ರಾಜ್ಯ ರಾಜಧಾನಿಯ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆಯ ಶಾಕ್!!!!!!!!!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಬೆಂಗಳೂರಿನಲ್ಲಿ ಮೆಟ್ರೋ ದರ ಏರಿಕೆ ಬಿಸಿ
ಬೆಂಗಳೂರಿನ
ಮೆಟ್ರೋ
ಪ್ರಯಾಣ
ದರದಲ್ಲಿ ಶೇ. 46 ರಷ್ಟು ಏರಿಕೆ ಮಾಡಲಾಗಿದೆ, ಇದು ಪ್ರಯಾಣಿಕರಿಗೆ ಹೆಚ್ಚುವರಿ
ಹೊರೆ ತಂದಿದೆ. ಈ ಹೊಸ ದರದ
ಪ್ರಕಾರ, ಕನಿಷ್ಠ ದರ ರೂ. 10 ರಿಂದ
ರೂ. 14 ಕ್ಕೆ ಮತ್ತು ಗರಿಷ್ಠ
ದರ ರೂ. 60 ರಿಂದ ರೂ. 87 ಕ್ಕೆ
ಏರಿಕೆಯಾಗಿದೆ.
ಜನದಟ್ಟಣೆ
ಇಲ್ಲದ ಸಮಯದಲ್ಲಿ (ನಾನ್-ಪೀಕ್ ಅವರ್ಸ್)
ಟೋಕನ್ ಬಳಸುವ ಪ್ರಯಾಣಿಕರಿಗೆ ಶೇ. 5 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಟ್ರಾವೆಲ್ ಕಾರ್ಡ್ ಬಳಕೆದಾರರಿಗೆ ಶೇ. 5 ರಷ್ಟು ರಿಯಾಯಿತಿ ಮುಂದುವರೆಯುತ್ತಿದೆ.
ಈ
ದರ ಏರಿಕೆಯನ್ನು ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ಥರಾನಿ ಅವರ
ನೇತೃತ್ವದ ತ್ರಿಸದಸ್ಯ ಸಮಿತಿಯು ಶಿಫಾರಸು ಮಾಡಿತ್ತು.
ಸಮಿತಿಯು
ಹಾಂಗ್ಕಾಂಗ್, ಸಿಂಗಾಪುರ ಮತ್ತು ನವದೆಹಲಿಯ ಮೆಟ್ರೋ ದರಗಳನ್ನು ಅಧ್ಯಯನ ಮಾಡಿ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿತ್ತು.
ಈ
ನಿರ್ಧಾರಕ್ಕೆ ಸಾರ್ವಜನಿಕರಿಂದ ಮತ್ತು ರಾಜಕೀಯ ನಾಯಕರಿಂದ ವಿರೋಧ ವ್ಯಕ್ತವಾಗಿದೆ. ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.
ಮೋಹನ್ ಅವರು ಶೇ. 45 ರಷ್ಟು
ದರ ಹೆಚ್ಚಳ ನಿರ್ಧಾರವನ್ನು ಮರುಪರಿಶೀಲಿಸಲು ಬಿಎಂಆರ್ಸಿಎಲ್ಗೆ ಮನವಿ ಮಾಡಿದ್ದರು.
ಅವರು ಮೆಟ್ರೋ ಕೋಚ್ಗಳನ್ನು ಹೆಚ್ಚಿಸಲು,
ತಡವಾದ ಮಾರ್ಗಗಳನ್ನು ತ್ವರಿತಗೊಳಿಸಲು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಬಿಎಂಆರ್ಸಿಎಲ್ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ರಾಜ್ಯದ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ
ಪ್ರತಿಕ್ರಿಯಿಸಿ, ಮೆಟ್ರೋ ದರ ಪರಿಷ್ಕರಣೆ ಕೇಂದ್ರ
ಸರ್ಕಾರ ನೇಮಿಸಿದ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ನಡೆದಿದ್ದು, ರಾಜ್ಯ
ಸರ್ಕಾರದ ಮೇಲೆ ಸಂಪೂರ್ಣ ನಿಯಂತ್ರಣವಿಲ್ಲ
ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಮೆಟ್ರೋ ರೈಲು
ನಿಗಮವು ಸ್ವಾಯತ್ತ ಸಂಸ್ಥೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮ ಪಾಲುದಾರಿಕೆ ಹೊಂದಿದೆ
ಎಂದು ತಿಳಿಸಿದ್ದಾರೆ.
