ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ದೆಹಲಿ ಕಾಲ್ತುಳಿತ ಹದಿನೆಂಟು ಜನರ ದುರ್ಮರಣ : ಮೃತರ ಕುಟುಂಬಗಳಿಗೆ ಹತ್ತು ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

 

               

ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಜನವರಿಯ ತಿಂಗಳಿನಲ್ಲಿ  ಜನರ ಕಾಲ್ತುಳಿತದಿಂದಾಗಿ ಸುಮಾರು ೩೦ ಮಂದಿ   ಪ್ರಾಣ ಕಳೆದುಕೊಂಡಿದ್ದರು  ಈ ಘಟನೆ ಮಾಸುವ ಮುನ್ನವೆ ಮತ್ತೊಂದು ಮಹಾ ದುರಂತವೊಂದು ನಡೆದುಹೋಗಿದೆ. ಈ ದುರಂತದಲ್ಲಿ   ಘಟನೆಯಲ್ಲಿ ಸುಮಾರು ಹದಿನೆಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಶನಿವಾರ ರಾತ್ರಿ ನವದೆಹಲಿಯಲ್ಲಿ ರೈಲು ನಿಲ್ದಾಣದಲ್ಲಿ  ಸರಿಸುಮಾರು ರಾತ್ರಿ ೯.೩೦ ರಿಂದ  ೧೦.೧೫ ರ ನಡುವೆ ಸಂಬವಿಸಿದ ಕಾಲ್ತುಳಿತದಲ್ಲಿ  ಕನಿಷ್ಠ ೧೮ ಮಂದಿ ಸಾವನ್ನಪ್ಪಿದ್ದಾರೆ.

ಐವರು ಮಕ್ಕಳು  ಒಂಭತ್ತು ಮಂದಿ ಮಹಿಳೆಯರು, ನಾಲ್ವರು ಪುರುಷರು  ಸೇರಿ ಹದಿನೆಂಟು ಮಂದಿ ಸಾವಿಗೀಡಾಗಿದ್ದಾರೆ. ಸುಮಾರು  ಇಪ್ಪತ್ತಕ್ಕೂ ಹೆಚ್ಚು ಮಂದಿಯ  ಸ್ಥಿತಿ  ಗಂಭೀರವಾಗಿದ್ದು, ಈ ದುರ್ಘಟನೆಯ ಪರಿಣಾಮವಾಗಿ ಸಾವು ನೋವುಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಇದರಲ್ಲಿ ಸಾವಿರಾರು ಮಹಾಕುಂಭಕ್ಕೆ ತೆರಳುತಿದ್ದ ಭಕ್ತರು, ಪಾದಾಚಾರಿ ಸೇತುವೆ, ಮೆಟ್ಟಿಲುಗಳು ಮತ್ತು ಎಸ್ಕಲೇಟರ್‌ ಗಳಲ್ಲಿ ಸಿಕ್ಕಿಹಾಕಿಕೊಂಡು , ರೈಲುಗಳ ವಿಳಂಬವಾಗಿ, ಅವ್ಯವಸ್ತೆಯಲ್ಲಿ ಜನರು ನೂಕುನುಗ್ಗಲಾಗಿ ಈ ಕಾಲ್ತುಳಿತ ಸಂಭವಿಸಿದೆ.

ಮೃತರ ಕುಟುಂಬಗಳಿಗೆ  ತಲಾ ಹತ್ತು ಲಕ್ಷ ರೂಪಾಯಿ, ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ ಎರಡುವರೆ ಲಕ್ಷ ರೂಪಾಯಿಗಳ ಪರಿಹಾರವನ್ನು ಸರ್ಕಾರದ ವತಿಯಿಂದ  ಘೋಷಿಸಲಾಗಿದೆ.

 

ದೆಹಲಿಯ ರೈಲ್ವೇ ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ; ೧೮ ಜನರು ಮೃತಪಟ್ಟ ದಾರುಣ ಘಟನೆ

ನವದೆಹಲಿ: ದೆಹಲಿಯ ಪ್ರಮುಖ ರೈಲ್ವೇ ನಿಲ್ದಾಣದಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ೧೮ ಕ್ಕೆ ಏರಿದೆ. ಭಯಾನಕ ಘಟನೆ ಜನಸಂದಣಿ ಮತ್ತು ಅವ್ಯವಸ್ಥೆಯ ಕಾರಣದಿಂದ ಉಂಟಾಗಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ.

  ಘಟನೆ ಶನಿವಾರ ಸಂಜೆ ನಡೆದಿದ್ದು, ಅಪಾರ ಸಂಖ್ಯೆಯ ಪ್ರಯಾಣಿಕರು ಪ್ಲಾಟ್ಫಾರ್ಮ್ಗಳಲ್ಲಿ ಗುಂಪುಗೂಡಿದ ಸಂದರ್ಭ ಏನೋ ಕಾರಣಕ್ಕೆ ಉಂಟಾಗಿ ಭೀಕರ ಕಾಲ್ತುಳಿತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ಜನರು ಗಾಬರಿಯಲ್ಲಿ ಓಡಲು ಪ್ರಾರಂಭಿಸಿದಾಗ ಕೆಲವು ಜನರು ನೆಲಕ್ಕೆ ಬಿದ್ದರು, ಇದರಿಂದಾಗಿ ಮತ್ತಷ್ಟು ಜನರು ಅವರ ಮೇಲೆ ಬಿದ್ದು ಸಾವಿಗೆ ಕಾರಣವಾದರು.

ಅಧಿಕೃತ ಪ್ರತಿಕ್ರಿಯೆ: ಸ್ಥಳೀಯ ಅಧಿಕಾರಿಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ. ದೆಹಲಿ ಸರ್ಕಾರ ಮತ್ತು ಭಾರತೀಯ ರೈಲ್ವೇ ಇಲಾಖೆ ಘಟನೆಗೆ ಸಂಬಂಧಿಸಿದಂತೆ ತಕ್ಷಣ ತನಿಖೆಗೆ ಆದೇಶ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಪ್ರತ್ಯಕ್ಷದರ್ಶಿಗಳ ಅನುಭವ: "ನಾನು ನನ್ನ ರೈಲಿಗಾಗಿ ನಿರೀಕ್ಷಿಸುತ್ತಿದ್ದೆ, ಅಷ್ಟರಲ್ಲೇ ತೀವ್ರ ಒತ್ತಡದಿಂದ ಜನ ಓಡಲು ಪ್ರಾರಂಭಿಸಿದರು. ಎಲ್ಲೆಡೆ ಗೊಂದಲ ಮತ್ತು ಗೋಳಾಟ ಕೇಳಿಸಿತು. ನಾನು ಸಿಕ್ಕಿಹಾಕಿಕೊಂಡೆ, ನಾನು ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದೆ," ಎಂದು ಘಟನೆಯೊಂದರಲ್ಲಿ ತೊಂದರೆ ಅನುಭವಿಸಿದ ಪ್ರಯಾಣಿಕನೊಬ್ಬ ಹೇಳಿದರು.

ಪ್ರಯಾಗ್‌ ರಾಜ್‌ ಗೆ ತೆರಳುವ ರೈಲು ಬರುತ್ತಿದ್ದಂತೆ  ಜನಸಂದಣಿಯೂ ಹೆಚ್ಚಾಯಿತು. ನಿಲ್ದಾಣದ  ಮೇಲ್ಸೇತುವೆಯ ಮೇಲೆಯೂ ಬಾರಿ ಜನರು ಸೇರಿದ್ದರು.  ಈ ವೇಳೆ  ಹಲವರು ಉಸಿರುಗಟ್ಟಿ  ಅಲ್ಲಿಯೇ ಬಿದ್ದಿದ್ದರು. ಸ್ಥಳದಲ್ಲಿಯೇ  ಹತ್ತಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. ನಾವು  ೧೪ ಮತ್ತು ೧೫ ನೇ ಫ್ಲಾಟ್‌ ಫಾರಂಗಳಿಂದ  ಮೃತ ದೇಹಗಳನ್ನು  ಆಂಬ್ಯುಲೆನ್ಸ್‌ ಗೆ  ಸಾಗಿಸಿದೆವು,    ಅವ್ಯವಸ್ಥೆಯ ನಡುವೆ  ಕೈಗಾಡಿಗಳಲ್ಲೆ  ಶವಗಳನ್ನು  ಸಾಗಿಸಿದೆವು.” ಎಂದು ರೈಲು ನಿಲ್ದಾಣದಲ್ಲಿ ಕೆಲಸ ಮಾಡುವ ಕೂಲಿಗಳು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಕಾಲ್ತುಳಿತದ ಭೀಕರ ದೃಶ್ಯವನ್ನು ಕಂಡ ಕೂಲಿ  ಬಲರಾಮ್‌ “ ಸರಕುಗಳನ್ನು, ವಸ್ತುಗಳನ್ನು ಸಾಗಿಸುವ  ಕೈಗಾಡಿಗಳಲ್ಲಿ ಹೆಣಗಳನ್ನು ಸಾಗಿಸಿದ್ದೇವೆ, ಕಳೆದ ಹದಿನೈದು ವರ್ಷಗಳಿಂದ ಇಲ್ಲಿ ಕೂಲಿಯಾಗಿ  ಕೆಲಸ ಮಾಡುತ್ತಿದ್ದೇನೆ. ಇಂತಹ ಬೃಹತ್‌ ಜನಸಂದಣಿಯನ್ನು ಇದುವರೆಗೂ ನೊಡಿಲ್ಲ “ ಎಂದಿದ್ದಾರೆ.

ಇನ್ನೊಬ್ಬರು ಮಾತನಾಡಿ ,” ಜನರ ಚಪ್ಪಲಿ, ಬೂಟು ಸೇರಿ ಇತರ ವಸ್ತುಗಳು  ಎಲ್ಲೆಡೆ  ಚದುರಿಹೋಗಿದ್ದವು, ಅನೇಕ ಮಕ್ಕಳು ಮತ್ತು ಹಿರಿಯ ವ್ಯಕ್ತಿಗಳನ್ನು ಜನಸಂದಣಿಯಿಂದ  ಹೊರಕ್ಕೆ ಕರೆದುಕೊಂಡು ಬಂದಿದ್ದೇವೆ ಎಂದು ವಿವರಿಸಿದ್ದಾರೆ.


ಈ ಕಾಲ್ತುಳಿತಕ್ಕೆ ಕಾರಣಗಳು:-

·         ರೈಲುಗಳಲ್ಲಿ ಕಡಿಮೆ ಭೋಗಿಗಳಿದ್ದು, ಅತಿ ಹೆಚ್ಚು ಜನರಲ್‌ ಟಿಕೆಟ್ಗಳನ್ನು ರೈಲ್ವೆ ಸಿಬ್ಬಂದಿ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜನರಲ್‌ ನಲ್ಲಿ ಸುಮಾರು ಒಂದು ಸಾವಿರದ ಐದು ನೂರು ಟಿಕೆಟ್‌ ಗಳನ್ನು ವಿತರಿಸಿದ್ದಾರೆ.

·         ರಾಜಧಾನಿ ಎಕ್ಸ್‌ ಪ್ರೆಸ್‌ ಮತ್ತು ಸ್ವತಂತ್ರ ಎಕ್ಸ್‌ ಪ್ರೆಸ್‌ ರೈಲುಗಳು ತಡವಾಗಿವೆ. ಮತ್ತು ಫ್ಲಾಟ್‌ ಫಾರಂ ನಂಬರ್‌ ೧೨ ಕ್ಕೆ ಬರಬೇಕಾಗಿದ್ದ ರೈಲುಗಳನ್ನು  ಕೊನೆಕ್ಷಣದಲ್ಲಿ ಫ್ಲಾಟ್‌ ಫಾರಂ ನಂಬರ್‌ ೧೬ ಕ್ಕೆ ಶಿಫ್ಟ್‌ ಮಾಡಿ ಅನೌನ್ಸ್‌ ಮಾಡಲಾಗಿದೆ.

·         ಇದರಿಂದ ಗಾಬರಿಯಾದ ಜನ ಏಕಾಏಕಿ ಫ್ಲಾಟ್‌ ಫಾರಂ ನಂಬರ್‌ ೧೬ ಕ್ಕೆ ನುಗ್ಗಲು ಪ್ರಾರಂಭಿಸಿದ್ದಾರೆ.

·         ಈ ಮೊದಲೇ ಫ್ಲಾಟ್‌ ಫಾರಂ ನಂ ೧೪ ಮತ್ತು ೧೫ ರಲ್ಲಿ  ಬೇರೆ ರೈಲಿಗಾಗಿ ಜನಸಂದಣಿ ಇರುವ ಕಾರಣ, ನುಗ್ಗಿ ಬರುತ್ತಿದ್ದ ಜನರ ಕಂಡು ಏನು ಎಂದು ಅರಿಯುವ ವೇಳೇಗೆ ಆಗಲೇ ಆಚಾತುರ್ಯವೊಂದು ನಡೆದು ಕಾಲ್ತುಳಿತ ಉಂಟಾಗಿದೆ.

·         ಈ ಜನರ ಜೊತೆಗೆ ಪ್ರಯಾಗ್‌ ರಾಜ್‌ ಗೆ ತೆರಳುವ ಜನರೂ ಸೇರಿ ನೂಕುನುಗ್ಗಲು ಹೆಚ್ಚಾಯ್ತು.

 

·         ಪೋಲಿಸರು ನೀಡುತ್ತಿರುವ ಕಾರಣ: ವಿಶೇಷ ರೈಲು ಘೋಷಣೆಯಿಂದ ಜನರು ಗೊಂದಲಗೋಡಿರುವುದರಿಂದ,

 

·         ಮಗಧ್‌ ಎಕ್ಸ್‌ ಪ್ರೆಸ್‌ ರೈಲು(ಫ್ಲಾಟ್‌ ಫಾರಂ ನಂ ೧೨)  ಕುಂಭಮೇಳದ ವಿಶೇಷ ರೈಲು ಸ್ವಲ್ಪ ತಡವಾಗಿದೆ.

 

·         ಸ್ವತಂತ್ರ ಸೇನಾನಿ ಎಕ್ಸ್‌ ಪ್ರೆಸ್‌  (ಫ್ಲಾಟ್‌ ಫಾರಂ ನಂ ೧೩)  ಕುಂಭಮೇಳದ ವಿಶೇಷ ರೈಲು ಸ್ವಲ್ಪ ತಡವಾಗಿದೆ.

·         ಭುವನೇಶ್ವರ ರಾಜಧಾನಿ ಎಕ್ಸ್‌ ಪ್ರೆಸ್‌ (ಫ್ಲಾಟ್‌ ಫಾರಂ ನಂ ೧೫)  ಕುಂಭಮೇಳದ ವಿಶೇಷ ರೈಲು ಸ್ವಲ್ಪ ತಡವಾಗಿದೆ.

ಮೇಲಿನ ಅಷ್ಟು ರೈಲುಗಳ ಪ್ರಯಾಣಿಕರು ಅಲ್ಲಿನ ಫ್ಲಾಟ್‌ ಫ್ಲಾರಂಗಳಲ್ಲಿಯೇ ಕಾಯುತ್ತಿದ್ದ ಸಮಯದಲ್ಲಿ ರೈಲುಗಳು ತಡವಾಗುವ ಕಾರಣ ಫ್ಲಾಟ್‌ ಫಾರಂ ನಂಬರ್‌ ೧೬ ಕ್ಕೆ ಮೇಲಿನ ರೈಲುಗಳ ನಿಲುಗಡೆ  ಇದೆ ಎಂದು ತಡವಾಗಿ  ಸಿಬ್ಬಂದಿಗಳು ಅನೌನ್ಸ್‌ ಮಾಡಿದ್ದರ ಪರಿಣಾಮ ಒಂದುವರೆ ಸಾವಿರ ಟಿಕೆಟ್‌  ಪಡೆದ ಅಷ್ಟೂ ಪ್ರಯಾಣಿಕರು  ೧೬ ನೇ ಫ್ಲಾಟ್‌ ಫಾರಂ ಗೆ ಓಡುವಾಗ ಈ ಕಾಲ್ತುಳಿತ ಉಂಟಾಗಿದೆ.

ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಹಿಮಾಂಶು ಉಪಾಧ್ಯಾಯ ಅವರು, “ ಮೇಲ್ಸೇತುವೆಯಿಂದ  ಪ್ಲಾಟ್‌ ಫಾರಂ  ಸಂಖ್ಯೆ ೧೪ ಮತ್ತು ೧೫ ರ ಕಡೆಗೆ ಮೆಟ್ಟಿಲುಗಳನ್ನು ಬಳಸಿ ಕೆಲಗೆ ಬರುತ್ತಿದ್ದ ಕೆಲವರು ಜಾರಿ ಇತರರ ಮೇಲೆ ಬಿದ್ದಿದ್ದಾರೆ. ಇದರಿಂದ ಕಾಲ್ತುಳಿತ ಸಂಭವಿಸಿದೆ” ಎಂದು ಹೇಳಿದ್ದಾರೆ.

ಪ್ರಮುಖ ಸವಾಲುಗಳು:

  • ಜನಸಂದಣಿ ನಿಯಂತ್ರಣದ ಅಭಾವ.
  • ಸೂಕ್ತ ಸುರಕ್ಷತಾ ವ್ಯವಸ್ಥೆಯ ಕೊರತೆ.
  • ತುರ್ತು ನಿರ್ವಹಣಾ ವ್ಯವಸ್ಥೆಯ ತಡವಾದ ಪ್ರತಿಕ್ರಿಯೆ.

ತನಿಖೆಗೆ ದ್ವಿಸದಸ್ಯ ಸಮಿತಿಯನ್ನು ರಚಿಸಲಾಗಿದೆ ಮತ್ತು ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತನಿಖೆಗೆ  ಸೂಚಿಸಿದ್ದಾರೆ.

 

ಈ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ದೌಪದಿ ಮುರ್ಮು ,  ಪ್ರಾಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ಮೋದಿಯವರು ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡುವ ಮೂಲಕ ಆಘಾತ ವ್ಯಕ್ತಪಡಿಸಿದ್ದಾರೆ. ಮತ್ತು “ ತಮ್ಮವರನ್ನು ಕಳೆದುಕೊಂಡವರ ಕುಟುಂಬಗಳ ಜೊತೆ ನಾನಿದ್ದೇನೆ, ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ”.ಎಂದಿದ್ದಾರೆ.

            ನವದೆಹಲಿ ರೈಲು ನಿಲ್ದಾಣ ಕಾಲ್ತುಳಿತ ಪ್ರಕರಣದ ತನಿಖೆಯನ್ನು  ಆರಂಭಿಸಿರುವ ದೆಹಲಿ  ಪೋಲೀಸರು, ಘಟನೆ  ಸಂಭವಿಸುವ ಮುನ್ನ  ಏನಾಯಿತು ಎಂಬುದರ ಬಗ್ಗೆ ನಿರ್ಧರಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಣೆ ಮಾಡಲಾಗುವುದು  ಎಂದು ಮೂಲಗಳು ತಿಳಿಸಿವೆ.

ಭಾರತೀಯ ರೈಲ್ವೆ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಹೊಸ ಕ್ರಮಗಳನ್ನು ಜಾರಿಗೆ ತರಲು ಯೋಜಿಸುತ್ತಿದೆ. ನಿಲ್ದಾಣಗಳಲ್ಲಿ ಹೆಚ್ಚಿನ ಸುರಕ್ಷತಾ ಸಿಬ್ಬಂದಿಯನ್ನು ನಿಯೋಜಿಸುವುದು, ಜನಸಂದಣಿ ನಿಯಂತ್ರಿಸಲು ಪರಿಣಾಮಕಾರಿ ತಂತ್ರಗಳನ್ನು ಅನುಸರಿಸುವುದು ಮುಂತಾದ ಕ್ರಮಗಳನ್ನು ಸರ್ಕಾರ ಕೈಗೊಳ್ಳುವ ನಿರೀಕ್ಷೆಯಿದೆ.

ಘಟನೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಪುನರಾವೃತ್ತಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ.



ಧನ್ಯವಾದಗಳು.....🌷

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????