ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಪ್ರಸ್ತುತ ಕುಂಭಮೇಳ ಇಂದಿನ ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತಿದೆ .! ಯಾಕೆ……? ಏನಿದೆ ಅದರಲ್ಲಿ……..

     ಪ್ರಸ್ತುತ ಪ್ರಪಂಚದ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಟ್ರೆಂಡಿಂಗ್‌ ನಲ್ಲಿರುವ ವಿಷಯ...., ಭಾರತದ ಉತ್ತರಪ್ರದೇಶದ ಪ್ರಯಾಗ್‌ ರಾಜ್‌ ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ.

ಕುಂಭಮೇಳ ಭಾರತದ ಮಟ್ಟಿಗೆ ಅಲ್ಲದೇ ವಿಶ್ವದಲ್ಲೇ ಅತಿದೊಡ್ಡ ಧಾರ್ಮಿಕ ಹಬ್ಬವಾಗಿ ಈ ಬಾರಿ ಅಂದರೆ ೨೦೨೫ ರ ಪ್ರಾರಂಭದಲ್ಲೆ ನಡೆಯುತ್ತಿದೆ. ಪುಣ್ಯ ಪುರಾಣ ಕತೆಯಿಂದಲೂ ಮೊದಲುಗೊಂಡು ಶತಮಾನಗಳ ಇತಿಹಾಸವೇ ಈ ಮಹಾ ಮೇಳಕ್ಕಿದೆ.

ಈ ಕುಂಭಮೇಳದಲ್ಲಿ ಪವಿತ್ರ ಅಮೃತ ಸ್ನಾನ ಅಥವಾ ಶಾಹಿ ಸ್ನಾನವನ್ನು  ಮಾಡುವುದರಿಂದ ಮಹಾದೇವನ ಕೃಪೆಗೆ ಪಾತ್ರರಾಗುವುದಲ್ಲದೆ, ಜನ್ಮಜನ್ಮಾಂತರದ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆ   ಹಿಂದೂ ಸನಾತನಿಗಳಲ್ಲಿದೆ.

ಕುಂಭಮೇಳದಲ್ಲಿ ಐದರಿಂದ ಆರು ಹಂತಗಳಲ್ಲಿ ಶಾಹಿ ಸ್ನಾನ ನಡೆಯುತ್ತದೆ.

ಮೊದಲನೇ ದಿನ ಜನವರಿಯ ಹದಿಮೂರನೇ ತಾರೀಖು ಪುಷ್ಯ ಪೂರ್ಣಿಮೆ ದಿನದ ಸ್ನಾನ,

ಹದಿನಾಲ್ಕನೇ ತಾರೀಖು ಮಕರ ಸಂಕ್ರಾಂತಿ ದಿನ,

ಜನವರಿ ೨೯ ರ ಮೌನಿ ಅಮಾವಾಸ್ಯೆ

ಫೆಬ್ರವರಿ ಬಸಂತ ಪಂಚಮಿಯ ಶಾಹಿ ಸ್ನಾನ

ಫೆಬ್ರವರಿ  ೧೨ ರ ಮಾಗಿ ಹುಣ್ಣಿಮೆ ದಿನದ ಸ್ನಾನ

ಫೆಬ್ರವರಿ ೨೬ ಮಹಾ ಶಿವರಾತ್ರಿಯ ದಿನ.

ಈ ಸಮಯದಲ್ಲಿ ತೀರ್ಥಸ್ನಾನ ಮಾಡುವ ಭಕ್ತರು ಮಹಾಶಿವನನ್ನು  ಕಾಲಭೈರವನ ರೂಪದಲ್ಲಿ ಪೂಜಿಸುವ ಸಾದು ಸಂತರು ಮತ್ತು ಮಹಾದೇವನ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ ಎಂದು ನಂಬಲಾಗಿದೆ.

