ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ವರ್ಲ್ಡ್‌ ವೆಟ್‌ ಲ್ಯಾಂಡ್‌ ಡೇ ( ವಿಶ್ವ ಜೌಗು ಪ್ರದೇಶ ದಿನ)೨೦೨೫, ಫೆಬ್ರವರಿ ೦೨

 

                                                                                                                                                                                 ವಾಝಿ ಲೇಕ್

     ಫೆಬ್ರವರಿ ೨ ರಂದು  ವಿಶ್ವದಾದ್ಯಂತ ಪ್ರತಿವರ್ಷ ವಿಶ್ವ ತೇವ ಭೂಮಿ ದಿನ ಅಥವಾ ವಿಶ್ವ ಜೌಗು ಪ್ರದೇಶ ದಿನ ವನ್ನು ಆಚರಿಸಲಾಗುತ್ತದೆ. ೨೦೨೫ ರ ವಿಶ್ವ ತೇವಭೂಮಿ ದಿನದ ಉದ್ದೇಶವು “ನಮ್ಮ ಸಾಮಾನ್ಯ ಭವಿಷ್ಯಕ್ಕಾಗಿ ತೇವ ಪ್ರದೇಶಗಳನ್ನು ರಕ್ಷಿಸುವುದು” . ಪರಿಸರ ವ್ಯವಸ್ಥೆಯ ಜೌಗು ಪ್ರದೇಶಗಳನ್ನು ರಕ್ಷಿಸುವ ತುರ್ತು ಅಗತ್ಯತೆಯನ್ನು ತಿಳಿಸುವುದರ ಮೂಲಕ , ಇಂದಿನ ಮತ್ತು ಮುಂದಿನ ಪೀಳಿಗೆಗೆ ಇದರ ಸಂರಕ್ಷಣೆ ಮಾಡುವುದನ್ನು ಗೊತ್ತುಪಡಿಸುತ್ತದೆ.

ಈ ದಿನವು  ಇರಾನ್‌ ನ (ರಾಮ್ಸರ್‌ ಕನ್ವೆನ್ಷನ್) ರಾಮ್‌ಸರ್‌ ನಲ್ಲಿ ಫೆಬ್ರವರಿ ೨ , ೧೯೭೧ ರಂದು ವೆಟ್‌ ಲ್ಯಾಂಡ್‌ ಗಳ ಸಮಾವೇಶವನ್ನು ಅಂಗೀಕರಿಸಿದ ದಿನವನ್ನೆ ವಿಶ್ವಜೌಗು ಪ್ರದೇಶ ದಿನ ಎಂದು ಆಚರಿಸಲಾಗುತ್ತದೆ.  ೨೦೨೧ ರಲ್ಲಿ ಫೆಬ್ರವರಿ ೨ ನ್ನು  ವಿಶ್ವ ತೇವಭೂಮಿ ದಿನ ಎಂದು ವಿಶ್ವಸಂಸ್ಥೆಯು ಅಧಿಕೃತವಾಗಿ ಅಂಗೀಕರಿಸಿತು.

ವಿಶ್ವ ತೇವ ಭೂಮಿ ದಿನದಂದು, ಭೂಗ್ರಹದ ಆರೋಗ್ಯ ಮತ್ತು ಮಾನವನ ಸಮೃದ್ದಿಯಲ್ಲಿ ಜೌಗು ಪ್ರದೇಶಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತದೆ.

ಪರಿಸರದ ಯೋಗಕ್ಷೇಮವು, ಮಾನವನ ದೈಹಿಕ ಮಾನಸಿಕ ಆರೋಗ್ಯದೊಂದಿಗೆ ವಿವಿಧ ರೀತಿಯಲ್ಲಿ ಬೆಸೆದುಕೊಂಡು ಪರಸ್ಪರರ ಹಿತದ ಮೇಲೆ ಕೇಂದ್ರೀಕರಿಸುತ್ತದೆ.

ಭೂಮಿಯ ಮೇಲಿನ ವೈವಿಧ್ಯಮಯ ಉತ್ಪಾದಕ ಪರಿಸರಗಳಲ್ಲಿ  ಜೌಗು ಪ್ರದೇಶಗಳು ವಿಶೇಷ ಪಾತ್ರವನ್ನು ವಹಿಸುತ್ತವೆ. ಅಸಂಖ್ಯಾತ ಬಗೆಬಗೆಯ ಸಸ್ಯಗಳು , ಜಲಚರ ಜೀವಿಗಳು ಉಳಿವಿಗಾಗಿ ಜೀವಜಲದ ಉತ್ಪಾದನೆ ಮಾಡುವ ಜೀವ ವೈವಿದ್ಯತೆಯ ತೊಟ್ಟಿಲುಗಳು ಆಗಿವೆ.

ಮಾನವರಿಗೆ ಶುದ್ದ ಕುಡಿಯುವ ನೀರಿನ ಪೂರೈಕೆ, ಆಹಾರ ಉತ್ಪಾದನೆ ಮತ್ತು ಕಟ್ಟಡ ಸಾಮಗ್ರಿಗಳ ಉತ್ಪಾದನೆಯಿಂದ ಮೊದಲುಗೊಂಡು, ಅಂತರ್ಜಲ ಶೇಖರಣೆ, ಪ್ರವಾಹ ನಿಯಂತ್ರಣ, ಭೂಮಿಯ ಮೇಲಿನ ಹವಾಮಾನ ಬದಲಾವಣೆ , ಈ ಎಲ್ಲಾ ಪರಿಸರದ ಸಮತೋಲನ ನಿರ್ವಹಣೆ ಮಾಡುವಲ್ಲಿ ಈ ಜೌಗು ಪ್ರದೇಶ ಅಥವಾ ತೇವ ಪ್ರದೇಶಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಪರಿಸರ ವೈವಿದ್ಯತೆಯ ಸೇವೆಗಳಿಗೆ ಈ ತೇವ ಭೂಮಿಗಳು ಅನಿವಾರ್ಯವಾಗಿವೆ. ವಾಸ್ತವದಲ್ಲಿ ಭೂಮಿಯ ಮೇಲ್ಮೈನಲ್ಲಿ ಈ ಜೌಗು ಪ್ರದೇಶಗಳು ಶೆ. ೬  ರಷ್ಟು ಭಾಗವನ್ನು ಮಾತ್ರವೇ ಆವರಿಸಿವೆ. ಸಸ್ಯ ಮತ್ತು ಪ್ರಾಣಿಗಳ ಒಟ್ಟು ಬಾಗದಲ್ಲಿ ೪೦ ರಷ್ಟು ಜೀವಿಗಳು ಈ ತೇವ ಭೂಮಿಯಲ್ಲಿಯೇ ಜೀವಿಸುತ್ತವೆ. ಮತ್ತು ತಮ್ಮ ಸಂತಾನೋತ್ಪತ್ತಿ ಮಾಡುತ್ತವೆ.

ಪ್ರಪಂಚದಾದ್ಯಂತ ಲಕ್ಷಕ್ಕೂ ಅಧಿಕ ಜೌಗು ಪ್ರದೇಶಗಳು ಸಿಹಿನೀರಿನ ಮೂಲವನ್ನು ಒದಗಿಸುತ್ತವೆ. ಉದಾಹರಣೆಗೆ ತೇವ ಭೂಮಿಯ ಗದ್ದೆಗಳಲ್ಲಿ  ಬೆಳೆಯುವ ಭತ್ತವು  ಮೂರು ಶತಕೋಟಿ ಜನರ ಪ್ರಧಾನ ಕಸುಬಾಗಿದೆ. ಇವರು ಜಾಗತಿಕ ಆಹಾರದ ಇಪ್ಪತ್ತರಷ್ಟು ಬೇಡಿಕೆಯನ್ನು ಪೂರೈಸುತ್ತಾರೆ.

ಜೌಗು ಪ್ರದೇಶಗಳು ಹೆಚ್ಚಾಗಿ ನ್ಯಾಚುರಲ್‌ ಅಬ್ಸಾರ್ಬರ್ ಗಳಾಗಿ ಕೆಲಸ ನಿರ್ವಹಿಸುತ್ತವೆ. ಈ ಮೂಲಕ ಮಳೆಯ ಪ್ರವಾಹ ಪರಿಣಾಮವನ್ನು ಮತ್ತು ಚಂಡಮಾರುತ ಉಲ್ಬಣವನ್ನು ಕಡಿಮೆ ಮಾಡುತ್ತವೆ.

ಆಹಾರ ಭದ್ರತೆ, ಜಾನುವಾರು ಉತ್ಪಾದನೆ, ಅರಣ್ಯ, ಮೀನುಗಾರಿಕೆ, ಜಲಚರಗಳನ್ನು ಒಳಗೊಂಡ ಕ್ರಿಯೆಗಳಲ್ಲಿನ ದೃಷ್ಟಿಕೋನದಿಂದ ಜೌಗುಪ್ರದೇಶಗಳ ಮರುಸ್ಥಾಪನೆ,  ಸಂರಕ್ಷಣೆ, ಸುಸ್ಥಿರ ನಿರ್ವಹಣೆ ಯನ್ನು ಬೆಂಬಲಿಸಲು ಎಫ್‌ ಎ ಒ ಸಕ್ರಿಯವಾಗಿ ತೊಡಗಿಸಿಕೊಂಡಿದೆ.  ಬದಲಾಗುತ್ತಿರುವ ಹವಾಮಾನ ಬದಲಾವಣೆ, ಜೀವ ವೈವಿದ್ಯತೆ ಮತ್ತು ವಿವಿಧ ವಲಯಗಳಿಂದ ಎದುರಾಗುವ ಸಂಕಷ್ಟಗಳನ್ನು ಪರಿಹರಿಸುವ ಕಾರ್ಯವನ್ನು ಕೈಗೊಂಡಿದೆ.

ವಿಶ್ವ ವೆಟ್‌ ಲ್ಯಾಂಡ್‌ ದಿನದ ಮಹತ್ವ:-

·         ಮಾನವನ ಆರೋಗ್ಯಕರ ಬೆಳವಣಿಗೆಯಲ್ಲಿ ಜೌಗು ಪ್ರದೇಶಗಳ ಕುರಿತು ಜಾಗೃತಿ ಮೂಡಿಸುವುದು.

·         ಜಿವ ರಾಶಿಯ ಆರೋಗ್ಯ ಮತ್ತು ಆಹಾರ ಭದ್ರತೆಗೆ ಜೌಗು ಪ್ರದೇಶಗಳ ಕೊಡುಗೆಯನ್ನು ಎತಿಹಿಡಿಯುವುದು.

·         ಜೌಗು ಪ್ರದೇಶಗಳು ನೀಡುವ ಕೃಷಿ ಮತ್ತಿತರ ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆಯನ್ನು ತಿಳಿಯುವುದು.

·         ಜೌಗು ಪ್ರದೇಶಗಳ  ಪರಿಸರ ಪ್ರಾಮುಖ್ಯತೆಯನ್ನು ಹೈಲೈಟ್‌ ಮಾಡುವುದು.

·         ಎಫ್‌ ಎ ಒ ಸದಸ್ಯರು ಮತ್ತು ಇತರ ಮಧ್ಯಸ್ತಿಕೆ ಪಾಲುದಾರರೊಂದಿಗಿನ ಕ್ರಿಯೆಗಳನ್ನು ಉತ್ತೇಜಿಸುವುದು.

ಪ್ರಕೃತಿ ದತ್ತವಾಗಿರುವ ಜೌಗು ಪ್ರದೇಶಗಳನ್ನು, ಸಿಹಿನೀರಿನ ಮೂಲಗಳು, ಕರಾವಳಿ. ಸಮುದ್ರದಂಡೆಗಳು,  ಹವಳದ ದಿಬ್ಬಗಳು, ಪೀಟ್‌ ಲ್ಯಾಂಡ್‌ ಗಳು, ಆವೃತ ಪ್ರದೇಶಗಳೆಂದು ವಿಂಗಡಿಸಬಹುದಾಗಿದೆ.

ಈ ಜೌಗು ಪ್ರದೇಶಗಳು ವೈವಿಧ್ಯಮಯ ಜೀವರಾಶಿಗೆ ಆವಾಸಸ್ಥಾನವಾಗಿರುವುದರ ಮೂಲಕ, ನೈಸರ್ಗಿಕ ಶುದ್ದಿಕಾರಕಗಳಾಗಿ ಕಾರ್ಯನಿರ್ವಹಿಸುತ್ತವೆ.

ಭೂಗ್ರಹದ ಮೇಲಿನ ಪ್ರಾಮುಖ್ಯತೆ ಹೀಗಿದ್ದರೂ ಸಹ  ೧೯೭೦ ರ ದಶಕದಿಂದ ಜಾಗತಿಕ ಜೌಗು ಪ್ರದೇಶದಲ್ಲಿ ಸುಮಾರು ೩೫% ರಷ್ಟು ನಷ್ಟವಾಗಿವೆ.

ಕಳೆದ ಒಂದು ದಶಕದ ಪ್ರಾರಂಭದಿಂದ ಕಾಡಿಗಿಂತಲೂ ಮೂರು ಪಟ್ಟು ವೇಗವಾಗಿ ಜೌಗು ಪ್ರದೇಶಗಳು ಪ್ರಕೃತಿಯಿಂದ ಬೇರ್ಪಡುತ್ತಿವೆ.

ಪ್ರಾಥಮಿಕ ಕೃಷಿ, ಒಳಚರಂಡಿ , ನಗರಾಭಿವೃದ್ದಿ  ಸೇರಿದಂತೆ ಮಾನವನ ಮಾಲಿನ್ಯ ಚಟುವಟಿಕೆಯಿಂದ  ಈ ಆತಂಕಕಾರಿ ಕುಸಿತವು ಮುಂದೆ ಇನ್ನೂ ಹೆಚ್ಚಾಗಲಿದ್ದು, ನಿರ್ಣಾಯಕ ಪರಿಸರ ಜೌಗು ಪ್ರದೇಶಗಳ ಸಂರಕ್ಷಣೆಗೆ ಮುಂದಾಗಬೇಕಿದೆ.

            ಆರ್ದ್ರ ಪ್ರದೇಶಗಳನ್ನು ಸಮರ್ಥವಾಗಿ  ಸಂರಕ್ಷಿಸಲ್ಪಡುವ ಪ್ರಯತ್ನಗಳು ಮುಖ್ಯವಾಗಿ ರಾಮ್‌ ಸಾರ್‌ ನಿಂದ ಮಾರ್ಗದರ್ಶಿಸಲ್ಪಟ್ಟಿವೆ. ಇದು ಪ್ರಪಂಚದಾದ್ಯಂತ ಜೌಗು ಭೂಮಿಗಳ ರಕ್ಷಣೆ ಮತ್ತು ಸಮರ್ಥ ನಿರ್ವಹಣೆಯನ್ನು ಬೆಂಬಲಿಸುತ್ತದೆ.

ಭಾರತದಲ್ಲಿನ ಜೌಗು ಪ್ರದೇಶಗಳ ಪಟ್ಟಿ:-

ಭಾರತವು ತನ್ನ ಭೂ ಪ್ರದೇಶದ ನದಿಗಳನ್ನು ಹೊರತುಪಡಿಸಿ ೧೮.೪% ರಷ್ಟು ಜೌಗು ಪ್ರದೇಶವನ್ನು ಹೊದಿದೆ.  ೨೭೪೦೩ ಜೌಗು ಪ್ರದೇಶಗಳು, ಮ್ಯಾಂಗ್ರೋವ್‌ ಗಳು ಸೇರಿದಂತೆ  ವಿಸ್ತಾರ ಶ್ರೇಣಿಯ ಜೌಗು ಪ್ರದೇಶಗಳಿಗೆ ನೆಲೆಯಾಗಿದೆ.

ಭಾರತದಲ್ಲಿನ ಜೌಗು ಪ್ರದೇಶಗಳನ್ನು ಅವುಗಳ ಸ್ಥಳವನ್ನಾಧರಿಸಿ ಎಂಟು ವಿಧಗಳಾಗಿ ವಿಂಗಡಿಸಲಾಗಿದೆ.

§  ನೈಋತ್ಯ ಕರಾವಳಿಯ ಜೌಗು ಪ್ರದೇಶಗಳು ಮತ್ತು ಡೆಕ್ಕನ್‌  ಪ್ರಸ್ಥಭೂಮಿಯ ಜಲಾಶಯಗಳು

§  ಹಿಮಾಲಯ ದ ತಪ್ಪಲಿನ ಮತ್ತು ಈಶಾನ್ಯ ಭಾರತದ ತೇವಭೂಮಿಗಳು

§  ಪೂರ್ವ ಕರಾವಳಿಯ ಆವೃತ ಪ್ರದೇಶಗಳು ಡೆಲ್ಟಾ ಜೌಗು ಪ್ರದೇಶಗಳಲ್ಲರುವ ಚಿಲ್ಕಾ ಸರೋವರ.

§  ಗುಜರಾತ್‌ ನಿಂದ ಮಧ್ಯ ಪ್ರದೇಶದವರೆಗಿನ ಸಿಹಿ ನೀರಿನ ಸರೋವರ ಮತ್ತು ಜಲಾಶಯಗಳು

§  ಗುಜರಾತ್‌, ರಾಜಸ್ತಾನ್‌ ಕಚ್‌ ಕೊಲ್ಲಿಯಲ್ಲಿನ ಸಲೈನ್‌ ಜೌಗು ಪ್ರದೇಶಗಳು.

§  ಗಂಗಾ ಮತ್ತು ಬ್ರಹ್ಮಪುತ್ರಾ ನದಿಬಯಲಿನ ಪ್ರವಾಹ ಪ್ರದೇಶಗಳ ಸಿಹಿ ನೀರಿನ ಜೌಗು ಪ್ರದೇಶಗಳು.

§  ಕಾಶ್ಮೀರ ಮತ್ತು ಲಡಾಖ್‌ ನಲ್ಲಿರುವ ನದಿಗಳು ಮತ್ತು ಸರೋವರಗಳು.

§  ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿನ ಜೌಗು ಪ್ರದೇಶಗಳು ಮತ್ತು ಮಾಂಗ್ರೋವ್ ಗಳು.

ಈ ಮೇಲಿನ ಎಂಟು ಸ್ಥಳಗಳಲ್ಲಿ ಸುಮಾರು ೮೫ ಸ್ಥಳಗಳನ್ನು ರಾಮ್‌ ಸಾರ್‌ ಸೈಟ್‌ ಗಳೆಂದು ಕರೆಯುತ್ತಾರೆ.  ಇವುಗಳನ್ನು ಅಂತರಾಷ್ಡ್ರೀಯ ವೆಟ್‌ ಲ್ಯಾಂಡ್‌ ಗಳೆಂದು ಹೆಸರಿಸಲಾಗಿದೆ.

ಇವುಗಳಲ್ಲಿ ಕರ್ನಾಟಕದ ರಂಗನತಿಟ್ಟು ಪಕ್ಷಿಧಾಮವು  ರಾಮ್‌ ಸಾರ್ ಸೈಟ್‌ ಎಂದು ಗುರುತಿಸಲಾಗಿದೆ.

ಈ ರಾಮ್‌ ಸಾರ್‌ ಸೈಟ್‌ ಗಳಲ್ಲಿ ಭಾರತದ ಹಲವು, ಕೆರೆಕಟ್ಟೆಗಳು, ರಾಷ್ಟ್ರೀಯ ಉದ್ಯಾನವನಗಳು, ಪಕ್ಷಿಧಾಮಗಳು, ರಿಸರ್ವ್ಡ್‌ ಏರಿಯಾಗಳು ಒಳಗೊಂಡಿವೆ.

 

ಭಾರತದಲ್ಲಿನ ಜೌಗು ಪ್ರದೇಶಗಳನ್ನು ರಕ್ಷಿಸುವ ಪ್ರಯತ್ನಗಳು ೧೯೮೭ ರಿಂದ ಪ್ರಾರಂಭವಾದವು. ಜೌಗು ಪ್ರದೇಶಗಳನ್ನು ರಕ್ಷಿಸುವ ಕಾರ್ಯವನ್ನು ಜೈವಿಕ ವಿಧಾನಗಳ  ಮೇಲೆ ಪ್ರಾಥಮಿಕವಾಗಿ ಗಮನ ಹರಿಸಿತು.

ಜೌಗು ಪ್ರದೇಶಗಳ ನಿಯಮಗಳು ೨೦೧೭ (ಸಂರಕ್ಷಣೆ ಮತ್ತು ನಿರ್ವಹಣೆ):-  ವಿವಿಧ ರೀತಿಯ ಜೌಗು ಪ್ರದೇಶಗಳಿಗೆ ಕಾನೂನುಗಳನ್ನು ಬಲಪಡಿಸುವ ಮೂಲಕ, ಸಂರಕ್ಷಣೆ ಮತ್ತು ಸುಸ್ಥಿರ ನಿರ್ವಹಣೆಯ ನಿಯಮಗಳನ್ನು ಮಾಡಲಾಗಿದೆ.

ರಾಷ್ಟ್ರೀಯ ತೇವ ಪ್ರದೇಶಗಳ ಸಂರಕ್ಷಣಾ ಕಾರ್ಯಕ್ರಮ (ಎನ್‌ ಡಬ್ಲೂ ಸಿ ಪಿ) :- ನೀತಿ ಬೆಂಬಲ ಮತ್ತು ಮರುಸ್ಥಾಪನೆಗಾಗಿ  ಧನಸಹಾಯದ ಮೂಲಕ ಭಾರತದಾದ್ಯಂತ  ಜೌಗು ಪ್ರದೇಶಗಳು ಸುಸ್ಥಿರ  ನಿರ್ವಹಣೆಯನ್ನು ಉತ್ತೇಜಿಸುತ್ತದೆ.

ತೇವಪ್ರದೇಶಗಳ ಪುನರುಜ್ಜೀವನ  ಕಾರ್ಯಕ್ರಮ:-  ಸಮುದಾಯದ ಒಳಗೊಳ್ಳುವಿಕೆಯ ಮೂಲಕ ವಿವಿಧ ಸಂರಕ್ಷಣಾ  ಚಟುವಟಿಕೆಗಳಿಂದ ಜೌಗು ಪ್ರದೇಶಗಳ ಪರಿಸರ ಆರೋಗ್ಯವನ್ನು ಸುಧಾರಿಸುವ ಮೂಲಕ ಪುನಃಸ್ಥಾಪಿಸುವುದು ಮತ್ತು ಪುನರುಜ್ಜೀವನ ಗುರಿಗಳನ್ನು ಹೊಂದಿದೆ.

ತಲಾಬ್‌ ಬಚಾವೋ ಅಭಿಯಾನ:- ಭಾರತದಲ್ಲಿನ ಕೊಳಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಸ್ಥಳೀಯ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಸುಸ್ಥಿರ ನೀರಿನ ನಿರ್ವಹಣೆಯ ಅಭ್ಯಾಸಗಳನ್ನು ಉತ್ತೇಜಿಸುತ್ತದೆ.

೨೦೨೫ ರ ವಿಶ್ವ ತೇವಭೂಮಿ ದಿನದ ಮಹತ್ವ.

ನಮ್ಮ ಗ್ರಹಕ್ಕೆ ತೇವಭೂಮಿಗಳು ಎಷ್ಟು ಮೌಲ್ಯಯುತವಾಗಿವೆ ಎಂಬುದನ್ನು ಅರಿತುಕೊಳ್ಳಲು ಈ ವಿಶ್ವ ತೇವ ಭೂಮಿ ದಿನ ಮುಖ್ಯವಾಗಿದೆ.

ರಾಮ್‌ ಸಾರ್‌ ಸಮಾವೇಶದ ವಾರ್ಷಿಕೋತ್ಸವದ ಈ ದಿನವು  ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಜೌಗು ಪ್ರದೇಶಗಳನ್ನು ರಕ್ಷಿಸಲು ಮಾಡಿಕೊಂಡಿರುವ ಒಪ್ಪಂದವನ್ನು ತಿಳಿಸುತ್ತದೆ.

ಪ್ರಪಂಚದಾದ್ಯಂತ ಶುಚಿಗೊಳಿಸುವಿಕೆ, ಪುನಃಸ್ಥಾಪನೆಯಂತಹ ಕಾರ್ಯಗಳನ್ನು ಮಾಡುವ ಮೂಲಕ, ಜೌಗು ಪ್ರದೇಶಗಳನ್ನು ರಕ್ಷಿಸಲು ಜಾಗತಿಕ ಪ್ರಯತ್ನಗಳನ್ನು ಉತ್ತೇಜಿಸುತ್ತದೆ.

ಕಾಡುಗಳಿಗಿಂತ ಮೂರು ಪಟ್ಟು ವೇಗವಾಗಿ ನಾಶವಾಗುತ್ತಿರುವ ತೇವಭೂಮಿಗಳನ್ನು ತ್ವರಿತವಾಗಿ ಸಂರಕ್ಷಿಸಿಕೊಳ್ಳುವ ತುರ್ತು ಪರಿಸ್ಥತಿಯನ್ನು ನಮಗೆ ನೆನಪಿಸುತ್ತದೆ.

ಭವಿಷ್ಯಕ್ಕಾಗಿ ತೇವಭೂಮಿಗಳನ್ನು ಉಳಿಸಿಕೊಳ್ಳವಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.

 

ಆರ್ದ್ರ ಭೂಮಿಗಳನ್ನು  ಅರ್ಥಮಾಡಿಕೊಳ್ಳುವ ಮತ್ತು ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ  ನಾವು ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಬಹುದು.

 

ಧನ್ಯವಾದಗಳು…🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......