ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ರಥಸಪ್ತಮಿಯ ದಿನದ ಮಹತ್ವ ಮತ್ತು ಪೂಜಾ ವಿಧಾನ

        

                 


ಸೂರ್ಯದೇವನ ಆರಾಧನೆಗಾಗಿಯೇ ಮಿಸಲಿಟ್ಟಿರುವ ದಿನವನ್ನು ರಥಸಪ್ತಮಿ ದಿನವೆಂದು ಹಿಂದೂ ಸಂಪ್ರದಾಯದಲ್ಲಿ ಆಚರಿಸಲಾಗುತ್ತದೆ.  ಈ ವರ್ಷದ ಫೆಬ್ರವರಿ  ೪ ರ ಮಂಗಳವಾರದಂದು ಆಚರಿಸಲಾಗುತ್ತದೆ.

ಸನಾತನ ಧರ್ಮದ ಹಿಂದೂ ನಂಬಿಕೆಗಳ ಪ್ರಕಾರ,  ಈ ದಿನದಂದು ಸೂರ್ಯನ ಏಳು ಕುದುರೆಗಳು ಅವನ ರಥವನ್ನು ಎಳೆಯಲು ಪ್ರಾರಂಭಿಸುತ್ತವೆ. ಈ ದಿನದಂದು ಸೂರ್ಯದೇವರು ಇಡೀ ಪ್ರಪಂಚದ ಜ್ಞಾನ ವನ್ನು ಹೆಚ್ಚಿಸಲು ಪ್ರಾರಂಭಿಸಿದರು ಎಂದು ಹೇಳಲಾಗಿದೆ.

ಈ ದಿನವನ್ನು ಸೂರ್ಯ ದೇವರ ಜನ್ಮದಿನವಾಗಿ ಆಚರಿಸಲಾಗುತ್ತದೆ. ಈ ದಿನವು ರೈತರಿಗೆ ಸುಗ್ಗಿಯ  ಆರಂಭವನ್ನು ಸೂಚಿಸುತ್ತದೆ.  ರಥಸಪ್ತಮಿಯ ಈ ದಿನದಿಂದ ಬೇಸಿಗೆ ಕಾಲವು ಆರಂಭವಾಗುತ್ತದೆ.

ಈ ದಿನವನ್ನು ದಾನ ಧರ್ಮ ಮಾಡುವುದಕ್ಕೆ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನದಂದು ದಾನ ಮಾಡುವುದರಿಂದ ಹಿಂದೆ ಮಾಡಿದ ಪಾಪಗಳಿಂದ ಮತ್ತು ರೋಗಗಳಿಂದ ಪರಿಹಾರ ಸಿಗುತ್ತದೆ. ಈ ದಿನದಂದು ಸೂರ್ಯೋದಯಕ್ಕೂ ಮೊದಲೇ ಸ್ನಾನ ಮಾಡಬೇಕು.  ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ದೇಹದ ಎಲ್ಲಾ ರೋಗಗಳು ವಿಶೇಷವಾಗಿ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಗುಣವಾಗುತ್ತವೆ  ಎಂದು ಹೇಳಲಾಗುತ್ತದೆ.

ಈ ಕಾರಣವಾಗಿಯೇ ರಥಸಪ್ತಮಿಯನ್ನು ಆರೋಗ್ಯ ಸಪಗತಮಿ ಎಂದೂ ಕರೆಯಲಾಗುತ್ತದೆ.

ಫೆಬ್ರವರಿ ೪ ರ ಮಂಗಳವಾರದಂದು ಮುಂಜಾನೆ ೪.೩೭ ರಿಂದ ಸಪ್ತಮಿ ತಿಥಿ ಪ್ರಾರಂಭವಾಗಿ  ಅದೇ ದಿನ ಮಂಗಳವಾರ ಮಧ್ಯಾಹ್ನ ೨.೩೦ ರ ನಂತರ ತಿಥಿ ಮುಕ್ತಾಯವಾಗುತ್ತದೆ.

ಈ ದಿನದಂದು ಬೆಳಗ್ಗೆ ಬೇಗನೆ ಎದ್ದು  ಶುಭಸಮಯದಲ್ಲಿ ಸ್ನಾನ ಮಾಡಿ ಮಡಿ ಬಟ್ಟೆಯನ್ನು  ತೊಟ್ಟು, ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ  ರಂಗೋಲಿ ಬಿಡಿಸಿ ಹೂಗಳಿಂದ ಅಲಂಕರಿಸಿ  ಸೂರ್ಯದೇವರ ವಿಗ್ರಹ ಅಥವಾ ಚಿತ್ರವನ್ನು ಸ್ಥಾಪಿಸಿ, ಸೂರ್ಯದೇವರಿಗೆ ಗಂಗಾ ಜಲದಿಂದ ಅಭಿಷೇಕ ಮಾಡಿ,  ಶ್ರೀಗಂಧ, ಕುಂಕುಮ, ಹೂವು ಗಳಿಂದ ಅಲಂಕರಿಸಿ , ಹೂವಿನ ಹಾರವನ್ನು ಹಾಕಿ ಧೂಪ ಅರ್ಪಿಸಬೇಕು.

ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಸೂರ್ಯದೇವರಿಗೆ ಅರ್ಘ್ಯವನ್ನು ಅರ್ಪಿಸಬೇಕು.

ಅರ್ಘ್ಯ ಅರ್ಪಿಸುವಾಗ  “ ಓಂ ಘೃಣಿಃ ಸೂರ್ಯಾಯ  ನಮಃ”  ಎಂಬ ಮಂತ್ರವನ್ನು ಪಠಿಸಿ , ಸೂರ್ಯದೇವರಿಗೆ ಎಳ್ಳು, ಬೆಲ್ಲ,  ಬಟ್ಟೆ ಮತ್ತು ರೊಟ್ಟಿಯನ್ನು ಅರ್ಪಿಸಿ.

ಪೂಜೆಯ ಕೊನೆಯಲ್ಲಿ ಸೂರ್ಯ ದೇವರಿಗೆ ಆರತಿ ಮಾಡಿ ಪ್ರಸಾದವನ್ನು ಜನರಿಗೆ ವಿತರಿಸಿ.

ರಥಸಪ್ತಮಿಯ ದಿನದ ಸೂರ್ಯದೇವನ ಪೂಜಾ ವಿಧಾನ (ಹಿರಿಯರಿಂದ ಕೇಳಿ ತಿಳಿದದ್ದು):-

ಮೊದಲು ಸೂರ್ಯ ದೇವನಿಗೆ ರಥ ಮಾಡಿಕೊಳ್ಳಬೇಕು(ರಥದ ಮಾದರಿಯನ್ನು ಟೂತ್‌ ಸ್ಟಿಕ್ ನ ಸಹಾಯದಿಂದ ಚಪ್ಪರದ ಅವರೆಕಾಯಿಯನ್ನು ಉಪಯೋಗಿಸುವುದರ ಮೂಲಕ), ರಥದ ಮಾದರಿಯನ್ನು  ಏಕೆ ಮಾಡಬೇಕೆಂದರೆ ಸೂರ್ಯ ದೇವರು ಈ ರಥಸಪ್ತಮಿಯ ದಿನ ತನ್ನ ರಥವನ್ನು ತೆಗೆದುಕೊಂಡು ಸಂಚಾರಣೆ ಹೋಗುತ್ತಾರೆಂಬ ನಂಬಿಕೆ. ಈ ರಥವನ್ನು ರಥಸಪ್ತಮಿಯ ದಿನದಂದು  ರಥದ ರೀತಿಯ ರಂಗೋಲಿಯನ್ನು ಬಿಡಿಸಿ, ಅದರ ಹತ್ತಿರವೇ ಈ ರಥದ ಮಾದರಿಯನ್ನು ಇಡಬೇಕು.

ಒಂದು ಸಣ್ಣದಾದ ಪೂಜಾ ತಟ್ಟೆಯಲ್ಲಿಸ್ವಲ್ಪ  ಕುಂಕುಮವನ್ನು ರೋಸ್‌ ವಾಟರ್‌ ನೊಂದಿಗೆ ಮಿಕ್ಸ್‌ ಮಾಡಿ ಮಂದವಾಗಿ ಕಲಸಿಕೊಳ್ಳಬೇಕು, ಈ ಮಿಶ್ರಣದಲ್ಲಿ ಹತ್ತಿಯ ಬತ್ತಿಗಳನ್ನು ತೆಗೆದುಕೊಂಡು, ಎರಡುಬತ್ತಿಗಳನ್ನು ಜಂಟಿಯಾಗಿಸಿ ಈ ಕುಂಕುಮದ ಮಿಶ್ರಣದಲ್ಲಿ ಅದ್ದಿಕೊಂಡು ಬತ್ತಿಗಳನ್ನು ಕೆಂಪಾಗಿಸಿಕೊಳ್ಳಬೇಕು, ಇದೇ ರೀತಿಯ ಹನ್ನೆರಡು ಕುಂಕುಮದವಬತ್ತಿಗಳನ್ನು  ಮಿಶ್ರಣದಲ್ಲಿ ನೆನೆಸಿ ಹೊಸೆದುಕೊಂಡು  ನಂತರ ಬಿಸಿಲಿನಲ್ಲಿ ಒಣಗಿಸಿಕೊಳ್ಳಬೇಕು.

ವಿಶೇಷ ದಿನಗಳಲ್ಲಿ ಈ ರೀತಿಯ ಕುಂಕುಮದ ಬತ್ತಿ ಹಚ್ಚುವುದರಿಂದ ದೇವರ ಅನುಗ್ರಹ ಪ್ರಾಪ್ತವಾಗುತ್ತದೆಂದು ನಂಬಿಕೆಯಇದೆ.

ಗೋದಿ ಹಿಟ್ಟಿನ ದೀಪವನ್ನು ಹಚ್ಚುವುದರಿಂದ ಸೂರ್ಯದೇವನ ವಿಶೇಷ ಆಶೀರ್ವಾದವು ದೊರೆಯುತ್ತದೆ. ಒಂದು ಕಪ್ ಗೋದಿಹಿಟ್ಟಿಗೆ ಸ್ವಲ್ಪವೇ ನೀರು ಸೇರಿಸಿ ಸ್ವಲ್ಪ ಗಟ್ಟಿಯಾಗಿ ಕಲಸಿ ಉಂಡೆ ಮಾಡಿಕೊಳ್ಳಬೇಕು, ಆ ಉಂಡೆಯನ್ನು ಅಂಗೈನ ಭಾಗಕ್ಕಿಂತ ಒಂದು ಸುತ್ತು ಕಡಿಮೆ ಚಪ್ಪಟೆಯಾಗಿಸಿಕೊಳ್ಳಬೇಕು. ನಂತರ ಒಂದು ಚಿಕ್ಕದಾದ ಲೋಟ ತೆಗೆದುಕೊಂಡು ಹೊರಬಾಗಕ್ಕೆ ಸ್ವಲ್ಪ ತುಪ್ಪ ಸವರಿಕೊಂಡು, ಅದನ್ನು ಚಪ್ಪಟೆಯಾಗಿಸಿಕೊಂಡ ಗೋದಿ ಹಿಟ್ಟಿನಲ್ಲಿ ದೀಪದ ಆಕಾರ ಬರುವಂತೆ ಲೋಟದ ಹಿಂಬಾಗದಿಂದ ಪ್ರೆಸ್‌ ಮಾಡಬೇಕು.  ನಿಮಗೆ ಬೇಕಾದ ರೀತಿಯಲ್ಲಿ ಬೇಕಾದ ಆಕಾರದಲ್ಲಿ ದೀಪವನ್ನು ಮಾಡಿಕೊಳ್ಳಬಹುದು. ಸ್ವಲ್ಪ ದೊಡ್ಡದಾದ ರೀತಿಯಲ್ಲಿ ಮಾಡಿಕೊಂಡರೆ  ದೀಪವು ಅಲಂಕಾರಿಕವಾಗಿ ಚೆನ್ನಾಗಿ ಕಾಣಿಸುತ್ತದೆ ಮತ್ತು ಹನ್ನೆರಡು ಬತ್ತಿಗಳನ್ನು ಒಂದೇ ದೀಪದಲ್ಲಿ ಜೋಡಿಸಿ ಹಚ್ಚಬಹುದು.

ಸೂರ್ಯದೇವನ ಚಿತ್ರವನ್ನು ಕೆಂಪು ಹಳದಿ ಬಣ್ಣಗಳನ್ನು ಬಳಸಿ , ರಥದ ಮಧ್ಯಭಾಗದಲ್ಲಿ ಬಿಡಿಸಬೇಕು. ಮತ್ತು ರಥ ವನ್ನು ಸೂರ್ಯದೇವನನ್ನು ಅರಿಶಿನ ಕುಂಕುಮ ಅಕ್ಷತೆ ಹೂವುಗಳನ್ನು ಬಳಸಿ ಅಲಂಕಾರ ಮಾಡಬೇಕು. ನಂತರ ಸೂರ್ಯದೇವನನ್ನು ನಮಸ್ಕರಿಸಿಕೊಳ್ಳಬೇಕು.

ರಥದ ಮಧ್ಯಭಾಗದಲ್ಲಿರುವ ಸೂರ್ಯದೇವನ ಚಿತ್ರದ ಮೇಲೆ ಒಂದು ಪೀಠವನ್ನು ಇಟ್ಟುಕೊಳ್ಳಬೇಕು, ಪೀಠದಮೇಲೆ ಒಂದು ಪೂಜಾ ತಟ್ಟೆಯನ್ನು ಇಡಬೇಕು. ಆ ತಟ್ಟೆಯ ಮೇಲೆ ಅರಿಶಿನ ಕುಂಕುಮ, ಅಕ್ಷತೆ ಮತ್ತು ಹೂವನ್ನು ಇಟ್ಟು ನಮಸ್ಕರಿಸಿಕೊಳ್ಳಬೇಕು.

ಅದೇ ತಟ್ಟೆಯ ಮೇಲೆ ಹನ್ನೆರಡು ಎಕ್ಕದ ಎಲೆಗಳನ್ನು ವೃತ್ತಾಕಾರದ ರೀತಿಯಲ್ಲಿ  ಅಂದರೆ ಎಲೆಯ ಎಲ್ಲಾ ತೊಟ್ಟುಗಳು ತಟ್ಟೆಯ ಮಧ್ಯಬಾಗಕ್ಕೆ ಬರುವಂತೆ, ಎಲೆಯ ತುದಿಗಳು ತಟ್ಟೆಯ ಅಂಚನ್ನು ಮುಟ್ಟುವಂತೆ ಜೋಡಿಸಿಕೊಳ್ಳಬೇಕು. ಹನ್ನೆರಡು ಎಲೆಗಳಿಗೂ ಅರಿಶಿನ ಕುಂಕುಮವನ್ನು ಹಚ್ಚಬೇಕು.

ಎರಡು ಬೊಗಸೆಯಷ್ಟು ಗೋದಿ ಕಾಳುಗಳನ್ನು ತಟ್ಟೆಯಲ್ಲಿ ಜೋಡಿಸಿರುವ ಎಕ್ಕದ ಎಲೆಯ ಮೇಲೆ ಹರಡಿಕೊಳ್ಳಬೇಕು. ಗೋದಿ ತೆಗೆದುಕೊಳ್ಳುವಾಗ ಯಾವಾಗಲೂ ಎರಡೂ ಕೈಗಳನ್ನು ಬೊಗಸೆಯಾಗಿಸಿಯೇ ಬಳಸಬೇಕು, ಒಂಟಿ ಕೈಯಲ್ಲಿ ಮಾಡುವಂತಿಲ್ಲ.

ಹರಡಿದ ಗೋದಿಯ ಮೇಲೆ , ಮೇಲೆ ಹೇಳಿದ ಗೋದಿ ಹಿಟ್ಟಿನಿಂದ ತಯಾರಿಸಿದ  ದೀಪವನ್ನು ಪ್ರತಿಷ್ಟಾಪಿಸಬೇಕು ಮತ್ತು ದೀಪಕ್ಕೆ ಅರಿಶಿನ ಮತ್ತು ಕುಂಕುಮ ಹಚ್ಚಿ ಹನ್ನೆರಡು ಬತ್ತಿಗಳನ್ನು ವೃತ್ತಾಕಾರ ಬರುವಂತೆ ಜೋಡಿಸಿ ತುಪ್ಪ ಹಾಕಬೇಕು.

ಚಪ್ಪರದ ಅವರೆಯಲ್ಲಿ ತಯಾರಿಸಿದ ರಥದ ಮಾದರಿಯನ್ನು ಪೀಠದ ಮುಂದಿಟ್ಟು, ಅದಕ್ಕೆ ಅರಿಶಿನ ಕುಂಕುಮ ಹಚ್ಚಿ ಎಕ್ಕದ ಹೂವುಗಳಿಂದ ಅಲಂಕರಿಸಬೇಕು.

ಮಾಘ ಮಾಸದ ಸಮಯದಲ್ಲಿ ಮಾಘ ಸ್ನಾನಕ್ಕೆ ವಿಶೇಷ ಸ್ಥಾನವಿದೆ. ಈ ಸಮಯದಲ್ಲಿ ನದಿ ನೀರಿನಲ್ಲಿ ಸ್ನಾನ ಮಾಡಿ ಮುತ್ತುಗದ ಎಲೆಯಲ್ಲಿ ಊಟ ಮಾಡುವುದರಿಂದ ಆರೋಗ್ಯ ಪ್ರಾಪ್ತವಾಗುವುದೆಂದು ನಂಬಿಕೆ.

ಕೆಲವರು ಮಾಘ ಮಾಸದ ಅಷ್ಟೂ ದಿನಗಳಲ್ಲಿಊಟ ಮಾಡಲು  ಮುತ್ತುಗದ ಎಲೆಯನ್ನೇ ಬಳಸುತ್ತಾರೆ.

ದೀಪದ ಸುತ್ತಲೂ ಹೂವುಗಳನ್ನು ಬಳಸಿ ಅಲಂಕಾರ ಮಾಡಿಕೊಳ್ಳಬೇಕು. ಜೊತೆಗೆ ಎಕ್ಕದ  ಹೂವುಗಳನ್ನು ಬಳಸಬೇಕು.

ಪೀಠದ ಮುಂದೆ  ದೀಪಗಳನ್ನು ಹಚ್ಚಬೇಕು.

ಯಾವುದೇ ಪೂಜೆಯನ್ನು ಮಾಡಬೇಕಾದರೆ ಮೊದಲು ಗಣೇಶನಿಗೆ, ವಿಘ್ನವಿನಾಯಕನಿಗೆ ಪ್ರಥಮ ಪೂಜೆಯನ್ನು ಸಲ್ಲಿಸಬೇಕು.

ಒಂದು ತಟ್ಟೆಯಲ್ಲಿ ಗಣೇಶನ ಚಿಕ್ಕದಾದ ಮೂರ್ತಿಯನ್ನು ಪ್ರತಿಷ್ಟಾಪಿಸಿ, ಅರಿಶಿನ ಕುಂಕುಮ ಅಕ್ಷತೆ ಹೂಗಳನ್ನಿಟ್ಟು, ದೀಪ ಬೆಳಗಿಸಿ ವಿಘ್ನೇಶ್ವರನಿಗೆ ಪೂಜೆಯನ್ನು ಸಲ್ಲಿಸಬೇಕು. ಹಣ್ಣನ್ನು ನೈವೇದ್ಯ ಮಾಡಬೇಕು.

ಪೀಠದ ಮೇಲಿರುವ ದೀಪವನ್ನು ಬೆಳಗಿಸಬೇಕು, ಹನ್ನೆರಡು ದೀಪಗಳನ್ನು ಬೆಳಗಿಸುವಾಗ ಆದಿತ್ಯ ಹೃದಯವನ್ನು ಪಠನೆ ಮಾಡಬೇಕು, ಅದು ಆಗದಿದ್ದ ಪಕ್ಷದಲ್ಲಿ ಓಂ ಸೂರ್ಯದೇವಾಯ ನಮಃ ಎಂದು ಮಂತ್ರವನ್ನು ಉಚ್ಚರಿಸುವ ಮೂಲಕ ಪೂಜೆಯನ್ನು ಮಾಡಬಹುದು. ಈ ಮೂಲಕ ಸೂರ್ಯದೇವನ ಹನ್ನೆರಡು ಹೆಸರುಗಳನ್ನು ಸಹ ಉಚ್ಚರಿಸಬಹುದು.

 

ಪೂಜೆ ಮುಗಿದ ನಂತರ ಸೂರ್ಯದೇವನಿಗೆ ಅರ್ಘ್ಯ ನೀಡಬೇಕು. ಒಂದು ಕಳಶದ ತುಂಬ ನೀರನ್ನು ತುಂಬಿ, ಅದಕ್ಕೆ ಅರಿಶಿನಿ ಕುಂಕುಮ ಅಕ್ಷತೆ ಹೂವು ಸೇರಿಸಬೇಕು. ಬರೀ ನೀರಿನಿಂದ ಅರ್ಘ್ಯ ನೀಡಬಾರದು.

ಈ ಪೂಜೆಯನ್ನು ಸೂರ್ಯನ ಕಿರಣಗಳು ಬೀಳುವ ಸ್ಥಳದಲ್ಲಿ ಮಾಡಬೇಕು. ರಥಸಪ್ತಮಿಯ ದಿನ ಬೆಳಗ್ಗೆ ೪ ರಿಂದ ೫ ಗಂಟೆಯ ಸಮಯದಲ್ಲಿಯೇ ಸ್ನಾನಾದಿಗಳನ್ನು ಮುಗಿಸಿ ಶುಭ್ರ ಬಟ್ಟೆ ಧರಿಸಿ ಪೂಜೆಗೆ ಅಣಿಯಾಗಬೇಕು.

ತುಂಬಿದ ಕಳಶದ ಸಮೇತ ಸೂರ್ಯದೇವನಿಗೆ ಧೂಪದೀಪಗಳನ್ನು ಅರ್ಚಿಸಿ ಪೂಜಿಸಬೇಕು.

ಸೂರ್ಯದೇವನಿಗೆ ನೈವೇದ್ಯಕ್ಕಾಗಿ ತಮ್ಮ ಶಕ್ತ್ಯಾನುಸಾರ  ಐದು ಏಳು ಒಂಭತ್ತು ರೀತಿಯ ಹಣ್ಣಗಳನ್ನು ಅರ್ಪಿಸಬಹುದು. ಜೊತೆಗೆ ಗೋಧಿಯಿಂದ ಮಾಡಿದ ಹುಗ್ಗಿಯನ್ನು ಅರ್ಪಿಸಬಹುದು.

ಈ ರೀತಿಯಾಗಿ ರಥಸಪ್ತಮಿಯ ದಿನ ಸೂರ್ಯದೇವನನ್ನು ಪ್ರಾರ್ಥಿಸುವ ಮೂಲಕ ಆದಿತ್ಯನ ಕೃಪೆಗೆ ಪಾತ್ರರಾಗಬಹುದು.

 

ರಥ ಸಪ್ತಮಿ ದಿನ ಪಠಿಸಬೇಕಾದ ಮಂತ್ರಗಳು.

 

“ ಓಂ ಏಹಿ ಸೂರ್ಯದೇವ ಸಹಸ್ತ್ರಾಂಶೋ ತೇಜೋ ರಾಶಿ ಜಗತ್ಪತೇ

ಅನುಕಂಪಯ ಮಾಂ ಭಕ್ತ್ಯಾ ಗೃಹಣಾರ್ಘ್ಯ ದಿವಾಕರಃ ||

-      ಓಂ ಸೂರ್ಯಾಯ ನಮಃ

ಓಂ ಆದಿತ್ಯಾಯ ನಮಃ

ಓಂ ನಮೋ ಭಾಸ್ಕರಾಯ ನಮಃ

ಅರ್ಘ್ಯ ಸಮರ್ಪಯಾಮಿ ||

ಓಂ ಘೃಣಿಃ ಸೂರ್ಯಾಯ ನಮಃ

-ಓಂ ಹ್ರೀಂ ಹ್ರೀಂ  ಸೂರ್ಯಾಯ ಸಹಸ್ರ ಕಿರಣರಾಯಾ

ಮನೋವಾಂಚಿತ ಫಲಂ ದೇಹಿ  ದೇಹಿ ಸ್ವಾಹಾ ||

-ಓಂ  ಹ್ರೀಂ ಘೃಣಿಃ ಸೂರ್ಯ ಆದಿತ್ಯಃ ಕ್ಲೀಂ ಓಂ

ಓಂ ಹ್ರೀಂ ಹ್ರೀಂ ಸೂರ್ಯಾಯಾ ನಮಃ |

 

 

 

ಧನ್ಯವಾದಗಳು.....🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......