 ಈ ಬಾರಿ ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ  ಅಮೇರಿಕದ ಜನಸಂಖ್ಯೆಯ ಒಂದುವರೆಪಟ್ಟು ಅಂದರೆ ೪೦ ಕೋಟಿಗೂ ಅಧಿಕ  ಜನರು  ಈ ಪವಿತ್ರ ಸ್ನಾನದಲ್ಲಿ ಭಾಗವಹಿಸಬಹುದೆಂದು ಸಂಘಟಿಕರು ಅಂದಾಜಿಸಿದ್ದಾರೆ.

ಕಾರಣ ಕುಂಭಮೇಳ ಪ್ರಾರಂಭವಾದ ಎರಡು ಮೂರು ದಿನಗಳಲ್ಲೆ ಲಕ್ಷಾಂತರ ಮಂದಿ ಇದರಲ್ಲಿ ಭಾಗವಹಿಸಿದ್ದಾರೆ.

ಪ್ರತಿ ಆರು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ಅರ್ಧ ಕುಂಭಮೇಳವೆಂದು,

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ಪೂರ್ಣಕುಂಭಮೇಳವೆಂದು,

ಹನ್ನೆರಡು ಪೂರ್ಣ ಕುಂಭಮೇಳಗಳ ನಂತರ ನಡೆಯುವುದನ್ನು ಮಹಾ ಕುಂಭ ಮೇಳವೆಂದು, ಇದು ೧೪೪ ವರ್ಷಗಳಿಗೊಮ್ಮೆ ನಡೆಯುವ ಹಿರಿದಾದ ಧಾರ್ಮಿಕ ಹಬ್ಬವಾಗಿ ಆಚರಿಸಲ್ಪಡುತ್ತಿದೆ.

ಸೌರಮಂಡಲದಲ್ಲಿರುವ ಅತಿ ದೊಡ್ಡ ಗ್ರಹ ಗುರು ಗ್ರಹ. ಈ ಗ್ರಹವು ಸೂರ್ಯನ ಸುತ್ತ ಸುತ್ತಲು ೧೨ ವರ್ಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಅದರಿಂದ ೧೨ ವರ್ಷಗಳಿಗೊಮ್ಮೆ ಕುಂಭಮೇಳವನ್ನು ನಡೆಸಲಾಗುತ್ತದೆ.

ದೇವತೆಗಳು  ಮತ್ತು ರಾಕ್ಷಸರು  ಸೇರಿ ತ್ರಿಮೂರ್ತಿಗಳ  ಸಹಕಾರದಲ್ಲಿ ಮಂದಾರ ಪರ್ವತವನ್ನು ಬಳಸಿ ಕ್ಷೀರಸಾಗರ ಮಂಥನ ನಡೆಸಿದಾಗ ಅಮೃತ ಉದ್ಭವವಾಯಿತು. ಅಮೃತ ತುಂಬಿದ ಆ ಕಲಶವನ್ನು ಅಥವಾ ಮಡಕೆಯನ್ನು ಕುಂಭ ಎನ್ನುವರು.

ಅಮೃತಕ್ಕಾಗಿ ಸುರರು ಮತ್ತು ಅಸುರರ ನಡುವೆ ಕಾದಾಟ ಪ್ರಾರಂಭವಾಗಿ  ಹರಿ ನಾರಾಯಣ ನು ಮಧ್ಯೆ ಪ್ರವೇಶಿಸಿ ಮೋಹಿನಿ ರೂಪವನ್ನು ಧರಿಸಿ  ರಾಕ್ಷಸರು ಅಪಹರಿಸಿದ್ದ  ಅಮೃತ ಕಳಶವನ್ನು ತಂದು  ದೇವತೆಗಳಿಗೆ ಹಂಚಿದ್ದರು.

ಗರುಡನು ಆ ಕುಂಭವನ್ನು ತೆಗೆದುಕೊಂಡು ಹೋಗುವಾಗ  ಅದರಲ್ಲಿದ್ದ  ಅಮೃತದ ನಾಲ್ಕು ಬಿಂದುಗಳು ಭೂಮಿಯ ಮೇಲೆ ಬಿದ್ದವು ,  ಅವುಗಳೆ  ಮಹಾರಾಷ್ಟ್ರ ದ ನಾಸಿಕ್‌ (ಗೋದಾವರಿ)   ಮಧ್ಯ ಪ್ರದೇಶದ ಉಜ್ಜೈಯಿನಿ (ಶಿಪ್ರಾ ನದಿ),  ಉತ್ತರಾಖಂಡ ದ ಹರಿದ್ವಾರ (ಗಂಗಾ ನದಿ), ಮತ್ತು ಉತ್ತರ ಪ್ರದೇಶದ  ಪ್ರಯಾಗ ರಾಜ್ (ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮ)

 

ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮದಲ್ಲಿ ನಡೆಯುವ ನಾಗಸಾಧುಗಳ  ಶಾಹಿ ಸ್ನಾನ ವು ಮುಖ್ಯವಾಗಿದೆ.

 ೨೦೨೫ ರ ಜನವರಿ ೧೩ ರಿಂದ ಉತ್ತರ ಪ್ರದೇಶದ  ಪ್ರಯಾಗ್‌ ರಾಜ್‌ ನ ತ್ರಿವೇಣಿ ಸಂಗಮದಲ್ಲಿ ೪೫ ದಿನಗಳ ಮಹಾ ಕುಂಭಮೇಳ ನಡೆಯುತ್ತಿದೆ.

ಈ ಕುಂಭಮೇಳದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಎಂದರೆ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಾಗಾಸಾದುಗಳು, ಮೊದಲ ದಿನವೇ ಲಕ್ಷಾಂತರ ಮಂದಿ ನಾಗಸಾಧುಗಳು ಭಾಗವಹಿಸುವ ಮೂಲಕ ಕೇಸರಿ ಪಡೆಯ ಮಹಾ ಸಮಾವೇಶಕ್ಕೆ ನಾಂದಿ ಹಾಡಿದ್ದಾರೆ.

 

                                                                                                                                ಫೋಟೋ :ಅಂತರ್ಜಾಲ ಕೃಪೆ

 ಇತಿಹಾಸದ ಒಂದು ನಂಬಿಕೆಯ ಪ್ರಕಾರ ಆದಿ ಗುರು ಶಂಕರಾಚಾರ್ಯ ರು ೮ ನೇ ಶತಮಾನದಲ್ಲಿ, ಹಿಂದೂ ಧರ್ಮಕ್ಕೆ ಅನ್ಯಧರ್ಮಿಯರಿಂದ  ಧಕ್ಕೆಯುಂಟಾದಾಗ ಅದರ ರಕ್ಷಣೆಗೆ ಸಂಸಾರದಿಂದ ದೂರವಿದ್ದು ಶಸ್ತ್ರ ಮತ್ತು ಶಾಸ್ತ್ರ ಎರಡನ್ನೂ ಬಲ್ಲ ಸನ್ಯಾಸಿಗಳನ್ನು   ರಕ್ಷಕ ಭಟರನ್ನಾಗಿ  ಸಿದ್ಧಪಡಿಸಲು ಮುಂದಾದರು.

 ಆಗ ತಮ್ಮ ನಾಲ್ಕು ಜನ ಶಿಷ್ಯರನ್ನು ಭಾರತದ ನಾಲ್ಕು ದಿಕ್ಕುಗಳಿಗೂ ಅಂದರೆ  ಶೃಂಗೇರಿ, ಜಾಗನ್ನಾಥಪುರಿ ,ಕೇದಾರನಾಥ, ಉಜ್ಜೈಯಿನಿ, ಕ್ಷೇತ್ರಗಳಿಗೆ ಕಳುಹಿಸಿ, ಅಲ್ಲಿನ ಯುವ ಸನ್ಯಾಸಿಗಳನ್ನು ಗುಂಪುಗೂಡಿಸಿ ಅಖಾಡಗಳನ್ನು ನಿರ್ಮಿಸಿಕೊಂಡು ಧರ್ಮ ರಕ್ಷಣೆಗೆ ಬದ್ಧರಾಗಿದ್ದಾರೆ.

ಅವರುಗಳನ್ನೆ ಮುಂದೆ ನಾಗಾಸಾಧುಗಳೆಂದು ಕರೆದಿರುವರು ಎಂಬುದು ನಂಬಿಕೆ. ಆದರೆ ಬಹುತೇಕ ನಾಗಾಸಾಧುಗಳು ಇದನ್ನು ತಳ್ಳಿಹಾಕುತ್ತಾರೆ, ಶಂಕಾರಾಚಾರ್ಯರನ್ನು ಗುರುಗಳು ಎಂಬುದನ್ನು ಒಪ್ಪುವ ಇವರು ಅವರು ಬರುವುದಕ್ಕಿಂತ ಮುಂಚಿನಿಂದ ಶತಮಾನಗಳಿಂದಲೂ ತಮ್ಮ ಅಸ್ತಿತ್ವ ಇರುವುದಾಗಿ ಹೇಳುತ್ತಾರೆ.

 ಈ ನಾಗಾಸಾಧುಗಳು  ಸನ್ಯಾಸ ಧೀಕ್ಷೆಯನ್ನು ಪಡೆದು. ಆಜನ್ಮ  ಬ್ರಹ್ಮಚರ್ಯವನ್ನು ಪಾಲಿಸುತ್ತಾ ಸದಾ ಸಾಧನೆಗಳಲ್ಲಿ ತೊಡಗಿಕೊಂಡು ಅಲೆಮಾರಿಗಳಾಗಿ ನಿರ್ಜನ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಒಂದು ಕೈಯಲ್ಲಿ ಕಮಂಡಲ ಇನ್ನೊಂದರಲ್ಲಿ  ತ್ರಿಶೂಲ ಅಥವಾ ಭರ್ಜಿ ಕೆಲವೊಮ್ಮೆ ದಂಡಗಳನ್ನು ಆಯುಧ ರೂಪದಲ್ಲಿ ಧರಿಸಿಯೇ ಇರುತ್ತಾರೆ.

ನಗ್ನರಾಗಿ ಅಥವಾ ಅರೆ ನಗ್ನರಾಗಿ ಸೊಂಟಕ್ಕೊಂದು ಕೌಪೀನವನ್ನು ಧರಿಸಿ ಮೈಯೆಲ್ಲ ಭಸ್ಮವನ್ನು ಬಳಿದು ರೌದ್ರಾವತಾರ ರೂಪಿಗಳಾಗಿ ಬಿರುಸು ಹೆಜ್ಜೆಗಳನ್ನಿಟ್ಟು ನಡೆಯುತ್ತಿದ್ದರೆ  ನೋಡುವವರ ಎದೆಯಲ್ಲಿ ಭಯ ಹುಟ್ಟದೆ ಇರದು.

ಅಘೋರಿಗಳಿಗಿಂತ ಭಿನ್ನವಾಗಿದ್ದರು, ತಂತ್ರ ಮಂತ್ರಗಳನ್ನು ಕಲಿತು ಬೆಟ್ಟ ಗುಡ್ಡದ ಗುಹೆಗಳಲ್ಲಿ ವಾಸಿಸುತ್ತಾ ಸಾಧನೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಕುಂಭಮೇಳದ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವ ಇವರು,  ಕುಂಭಮೇಳ ಮುಗಿದ ನಂತರ ಇದ್ದಕ್ಕಿದ್ದ ಹಾಗೆ ಕಂಡೂ ಕಾಣದಂತೆ ಮಾಯವಾಗಿ ಬಿಡುತ್ತಾರೆ.

 ಕಾಷಾಯ ವಸ್ತ್ರವನ್ನು ಧರಿಸಿ ಸಾಗರೋಪಾದಿಯಲ್ಲಿ ಅಮೃತ ಸ್ನಾನಕ್ಕಾಗಿ ಬಂದವರ ನೆಲೆಗಳಲ್ಲಿನ ನಿಗೂಢತೆ  ಬರಿಗಣ್ಣಿಗೆ ಕಾಣಿಸದು.

ಹಿಂದೂ ಧರ್ಮಕ್ಕೆ ಕಂಟಕ ಬಂದಾಗ ಘರ್ಜಿಸಿ ಧರ್ಮ ರಕ್ಷಣೆಗೈದು ಸಾಮಾನ್ಯ ಮಾನವರಿಗೆ ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಇವರ ಬದುಕಿನ ನಿರ್ವಿಕಾರತೆ ಅಚ್ಚರಿ ಸೋಜಿಗ.

 

ಉದಾಹರಣೆಗೆ ಇತಿಹಾಸದಲ್ಲಿ ಉಲ್ಲೇಖವಿರುವಂತೆ  ಚೀನಿ ಯಾತ್ರಿಕ ಕ್ರಿ.ಶ ೬೨೯ ರಲ್ಲಿ ಭಾರತಕ್ಕೆ ಬಂದ ಸಂದರ್ಭದಲ್ಲಿ ಹರ್ಷವರ್ಧನ, ಇಮ್ಮಡಿ ಪುಲಿಕೇಶಿ, ಪಲ್ಲವರ ನರಸಿಂಹ ವರ್ಮ ರ ಆಳ್ವಿಕೆ ಯ ಬಗ್ಗೆ ಉಲ್ಲೇಖಿಸಿದ್ದಾನೆ.

 ಹರ್ಷವರ್ಧನನ ಆಳ್ವಿಕೆಯ ಕಾಲದಲ್ಲಿ  ಕ್ರಿ.ಶ ೬೪೩ ರಲ್ಲಿ ಪ್ರಯಾಗ ರಾಜ್‌ ನಲ್ಲಿ ನಡೆದ ಧರ್ಮ ಮಹಾ ಮೋಕ್ಷ ಪರಿಷತ್ತು ನಡೆಸಿದರ ಬಗ್ಗೆ ಹಾಗೂ ಪ್ರತಿ ಐದು ವರ್ಷಗಳಿಗೊಮ್ಮೆ ಈ ಮಹಾ ಸಮ್ಮೇಳವನ್ನು ನಡೆಸಲು ಕರೆ ಕೊಟ್ಟಿರುವುದು  ಮತ್ತು ಸಮ್ಮೇಳನಕ್ಕೆ ಬಂದವರಿಗೆ  ಸಂಪತ್ತನ್ನು ದಾನ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ.  ಧರ್ಮ ಸಮ್ಮೇಳನಕ್ಕೆ ಬಂದ ಸನಾತನಿಗಳು ಅಲ್ಲಿನ ತೀರ್ಥದಲ್ಲಿ ತಮ್ಮ ಪಾಪಕರ್ಮಗಳನ್ನು ತೊಡೆದುಕೊಳ್ಳಲು ಪವಿತ್ರ ಸ್ನಾನ ಮಾಡುತ್ತಿದ್ದರ  ಬಗ್ಗೆ ತನ್ನ ಸಿಯುಕಿ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ.

ಅನ್ಯ ಮತಗಳಂತೆ ಧಾರ್ಮಿಕ ಕೇಂದ್ರಗಳನ್ನು ತೆರೆದು ಧರ್ಮ ಪ್ರಚಾರ ಮಾಡುವುದಾಗಲಿ, ಅಥವಾ ಬಲವಂತ ಹೇರಿ ಸನಾತನ ಧರ್ಮವನ್ನು ಪರಿಪಾಲಿಸುವಂತೆ  ಆಮಿಷ ತೋರಿಸಿಲ್ಲ.

ಕರುಣೆ, ಕಾಳಜಿ,  ಪ್ರೀತಿ, ವಾತ್ಸಲ್ಯ, ಮಮತೆ, ಸೋದರತೆ, ಎಲ್ಲರೂ ನಮ್ಮವರೆ ಎನ್ನುವ ವಿಶಾಲ ಹೃದಯ, ಉದಾರತನ, ನಂಬಿಕೆ, ಸಕಲ ಜೀವರಾಶಿಯೊಂದಿಗಿನ ಪ್ರೀತಿಯ ಬದುಕು, ಕೆಟ್ಟದ್ದರ ವಿರುದ್ಧ ಹೋರಾಡುವ ಗುಣ, ಎಲ್ಲವೂ ಹಿಂದೂ ಧರ್ಮದ ಮೂಲ ಮಂತ್ರಗಳು.

ವೇದ ಪುರಾಣಗಳು, ಹಿಂದೂ ಮಹಾಗ್ರಂಥಗಳು ಮನುಷ್ಯನ ಜೀವನಕ್ಕೆ ಸಾರವನ್ನೆ ತುಂಬಿ, ಸಕರ್ಮಗಳನ್ನು ಮಾಡುವುದರ ಕುರಿತು ಅರಿವು ಮೂಡಿಸುವಲ್ಲಿ ಮಹತ್ತರ ಪಾತ್ರವನ್ನೆ ವಹಿಸಿವೆ.

ಇದರ ಕುರಿತು ಅರಿಯದ ಕೆಲವು ಅವಿವೇಕಿಗಳು  ಹಿಂದೂ ತತ್ವವನ್ನು ಅಳಿಸಲು ನೂರಾರು ವರ್ಷಗಳಿಂದಲೂ ತಮ್ಮ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಯಾರು ಎಷ್ಟೇ  ತುಳಿಯಲು , ಅಳಿಸಲು ಪ್ರಯತ್ನಿಸಿದರೂ, ಸಿಂಹ ನಡೆದದ್ದೆ ದಾರಿ ಎಂಬುದು ಈ ಬಾರಿಯ ಕುಂಭಮೇಳದಲ್ಲಿ ಸಾಬೀತಾಗಿದೆ.

ವಿಶ್ವದಲ್ಲಿ ಬೇರೆ ಯಾವ ಧರ್ಮದಲ್ಲೂ ಇದುವರೆಗೆ ನಡೆಯದ ರೀತಿ, ಇಡೀ ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇರುವಂತಹ ಎಲ್ಲ ಹಿಂದು ಧರ್ಮ ಸನಾತಿಗಳು ಭಾಗವಹಿಸುವ ಮೂಲಕ ಇಂದು ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ.

ಭಾರತ ಮತ್ತು ಪ್ರಪಂಚದ ವಿವಿಧ ಮೂಲಗಳಿಂದ ಸಾಗರೋಪಾದಿಯಲ್ಲಿ   ಹರಿದುಬರುತ್ತಿರುವ  ಕೇಸರಿ ಪಡೆಗಳು, ಜೈ ಶ್ರೀರಾಮ್‌, ಹರಹರ ಹಾದೇವ , ಜೈ ಕಾಲಭೈರವ  ಎಂಬ ಘೋಷ ವಾಕ್ಯಗಳು ಕೇಳುಗರ ಮನದಲ್ಲಿ  ಭಕ್ತಿ ಮತ್ತು ಹಿಂದು ಎನ್ನುವ ಹೆಮ್ಮೆಯ ಭಾವ ಮೂಡಿಸುತ್ತಿದೆ.

ಕುಂಭಮೇಳ ಅಥವಾ ಹಿಂದುತ್ವ ಎಂಬುದು ಒಂದು ವ್ಯಕ್ತಿಯೊ ಅಥವಾ ಒಂದು ಗುಂಪೋ ಅಲ್ಲ, ಸಹಸ್ರ ಗಜಪಡೆಯಷ್ಟು ನಂಬಿಕೆ, ಸಾಗರದಂತ ಭಾವಾವೇಶ.

 ಪ್ರಯಾಗ್‌ ರಾಜ್‌ ನ ಕುಂಭಮೇಳ ವು,  ಹಿಂದುತ್ವ, ಸನಾತನ ಸಂಸ್ಕ್ರತಿ ಸಂಪ್ರದಾಯದ ರಾಯಭಾರಿಯಾಗಿ  ಈ ಡಿಜಿಟಲ್‌ ಯುಗದಲ್ಲಿ ಆಯಸ್ಕಾಂತದಂತೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

 ಸಾಮಾಜಿಕ ಜಾಲತಾಣದ ಮೂಲಕ ನಿಮಿಷಗಳ ಅಂತರದಲ್ಲಿ ಕುಳಿತಲ್ಲಿಯೇ ಪ್ರಪಂಚದ ಆಗುಹೋಗುಗಳನ್ನು ವೀಕ್ಷಿಸುವ ಇಂದಿನಜನತೆ,  ಅದರಲ್ಲಿಯೇ ದುಡಿಯುವ ದಾರಿಯನ್ನು ಸಹ ಕಂಡುಕೊಂಡಿದ್ದಾರೆ.

 ಅದರಲ್ಲೂ ಯುವಜನತೆ ಈ ಡಿಜಿಟಲ್‌ ಯುಗದಲ್ಲಿ ಕುಂಭಮೇಳವನ್ನು  ಅದರ ಇಂಚಿಂಚೂ ಮಾಹಿತಿಯನ್ನೂ ವಿಶ್ವದಗಲಕ್ಕೂ ವಿಸ್ತರಿಸಬೇಕೆನ್ನುವ ಹೆಬ್ಬಯಕೆಯಿಂದ ತಾವು ಅಲ್ಲಿ ನೋಡಿದ ಪ್ರತಿಯೊಂದನ್ನೂ ವಿಡಿಯೋ ಮಾಡಿ ಹಂಚುತ್ತಿದ್ದಾರೆ.

ಅಲ್ಲಿಗೆ ಹೋಗಲು ಸಾಧ್ಯವಾಗದ ಲಕ್ಷಾಂತರ ಜನರು, ಈ ಅತಿದೊಡ್ಡ ಧರ್ಮ ಸಮ್ಮೇಳನವನ್ನು ಮೊಬೈಲ್ನಲ್ಲಿ ವೀಕ್ಷಿಸಿ  ಧನ್ಯರಾಗಿದ್ದಾರೆ.  ಶತಮಾನಗಳ ಆಚರಣೆ ಪ್ರತಿ ಹಿಂದುವನ್ನು ಎದೆಯುಬ್ಬಿಸುವಂತೆ ಮಾಡಿದೆ.

ವಿದೇಶಿಯರು ಸಹ ಹಿಂದು ಧರ್ಮದ ತತ್ವಗಳು, ಆಚರಣೆಯ ಔನ್ನತ್ಯದ ಮಹತ್ವ ಅರಿತು ದೀಕ್ಷೆ ಪಡೆಯಲು ಮುಂದಾಗಿದ್ದಾರೆ.

ಸದಾ ಅವರಿವರ ಕುರಿತು ಚಿಂತಿಸುವ ನಾವು ನಮ್ಮಲ್ಲಿರುವ ಒಳಿತು ಔದಾರ್ಯಗಳನ್ನು ಮೂಲ ತತ್ವಗಳನ್ನು,  ಕಸದಂತೆ ಎಸೆದು ಇನ್ನಾರಿಗೋ ಗುಲಾಮರಂತೆ ವರ್ತಿಸುತ್ತಿರುತ್ತೇವೆ.

ನಮ್ಮ ಮೂಲವನ್ನು ಕೆದಕಿಕೊಂಡು ತೊಳೆದು ಬೆಳಗಿಸಿಕೊಂಡರೆ ಇಡೀ ವಿಶ್ವಕ್ಕೆ ಸೂರ್ಯ ರಶ್ಮಿಯನ್ನು ಬೀರುವ ಆಂತರ್ಯ ಬಲವುಳ್ಳವರು, ಎಂಬುದನ್ನು ಕಂಡೊಕೊಂಡರೆ ಮನುಕುಲದ ಉದ್ದಾರ ನಮ್ಮಿಂದಲೇ ಸಾಧ್ಯ ಎಂಬುದನ್ನು ಘಂಟಾಘೋಷವಾಗಿ ಸಾರಲು ಹಿಂದುತ್ವವಾದಿಯಾಗಿ ಹೆಮ್ಮೆಪಡುತ್ತೇನೆ.

 

ಧನ್ಯವಾದಗಳು. 🙏🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......