ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

"ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಬಜೆಟ್" - ನಿರ್ಮಲಾ ಸೀತಾರಾಮನ್

 

                 

                                                                                                                                                                               ಚಿತ್ರ:-ಗೂಗಲ್‌ ಕೃಪೆ


ಪ್ರತಿ ಬಾರಿ ಬಜೆಟ್‌ ಮಂಡನೆಯಾದಾಗ ಹೆಚ್ಚಾಗಿ ತೆರಿಗೆ ಮತ್ತು ಜಿಡಿಪಿ ವಿಷಯಗಳೇ ಹೆಚ್ಚಾಗಿ ಮುನ್ನಲೆಗೆ ಬರುತ್ತವೆ. ಮತ್ತು ಮಾಧ್ಯಮಗಳಲ್ಲಿಯೂ ಸಹ ಇದೇ ವಿಷಯವಾಗಿ ಹೆಚ್ಚು ಚರ್ಚೆಗಳು ಆಗುತ್ತವೆ ಏಕೆ…………?

            ಫೆಬ್ರವರಿ ೧ ೨೦೨೫ ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಎಂಟನೇ ಬಜೆಟ್‌ ಅನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಮಂಡಿಸಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲು ಸಿದ್ದರಾಗುತ್ತಿದ್ದಂತೆ, ವಿರೋಧ ಪಕ್ಷಗಳು ಗಲಭೆ ಆರಂಭಿಸಿದವು, ಈ ಮಧ್ಯೆ ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತ ದುರಂತದ ಬಗ್ಗೆಯೂ ಚರ್ಚೆ ನಡೆಸಬೇಕೆಂದು ಸರ್ಕಾರದ ವಿರುದ್ದಘೋಷಣೆಗಳನ್ನು ಸಹ ಕೂಗಿದರು, ಈ ಎಲ್ಲದರ ಮಧ್ಯೆಯು ವಿತ್ತ ಸಚಿವರು ತಮ್ಮ ಬಜೆಟ್‌ ಮಂಡನೆಯನ್ನು ಮುಂದುವರೆಸಿ  ೭೫ ನಿಮಿಷಗಳ ಬಳಿಕ ತಮ್ಮ ಬಜೆಟ್‌  ಮಂಡನೆ ಮುಗಿಸಿದರು

೨೦೨೫-೨೬ ಬಜೆಟ್‌ ಅನ್ನು “ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಬಜೆಟ್‌ “ ಎಂದು ನಿರ್ಮಲಾ ಸೀತಾರಾಮನ್‌ ಅವರು ಬಣ್ಣಿಸಿದ್ದಾರೆ.

ತೆರಿಗೆಯ ಹೊಸ ದರಗಳು, ಮಧ್ಯಮ ವರ್ಗದ ಜನರ ತೆರಿಗೆಯನ್ನು ಹೊರೆಯನ್ನು ಇಳಿಸಲಿದ್ದು ಜೊತೆಗೆ ಇವರಿಗೆ ಹಣದ ಹರಿವನ್ನು ಹೆಚ್ಚಿಸುತ್ತದೆ. ಇದು ಗೃಹಬಳಕೆಗೆ ಪ್ರಯೋಜನವನ್ನು ನೀಡುವ ಮೂಲಕ ಉಳಿತಾಯ ಮತ್ತು ಹೂಡಿಕೆಯ ಪ್ರವೃತ್ತಿಯನ್ನು ಮಧ್ಯಮ ವರ್ಗದವರಲ್ಲಿ ಉತ್ತೇಜಿಸುತ್ತದೆ.

“ಮಧ್ಯಮ ವರ್ಗ”ವನ್ನು  ವ್ಯಾಖ್ಯಾನಿಸುವುದು ವಿದ್ವಾಂಸರಿಗೆ ನಿರಂತರ ಸವಾಲುಗಳನ್ನು ಒಡ್ಡುವ ವಿಷಯವಾಗಿದೆ. ಇದುವರೆಗೂ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ  ಯಾವುದೇ ವ್ಯಾಖಾನಗಳಿಲ್ಲ.

“ಪೀಪಲ್‌ ರಿಚರ್ಚ್‌ ಆನ್‌ ಇಂಡಿಯಾಸ್‌ ಕನ್ಸೂಮರ್‌ ಎಕಾನಮಿ” ಯ ಇತ್ತೀಚಿನ ಸಮೀಕ್ಷೆಯ ಪ್ರಕಾರ , ವಾರ್ಷಿಕವಾಗಿ ೫ ಲಕ್ಷದಿಂದ ಸುಮಾರು ಮೂರು ಕೋಟಿಯ ನಡುವೆ ಆದಾಯ ಹೊಂದಿರುವ ವ್ಯಕ್ತಿಯನ್ನು  ಮಧ್ಯಮ ವರ್ಗದ ವ್ಯಕ್ತಿಯೆಂದು ನಿರೂಪಿಸುತ್ತದೆ.  ಇವರು ದೇಶದ ಒಟ್ಟು ಆದಾಯಕ್ಕೆ ಸುಮಾರು ಶೆ. ೫೦ ರಷ್ಟು ಕೊಡುಗೆ ನೀಡುತ್ತಾರೆ.

 ಮಧ್ಯಮ ವರ್ಗದ , ಬದಲಾಗುತ್ತಿರುವ ಅಭ್ಯಾಸಗಳು, ವಿಕಸನಗೊಳ್ಳುತ್ತಿರುವ ಆದ್ಯತೆಗಳು, ಹೆಚ್ಚಿದ ಖರ್ಚು ಶಕ್ತಿಯು  , ಭಾರತದ  ಆರ್ಥಿಕತೆ, ಸಮಾಜ ಮತ್ತು ಸಂಸ್ಕೃತಿಯ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುವ ಮೂಲಕ  ಹೊಸ ಮಧ್ಯಮ ವರ್ಗ ದ ಉದಯಕ್ಕೆ ಕಾರಣವಾಗಿದೆ.

ಮಾರುಕಟ್ಟೆಯ ಪ್ರವೃತ್ತಿಗಳನ್ನು ಪ್ರೇರೇಪಿಸುವ ಪ್ರಬಲ ಗ್ರಾಹಕ ನೆಲೆಯನ್ನು ಪ್ರತಿನಿಧಿಸುತ್ತಾರೆ.

ನೀತಿ ನಿರೂಪಣೆ ಮತ್ತು ಆಡಳಿತದ ಮೇಲೆ ಪ್ರಭಾವ ಬೀರುವ ಜಾಗೃತ ರಾಜಕೀಯ ಗುಂಪನ್ನು ಪ್ರತಿನಿಧಿಸುತ್ತಾರೆ. ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳು ಮತ್ತು ಆಕಾಂಕ್ಷೆಗಳನ್ನು ಸಹ ಸಾಕಾರಗೊಳಿಸುತ್ತಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಬದಲಾಗುತ್ತಿರುವ  ಗಾತ್ರ ಮತ್ತು ಪ್ರಬಾವದೊಂದಿಗೆ ಭಾರತದಲ್ಲಿ ಮಧ್ಯಮ ವರ್ಗವು  ದೇಶದ ಬೆಳವಣಿಗೆ ಮತ್ತು ಅಭಿವೃದ್ದಿಯತ್ತ ಸಾಗುವಲ್ಲಿ ನಿತ್ಯ ಪಾತ್ರವನ್ನು ವಹಿಸುತ್ತದೆ. ಈ ಪಾತ್ರವು  ಬಹುಮುಖಿ ಮತ್ತು ದೂರಗಾಮಿಯಾಗಿದ್ದು , ಮಧ್ಯಮವರ್ಗವು ದೇಶದ ಸಾಮಾಜಿಕ ಆರ್ಥಿಕ ರಚನೆಯ ಅವಿಭಾಜ್ಯ ಅಂಗವಾಗಿದೆ.

ಇಂತಹ ಅವಿಭಾಜ್ಯ ಅಂಗದೊಂದಿಗೆ ನಂಟಿರುವ ಕೆಲವೊಂದು ಬಜೆಟ್‌ ಅಂಶಗಳನ್ನು ಮಾತ್ರದ ಬಗ್ಗೆ ಮಾತ್ರವೆ ನಾನು ಹೇಳಿದ್ದೇನೆ. ಕಾರಣ ಭಾರತದ ಕೇಂದ್ರ ಬಜೆಟ್‌ ಅನ್ನು  ವಿಶ್ಲೇಷಿಸುವ ಬುದ್ದಿಮತ್ತೆಯು ನನಗೆ ಇಲ್ಲ, ಅಲ್ಲದೇ ಆ ಆರ್ಥಿಕತೆಗೆ ಸಂಬಂಧಿಸಿದ ಕೆಲವು ಶಬ್ದಗಳ ಪರಿಚಯವೇ ನನಗಿಲ್ಲ.  ಹಾಗಾಗಿ ಬಜೆಟ್‌ ಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಮಾತ್ರವೇ ಇಲ್ಲಿ ಬರೆದಿದ್ದೇನೆ.

                                             @@@@@@@@@@@@@@

ಈ ಬಾರಿಯ ಅಂದರೆ ೨೦೨೫-೨೬ ರ ಬಜೆಟ್‌ ಗಾತ್ರವು, ೫೦,೬೫,೩೪೫  ಕೋಟಿ ರೂಗಳಷ್ಟಿದೆ. ಪ್ರಸ್ತುತ ಬಜೆಟ್‌ ನ ಸರ್ಕಾರದ ಅಂದಾಜು, ೨೦೨೪-೨೫ ರ ಪರಿಷ್ಕೃತ  ಅಂದಾಜಿಗಿಂತ  ಶೇ. ೭.೪ ರಷ್ಟು ಹೆಚ್ಚಾಗಿದೆ. ಪಾವತಿಸ ಬೇಕಾಗಿರುವ  ಬಡ್ಡಿಗಳು ಒಟ್ಟು ಖರ್ಚಿನ ಶೇ.  ೨೫ ರಷ್ಟಿದೆ,  ಆದಾಯದ ೩೭ ರಷ್ಟಿದೆ.

ಸಾಲಗಳನ್ನು ಹೊರತುಪಡಿಸಿ  ೨೦೨೫-೨೬ ರಲ್ಲಿ ರಶೀದಿಗಳು ೩೪,೯೬, ೪೦೯ ಕೋಟಿಗಳೆಂದು ಅಂದಾಜಿಸಲಾಗಿದೆ. ಇದು ೨೦೨೪-೨೫ ರ ಪರಿಷ್ಕೃತ ಅಂದಾಜಿಗಿಂತ  ಶೇಕಡ  ಸುಮಾರು ೧೧.೧%  ಹೆಚ್ಚಾಗಿದೆ.

ರಶೀದಿಗಳ ಪ್ರಮುಖ ಭಾಗವಾಗಿರುವ  ತೆರಿಗೆ ಆದಾಯವು ೨೦೨೪-೨೫ ರ ಪರಿಷ್ಕೃತ ಅಂದಾಜಿಗಿಂತ  ಶೇಕಡ ೧೧% ರಷ್ಟು ಹೆಚ್ಚಾಗುವ ನಿರೀಕ್ಷೆಇದೆ.

೨೦೨೫-೨೬ ರಲ್ಲಿ ನಾಮಮಾತ್ರ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ ೧೦.೧ ಎಂದು ಅಂದಾಜಿಸಲಾಗಿದೆ. (ನೈಜ ಬೆಳವಣಿಗೆ  ಮತ್ತು ಹಣದುಬ್ಬರ)

ಕೇಂದ್ರ ಸರ್ಕಾರವು  ಮಾರ್ಚ್‌  ೨೦೩೧ ರ ವೇಳೆಗೆ  ಬಾಕಿ ಇರುವ ಎಲ್ಲಾ ಸಾಲಗಳನ್ನು  ಜಿಡಿಪಿಯ   ಶೇಕಡ ೫೦ ಕ್ಕೆ ಇಳಿಸುವ ಗುರಿಯನ್ನು ಹೊಂದಿದೆ. ೨೦೨೫-೨೬ ರಲ್ಲಿ ಈ ಎಲ್ಲಾ ಹೊಣೆಗಾರಿಕೆಗಳು  ಜಿಡಿಪಿ ಯ ಶೇಕಡ ೫೬.೧  ಎಂದು ಅಂದಾಜಿಸಲಾಗಿದೆ.

ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ  ತೆರಿಗೆ ಸ್ಲ್ಯಾಬ್‌ ಗಳನ್ನು ಮಾರ್ಪಡಿಸಲಾಗಿದೆ. ೧೨ ಲಕ್ಷ ರೂಗಳವರೆಗಿನ ವಾರ್ಷಿಕ ಆದಾಯವು ತೆರಿಗೆಗೆ ಒಳಪಡುವ ಆದಾಯದ ಮೇಲೆ  ಶೇ. ೧೦೦ ರಷ್ಟು ರಿಯಾಯಿತಿಯನ್ನು ಪಡೆಯುತ್ತದೆ. ಇದು ಇದಕ್ಕೂ ಮೊದಲು ಏಳು ಲಕ್ಷ ರೂಪಾಯಿಯ ಆದಾಯಕ್ಕೆ ಮಾತ್ರ ಅನ್ವಯವಾಗುತ್ತಿದ್ದು , ಹಳೆಯ ತೆರಿಗೆ ಪದ್ದತಿ ಬದಲಾಗದೇ ಉಳಿದಿದೆ.

ನವೀಕರಿಸಿದ ರಿಟರ್ನ್‌ ಗಳನ್ನು ಸಲ್ಲಿಸುವ ಸಮಯ ಮಿತಿಯನ್ನು  ಎರಡರಿಂದ ನಾಲ್ಕು ವರ್ಷಗಳವರೆಗೆ  ಹೆಚ್ಚಿಸಲಾಗಿದೆ.  ಮೂರು ಮತ್ತು ನಾಲ್ಕು ವರ್ಷಕ್ಕೆ  ಕ್ರಮವಾಗಿ ಆದಾಯ ಮತ್ತು ಬಡ್ಡಿಯ ಶೇ  ೬೦ ಮತ್ತು ಶೇಕಡ ೭೦ ರಷ್ಟು ದಂಡ ವಿಧಿಸಲಾಗುತ್ತದೆ.

ಬಾಡಿಗೆ ಮೇಲಿನ ಟಿಡಿಎಸ್‌ ನ ಮಿತಿ ವಾರ್ಷಿಕ ೬ ಲಕ್ಷಗಳಾಗಿರುತ್ತವೆ. ಟಿಸಿಎಸ್‌ ನ  ಹಣ ರವಾನೆಯ ಮಿತಿಯು ೭ ರಿಂದ ೧೦ ಲಕ್ಷರೂಪಾಯಿಗಳಿಗೆ ಏರಿದೆ.

ಕೃಷಿ ಮೂಲ ಸೌಕರ್ಯ ಮತ್ತು ಅಭಿವೃದ್ದಿಸೆಸ್‌ (ಎ ಐಡಿಸಿ) ಪರಿಚಯಿಸುವ ಮೂಲಕ, ಅನೇಕ ವಸ್ತುಗಳ ಮೇಲಿನ ಕಸ್ಟಮ್ಸ್‌ ಸುಂಕವನ್ನು ಕಡಿಮೆ ಮಾಡಲಾಗಿದೆ. ಒಟ್ಟಾರೆ ತೆರಿಗೆ ಹಿಂದಿನ ಹಂತಗಳಂತೆಯೇ ಇದ್ದು , ಕಸ್ಟಮ್ಸ್‌ ಸುಂಕದಿಂದ ಸೆಸ್‌ ಗೆ ಬದಲಾವಣೆಯಾಗಿದೆ. ಇದರ ಪರಿಣಾಮವಾಗಿ  ರಾಜ್ಯಗಳೊಂದಿಗೆ ಕಡಿಮೆ ಪ್ರಮಾಣದಲ್ಲಿ  ಹಂಚಿಕೆಯನ್ನು ಅಂದಾಜಿಸಲಾಗಿದೆ.

            ಏಪ್ರಿಲ್‌ ೧ , ೨೦೨೫ ರ ವರೆಗೆ ಸಂಯೋಜಿಸಲಾಗಿರುವ  ಸ್ಟಾರ್ಟ್‌ ಅಪ್‌ ಗಳು ತಮ್ಮ ಕಾರ್ಯಾಚರಣೆಯ ಮೊದಲ ಹತ್ತು ವರ್ಷಗಳಲ್ಲಿ , ಸತತ ಮೂರು ವರ್ಷಗಳವರೆಗೆ  ತೆರಿಗೆ ವಿನಾಯಿತಿಯನ್ನು ಪಡೆಯಬಹುದು.  ಈ ಅವಧಿಯನ್ನು ಏಪ್ರಿಲ್‌ ೧, ೨೦೩೦ ರವರೆಗೆ ಸಂಯೋಜಿತವಾಗಿರುವ  ಸ್ಟಾರ್ಟ್‌ ಅಪ್‌ ಗಳನ್ನು ಒಳಗೊಳ್ಳಲು  ವಿಸ್ತರಿಸಲಾಗಿದೆ.

ಎನ್‌ ಜಿ ಓ ಗಳಿಗೆ ಸೆಕ್ಷನ್‌ ೧೨ಎ  ಅಡಿಯಲ್ಲಿ ಐದು ವರ್ಷಗಳವರೆಗೆ ತೆರಿಗೆ ವಿನಾಯಿತಿ ಮಾನ್ಯವಾಗಿರುತ್ತದೆ.  ನಂತರ ನವೀಕರಣ ಅಗತ್ಯವಿರುತ್ತದೆ.  ಹಿಂದಿನ ಎರಡು ವರ್ಷಗಳಲ್ಲಿ  ಐದು ಕೋಟಿ ರೂಪಾಯಿ ವರೆಗೆ ಆದಾಯ ಹೊಂದಿರುವ ಸಂಸ್ಥೆಗಳಿಗೆ ಸಿಂಧುತ್ವವನ್ನು  ೧೦ ವರ್ಷಗಳಿಗೆ ಹೆಚ್ಚಿಸಲಾಗಿದೆ.

ಕೈಗಾರಿಕೆ ಮತ್ತು ವಾಣಿಜ್ಯ ಕಾರಣಗಳಿಗೆ ಸಾಲದ  ಪ್ರವೇಶವನ್ನು ಸುಧಾರಿಸಲು  ಕ್ರೆಡಿಟ್‌ ಗ್ಯಾರಂಟಿ ವ್ಯಾಪ್ತಿಯನ್ನು ಹೆಚ್ಚಿಸಲಾಗುವುದು. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ  ಐದರಿಂದ ಹತ್ತು ಕೋಟಿ ರೂಪಾಯಿಗಳವರೆಗೆಗ,  ನವ ಉದ್ಯಮಗಳಿಗೆ ೧೦ ರಿಂದ ೨೦ ಕೋಟಿ ರೂಪಾಯಿಗಳಿಗೆ  ಹೆಚ್ಚಿಸಲಾಗಿದೆ.

ಉದ್ಯಮ ಪೋರ್ಟಲ್‌ ನಲ್ಲಿ ನೊಂದಾಯಿಸಲಾದ ಸೂಕ್ಷ್ಮ ಉದ್ಯಮಗಳಿಗೆ , ಯೋಜನೆಯ ಮೊದಲ ವರ್ಷದೊಳಗೆ  ಐದು ಲಕ್ಷ ರೂಗಳ ಕ್ರೆಡಿಟ್‌ ಮಿತಿಯನ್ನು ಹೊಂದಿರುವ ೧೦ ಲಕ್ಷ ಕ್ರೆಡಿಟ್‌ ಕಾರ್ಡ್‌ ಗಳನ್ನು ಒದಗಿಸಲಾಗುತ್ತದೆ.

ಮೂಲ ಸೌಕರ್ಯ ಸಂಬಂಧಿತ ಸಚಿವಾಲಯವು, ಸಾರ್ವಜನಿಕ ಮತ್ತು ಖಾಸಗಿ ಸಹಬಾಗಿತ್ವದಲ್ಲಿ ನಿರ್ವಹಿಸಬಹುದಾದ ಯೋಜನೆಗಳ ಮೂರು ವರ್ಷದ ಪೈಪ್‌ ಲೈನ್‌ ಅನ್ನು ರೂಪಿಸುತ್ತದೆ. ಭೂ ದಾಖಲೆಗಳು ಮತ್ತು ನಗರ ಯೋಜನೆಯನ್ನು ಆಧುನೀಕರಿಸಲು  ರಾಷ್ಟ್ರೀಯ ಜೀಯೋ ಸ್ಪೇಷಿಯಲ್‌ ಮಿಷನ್‌ ಅನ್ನು ಪ್ರಾರಂಭಿಸಲಾಗುವುದು. ಇಂಡಿಯಾ ಪೋಸ್ಟ್‌ ಅನ್ನು ದೊಡ್ಡ ಲಾಜಿಸ್ಟಿಕ್‌ ಸಂಸ್ಥೆಯಾಗಿ ಪರಿವರ್ತಿಸಲಾಗುವುದು. 

ಮುಂದಿನ ಹತ್ತು ವರ್ಷಗಳಲ್ಲಿ ೧೨೦ ಹೊಸ ಸ್ಥಳಗಳಿಗೆ ಸಂಪರ್ಕವನ್ನು ಸುಧಾರಿಸಲು ನಾಲ್ಕು ಕೋಟಿ ಪ್ರಯಾಣಿಕರನ್ನು ಸಾಗಿಸಲು ಮಾರ್ಪಡಿಸಿದ ಉಡಾನ್‌ ಯೋಜನೆಯನ್ನು ಪ್ರಾರಂಭಿಸಲಾಗುವುದು.

ಇಪ್ಪತ್ತೈದು ಸಾವಿರ ಕೋಟಿಗಳ ನಿಧಿಯೊಂದಿಗೆ ಕಡಲ ಅಭಿವೃದ್ದಿ ನಿಧಿಯನ್ನು ಸ್ಥಾಪಿಸಲಾಗುವುದು.

ಗ್ರಾಮೀಣ ಪ್ರದೇಶದ  ಎಲ್ಲಾ ಸರ್ಕಾರಿ ಮಾಧ್ಯಮಿಕ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ ಬ್ಯಾಂಡ್‌ ಸಂಪರ್ಕವನ್ನು ಒದಗಿಸಲಾಗುವುದು.

ಕೃಷಿ ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಭನೆ ಸಾಧಿಸಲು ಕೇಂದ್ರ ಸರ್ಕಾರವು ಆರು ವರ್ಷಗಳ ಗುರಿಯನ್ನು ಹೊಂದಲಾಗಿದೆ. ನಾಲ್ಕು ವರ್ಷಗಳಲ್ಲಿ ರೈತರಿಂದ ನೀಡಲಾಗುವ ಮೂರು ದ್ವಿದಳ ದಾನ್ಯಗಳನ್ನು ಕೇಂದ್ರದ ಸಂಸ್ಥೆಗಳು ಖರೀದಿಸುತ್ತವೆ.

ಹೆಚ್ಚಿನ ಇಳುವರಿ ನೀಡುವ ಬೀಜಗಳ ಲಬ್ಯತೆ,  ಮತ್ತು ಹತ್ತಿ ಉತ್ಪಾದಕತೆಯನ್ನು ಹೆಚ್ಚಿಸಲು ಕಾರ್ಯಗಳನ್ನು ರೂಪಿಸಲಾಗುವುದು.

ಕಡಿಮೆ ಉತ್ಪಾದಕತೆಯ ಜಿಲ್ಲೆಗಳಲ್ಲಿ ಉತ್ಪಾದಕತೆ ಮತ್ತು ಬೆಳೆ ವೈವಿಧ್ಯತೆಯನ್ನು ಸುಧಾರಿಸಲು  ಪ್ರಧಾನ ಮಂತ್ರಿ ಧನ್‌ - ದಾನ್ಯ  ಕೃಷಿ ಯೋಜನೆಯನ್ನು ಜಾರಿಗೆ ತರಲಾಗುವುದು.

ಸಬ್ಸಿಡಿ ಯೋಜನೆಯಡಿ ಸಾಲದ ಮಿತಿಯನ್ನು  ಮೂರು ಲಕ್ಷ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳ ವರೆಗೆ ಹೆಚ್ಚಿಸಲಾಗುವುದು.

ಕಿಸಾನ್‌ ಕ್ರೆಡಿಟ್‌  ಕಾರ್ಡ್‌ ಮೂಲಕ ಪಡೆದ ಸಾಲಗಳಿಗೆ ಬಡ್ಡಿದರವನ್ನು ಮಾರ್ಪಡಿಸಲಾಗುವುದು.

ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆಟಕುವ  ಸಾಲಗಳನ್ನು ಒದಗಿಸುವ  ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯನ್ನು ಪರಿಷ್ಕರಿಸಲಾಗುವುದು. ಮೂವತ್ತು ಸಾವಿರ ರೂಗಳ ಮಿತಿಯೊಂದಿಗೆ ಯುಪಿಐ ಲಿಂಕ್ಡ್‌ ಕ್ರೆಡಿಟ್‌ ಕಾರ್ಡ ಗಳು , ವರ್ಧಿತ ಬ್ಯಾಂಕ್‌ ಸಾಲ ಮತ್ತು ಸಾಮರ್ಥ್ಯ ಅಭಿವೃದ್ದಿ ಬೆಂಬಲವನ್ನು ಒದಗಿಸಲಾಗುತ್ತದೆ.

ಆಯುಷ್ಮಾನ್‌ ಭಾರತ್‌ ಅಡಿಯಲ್ಲಿ ಕಾರ್ಮಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ  ಐದು ಲಕ್ಷ ಮಹಿಳೆಯರಿಗೆ  ಮೊದಲ ಬಾರಿಗೆ ಉದ್ಯಮವನ್ನು ಪ್ರಾರಂಭಿಸುವವರಿಗೆ  ಎರಡು ಕೋಟಿ ರೂಪಾಯಿ ಗಳವರೆಗೆ ಸಾಲ ನೀಡುವ ಯೋಜನೆಯನ್ನು ಪ್ರಾರಂಭಿಸಲಾಗುವುದು.

ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಮುಂದಿನ ವರ್ಷದಲ್ಲಿ ಹತ್ತುಸಾವಿರ ಹೆಚ್ಚುವರಿ ಸೀಟುಗಳನ್ನು ಪ್ರಾರಂಭಿಸಲಾಗುವುದು. ಮುಂದಿನ ಐದು ವರ್ಷಗಳಲ್ಲಿ  ೭೫೦೦೦ ಸೀಟುಗಳನ್ನು ಸೇರಿಸುವ ಗುರಿಯನ್ನು ಹೊಂದಲಾಗಿದೆ.

ಪಿಎಂ ಸಂಶೋಧನಾ  ಫೆಲೋಶಿಪ್‌ ಯೋಜನೆಯ ಅಡಿಯಲ್ಲಿ ಐಐಟಿಗಳು ಮತ್ತು ಐಐಎಸ್ಸಿಗಳಲ್ಲಿ ತಾಂತ್ರಿಕ ಸಂಶೋಧನೆಗಾಗಿ ಹತ್ತು ಸಾವಿರ ಫೆಲೋಶಿಪ್‌ ಗಳನ್ನು ಒದಗಿಸಲಾಗುವುದು.

ಕೇಂದ್ರ ಸರ್ಕಾರವು ೨೦೨೫-೨೬ ರಲ್ಲಿ ರಾಜ್ಯಗಳಿಗೆ ೨೫೫೯೭೬೪ ಕೋಟಿಗಳನ್ನು ವರ್ಗಾಯಿಸಲಿದೆ. ಇದು ೨೦೨೪-೨೫ ರ ಪರಿಷ್ಕೃತ ಅಂದಾಜಿಗಿಂತ  ಶೇಕಡ ೧೨.೫ ರಷ್ಟು ಹೆಚ್ಚಾಗಿದೆ.

             

 

ಧನ್ಯವಾದಗಳು..🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......