ಈ
ದರ ಏರಿಕೆ 2017ರ ನಂತರ ಮೊದಲ
ಬಾರಿಗೆ ನಡೆದಿದ್ದು, ಮತ್ತು ಮೆಟ್ರೋ ಜಾಲದ ವಿಸ್ತರಣೆ ಹಾಗೂ
ಕಾರ್ಯಾಚರಣೆ ವೆಚ್ಚಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಈ ಪರಿಷ್ಕರಣೆ ಮಾಡಲಾಗಿದೆ.
ಮೆಟ್ರೋ
ಟ್ರೈನ್ ದರ ಏರಿಕೆಗೆ ಸಾರ್ವಜನಿಕರು ಮತ್ತ ರಾಜಕೀಯ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ,
ಸರ್ಕಾರವು ದರ ಏರಿಕೆಯಲ್ಲಿ ಒಂದಷ್ಟು ಪರಿಷ್ಕರಣೆ ಮಾಡುವ ಮೂಲಕ ಜನರ ಮೂಗಿಗೆ ತುಪ್ಪ ಸವರುವ ಕಾರ್ಯವನ್ನು
ಮಾಡಿತ್ತು. ಪ್ರಸ್ತುತ ಪರಿಷ್ಕರಿಸಿರುವ ದರದ ಪಟ್ಟಿಯನ್ನು
ಕೆಳಗೆ ಕಾನಬಹುದು.
ಮೆಟ್ರೋ ಟ್ರೈನ್ ನ ಪರಿಷ್ಕ್ರತ
ದರಗಳ ಪಟ್ಟಿ…….
ಫೆಬ್ರವರಿ
9, 2025 ರಿಂದ, ಬೆಂಗಳೂರು ಮೆಟ್ರೋ (ನಮ್ಮ ಮೆಟ್ರೋ) ತನ್ನ
ಪ್ರಯಾಣ ದರಗಳಲ್ಲಿ ಪರಿಷ್ಕರಣೆ ಮಾಡಿದೆ. ಈ ಹೊಸ ದರಗಳ
ಪ್ರಕಾರ, ಗರಿಷ್ಠ ದರವು 60 ರೂ.ನಿಂದ 90 ರೂ.ಗೆ ಏರಿಕೆ ಮಾಡಿತ್ತು.
ಕೆಂಪೇಗೌಡ
ನಿಲ್ದಾಣ, ಮೆಜೆಸ್ಟಿಕ್ ನಿಂದ ಸಿಲ್ಕ್ ಇನ್ಸ್ಟಿಟ್ಯೂಟ್ಗೆ ಮೊದಲು 70 ರೂಪಾಯಿ
ದರ ಏರಿಕೆ ಮಾಡಲಾಗಿತ್ತು. ಇದೀಗ ಪರಿಷ್ಕೃತ ದರವಾಗಿ
60 ರೂಪಾಯಿಗೆ ಇಳಿಸಲಾಗಿದೆ.
ನಾಡಪ್ರಭು
ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿಗೆ ಮೊದಲು
60 ರೂಪಾಯಿ ದರ ಏರಿಕೆ ಮಾಡಲಾಗಿತ್ತು.
ಇದೀಗ ಪರಿಷ್ಕೃತ ದರ 50 ರೂಪಾಯಿಗೆ ಇಳಿಸಲಾಗಿದೆ.
ಕೆಂಪೇಗೌಡ
ನಿಲ್ದಾಣ, ಮೆಜೆಸ್ಟಿಕ್ ನಿಂದ ಚಲ್ಲಘಟ್ಟಕ್ಕೆ ಮೊದಲು
70 ರೂಪಾಯಿ ದರ ಏರಿಕೆ ಮಾಡಲಾಗಿತ್ತು.
ಇದೀಗ ಪರಿಷ್ಕೃತ ದರ 60 ರೂಪಾಯಿಗೆ ಇಳಿಸಲಾಗಿದೆ.
ಕೆಂಪೇಗೌಡ
ನಿಲ್ದಾಣ, ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ ಮೊದಲು
20 ರೂಪಾಯಿ ದರ ಏರಿಕೆ ಮಾಡಲಾಗಿತ್ತು.
ಇದೀಗ ಪರಿಷ್ಕೃತ ದರ 10 ರೂಪಾಯಿಗೆ ಇಳಿಸಲಾಗಿದೆ
ಮೆಜೆಸ್ಟಿಕ್
ನಿಂದ ವೈಟ್ ಫೀಲ್ಡ್ಗೆ
ಮೊದಲು 90 ರೂಪಾಯಿ ದರ ಏರಿಕೆ ಮಾಡಲಾಗಿತ್ತು.
ಪ್ರಸ್ತುತ ಪರಿಷ್ಕೃತ ದರ 80 ರೂಪಾಯಿಗೆ ಇಳಿಸಲಾಗಿದೆ.
ನಾಡಪ್ರಭು
ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ರೇಷ್ಮೆ
ಸಂಸ್ಥೆಗೆ ಮೊದಲು 70 ರೂಪಾಯಿ ದರ ಏರಿಕೆ ಮಾಡಲಾಗಿತ್ತು.
ಇದೀಗ ಪರಿಷ್ಕೃತ ದರ 60 ರೂಪಾಯಿಗೆ ಇಳಿಸಲಾಗಿದೆ.
ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ, 5% ರಿಯಾಯಿತಿಯನ್ನು ಯಥಾಸ್ಥಿತಿ ಮುಂದುವರಿಸಲಾಗಿದೆ. ಅದರೊಂದಿಗೆ, ಪೀಕ್ ಅವರ್ಸ್ ಅಲ್ಲದ
ಸಮಯದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚುವರಿ 5% ರಿಯಾಯಿತಿ ಲಭ್ಯವಿದೆ, ಹೀಗಾಗಿ ಒಟ್ಟು 10% ರಿಯಾಯಿತಿ ಪಡೆಯಬಹುದು. ಸ್ಮಾರ್ಟ್ ಕಾರ್ಡ್ ಬಳಸಲು, ಕನಿಷ್ಠ 90 ರೂ. ಶೇ.ಬಾಕಿ
ಇರಬೇಕು ಎಂದು ಬಿಎಮ್ ಆರ್ ಸಿ ಎಲ್ ತಿಳಿಸಿದೆ.
ಈ
ದರ ಪರಿಷ್ಕರಣೆ ನಂತರ, ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ
ಕಂಡುಬಂದಿದೆ. ಫೆಬ್ರವರಿ 9 ರಿಂದ 15 ರವರೆಗೆ, ಮೆಟ್ರೋ ಪ್ರಯಾಣಿಕರ ಸಂಖ್ಯೆ ಸುಮಾರು 4 ಲಕ್ಷದಷ್ಟು ಇಳಿಕೆಯಾಗಿದೆ. ಇದಕ್ಕೆ ಟಿಕೆಟ್ ದರ ಏರಿಕೆಯು ಮುಖ್ಯ ಕಾರಣವೆಂದು
ತಿಳಿದುಬಂದಿದೆ.
ಬೆಂಗಳೂರಿನಲ್ಲಿರುವ
ಮೆಟ್ರೋ ಟ್ರೈನ್ ಗಳ ಮಾಹಿತಿ.!
ಬೆಂಗಳೂರು
ಮೆಟ್ರೋ, "ನಮ್ಮ ಮೆಟ್ರೋ" ಎಂದು
ಕರೆಯಲ್ಪಡುವ, ಬೆಂಗಳೂರಿನ ವೇಗದ ಸಾರಿಗೆ ವ್ಯವಸ್ಥೆಯಾಗಿದೆ.
ಇದು ಭಾರತ ಸರ್ಕಾರ ಮತ್ತು
ಕರ್ನಾಟಕ ಸರ್ಕಾರದ ಜಂಟಿ ಉದ್ಯಮವಾಗಿರುವ ಕಾರಣ
ಬೆಂಗಳೂರು ಮೆಟ್ರೋ
ರೈಲು ನಿಗಮ ನಿಯಮಿತ (BMRCL)ದ
ಮೂಲಕ ನಿರ್ವಹಿಸಲಾಗುತ್ತದೆ.
ಮೆಟ್ರೋ
ಮಾರ್ಗಗಳು ಮತ್ತು
ನಿಲ್ದಾಣಗಳು:-
ಪ್ರಸ್ತುತ,
ನಮ್ಮ ಮೆಟ್ರೋ ಎರಡು ರೀತಿಯ ಕಾರ್ಯನಿರ್ವಹಣಾ ಮಾರ್ಗಗಳನ್ನು ಹೊಂದಿದೆ:
- ನೇರಳೆ
ಮಾರ್ಗ (ಪರ್ಪಲ್ ಲೈನ್): ಈ ಮಾರ್ಗವು ಪೂರ್ವದಲ್ಲಿ ಬೈಯ್ಯಪ್ಪನಹಳ್ಳಿಯಿಂದ ಪಶ್ಚಿಮದಲ್ಲಿ ಮೈಸೂರು ರಸ್ತೆಯವರೆಗೆ ಸಂಪರ್ಕಿಸುತ್ತದೆ, ಮತ್ತು ಮಾರ್ಗಮಧ್ಯದಲ್ಲಿ ಎಂಜಿ ರಸ್ತೆ, ಮೆಜೆಸ್ಟಿಕ್, ವಿಧಾನಸೌಧ ಸೇರಿದಂತೆ ಪ್ರಮುಖ ನಿಲ್ದಾಣಗಳನ್ನು ಒಳಗೊಂಡಿದೆ.
- ಹಸಿರು
ಮಾರ್ಗ (ಗ್ರೀನ್ ಲೈನ್): ಈ ಮಾರ್ಗವು ಉತ್ತರದಲ್ಲಿ ನಾಗಸಂದ್ರದಿಂದ ದಕ್ಷಿಣದಲ್ಲಿ ಅಂಜನಾಪುರವರೆಗೆ ಸಂಪರ್ಕಿಸುತ್ತದೆ, ಮತ್ತು ಮಾರ್ಗಮಧ್ಯದಲ್ಲಿ ಯಶವಂತಪುರ, ಮೆಜೆಸ್ಟಿಕ್, ನ್ಯಾಷನಲ್ ಕಾಲೇಜು
ಸೇರಿದಂತೆ ಪ್ರಮುಖ ನಿಲ್ದಾಣಗಳನ್ನು ಒಳಗೊಂಡಿದೆ.
ಮೆಟ್ರೋ ಸೇವೆಯ ಸಮಯ:
ಸಾಮಾನ್ಯವಾಗಿ,
ಮೆಟ್ರೋ ಸೇವೆಗಳು ಪ್ರತಿದಿನ ಬೆಳಿಗ್ಗೆ 5:00 ರಿಂದ ರಾತ್ರಿ 10:00 ಗಂಟೆಯವರೆಗೆ
ಲಭ್ಯವಿರುತ್ತವೆ. ಸೋಮವಾರಗಳಂದು, ಬೆಳಿಗ್ಗೆ 4:15 ರಿಂದ ಮೆಟ್ರೋ ಸೇವೆಗಳು
ಆರಂಭವಾಗುತ್ತವೆ, ಇದರಿಂದ ಬೆಳ್ಳಂಬೆಳಿಗ್ಗೆಯೇ
ನಗರಕ್ಕೆ
ಬರುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ಮೆಟ್ರೋ
ಟ್ರೈನ್ ಗಳ ಬಣ್ಣವು ಏನನ್ನು ಸೂಚಿಸುತ್ತದೆ…?
ಮೆಟ್ರೋ
ರೈಲುಗಳ ಬಣ್ಣವು ಹಲವಾರು ಅಂಶಗಳನ್ನು ಸೂಚಿಸುತ್ತದೆ, ಅವುಗಳಲ್ಲಿ ಮುಖ್ಯವಾದವುಗಳೆಂದರೆ:
- ವಿಭಿನ್ನ
ಮಾರ್ಗಗಳು
(Different Routes):
ಮೆಟ್ರೋಗಳ ಬಣ್ಣವನ್ನು ಸಾಮಾನ್ಯವಾಗಿ ಪ್ರಯಾಣಿಕರಿಗೆ ನ್ಯಾವಿಗೇಟ್ ಮಾಡಲು ಸಹಾಯ ಮಾಡುವ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ: - ನಮ್ಮ
ಮೆಟ್ರೋ (ಬೆಂಗಳೂರು ಮೆಟ್ರೋ) – ಹಸಿರು ಮಾರ್ಗ (Green Line) ಮತ್ತು ನೇರಳೆ ಮಾರ್ಗ (Purple Line) ಇವೆ.
- ದೆಹಲಿ
ಮೆಟ್ರೋದಲ್ಲಿ ನೀಲಿ, ಕೆಂಪು, ಹಳದಿ, ಗುಲಾಬಿ ಮುಂತಾದ ಹಲವಾರು ಬಣ್ಣಗಳ ಮಾರ್ಗಗಳಿವೆ.
- ಗಮನ
ಸೆಳೆಯುವ ಮತ್ತು ಗುರುತಿಸಲು ಸುಲಭ:
ವಿಭಿನ್ನ ಬಣ್ಣವನ್ನು ಹೊಂದಿರುವುದರಿಂದ ಜನರು ತಕ್ಷಣವೇ ತಮ್ಮ ಮಾರ್ಗವನ್ನು ಗುರುತಿಸಬಹುದು. ಇದು ಪ್ರವಾಸಿಗರು ಹಾಗೂ ಹೊಸ ಪ್ರಯಾಣಿಕರಿಗೆ ಸಹಾಯಕವಾಗುತ್ತದೆ. - ಪ್ರಾದೇಶಿಕ
ಅಥವಾ ಸಾಂಸ್ಕೃತಿಕ ಪ್ರಾತಿನಿಧ್ಯತೆ (Regional
or Cultural Representation):
ಕೆಲವೊಮ್ಮೆ ಮೆಟ್ರೋ ಟ್ರೈನ್ಗಳ ಬಣ್ಣ ಸ್ಥಳೀಯ ಸಾಂಸ್ಕೃತಿಕ ಅಥವಾ ಇತಿಹಾಸಿಕ ಅಂಶವನ್ನು ಪ್ರತಿನಿಧಿಸಬಹುದು. - ಸುರಕ್ಷತೆ
ಮತ್ತು ದೃಶ್ಯತೆ (Safety &
Visibility):
ಬೆಳಕಿನ ಅಭಾವದಲ್ಲಿ ಸಹ ಟ್ರೇನುಗಳು ಸ್ಪಷ್ಟವಾಗಿ ಕಾಣುವಂತೆ ಬಣ್ಣಗಳನ್ನು ಆಯ್ಕೆ ಮಾಡಲಾಗುತ್ತದೆ.
ಹಾಗಾದರೆ
ಬೆಂಗಳೂರಿನ ಮೆಟ್ರೋ
ದಲ್ಲಿ ಪ್ರತಿದಿನ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಎಷ್ಟು????????🚆🚆🚆🚆🚆🚆🚆
ಫೆಬ್ರವರಿ 9, 2025 ರಂದು ಮೆಟ್ರೋ ಪ್ರಯಾಣ
ದರ ಏರಿಕೆಯ ನಂತರ, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರತಿದಿನ
ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ದರ
ಏರಿಕೆಯ ಮೊದಲು, ಪ್ರತಿದಿನ ಸರಾಸರಿ 8.5 ಲಕ್ಷ ಪ್ರಯಾಣಿಕರು ಮೆಟ್ರೋ
ಸೇವೆಯನ್ನು ಬಳಸುತ್ತಿದ್ದರು. ಆದರೆ, ದರ ಏರಿಕೆಯ ನಂತರ,
ಈ ಸಂಖ್ಯೆ ಸುಮಾರು 6.3 ಲಕ್ಷಕ್ಕೆ ಇಳಿಕೆಯಾಗಿದೆ, ಅಂದರೆ ಸುಮಾರು 2.3 ಲಕ್ಷ ಪ್ರಯಾಣಿಕರ ಇಳಿಕೆ
ಕಂಡುಬಂದಿದೆ.
ಈ
ದರ ಏರಿಕೆಯು ಕೆಲವು ಮಾರ್ಗಗಳಲ್ಲಿ ಶೇಕಡಾ 100 ರಷ್ಟು ಹೆಚ್ಚಳವಾಗಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಫೆಬ್ರವರಿ 8 ರಂದು ದರ ಏರಿಕೆ
ಜಾರಿಗೆ ಬಂದ ನಂತರ, ಫೆಬ್ರವರಿ
9 ರಂದು ಪ್ರಯಾಣಿಕರ ಸಂಖ್ಯೆ 6,23,123 ಕ್ಕೆ ಇಳಿಕೆಯಾಗಿದೆ, ಹಿಂದಿನ
ಭಾನುವಾರ (ಫೆಬ್ರವರಿ 2) ಈ ಸಂಖ್ಯೆ 6,37,884 ಆಗಿತ್ತು.
ಇದೇ ರೀತಿ, ಫೆಬ್ರವರಿ 10 ರಂದು 8,28,149 ಪ್ರಯಾಣಿಕರು ಮೆಟ್ರೋ ಬಳಸಿದರೆ, ಹಿಂದಿನ ಸೋಮವಾರ (ಫೆಬ್ರವರಿ 3) ಈ ಸಂಖ್ಯೆ 8,70,147 ಆಗಿತ್ತು.
ಪ್ರಯಾಣ
ದರ ಏರಿಕೆಯ ಪರಿಣಾಮವಾಗಿ, ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆಗಳ ಕಡೆಗೆ ತಿರುಗುತ್ತಿದ್ದಾರೆ, ಇದು ಮೆಟ್ರೋ ಪ್ರಯಾಣಿಕರ
ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಗಿದೆ.
ದರ
ಏರಿಕೆಯಿಂದ ಪ್ರಯಾಣಿಕರಿಗೆ ಆಗುತ್ತಿರುವ ಅನಾನೂಕೂಲಗಳು .....😕
ಪ್ರಯಾಣ
ದರ ಏರಿಕೆಯಿಂದ, ದಿನನಿತ್ಯ ಮೆಟ್ರೋ ಅವಲಂಬಿಸುವ ಪ್ರಯಾಣಿಕರ ಮೇಲೆ ಆರ್ಥಿಕ ಹೊರೆಯು
ಹೆಚ್ಚಾಗಿದೆ. ಇದರಿಂದಾಗಿ, ಕೆಲವರು ಖಾಸಗಿ ವಾಹನಗಳ ಬಳಕೆಗೆ ಮರಳುವ ಸಾಧ್ಯತೆ ಇದೆ, ಇದು ನಗರದಲ್ಲಿ
ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು.
ಬಿಎಂಆರ್‌ಸಿಎಲ್ ಕೆಲವು ರಿಯಾಯಿತಿಗಳನ್ನು ನೀಡಿದೆಯಾದರೂ, ಉದಾಹಣೆಗೆ ಸ್ಮಾರ್ಟ್ ಕಾರ್ಡ್ಗಳ ಮೇಲೆ ಶೇ.5
ರಿಯಾಯಿತಿ ಮತ್ತು ಆಫ್-ಪೀಕ್ ಅವರ್ಗಳಲ್ಲಿ ಶೇ.10 ರಿಯಾಯಿತಿ,
ಈ
ರಿಯಾಯಿತಿಗಳು ಎಲ್ಲಾ ಪ್ರಯಾಣಿಕರಿಗೂ ಸಮರ್ಪಕವಾಗಿ ಪ್ರಯೋಜನಕಾರಿಯಾಗುತ್ತಿಲ್ಲ ಎಂಬ ಅಭಿಪ್ರಾಯವಿದೆ.
ಸಾರ್ವಜನಿಕರು
ಮತ್ತು ಜನಪ್ರತಿನಿಧಿಗಳು ಮೆಟ್ರೋ ದರ ಏರಿಕೆಯನ್ನು ವಿರೋಧಿಸುತ್ತಿದ್ದಾರೆ.
ಸಂಸದ ಪಿ.ಸಿ. ಮೋಹನ್
ಅವರು ಬಿಎಂಆರ್‌ಸಿಎಲ್ ನಿರ್ಧಾರವನ್ನು ಮರುಪರಿಶೀಲಿಸಲು ಮನವಿ ಮಾಡಿದ್ದು, ದರ
ಏರಿಕೆಯಿಂದ ಜನರು ಖಾಸಗಿ ವಾಹನಗಳ
ಬಳಕೆಗೆ ಒತ್ತಾಯಿಸುವ ಮೂಲಕ ಟ್ರಾಫಿಕ್ ಸಮಸ್ಯೆ
ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಬೆಂಗಳೂರು
ಮೆಟ್ರೋ ದರ ಏರಿಕೆಯಿಂದ ಪ್ರಯಾಣಿಕರು
ಆರ್ಥಿಕ ಭಾರವನ್ನು ಅನುಭವಿಸುತ್ತಿದ್ದು, ಇದು ನಗರ ಸಂಚಾರ
ವ್ಯವಸ್ಥೆಯ ಮೇಲೆ ಹಾನಿಕಾರಕ ಪರಿಣಾಮ
ಬೀರುವ ಸಾಧ್ಯತೆ ಇದೆ.
ದರ
ಏರಿಕೆಯನ್ನು ಅನುಭವಿಸುತ್ತಿರುವ ಪ್ರಯಾಣಿಕರು ಯಾರೆಲ್ಲಾ ಇದ್ದಾರೆ…..?!🚆
- ಕಾಲೇಜು
ಮತ್ತು ಶಾಲಾ ವಿದ್ಯಾರ್ಥಿಗಳು ತ್ವರಿತವಾದ ಮತ್ತು
ರಕ್ಷಣೆಯ ಪ್ರಯಾಣಕ್ಕಾಗಿ ಮೆಟ್ರೋ ಬಳಸುತ್ತಾರೆ.
- ನೌಕರರು
(ಆಫೀಸ್ ಹಾಗೂ ಉದ್ಯೋಗಸ್ಥರು) ದೈನಂದಿನ
ಕೆಲಸಕ್ಕೆ ಹೋಗುವುದಕ್ಕೆ ಮತ್ತು
ಬರುವುದಕ್ಕೆ ಮೆಟ್ರೋ
ಒಳ್ಳೆಯ ಆಯ್ಕೆ.
- ವ್ಯಾಪಾರಿಗಳು
ಮತ್ತು ಉದ್ಯಮಿಗಳು ಬೇಗನೆ
ಅವರು ಸೇರಬೇಕಾದ ನಿರ್ದಿಷ್ಠ ಸ್ಥಳ
ಸೇರಲು ಮತ್ತು
ಟ್ರಾಫಿಕ್ ತಪ್ಪಿಸಲು ಮೆಟ್ರೋ ಬಳಸುತ್ತಾರೆ.
- ಹಿರಿಯ
ನಾಗರಿಕರು ಸುರಕ್ಷಿತ
ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ.
- ಪ್ರವಾಸಿಗರು ಮತ್ತು ಭಕ್ತಾದಿಗಳು ಪಟ್ಟಣದ
ಪ್ರಸಿದ್ಧ ಸ್ಥಳಗಳಿಗೆ
ಭೇಟಿ ನೀಡಲು ಮೆಟ್ರೋ ಬಳಸುತ್ತಾರೆ.
- ಸಾಮಾನ್ಯ
ನಾಗರಿಕರು ದಿನನಿತ್ಯದ
ಕೆಲಸಗಳು, ಶಾಪಿಂಗ್, ಆಸ್ಪತ್ರೆ ಭೇಟಿ ಮುಂತಾದ ಕಾರಣಗಳಿಗೆ ಮೆಟ್ರೋ ಬಳಸುತ್ತಾರೆ.
ಮೆಟ್ರೋ
ಟ್ರೈನ್ ಬೆಂಗಳೂರಿನಲ್ಲಿ ಎಷ್ಟು ಕಿಲೋಮೀಟರ್ ವ್ಯಾಪ್ತಿಯಲ್ಲಿ
ಆವರಿಸಿದೆ.?!⛒
ಪ್ರಸ್ತುತ,
ಬೆಂಗಳೂರು ಮೆಟ್ರೋ (ನಮ್ಮ ಮೆಟ್ರೋ) 77 ಕಿಲೋಮೀಟರ್ ವ್ಯಾಪ್ತಿಯ ಎರಡು ಕಾರ್ಯಾಚರಣೆ ಮಾರ್ಗಗಳನ್ನು
ಹೊಂದಿದೆ
ನೇರಳೆ
ಮಾರ್ಗ ಮತ್ತು ಹಸಿರು ಮಾರ್ಗ, ಒಟ್ಟು 68 ನಿಲ್ದಾಣಗಳನ್ನು ಹೊಂದಿವೆ.
ಮೆಟ್ರೋ
ಜಾಲವನ್ನು ವಿಸ್ತರಿಸುವ ಪ್ರಯತ್ನದಲ್ಲಿ, ಹಳದಿ ಮತ್ತು ಪಿಂಕ್ ಲೈನ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಪಿಂಕ್ ಲೈನ್ ಉತ್ತರದ ನಾಗವಾರದಿಂದ ದಕ್ಷಿಣದ ಕಾಳೇನ ಅಗ್ರಹಾರವರೆಗೆ ಸಂಪರ್ಕ
ಒದಗಿಸುತ್ತದೆ.
2030ರ
ವೇಳೆಗೆ, ಬೆಂಗಳೂರು ಸುಮಾರು 400 ಕಿಲೋಮೀಟರ್ ವ್ಯಾಪ್ತಿಯ ಮೆಟ್ರೋ ಮತ್ತು ಉಪನಗರ ರೈಲು ಜಾಲವನ್ನು
ಹೊಂದುವ ನಿರೀಕ್ಷೆಯಲ್ಲಿದೆ.
2025-26ನೇ
ಸಾಲಿನ ಕೇಂದ್ರ ಬಜೆಟ್‌ನಲ್ಲಿ, ಬೆಂಗಳೂರು ಮೆಟ್ರೋ ರೈಲು ಯೋಜನೆಗೆ ₹9,000 ಕೋಟಿ ರೂ. ಮೀಸಲಿಡಲಾಗಿದೆ.
ಈ ನಿಧಿಯನ್ನು ಮೆಟ್ರೋ ರೈಲು ಯೋಜನೆಯ ವಿಸ್ತರಣೆ ಮತ್ತು
ಅಭಿವೃದ್ಧಿಗೆ ಬಳಸಲಾಗುವುದು, ಇದು ಮುಂದಿನ ದಿನಗಳಲ್ಲಿ ನಗರದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು
ಸಹಾಯ ಮಾಡುತ್ತದೆ.
ಮೆಟ್ರೋ
ದರ ಏರಿಕೆಯ ಕಾರಣಗಳು:-👇
- ಆಪರೇಷನ್
ಮತ್ತು ನಿರ್ವಹಣಾ ವೆಚ್ಚಗಳು:-
ಮೆಟ್ರೋ ಸೇವೆಗಳ ನಿರಂತರ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಅಗತ್ಯವಾದ ವೆಚ್ಚಗಳು ಹೆಚ್ಚಾಗುತ್ತಿವೆ.
ಇವುಗಳಲ್ಲಿ ವಿದ್ಯುತ್, ಸಿಬ್ಬಂದಿ ವೇತನ, ಮತ್ತು ನಿರ್ವಹಣಾ ಕಾರ್ಯಗಳು ಸೇರಿವೆ.
- ಹೆಚ್ಚಿದ
ಇಂಧನ ದರಗಳು:- ವಿದ್ಯುತ್
ಮತ್ತು ಇಂಧನ ದರಗಳಲ್ಲಿ ಸಂಭವಿಸಿದ ಏರಿಕೆಗಳು
ಮೆಟ್ರೋ ಕಾರ್ಯಾಚರಣೆಯ ವೆಚ್ಚವನ್ನು ಹೆಚ್ಚಿಸುತ್ತವೆ, ಇದರಿಂದ ಪ್ರಯಾಣ ದರಗಳ ಮೇಲೂ ಪರಿಣಾಮ
ಬೀರುತ್ತದೆ.
- ವಿಸ್ತರಣೆ
ಮತ್ತು ಸುಧಾರಣೆ ಯೋಜನೆಗಳು:-
ಮೆಟ್ರೋ ಜಾಲವನ್ನು ವಿಸ್ತರಿಸಲು ಮತ್ತು ಸುಧಾರಿಸಲು ನಡೆಯುವ ಯೋಜನೆಗಳು ಹೆಚ್ಚಿನ ಹಣಕಾಸು ಹೂಡಿಕೆಯನ್ನು
ಅಗತ್ಯಪಡಿಸುತ್ತವೆ. ಈ ವೆಚ್ಚಗಳನ್ನು ಸಮತೋಲನಗೊಳಿಸಲು ದರ ಏರಿಕೆ ಮಾಡಲಾಗುತ್ತದೆ.
- ೨೦೧೯ರ ಮಹಾಮಾರಿ
ಪರಿಣಾಮಗಳು: ಕೊರೋನಾ
ಮಹಾಮಾರಿಯ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿತವಾಗಿದ್ದು, ಆದಾಯದಲ್ಲಿ ಕುಸಿತ ಉಂಟಾಗಿದೆ.
ಈ ನಷ್ಟವನ್ನು ಪರಿಹರಿಸಲು ದರ ಏರಿಕೆ ಮಾಡಲಾಗಿದೆ.
ಬೆಲೆ
ಏರಿಕೆಯನ್ನು ಖಂಡಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ
ಲಿಮಿಟೆಡ್ ವಿರುದ್ದ ಬೆಂಗಳೂರು ಮೆಟ್ರೋ ಪ್ರಯಾಣಿಕರ
ಸಂಘದ ಸದಸ್ಯರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೇ ಮೆಟ್ರೋ
ದರವನ್ನು ಕೇಂದ್ರ ಸರ್ಕಾರವು ಏರಿಕೆ ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಖಂಡರು ಪ್ರತಿಭಟನೆ
ನಡೆಸಿದ್ದರು. ಜೊತೆಗೆ ಜನಾಂದೋಲನ ಸಂಘಟನೆಯಿಂದ ಕೂಡ ಬೃಹತ್ ದರಣಿ ನಡೆದಿತ್ತು.
ಬೆಂಗಳೂರಿನ ಮೆಟ್ರೋ ಪ್ರಯಾಣ ದರದಲ್ಲಿ ಶೇ. ೧೦೦
ರಷ್ಟು ಏರಿಕೆ ಮಾಡಿರುವುದು ಅವೈಜ್ಞಾನಿಕ ಮತ್ತು ಜನವಿರೋಧಿ ನೀತಿಯಾಗಿದೆ ಎಂದು ಖಂಡಿಸಿರುವ “ ಮೆಟ್ರೋ ವಕೀಲರ ಪ್ರಯಾಣಿಕರ ಒಕ್ಕೂಟ “ ಇದೇ ೨೮ ರಂದು ಮಧ್ಯಾಹ್ನ ೨ ಗಂಟೆಗೆ
ಹೈಕೋರ್ಟ್ ಗೇಟ್ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಧನ್ಯವಾದಗಳು.....🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು