ಸೋ..... ಸಿವಿಲೈಝಡ್ ಮಂದಿಯ ಗ್ರೇ - ಡಿವೋರ್ಸ್ ಪುರಾಣ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
“ಡಿವೋರ್ಸ್ “
ಎನ್ನುವುದು ಪ್ರಸ್ತುತ ಅಂದರೆ ಇಪ್ಪತ್ತನೇ ಶತಮಾನದಲ್ಲಿ
ಭಾರತದ ಉದ್ದಗಲಕ್ಕೂ ತನ್ನ ಕಬಂದ ಬಾಹುಗಳನ್ನು ವಿಸ್ತರಿಸುತ್ತಿದೆ, ಅದು ಹೇಗೆಂದರೆ ಇತ್ತೀಚಿನ ಕೆಲವು
ವರ್ಷಗಳಲ್ಲಿ ಸಾಂಕ್ರಾಮಿಕ ರೋಗದಂತೆ ಎಲ್ಲೆಡೆ ಪಸರಿಸುತ್ತಿದೆ. ಈ ಡಿವೋರ್ಸ್ ಎನ್ನುವುದು ಭಾರತಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯ
ಎರವಲು.
ಡಿವೋರ್ಸ್ ಗೆ
ಮುಖ್ಯ ಕಾರಣ ಕುಟುಂಬ ವ್ಯವಸ್ಥೆ. ಮತ್ತು ಏಕಪತ್ನಿತ್ವವನ್ನು ಎತ್ತಿಹಿಡಿದಿರುವ ಕಾನೂನು.
ಕುಟುಂಬ ಎನ್ನುವುದು
ಸಮಾಜದ ಮೂಲಭೂತ ಘಟಕ. ಸಮಾಜಕ್ಕೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಉತ್ತಮ ನಾಗರೀಕರನ್ನು ಪೂರೈಸುವುದು
ಕುಟುಂಬದ ಉದ್ದೇಶ.
ಕುಟುಂಬ ಎನ್ನುವ
ಚೌಕಟ್ಟು ಏರ್ಪಡಲು ಮದುವೆ, ಅಥವಾ ವಿವಾಹ ಮೂಲವಾಗಿದೆ.
ದೇಶದ ಮುಂದಿನ ಭವಿಷ್ಯಕ್ಕಾಗಿ ಉತ್ತಮ ಪ್ರಜೆಗಳನ್ನು ನೀಡುವ
ಜವಾಬ್ದಾರಿ ಯಾವಾಗಲೂ ಕುಟುಂಬದ್ದೇ ಆಗಿರುತ್ತದೆ.
ಭಾರತದಲ್ಲಿ ಹಿಂದೆ
ಅವಿಭಕ್ತ ಕುಟುಂಬವು ಚಾಲ್ತಿಯಲ್ಲಿತ್ತು, ಅಲ್ಲಿ ತಂದೆ ತಾಯಿ, ಅಜ್ಜಿ ಅಜ್ಜ, ಅಣ್ಣ, ತಮ್ಮ ಅಕ್ಕ ತಂಗಿ
, ದೊಡ್ಡಪ್ಪ ದೊಡ್ಡಮ್ಮ ಹೀಗೆ ಎಲ್ಲರೂ ಒಂದುಗೂಡಿ ಒಂದೇ ಸೂರಿನಡಿ ಬದುಕುವ ಕ್ರಮವನ್ನೆ ಅವಿಭಕ್ತ ಕುಟುಂಬ
ಎನ್ನವರು. ಅಲ್ಲಿ ಒಬ್ಬರ ಕಷ್ಟಕ್ಕೆ ಮತ್ತೊಬ್ಬರು
ಹೆಗಲಾಗಿರುತ್ತಿದ್ದರು, ಮನೆಯ ಕೆಲಸಗಳನ್ನು ಎಲ್ಲ ಹೆಣ್ಣುಮಕ್ಕಳು ಮನೆಯ ಹಿರಿಯಾಕೆಯ ಜವಾಬ್ದಾರಿಯಲ್ಲಿ
ಹಂಚಿಕೊಂಡು ಮಾಡುತ್ತಿದ್ದರು. ಮಕ್ಕಳೆಲ್ಲರೂ ಒಂದೇಕಡೆ ಆಡುತ್ತಾ ಕುಣಿಯುತ್ತಾ ಬೆಳೆಯುತ್ತಿದ್ದರು,
ಅಲ್ಲಿ ಅಜ್ಜ ಅಜ್ಜಿ ಹೇಳುವ ಕಥಗಳನ್ನು ಕೇಳುತ್ತಾ, ಓರಗೆಯವರೊಂದಿಗೆ ಆಡುತ್ತಾ ಹಿರಿಯರ ಮಾರ್ಗದರ್ಶನದಲ್ಲಿ
ಬೆಳೆಯುತ್ತಿದ್ದರು, ಕೂಡುಕುಟುಂಬದಲ್ಲಿ ಬೆಳೆದಾಗ ಮಕ್ಕಳಲ್ಲಿ ನೆರೆಹೊರೆಯವರೊಂದಿಗೆ ಸಮಾಜದಲ್ಲಿ ಸಾಮರಸ್ಯದಿಂದ
ಬದುಕುವುದನ್ನು ಕಲಿತು ಸುಸಂಸ್ಕೃತರಾಗಿರುತ್ತಿದ್ದರು.
ಹೀಗಿದ್ದ
ಕುಟುಂಬ ವ್ಯವಸ್ಥೆಯು ಬರುಬರುತ್ತಾ ಚಿಕ್ಕದಾಗಿ ಕುಟುಂಬವು ವಿಭಕ್ತ ವಾಗಿ ಪ್ರಚಲಿತವಾಯಿತು, ಇಲ್ಲಿ
ಗಂಡ ಹೆಂಡತಿ ಮತ್ತು ಮಕ್ಕಳು ಮಾತ್ರವೇ ಬದುಕುತ್ತಿದ್ದ
ಕುಟುಂಬವನ್ನು ವಿಭಕ್ತ ಕುಟುಂಬ ಎನ್ನುತ್ತಾರೆ
ಹೆಚ್ಚಿದ
ಜೀವನದ ಸೌಕರ್ಯಗಳು, ವೈಯಕ್ತಿಕ ಆರ್ಥಿಕ ಸ್ವಾತಂತ್ರ್ಯ , ಹೊಸಹೊಸ ದುಡಿಮೆಯ ಮಾರ್ಗಗಳನ್ನು ಸೃಷ್ಟಿಸಿದವು.
ಗಂಡ ಹೆಂಡತಿ ಇಬ್ಬರು ದುಡಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.
ಹಣವನ್ನು
ಗಳಿಸಲು, ಐಷಾರಾಮಿ ಜೀವನ ಬಯಸಿದ ಕುಟುಂಬ ವ್ಯವಸ್ಥೆಯು, ನಗರಗಳಿಗೆ ಮತ್ತು ವಿದೇಶಗಳಿಗೆ ವಲಸೆ ಹೋಯಿತು,
ಅಲ್ಲಿನ ಆಚರಣೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ದಿ ಮೋಸ್ಟ್ ಸಿವಿಲೈಜಡ್ ಪೀಪಲ್
ಎನ್ನಿಸಿಕೊಳ್ಳುವ ಭರದಲ್ಲಿ ಹಿಂದೂ ಸಂಪ್ರದಾಯ ಸಂಸ್ಕೃತಿಗಳನ್ನು ಗಾಳಿಗೆ ತೂರಿ ಸ್ವಾರ್ಥ ತುಂಬಿದ
ವೈಯಕ್ತಿಕ ಬದುಕಿನೆಡೆಗೆ ಹೆಚ್ಚು ಆಕರ್ಷಿತರಾಗಿ ಇಂದು ಮಕ್ಕಳಿಗೆ ಸಿಗಬೇಕಾದ ಕುಟುಂಬದ ಪ್ರೀತಿ ವರ್ಷಕ್ಕೋಂದು
ಬಾರಿ ಬರುವ ಹಬ್ಬದಂತಾಗಿದೆ.
ಬಾಲ್ಯ,
ಯೌವ್ವನ, ಗ್ರಹಸ್ಥಾಶ್ರಮ, ವಾನಪ್ರಸ್ಥಾಶ್ರಮ ಗಳು ಹಿಂದಿನಿಂದಲೂ ಭಾರತೀಯ ಹಿಂದೂ ಸಮಾಜದಲ್ಲಿರುವ ಮತ್ತು
ರೂಢಿಸಿಕೊಂಡಿರುವ ವರ್ಣಾಶ್ರಮಗಳು.
ಸಂಸಾರ ತಾಪತ್ರಯಗಳ
ನಡುವೆ ಸಿಲುಕಿ ಒದ್ದಾಡುತ್ತಾ, ಪ್ರಪಂಚದ ಐಹಿಕ ಸುಖಗಳನ್ನು ತ್ಯಜಿಸಿ ಭಗವಂತನೆಡೆಗೆ ಮನಸ್ಸು ವಾಲಿಸಿ , ಆದ್ಯಾತ್ಮದೆಡೆಗೆ ಜೀವನವನ್ನು
ಕೊಂಡೊಯ್ದು ಮೋಕ್ಷವನ್ನು ಪಡೆಯುವುದೇ ಜೀವನದ ಪರಮಸುಖ.
ಮಡದಿ, ಮನೆ ಮಕ್ಕಳು
, ಸಂಸಾರ, ಇವುಗಳ ಕುರಿತು ದಾಸರು ಬಿಟ್ಟರೂ ಬಿಡದಿ
ಮಾಯೇ? ಎಂದು ಹೇಳಿದ್ದಾರೆ.
ಮನುಷ್ಯ ಇಂದು
ಹಿರಿಯರ ಈ ಮಾತುಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಈ ಗ್ರೇ ಡಿವೋರ್ಸ್ ನ ಮೊರೆ ಹೋಗಿದ್ದಾನೆ
ಎನಿಸುತ್ತಿದೆ.
ಕಾರಣ ಕೆಳಗೆ ವಿವರಿಸಿರುವ
ಹೆಚ್ಚುತ್ತಿರುವವ ಗ್ರೇ ಡಿವೋರ್ಸ್ ನ ಪ್ರವೃತ್ತಿ.
ಭಾರತದಲ್ಲಿ
ಇತ್ತೀಚಿನ ದಿನಗಳಲ್ಲಿ ಗ್ರೇ ಡಿವೋರ್ಸ್ ಹೆಚ್ಚಿನ ಪ್ರಚಲಿತದಲ್ಲಿದೆ. ಗ್ರೇ ಡಿವೋರ್ಸ್ ಎಂದರೆ ದಂಪತಿಗಳು
ತಮ್ಮ ಐವತ್ತನೇ ವಯಸ್ಸಿನಲ್ಲಿ ವೈವಾಹಿಕ ಜೀವನವನ್ನು ಕಾನೂನಿನ ರೀತಿಯಲ್ಲಿ ಕೊನೆಗೊಳಿಸುವುದನ್ನು ಗ್ರೇ
ಡಿವೋರ್ಸ್ ಎನ್ನುತ್ತಾರೆ. ಕನ್ನಡದಲ್ಲಿ ಇದನ್ನು ಬೂದು ವಿಚ್ಛೇದನ ಎಂದು ಕೂಡ ಕರೆಯಲಾಗುತ್ತದೆ.
ಇತ್ತೀಚೆಗೆ ಭಾರತದಲ್ಲಿ
ಬೂದು ವಿಚ್ಛೇದನದ ಮೂಲಕ ವೈವಾಹಿಕ ಜೀವನವನ್ನುಕೊನೆಗೊಳಿಸುವ ಪ್ರವೃತ್ತಿ ಹೆಚ್ಚಿಗೆ ಗಮನ ಸೆಳೆಯುತ್ತಿದೆ.
ಪ್ರಪಂಚದಾದ್ಯಂತ ಗ್ರೇ ಡಿವೋರ್ಸ್ ಸಾಮಾನ್ಯವೇ ಆಗಿದ್ದರೂ ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ೫೦
ರ ವಯಸ್ಸಿನಲ್ಲಿ ವಿಚ್ಚೇದನ ಪಡೆಯುವವರ ಪ್ರವೃತ್ತಿ
ಹೆಚ್ಚಾಗಿದೆ.
ಮಹಿಳೆಯರಲ್ಲಿ
ಹೆಚ್ಚಿದ ಆರ್ಥಿಕ ಸ್ವಾತಂತ್ರ್ಯ, ಬದಲಾಗುತ್ತಿರುವ ಸಮಾಜರೂಢಿಗಳು, ಕಡಿಮೆಯಾಗುತ್ತಿರುವ ಜೀವಿತಾವಧಿ
ಎಲ್ಲವೂ ಈ ವಿಚ್ಛೇದನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿವೆ.
ಈ ಗ್ರೇ ಡಿವೋರ್ಸ್
, ಜೀವನಾಂಶ, ನಿವೃತ್ತಿಯ ಜೀವನಾಂಶಗಳು, ಕಾನೂನಿನ ಸವಾಲುಗಳು, ಜೀವ ವಿಮೆಗಳು, ಹೆಲ್ತ್ ಇನ್ಶೂರೆನ್ಸ್
ಗಳು , ಆಸ್ತಿಯ ವಿಭಜನೆಗಳು, ಈ ಎಲ್ಲಾ ಪ್ರಯೋಜನಗಳನ್ನು
ಒಳಗೊಂಡಿದೆ.
ಈ ಗ್ರೇ ಡಿವೋರ್ಸ್
ತೆಗೆದುಕೊಳ್ಳುವವರನ್ನು ಸಿಲ್ವರ್ ಸ್ಪ್ಲಿಟರ್ಸ್ ಅಥವಾ ಡೈಮಂಡ್ ತಲಾಖ್ ಎಂದೂ ಸಹ ಕರೆಯುತ್ತಾರೆ.
ಹೈ ಪ್ರೊಫೈಲ್
ಮಂದಿಯಲ್ಲಿ ಈ ಗ್ರೇ ಡಿವೋರ್ಸ್ ಪರಂಪರೆ ಹೆಚ್ಚುತ್ತಿರುವುದು ಮುಖ್ಯವಾಗಿ ಗಮನಿಸಬೇಕಾದ ಅಂಶ.
ಕೆಲವು ದಿನಗಳ
ಹಿಂದಷ್ಟೆ ಭಾರತದ ಖ್ಯಾತ ಕ್ರಿಕೇಟರ್ ಆದ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಹೆಂಡತಿ ಆರತಿ ಅವರಿಗೆ
ಗ್ರೇ ಡಿವೋರ್ಸ್ ನೀಡುವುದರ ಮೂಲಕ ಬೇರಾಗಿದ್ದಾರೆ. ಸೆಹ್ವಾಗ್ ಅವರಿಗೆ ಸದ್ಯ ೪೬ ವರ್ಷವಾಗಿದೆ ಮತ್ತು ಆರತಿ ರವರಿಗೆ ೪೩ ವರ್ಷ .
೨೦೦೪ ರಲ್ಲಿ ಇಬ್ಬರು ವಿವಾಹವಾಗಿದ್ದರು. ಇವರಿಗೆ
ಆರ್ಯವೀರ್ ಸೆಹ್ವಾಗ್ ಮತ್ತು ವೇದಾಂತ್ ಸೆಹ್ವಾಗ್ ಎಂಬ ಇಬ್ಬರು ಮಕ್ಕಳಿದ್ದಾರೆ.
ನಟ ಕಮಲ್ ಹಾಸನ್
ಮತ್ತು ನಟಿ ಸಾರಿಕಾ ಠಾಕೂರ್ ಅವರು ತಮ್ಮ ಎರಡು ದಶಕಗಳ ಕಾಲದ ವಿವಾಹ ಜೀವನವನ್ನು ೨೦೦೪ ರಲ್ಲಿ ಅಂತ್ಯ ಮಾಡಿದರು.
ಇವರ ಬೇರ್ಪಡುವಿಕೆಯಿಂದ
ಭಾರತದ ಮನರಂಜನಾ ಉದ್ಯಮದಲ್ಲಿ ವಿಚ್ಛೇದನದ ವಿಕಸನದ ಕಾಲವೆಂದು ಹೆಸರಿಸಬಹುದು.
ನಟಿ ದೀಪ್ತಿ ನವಲ್
ಮತ್ತು ಚಲನಚಿತ್ರ ನಿರ್ಮಾಪಕ ಪ್ರಕಾಶ್ ಝಾ ಅವರು, ೧೯೮೫ ರಲ್ಲಿ ವಿವಾಹವಾಗಿದ್ದರು, ಮತ್ತು ೨೦ ವರ್ಷಗಳ
ನಂತರ ಅಂದರೆ ೨೦೦೨ ರಲ್ಲಿ ವಿಚ್ಚೇದನ ಪಡೆದುಕೊಂಡರು.
ಅಂತರಾಷ್ಟ್ರೀಯ
ಮಟ್ಟದ ಹೈ ಪ್ರೊಫೈಲ್ ದಂಪತಿಯಾದ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲಿಯನೇರ್ ಬಿಲ್ ಗೇಟ್ಸ್, ಮತ್ತು ಅವರ ಪತ್ನಿ ಮೆಲಿಂಡಾ
ಅವರು ೨೦೨೧ ರಲ್ಲಿ ವಿಚ್ಚೇದನ ತೆಗೆದುಕೊಳ್ಳುವ ಮೂಲಕ
ತಮ್ಮ ೨೫ ವರ್ಷಗಳ ದಾಂಪತ್ಯವನ್ನು ಮುರಿದರು. ಇದು ಪ್ರಪಂಚವನ್ನೇ ದಿಗ್ಬ್ರಮೆಗೊಳಿಸಿದ ವಿಷಯವಾಗಿತ್ತು.
ನಟಿ ಮಲೈಕಾ ಅರೋರಾ
ಮತ್ತು ನಟ ನಿರ್ಮಾಪಕ ೨೦೧೭ ರಲ್ಲಿ ವಿಚ್ಚೇದನ ತೆಗೆದುಕೊಳ್ಳುವ ಮೂಲಕ ತಮ್ಮ ಮದುವೆಯನ್ನು ಕೊನೆಗಾಣಿಸಿದರು.
ಹೀಗೆಯೇ ಕೆಲದಿನಗಳ
ಹಿಂದಷ್ಟೆ ಎ. ಆರ್ ರೆಹಮಾನ್ ಅವರು ತಮ್ಮ ಪತ್ನಿ ಸೈರಾ ಬಾನು ಅವರೊಂದಿಗಿನ ಮದುವೆಯನ್ನು ಅಂತ್ಯಗೊಳಿಸಿದರು.
ತಮಿಳು ನಟ ಧನುಷ್
ಅವರು ತಮ್ಮ ಪತ್ನಿ ಸಂಗೀತ ಅವರೊಂದಿಗಿದ್ದ ೧೮ ವರ್ಷಗಳ ದಾಂಪತ್ಯವನ್ನು ಕೊನೆಗಾಣಿಸಿದ್ದಾರೆ.
ಧನುಷ್ ಅವರು
ನಿರ್ದೇಶಕ ಕಸ್ತೂರಿ ರಾಜಾ ಅವರ ಮಗನಾಗಿದ್ದು, ಸಂಗೀತ ಅವರು ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್
ಅವರ ಪುತ್ರಿಯಾಗಿದ್ದಾರೆ.
ಭಾರತದಲ್ಲಿ ವಿವಾಹದ
ಬಂಧನವನ್ನು ಜೀವನದ ಬದ್ದತೆಯನ್ನಾಗಿ ನೋಡಲಾಗುತ್ತದೆ, ಸಮಾಜದ ಒತ್ತಡ, ಮತ್ತು ವಿಚ್ಚೇದನದಿಂದ ಉಂಟಾಗುವ
ನಿಂದನೆಗಳ ಕಾರಣವಾಗಿ ದಂಪತಿಗಳು ವಿವಾಹದಲ್ಲಿ ಸಮಸ್ಯೆಗಳಿದ್ದರೂ ಒಟ್ಟಿಗೆ ವಾಸಿಸುತ್ತಿರುತ್ತಾರೆ.
ಮತು ಹೆಚ್ಚುತ್ತಿರುವ ಜೀವಿತಾವಧಿ ಮತ್ತು ವೈಯಕ್ತಿಕ ಆರ್ಥಿಕ ಸ್ವಾತಂತ್ರ್ಯ , ಬದಲಾಗುತ್ತಿರುವ ಜೀವನ
ಅಭ್ಯಾಸಗಳು ವಿಚ್ಛೇದನಗಳು ಹೆಚ್ಚಾಗಲು ಕಾರಣವಾಗಿವೆ.
ಗ್ರೇ ಡಿವೋರ್ಸ್
ನಲ್ಲಿ ಗಮನಿಸಬೇಕಾದ ಅಂಶವೆಂದರೆ ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಸ್ತ್ರೀಯರು ವೈಯಕ್ತಿಕವಾಗಿ ಆರ್ಥಿಕ
ಸ್ಥಿರತೆಯನ್ನು ಸಾಧಿಸುವುದರ ಮೂಲಕ ತಮ್ಮ ಸಂಗಾತಿಯೊಂದಿಗಿನ
ಅವಲಂಬನೆಯನ್ನು ಇಲ್ಲವಾಗಿಸುತ್ತಾರೆ. ಈ ಮೂಲಕ ಮಹಿಳೆಯು ತನ್ನ ಭಾವನಾತ್ಮಕ ಸಂತೋಷ ಮತ್ತು ಸ್ವತಂತ್ರ
ನಿರ್ಧಾರದ ಕಡೆಗೆ ಗಮನವಹಿಸುತ್ತಾಳೆ.
೫೦ ,೬೦ ವಯಸ್ಸಿನವರು
ತಮ್ಮ ಮುಂದಿನ ದೀರ್ಘ ದಿನಗಳನ್ನು ನೋಡುತ್ತಾರೆ, ಮತ್ತು ವೈಯಕ್ತಿಕ ಯೋಗಕ್ಷೇಮ , ಮತ್ತು ಬೆಳವಣಿಗೆಯನ್ನು
ನೋಡುತ್ತಾರೆ. ತಮ್ಮ ಆಕಾಂಕ್ಷೆಗಳ ಈಡೇರಿಕೆಗಾಗಿ ಮತ್ತು
ಹೊಸ ಆರಂಭವನ್ನು ಸ್ವಯಂ ನೆರವೇರಿಸಿಕೊಳ್ಳಲು ವಿಚ್ಚೇದನವನ್ನು ಆರಿಸಿಕೊಳ್ಳುತ್ತಾರೆ.
ಕಿರಿಯ ವಯಸ್ಸಿನ
ದಂಪತಿಗಳ ಡಿವೋರ್ಸ್ ಗಿಂತ ಈ ಗ್ರೇ ಡಿವೋರ್ಸ್ ನಲ್ಲಿ ಕಾನೂನು ವಿಶಿಷ್ಟ ಸವಾಲುಗಳನ್ನು ಮುಂದಿಡುತ್ತದೆ. ದಂಪತಿಗಳಿಬ್ಬರ
ಅಷ್ಟು ವರ್ಷದ ಸಹಜೀವನದಲ್ಲಿ ಸಂಪಾದಿಸಿದ ಆಸ್ತಿಗಳನ್ನು ಸಮಪಾಲು ಮಾಡುವುದು ವಿವಾದವನ್ನು ಸೃಷ್ಠಿಸುತ್ತದೆ.
ಆಸ್ತಿಗಳ ಹಂಚಿಕೆ, ಜೀವನಾಂಶ, ನಿವೃತ್ತಿ ನಂತರದ ಸೇವೆಗಳು ನಿರ್ಣಾಯಕವಾಗಿರುತ್ತವೆ.
ಹಿಂದೂ ವಿವಾಹ
ಕಾಯಿದೆ ೧೯೫೫ , ಮತ್ತು ವಿಶೇಷ ವಿವಾಹ ಕಾಯಿದೆ ೧೯೫೪ ಈ ಕಾನೂನುಗಳು , ಸ್ವತ್ತುಗಳ ಹಂಚಿಕೆ, ಜೀವನಾಂಶ, ಇತರ ನಿರ್ವಹಣೆ
ವಿಭಜನೆಯನ್ನ ಮಾಡುವಲ್ಲಿ ಕಾಯಿದೆಯನ್ನು ಒದಗಿಸುತ್ತವೆ.
ಜೀವನಾಂಶ ನಿರ್ಧರಿಸುವಾಗ
ವಿವಾಹ ಜೀವನದ ಸಮಯ, ಸಂಗಾತಿಯ ವಯಸ್ಸು, ಆರ್ಥಿಕ ಸ್ಥತಿ
ಈ ಅಂಶಗಳನ್ನು ನ್ಯಾಯಾಲಯ ಪರಿಗಣಿಸುತ್ತದೆ. ಸಂಗಾತಿಯು ವೃತ್ತಿಯನ್ನು ತ್ಯಾಗ ಮಾಡಿ ಕುಟುಂಬದ
ಜವಾಬ್ದಾರಿಗಳಿಗೆ ಹೆಗಲು ಕೋಟ್ಟವರಿಗೆ ವಿಚ್ಚೇದನದ ನಂತರದ ಆರ್ಥಿಕ ಸ್ಥತಿಯನ್ನು ಖಚಿತಪಡಿಸಿಕೊಳ್ಳುತ್ತದೆ.
ನಿವೃತ್ತಿ ಪ್ರಯೋಜನಗಳು
ಮತ್ತು ಪಿಂಚಣಿಗಳು ಸಹ ಕಾನೂನು ಸವಾಲುಗಳನ್ನು ಒಡ್ಡುತ್ತವೆ.
ಈ ನಿಟ್ಟಿನಲ್ಲಿ
ಕಾನೂನು ವೃತ್ತಿಪರರು, ಸಾಮಾಜಿಕ ಕಳಕಳಿಯಿರುವ ನೀತಿ
ಶಾಸ್ತ್ರಜ್ಞರು, ಬೂದು ವಿಚ್ಚೇದನಕ್ಕೆ ಒಳಗಾಗುವ ಹಿರಿಯರ ಅಗತ್ಯಗಗಳನ್ನು ಗುರುತಿಸಿ ಅವುಗಳನ್ನು ಕಾನೂನಿನ
ಮೂಲಕ ಪರಿಹರಿಸಿ ಬೆಂಬಲ ನೀಡುವುದರ ಮೂಲಕ ಅವರಿಗೆ ಬದುಕಲು ನ್ಯಾಯಯುತ ವಾತಾವರಣವನ್ನು ನಿರ್ಮಿಸಬಹುದು.
ಧನ್ಯವಾದಗಳು….🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು