ ನ್ನು ದಾಟಿದ ಮೇಲೆ
ಒಂದಷ್ಟು ದೇಶಗಳನ್ನು ದಾಟಿಕೊಂಡು ಪನಾಮಾಕ್ಕೆ ತಲುಪಲಾಗುತ್ತದೆ. ಅಲ್ಲಿನ ಸ್ಥಳೀಯ ಏಜೆಂಟ್ ಗಳ ಮೂಲಕ ಅಲ್ಲಿಂದ ಬಸ್ಸು, ಕಾರು, ಬೋಟ್ ಸಹಾಯದಿಂದ ಮತ್ತೆ ಒಂದಷ್ಟು ದೇಶಗಳನ್ನು ದಾಟಲಾಗುತ್ತದೆ. ಇದೆಲ್ಲ ಪಯಣದ ನಂತರ ಮೆಕ್ಸಿಕೊ ಗೆ ತಲುಪುತ್ತಾರೆ. ಮೆಕ್ಸಿಕೊದ ಪಯಣವು
ಸಾಮಾನ್ಯದ್ದಾಗಿರುವುದಿಲ್ಲ, ಅಲ್ಲಿನ ಮರುಭೂಮಿಯ ಪಯಣವು
ಕಾಲ್ನಡಿಗೆಯಲ್ಲಿ ತಲುಪಿ ಮೆಕ್ಸಿಕೊ ತಲುಪಿ
ನಂತರ ಅಮೇರಿಕದ ಬಾರ್ಡರ್ ಗೆ ತಲುಪಲಾಗುತ್ತದೆ. ಮತ್ತೆ ಕೆನಡಾದ ಮೂಲಕವೂ ಈ ಬಾರ್ಡರ್ ಅನ್ನು ತಲುಪಲಾಗುತ್ತದೆ.
ಟ್ರಂಪ್ ಆಡಳಿತ ಬಂದ ಮೇಲೆ ಈ ಬಾರ್ಡರ್ ನಲ್ಲಿ ಒಂದು ವಾಲ್ ನ ವ್ಯವಸ್ಥೆಯಾಗಿದೆ.
ಬಾರ್ಡರ್ ನಲ್ಲಿರುವ ಈ ದೊಡ್ಡದಾದ ವಾಲ್ ಅನ್ನು ದಾಟಿ ಅಮೇರಿಕದ ಒಳಗಡೆ ಹೋಗಬಹುದಾಗಿದೆ,
ಆದರೆ ಒಳಗೆ ಹೋಗಲು ತಿಂಗಳಾನುಗಟ್ಟಲೇ ಕಾಯಬೇಕಾಗಿ ಬರುತ್ತದೆ.
ಕಾರಣ ಈ ವಾಲ್ ಅತಿದೊಡ್ಡದಾಗಿದ್ದು ವಾಲ್
ಗೆ ಅಳವಡಿಸಿರುವ ಸೆನ್ಸಾರ್ ವ್ಯವಸ್ಥೆ. ಸೂಕ್ತ ಸಮಯವನ್ನು ನೋಡಿ ಈ ವಾಲ್ ಅನ್ನು ಜಂಪ್ ಮಾಡಿದರೆ
ಸೀದ ಅಮೇರಿಕವನ್ನು ತಲುಪಬಹುದು.
ಹೀಗೆ ಜಂಪ್ ಮಾಡುವಾಗ ಏನಾದರು ಹಾನಿಯಾಗಿ ಪ್ರಾಣ ಬಿಡುವಂತಹ ಸಂದರ್ಭವು ಬರಬಹುದು. ಅಥವಾ
ಮಿಲಿಟರಿ ಸೆಕ್ಯೂರಿಟಿಯವರ ಗಂಡೇಟಿಗೆ ಕೂಡ ಬಲಿಯಾಗಬಹುದು.
ಕೊಲಂಬಿಯಾದಿಂದಲೂ ಇರುವ ಈ ರೀತಿಯ ಮಿಲಿಟರಿ ವ್ಯವಸ್ಥೆಯ ಕಣ್ತಪ್ಪಿಸಿ ಬಂದವರು ಈ ಮೆಕ್ಸಿಕೊದೊಂದಿಗೆ
ಹೊಂದಿಕೊಂಡಿರುವ ಅಮೇರಿಕದ ಬಾರ್ಡರ್ ಅನ್ನು ತಲುಪುತ್ತಾರೆ.
ಈ ರೀತಿಯಾಗಿ ಅಮೇರಿಕಕ್ಕೆ ವಲಸೆ ಹೋಗುವವರಿಗೆ ಅದು ಅಕ್ರಮ ವಲಸೆ ಎಂದು ತಿಳಿದೇ ಇರುವುದಿಲ್ಲ.
ಅಮೇರಿಕದ ಆಸೆಗೆ ಏಜೆಂಟ್ ಗಳ ಕಣ್ಕಟ್ಟಿಗೆ ಬಲಿಯಾಗಿ
ಈ ರೀತಿ ಬಲಿಪಶುಗಳಾಗುತ್ತಾರೆ.
ಈ ರೀತಿ ಅಕ್ರಮ ವಲಸೆ ಮಾಡುವವರು ಉತ್ತರ ಭಾರತದ, ಗುಜರಾತ್ , ಹರಿಯಾಣ, ಉತ್ತರ ಪ್ರದೇಶ,
ಚಂಡೀಗಡ ಭಾಗದವರು ಹೇಚ್ಚಾಗಿದ್ದಾರೆ.
ಧನ್ಯವಾದಗಳು…..🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು