ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಭಾರತೀಯ ದ್ವೈತ ಸಿದ್ದಾಂತ ಪ್ರತಿಪಾದಕ ಶ್ರೀ ಮಧ್ವಾಚಾರ್ಯರು

                                                                ಮಧ್ವ ನವಮಿ




ಹಿಂದೂ ಧರ್ಮದ ಕ್ಯಾಲೆಂಡರ್‌  ಅನುಮೋದಿಸಿದ ವರ್ಷದ ಮಾಘಮಾಸದ ಶಕ್ಲಪಕ್ಷದ  ನವಮಿ ತಿಥಿಯಂದು ಮಧ್ವ ನವಮಿ ಯನ್ನು ಆಚರಿಸಲಾಗುತ್ತದೆ. ಇದು ಮಧ್ವಾಚಾರ್ಯರ ಜನ್ಮದಿನವಾಗಿರದೆ ಬದಲಿಗೆ, ಮಧ್ವಾಚಾರ್ಯರು ಬದರಿಕಾಶ್ರಮಕ್ಕೆ ತೆರಳಿದ ದಿನವನ್ನು ಸ್ಮರಿಸುವುದಕ್ಕೆ ನಿಗದಿ ಪಡಿಸಿದಂಥ ದಿನವಾಗಿದೆ. ಹಾಗಾಗಿ ಪ್ರತಿವರ್ಷ ಮಾಘಮಾಸದ ಶುಕ್ಲಪಕ್ಷದ  ನವಮಿ ತಿಥಿಯಂದು “ ಮಧ್ವ ನವಮಿ “ಯನ್ನು ಆಚರಿಸಲಾಗುತ್ತದೆ.

            ಮುಂದೆ ಮಧ್ವಾಚಾರ್ಯರ ಜನನ, ವಿಧ್ಯಾಭ್ಯಾಸ,  ಕುಟುಂಬದ ಕುರಿತು,  ಗ್ರಂಥಗಳ ರಚನೆ, ತತ್ವಗಳ ಬೋಧನೆ  ಮತ್ತು ಸನ್ಯಾಸ ಸ್ವೀಕಾರದ ಬಗ್ಗೆ ತಿಳಿಯೋಣ………….

            ಕ್ರಿ. ಶ. ೧೨೩೮ ರಲ್ಲಿ ಉಡುಪಿ ಜಿಲ್ಲೆಯ ಪಾಜಕ ಎಂಬಲ್ಲಿ, ತುಳು ಬ್ರಾಹ್ಮಣರ ಕುಟುಂಬದಲ್ಲಿ ಮಧ್ವಾಚಾರ್ಯರು ಜನಿಸಿದರು.  ಅವರ ಜನನ ವಿಜಯದಶಮಿಯ ದಿನ ಆಗಿದ್ದರಿಂದ ಆ ದಿನದಂದು “ ಮಧ್ವ ಜಯಂತಿ” ಯನ್ನು ಆಚರಿಸಲಾಗುತ್ತದೆ.

ಮಧ್ವಾಚಾರ್ಯರ ಬಾಲ್ಯದ ಹೆಸರು “ವಾಸುದೇವ” , ತಂದೆ ಮಧ್ಯಗೇಹ ಭಟ್ಟ,  ತಾಯಿ  ವೇದಾವತಿ . ಇವರು ಮಧ್ವರ ಪೂರ್ವಾಶ್ರಮದ ತಂದೆ ತಾಯಿಯ ಹೆಸರು.  ಐದನೇ ವಯಸ್ಸಿನಲ್ಲಿ  ಬಾಲಕ ವಾಸುದೇವನ ಉಪನಯನ  ಆಯಿತು.   ಆ ನಂತರ ಮಧ್ವಾಚಾರ್ಯರು ವಿದ್ಯಾಭ್ಯಾಸವನ್ನು ಅಚ್ಯುತಪ್ರಜ್ಞರ ಹತ್ತಿರ ಮಾಡಿದರು. ನಂತರ ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ಅಚ್ಯುತಪ್ರಜ್ಞರ ಬಳಿ  ಸನ್ಯಾಸ ದೀಕ್ಷೆಯನ್ನು  ಪಡೆದುಕೊಂಡಿದ್ದರು.

ಮಧ್ವರಿಗೆ ಸನ್ಯಾಸಾಶ್ರಮವನ್ನು ಬೋದಿಸುವ ಸಮಯದಲ್ಲಿ ಅವರ ಗುರುಗಳಾದ ಅಚ್ಯುತಪ್ರಜ್ಞರು  “ಪೂರ್ಣಪ್ರಜ್ಞ “ ಎಂಬ ಹೆಸರನ್ನು ನೀಡಿದ್ದರು.  ಮಧ್ವರಿಗೆ ಪಟ್ಟಾಭೀಷೆಕ ಮಾಡುವ ಸಮಯದಲ್ಲಿ ಗುರುಗಳು ನೀಡಿದ ಈ ಹೆಸರು  “ಆನಂದ ತೀರ್ಥ” ಎಂದಾಯಿತು. ಮುಂದೆ ತಮ್ಮನ್ನು ತಾವು ಮಧ್ವ ಎಂದು ಕರೆದುಕೊಳ್ಳುವ ಮೂಲಕ  ಮಧ್ವಾಚಾರ್ಯರು ಎಂದಾದರು.

 

“ತತ್ವವಾದ”  ವಾದ  “ದ್ವೈತ ಮತ”

ಮಧ್ವಾಚಾರ್ಯರು ಪ್ರಚಾರ ಮಾಡಿದ ಪಂಥವು  “ ದ್ವೈತ ಮತ”  ಎಂದು ಜನಪ್ರಿಯವಾಗಿದೆ.  ಪ್ರಾಚೀನ ಗ್ರಂಥಗಳಲ್ಲಿ ಇದನ್ನು  “ತತ್ವವಾದ” ಎಂದು ಕರೆದಿದ್ದಾರೆ.  

ಭಾರತೀಯ  ಸಂಪ್ರದಾಯದ  ತತ್ವ ಜ್ಞಾನ ಪರಂಪರೆಗೆ ಮಧ್ವಾಚಾರ್ಯರ ವಿಚಾರಧಾರೆ ಒಂದು ಹೊಸ ತಿರುವು ನೀಡಿತು.   ಅನಂತರದ ದಿನಗಳಲ್ಲಿ ವೈದಿಕ ಮತಗಳನ್ನು ಗುರುತಿಸುವಲ್ಲಿ , ದ್ವೈತ ಮತ್ತು ಅದ್ವೈತ ಗಳ ಸಂಘರ್ಷಗಳ ಮೂಲಕ ಅತಾತ್ವಿಕ ನಿಲುವು ತಳೆದಾಗ , ಮಧ್ವರ “ತತ್ವವಾದ” ವನ್ನು “ದ್ವೈತ ಮತ” ಎಂದು ಕರೆಯಲಾಯಿತು.

ವೈದಿಕ ಪರಂಪರೆಯ ನಿಟ್ಟಿನಲ್ಲಿ ಈ  ಹೆಸರು ಅಷ್ಟೋಂದು ಸಮರ್ಥನೀಯವಲ್ಲ ಎಂದು ಅರಿತ , ಧಾರ್ಮಿಕ  ಪ್ರವಚನಕಾರರೂ, ಆಧ್ಯಾತ್ಮ ಪ್ರವರ್ತಕರು  ಆದ ಬನ್ನಂಜೆ ಗೋವಿಂದಾಚಾರ್ಯರು ಮಾಡಿರುವ ಆಚಾರ್ಯರ ಪ್ರವಚನಗಳಲ್ಲಿ,  ಮಧ್ವಾಚಾರ್ಯರ ಸಿದ್ದಾಂತವು “ತತ್ವವಾದ” ಮತ್ತು ಅದನ್ನು ಅದೇ ಹೆಸರಿನಿಂದ ಕರೆಯಬೇಕು, “ದ್ವೈತ ಮತ” ಎಂಬುದು ತಪ್ಪಾದ ವ್ಯಾಖ್ಯಾನ ಎಂದು ಹೇಳಿದ್ದಾರೆ.

ಮಧ್ವಾಚಾರ್ಯರ ವಿಚಾರಧಾರೆಯಲ್ಲಿ ಮೂಲತಃ ಎರಡು ತತ್ವಗಳು ಕಂಡು ಬರುತ್ತವೆ. ಮೊದಲನೆಯದು” ಸ್ವತಂತ್ರ ತತ್ವ” ಮತ್ತು ಎರಡನೆಯದು”  ಅಸ್ವತಂತ್ರ ತತ್ವ”

ಬ್ರಹ್ಮಾಂಡವನ್ನು ಸಲಹುವ ಸೃಷ್ಠಿಕರ್ತನಾದ  ಭಗವಂತ ಸ್ವತಂತ್ರ ತತ್ವ….. ಮತ್ತು  ಅವನಿಂದ ಸೃಷ್ಠಿಯಾದ ಸಮಸ್ತ ವಿಶ್ವ  ಅಸ್ವತಂತ್ರ ತತ್ವ.

 

ವಾಸುದೇವನ ಬಾಲ್ಯದ ಘಟನೆ.

ಮಧ್ವಾಚಾರ್ಯರು ಬಾಲ್ಯದಲ್ಲಿ ವಾಸುದೇವನಾಗಿದ್ದಾಗ  ನಡೆದ ಘಟನೆ,  ಒಂದು ದಿನ ಮಧ್ಯಾಹ್ನ ವಾಸುದೇವ ತನ್ನ ಆಟ ಮುಗಿಸಿ ಊಟಕ್ಕೆ ಆಗಮಿಸಿದಾಗ , ಹಿತ್ತಲಲ್ಲಿ ತಂದೆಯು ಚಿಂತಾಕ್ರಾಂತನಾಗಿ ಕುಳಿತದ್ದನ್ನು ಕಂಡನು. ಎದುರಿನಲ್ಲಿ ಎತ್ತು ಖರೀದಿ ಮಾಡುವಾಗ ಸಾಲ ಕೊಟ್ಟಿದ್ದ ಕಕ್ರ ಶೆಟ್ಟಿಯು  “ ಸಾಲದ ಹಣ ತೀರಿಸದೇ ಭೋಜನ ಮಾಡಲು ಬಿಡುವುದಿಲ್ಲ” ಎಂದು ಹಠ ಹಿಡಿದು ನಿಂತಿದ್ದನು. ವಾಸುದೇವನ ತಂದೆಯಿಂದ ಪರಿಸ್ತತಿ ತಿಳಿದು, ಅಲ್ಲೆ ಬಿದ್ದಿದ್ದ ಹುಣಸೇ ಬೀಜಗಳನ್ನು ತನ್ನ ಸಕೋಮಲ ಪುಟ್ಟ ಕೈಗಳಿಂದ  ಎತ್ತಿ ನಗುತ್ತ ಕಕ್ರಶೆಟ್ಟಿಯ ಕೈಗೆ ಹಾಕಿದ. ಪರಮಾಶ್ಚರ್ಯ! ಅದ್ಬುತವೇ ನಡೆಯಿತು.  ಹಠ ಹಿಡಿದು ನಿಂತಿದ್ದ ಆ ಶೆಟ್ಟಿಯು  ಆ ಹುಣಸೇ ಬೀಜಗಳನ್ನು ಪಡೆದು ಹೊರಟೇ ಹೋದ. ಮುಂದೆ ವಾಸುದೇವನ ತಂದೆಯು ಹಣ ದೊರೆತು ಶೆಟ್ಟಿಗೆ ನೀಡಲು ಹೋದಾಗ “ ಭಟ್ಟರೇ ಅಂದೇ ನನಗೆ ನಿಮ್ಮ ಮಗ ನನ್ನ ಸಾಲ ತೀರಿಸಿಬಿಟ್ಟ” ಎಂದರು….. ಹೌದು ವಾಸುದೇವ ನೀಡಿದ್ದು ಕೇವಲ ಹಣಸೇ ಬೀಜವಲ್ಲ, ಬದಲಿಗೆ ಮೋಕ್ಷದ ಬೀಜ . ಅದರಿಂದ ಜ್ಞಾನ – ಭಕ್ತಿ – ವೈರಾಗ್ಯಗಳೆಂಬ ಟಿಸಿಲು- ಚಿಗುರು – ಹೂವು ಬಿಡಲು ಪ್ರಾರಂಭಿಸಿತ್ತು.

            ಮಧ್ವಾಚಾರ್ಯರು ದೈಹಿಕವಾಗಿ ಸಧೃಡರಾಗಿದ್ದರು. ಕುಸ್ತಿ, ಓಟ, ಜಿಗಿತಗಳಂತಹ ಮೈದಾನಗಳಲ್ಲಿ ಆಡುವ ಆಟಗಳಲ್ಲಿ ಗಟ್ಟಿಗರಾಗಿದ್ದರು, ಚೆನ್ನಾಗಿ ಈಜನ್ನು ಬಲ್ಲವರಾಗಿದ್ದವರು ಅದ್ಭುತವಾದ ಮೈಕಟ್ಟನ್ನು ಸಹ ಹೊಂದಿದ್ದರು. ಆದ್ದರಿಂದ ಜನರು ಮಧ್ವರನ್ನು ಭೀಮ ಎಂದು ಸಹ ಕರೆಯುತ್ತಿದ್ದರು ಎಂಬ ಉಲ್ಲೇಖವಿದೆ. ಉಡುಪಿಯ ಅನಂತೇಶ್ವರ ದೇವಾಲಯದಲ್ಲಿ ಮಧ್ವರು ಐತರೇಯ ಉಪನಿಷತ್‌ ಪ್ರವಚನ ಮಾಡುವಾಗ  ಅವರ ಮೇಲೆ ತುಳಸಿ ಹಾಗೂ ಹೂವುಗಳು ಬಿದ್ದವು.   ಈ ಕುಸುಮ ವೃಷ್ಠಿಯು ದೇವಾನುದೇವತೆಗಳಿಂದ ಆದದ್ದು ಎಂದು ನಾರಾಯಣ ಪಂಡಿತ ಆಚಾರ್ಯರು ಬರೆದ ಮಧ್ವಾಚಾರ್ಯರ ಜೀವನ ಚರಿತ್ರೆಯಾದ “ ಸುಮಧ್ವ ವಿಜಯ” ದಲ್ಲಿ ಇದೆ.

ಈ ಘಟನೆ ನಡೆದ ತರುವಾಯ ಕೆಲದಿನಗಳಲ್ಲಿಯೇ ಮಧ್ವಾಚಾರ್ಯರು ಬದರಿನಾಥಕ್ಕೆ ತರಳಿದರು ಎಂಬ ಅಭಿಪ್ರಾವಿದೆ.

 ಮಧ್ವರು ೧೩೧೭ ನೇ ಇಸವಿಯಲ್ಲಿ, ತಮ್ಮ ಎಪ್ಪತ್ತೊಂಬಂತ್ತನೇ  ವಯಸ್ಸಿನ ತನಕ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದರು ನಂತರ ಬದರಿಗೆ ತೆರಳಿದರು

ಹನುಮ, ಭೀಮಸೇನರಂತೆ ಮಧ್ವಾಚಾರ್ಯರದು ವಾಯುವಿನ ಅವತಾರ, ಅವರಿಗೆ ಸಾವಿಲ್ಲ ಇಂದಿಗೂ ಇದ್ದಾರೆ, ಬದ್ರಿನಾಥದಲ್ಲಿ ವಾಸಿಸುತ್ತಿದ್ದಾರೆ ಮತ್ತು ವೇದವ್ಯಾಸರಿಂದ ತಮ್ಮ ಕಲಿಕೆಯನ್ನು ಮಾಡುತ್ತಿದ್ದಾರೆ ಎಂದು ನಂಬಲಾಗಿದೆ.

 

                                                       ಗ್ರಂಥಗಳ ರಚನೆ

ಮಧ್ವಾಚಾರ್ಯರು  ಸಂಸ್ಕೃತ ಭಾಷೆಯಲ್ಲಿ  ಗೀತ ಬಾಷ್ಯಂ , ಸೂತ್ರ ಭಾಷ್ಯಂ, ಅಣು ಭಾಷ್ಯಂ ಸೇರಿದಂತೆ  ಮೂವತ್ತೇಳು ಗ್ರಂಥಗಳನ್ನು ರಚನೆ ಮಾಡಿದ್ದಾರೆ.

ಹೆಚ್ಚಿನವು  ಹಿಂದೂ ಸನಾತನ ಧರ್ಮದ ಪವಿತ್ರ ಗ್ರಂಥಗಳ  ಮೇಲಿನ ವ್ಯಾಖ್ಯಾನಗಳು ಮತ್ತು ತಮ್ಮದೇ ಆದ ದೇವತಾಶಾಸ್ತ್ರದ ವ್ಯವಸ್ಥೆ ಮತ್ತು ತತ್ವಶಾಸ್ತ್ರದ  ಗ್ರಂಥಗಳಾಗಿವೆ.

ಮಧ್ವಾಚಾರ್ಯರು “ ಮಹಾಭಾರತ ತಾತ್ಪರ್ಯ ನಿರ್ಣಯ” ವನ್ನು ಬರೆದಿದ್ದಾರೆ. ಆಧ್ಯಾತ್ಮಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ತಮ್ಮ ಗ್ರಂಥಗಳಲ್ಲಿ ತಿಳಿಸಿದ್ದಾರೆ.

“ಯತಿಪ್ರಣವಕಲ್ಪ” ರಚಿತದಲ್ಲಿ ಸನ್ಯಾಸಿಗಳ ಜೀವನ ಕ್ರಮ ಮತ್ತು ಅನುಸರಿಸಬೇಕಾದ ಧರ್ಮಗಳು ಇತ್ಯಾದಿ ವಿಷಯಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಅದೇ ರೀತಿ “ ತಂತ್ರಸಾರ ಸಂಗ್ರಹ” ಎಂಬ ಗ್ರಂಥದಲ್ಲಿ  ಗೃಹಸ್ಥರ ಬಗೆಗಿನ ಜೀವನ, ಪೂಜಾ ವಿಧಾನ ಮತ್ತು ತಮ್ಮಲ್ಲಿಟ್ಟುಕೊಳ್ಳಬಹುದಾದಂತಹ ವಿಗ್ರಹಗಳ ಪ್ರಮಾಣ ಹಾಗೂ ದೇವಾಲಯಗಳ ವಾಸ್ತು ಸೇರಿದಂತೆ  ಅನೇಕ ವಿಚಾರಗಳನ್ನು ತಿಳಿಸಿದ್ದಾರೆ.

            ಮಧ್ವಾಚಾರ್ಯರು ಭಾರತದಾದ್ಯಂತ ಸಂಚಾರ ಮಾಡಿ  ಆಧ್ಯಾತ್ಮಿಕ ವಿಚಾರಗಳನ್ನು ಮತ್ತು ತಮ್ಮ ತತ್ವ ವಿಚಾರಗಳನ್ನು ಬೋಧನೆ ಮಾಡಿರುವುದರ ಬಗ್ಗೆ ಉಲ್ಲೇಖವಿದೆ.

            ಒಂದೊಮ್ಮೆ ಮಧ್ವಾಚಾರ್ಯರು ಉಡುಪಿಯ ಮಲ್ಪೆ ಕಡಲ ತೀರದಲ್ಲಿ  ಸ್ತುತಿಗೀತೆಯನ್ನು ರಚಿಸುತ್ತಿದ್ದ ಸಮಯದಲ್ಲಿ ಹಡಗೊಂದು ಬಿರುಗಾಳಿಗೆ ಸಿಲುಕಿತ್ತು.  ಆ ಸಂದರ್ಭದಲ್ಲಿ ಮಧ್ವರು ತಮ್ಮ ತಫೋ ಬಲದಿಂದ ಸಂಕಷ್ಟದಲ್ಲಿ ಸಿಲುಕಿದ್ದ ಜನರನ್ನು ಮತ್ತು ಹಡಗನ್ನು ಪಾರು ಮಾಡಿದ್ದರು. ಆಗ ಹಡಗಿನ ನಾಯಕನು ತಮ್ಮ ಜೀವಗಳನ್ನು ರಕ್ಷಣೆ ಮಾಡಿದ್ದರ ಸಲುವಾಗಿ ಉಪಕಾರಾರ್ಥವಾಗಿ ಏನು ನೀಡಬೇಕೆಂದು ಕೇಳಿಕೊಳ್ಳುತ್ತಾನೆ. ಆಗ ಮಧ್ವಾಚಾರ್ಯರು ಆ ಹಡಗಿನಲ್ಲಿ ಇದ್ದಂತಹ ಗೋಪಿಚಂದನದ ತುಂಡೊಂದನ್ನು ಪಡೆದುಕೊಳ್ಳುತ್ತಾರೆ. ಅದನ್ನು ತುಂಡರಿಸಿದಾಗ  ಅದರಲ್ಲಿ ರುಕ್ಮಿಣಿಯು ಪೂಜಿಸಿದ್ದ ಕೃಷ್ಣನ ವಿಗ್ರಹ  ಇರುತ್ತದೆ. ಮುಂದೆ ಅದೇ ವಿಗ್ರಹವನ್ನು ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪನೆ ಮಾಡುತ್ತಾರೆ. ಮತ್ತು ಕೃಷ್ಣನ ಆರಾಧನೆಗಾಗಿ  ಅಷ್ಟಮಠಗಳನ್ನು ಸಹ ಸ್ಥಾಪನೆ ಮಾಡುತ್ತಾರೆ.

            ಭಗವಂತನ ಬಗೆಗೆ, ಉಪಾಸನೆಯ ಬಗೆಗೆ ವಿಶ್ವದ ಬಗೆಗೆ ಬೆಳೆದು ಬಂದಿದ್ದ ಕೆಲವು ವಿರೋಧಾಭಾಸದ ಕಲ್ಪನೆಗಳನ್ನು ಆಚಾರ್ಯರು ಸಮನ್ವಯದಿಂದ ಸಮೀಕರಿಸಿದರು.

ಭಗವಂತ ಸಾಕಾರನೂ ಹೌದು, ನಿರಾಕಾರನೂ ಹೌದು, ಸುಗುಣನೂ ಹೌದು ನಿರ್ಗುಣನು ಹೌದು. ಜ್ಞಾನಾಂದಮಯ ಶರೀರದಿಂದ ಅವನು ಸಾಕಾರ… ನಮ್ಮ ಕಲ್ಪನೆಯ ಕಣ್ಣಿಗೆ ಅವನಿಗೆ ಭೌತಿಕ ಶರೀರ ಇಲ್ಲವಾದ್ದರಿಂದ  ಅವನು ನಿರಾಕಾರ.

ಸಕಲ ಕಲ್ಯಾಣ ಗುಣಗಳಿಂದ ಪರಿಪೂರ್ಣನಾದ್ದರಿಂದ ಅವನು ಸುಗುಣ. ಭೌತಿಕ ಗುಣಗಳಿಂದ ದೂರನಾದ್ದರಿಂದ  ಅವನು ನಿರ್ಗುಣ. ಯಾವ ನೆಲೆಯಲ್ಲಿ ನಿಂತು ನೋಡಿದರೂ  ಎಲ್ಲಾ ಮಾತುಗಳೂ ಒಂದೇ ಸತ್ಯದ ಹಲವು ಮುಖಗಳನ್ನು ಹೇಳುತ್ತವೆ  ಎಂಬುದು ಗೋಚರವಾಗುತ್ತದೆ. ಈ ಸಮನ್ವಯ ಪ್ರಜ್ಞೆ ಇಲ್ಲದವನಿಗೆ  ವೇದ ವಾಙ್ಮಯ  ತನ್ನ ಹೃದಯವನ್ನು ತೆರೆದು ತೋರುವುದಿಲ್ಲ.   

            ಮಾಘ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು  ಮಧ್ವಾಚಾರ್ಯರನ್ನು ವಿಶೇಷವಾಗಿ ಸ್ಮರಿಸಲಾಗುತ್ತದೆ. ಈ ದಿನದಲ್ಲಿ  ಬ್ರಾಹ್ಮಣರ ಉಪ ಪಂಗಡವಾದ ಮಾಧ್ವ ರಲ್ಲಿ  ಮಧ್ವಾಚಾರ್ಯರ ತತ್ವ ಸಿದ್ದಾಂತಗಳ ಬಗ್ಗೆ  ಪ್ರವಚನ ಮತ್ತು ಉಪನ್ಯಾಸಗಳನ್ನು ಏರ್ಪಡಿಸುತ್ತಾರೆ.  ಹನುಮ -ಭೀಮ- ಮಧ್ವ ಈ ಮೂರು ಅವತಾರಗಳ ಆರಾಧನೆಯನ್ನು ಸಹ ಮಾಡುತ್ತಾರೆ.

 

 

ಧನ್ಯವಾದಗಳು….  🌷 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......